For Quick Alerts
ALLOW NOTIFICATIONS  
For Daily Alerts

ಚರ್ಮದ ಕಾಂತಿ ಹೆಚ್ಚಿಸುವ ಜೇನು ತುಪ್ಪದ ಸ್ಕ್ರಬ್

By Lekhaka
|

ನಮ್ಮ ದೇಹ ಗುಣಕ್ಕೆ ಅನುಗುಣವಾಗಿ ಪ್ರಕೃತಿಯೇ ಕೆಲವೊಂದು ಔಷಧಿ ಹಾಗೂ ಗಿಡಮೂಲಿಕೆಗಳನ್ನು ನಮಗೆ ನೀಡಿದೆ. ಆದರೆ ಇದನ್ನು ಬಳಸಿಕೊಳ್ಳುವುದು ಇಂದಿನ ದಿನಗಳಲ್ಲಿ ತುಂಬಾ ಕಡಿಮೆಯಾಗುತ್ತಾ ಇದೆ. ಅದರಲ್ಲೂ ಜೇನುತುಪ್ಪವು ನಮಗೆ ಸೃಷ್ಟಿಯು ನೀಡಿರುವ ಅದ್ಭುತ ಉಡುಗೊರೆಯಾಗಿದೆ. ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದಾಗಿ ಹಿಂದಿನಿಂದಲೂ ಅದನ್ನು ಹಲವಾರು ರೂಪದಲ್ಲಿ ಬಳಸಿಕೊಂಡು ಬರುತ್ತಾ ಇದ್ದಾರೆ. ಜೇನುತುಪ್ಪದಿಂದ ತ್ವಚೆಗೂ ಹಲವಾರು ರೀತಿಯ ಲಾಭಗಳು ಇವೆ.

ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

ಜೇನುತುಪ್ಪವು ತ್ವಚೆಗೆ ನೈಸರ್ಗಿಕ ಕಾಂತಿ ನೀಡುವುದು. ನಿಮ್ಮ ಚರ್ಮವು ತುಂಬಾ ಒಣ ಹಾಗೂ ಗಡುಸಾಗಿದ್ದರೆ ಜೇನುತುಪ್ಪದ ಸ್ಕ್ರಬ್ ಬಳಸುವುದು ಸೂಕ್ತ. ಇದರಿಂದ ಚರ್ಮದ ರಚನೆಯು ಬದಲಾಗುವುದು. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕ ಬಳಸಿ ಕೊಳ್ಳಬಹುದು ಅಥವಾ ನೈಸರ್ಗಿಕವಾಗಿ ಸಿಗುವ ಜೇನುತುಪ್ಪ ಬಳಸಬಹುದು. ನೈಸರ್ಗಿಕ ಜೇನುತುಪ್ಪದಿಂದ ನೀವೇ ಮನೆಯಲ್ಲಿ ಸ್ಕ್ರಬ್ ಮಾಡಬಹುದು. ಕೆಲವೊಂದು ಸ್ಕ್ರಬ್‍ಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಇದನ್ನು ನೀವು ಪ್ರಯತ್ನಿಸಿ ತ್ವಚೆಯ ಆರೈಕೆ ಮಾಡಿಕೊಳ್ಳಬಹುದು.

ಜೇನುತುಪ್ಪ ಮತ್ತು ಓಟ್ ಮೀಲ್

ಜೇನುತುಪ್ಪ ಮತ್ತು ಓಟ್ ಮೀಲ್

*ಒಂದು ಸಣ್ಣ ಬೌಲ್ ನಲ್ಲಿ ಮೂರು ಚಮಚ ಬೇಯಿಸಿದ ಓಟ್ ಮೀಲ್ ಹಾಕಿ ಮತ್ತು ಅದಕ್ಕೆ ಐದು ಚಮಚ ಸಾವಯವ ಜೇನುತುಪ್ಪ ಹಾಕಿ.

*ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಳಿಕ ದೇಹಕ್ಕೆ ಹಚ್ಚಿಕೊಳ್ಳಿ.

*ಕೆಲವು ನಿಮಿಷ ಕಾಲ ನೀವು ಇದನ್ನು ಮಸಾಜ್ ಮಾಡಿ ಬಳಿಕ ತಣ್ಣಗಿನ ನೀರಿನಿಂದ ಸ್ನಾನ ಮಾಡಿ.

*ನಯವಾದ ಚರ್ಮವನ್ನು ಪಡೆಯಲು ನೀವು ವಾರದಲ್ಲಿ ಒಂದು ಸಲ ಈ ಮೊಶ್ಚಿರೈಸರ್ ನೀಡುವ ಸ್ಕ್ರಬ್ ಅನ್ನು ಉಪಯೋಗಿಸಬೇಕು.

ಜೇನುತುಪ್ಪ ಬ್ರೌನ್ ಶುಗರ್ ಆಲಿವ್ ತೈಲ

ಜೇನುತುಪ್ಪ ಬ್ರೌನ್ ಶುಗರ್ ಆಲಿವ್ ತೈಲ

*3-4 ಚಮಚ ಜೇನುತುಪ್ಪ, ಎರಡು ಚಮಚ ಬ್ರೌನ್ ಶುಗರ್ ಮತ್ತು ಒಂದು ಚಮಚ ಆಲಿವ್ ತೈಲ್ ಹಾಕಿಕೊಂಡು ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ನಿಮ್ಮ ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ದೇಹಕ್ಕೆ ಸಂಪೂರ್ಣ ಮಸಾಜ್ ಮಾಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

*ಈ ಸ್ಕ್ರಬ್ ಅನ್ನು ವಾರದಲ್ಲಿ ಎರಡು ಸಲ ಬಳಸಿ. ಇದರಿಂದ ತ್ವಚೆಯು ತುಂಬಾ ನಯ ಹಾಗೂ ಕಾಂತಿಯುತವಾಗುವುದು.

ಜೇನುತುಪ್ಪ+ಎಪ್ಸೊಮ್ ಉಪ್ಪು+ಗ್ರೀನ್ ಟೀ

ಜೇನುತುಪ್ಪ+ಎಪ್ಸೊಮ್ ಉಪ್ಪು+ಗ್ರೀನ್ ಟೀ

* ಒಂದು ಸಣ್ಣ ಬೌಲ್ ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ಜೇನುತುಪ್ಪ, ಒಂದು ಚಮಚ ಎಪ್ಸೊಮ್ ಉಪ್ಪು ಮತ್ತು 2 ಚಮಚ ಗ್ರೀನ್ ಟೀ ಹಾಕಿ.

* ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಆ ಮಿಶ್ರಣವನ್ನು ಸಂಪೂರ್ಣ ದೇಹಕ್ಕೆ ಹಚ್ಚಿಕೊಳ್ಳಿ.

* ನಿಧಾನವಾಗಿ ಕೆಲವು ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.

* ಈ ನೈಸರ್ಗಿಕವಾದ ಸ್ಕ್ರಬ್ ನ್ನು ತಿಂಗಳಲ್ಲಿ ಒಂದು ಸಲ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಜೇನುತುಪ್ಪ ಕಾಫಿ ಗ್ರೌಂಡ್ಸ್ ಬಾದಾಮಿ ತೈಲ

ಜೇನುತುಪ್ಪ ಕಾಫಿ ಗ್ರೌಂಡ್ಸ್ ಬಾದಾಮಿ ತೈಲ

* 2-3 ಚಮಚ ಜೇನುತುಪ್ಪ, 2 ಚಮಚ ಕಾಫಿ ಗ್ರೌಂಡ್ಸ್ ಮತ್ತು ಒಂದು ಚಮಚ ಬಾದಾಮಿ ತೈಲ

* ಈ ಮಿಶ್ರಣವನ್ನು ಚರ್ಮದ ಮೇಲೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ.

* ಇದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಬಳಿಕ ಲಘುವಾದ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

* ಅದ್ಭುತವಾದ ಮೈಕಾಂತಿ ಪಡೆಯಬೇಕೆಂದರೆ ಈ ನೈಸರ್ಗಿಕ ಸ್ಕ್ರಬ್ ಅನ್ನು ವಾರದಲ್ಲಿ ಒಂದು ಸಲ ಬಳಸಿ.

5. ಜೇನುತುಪ್ಪ+ಸಕ್ಕರೆ

* ಮೂರು ಚಮಚ ಜೇನುತುಪ್ಪ ಮತ್ತು 2-3 ಚಮಚ ಸಕ್ಕರೆ ಬೆರೆಸಿಕೊಳ್ಳಿ.

* ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಅದನ್ನು ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಮತ್ತು ಐದು ನಿಮಿಷ ಕಾಲ ಮಸಾಜ್ ಮಾಡಿ ಬಳಿಕ 15 ನಿಮಿಷ ಹಾಗೆ ಬಿಡಿ.

* ಹಗುರಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಮತ್ತು ಮೈಗೆ ಸ್ನಾನ ಮಾಡುವ ಜೆಲ್ ಹಾಕಿ.

*ಚರ್ಮಕ್ಕೆ ಒಳ್ಳೆಯ ಕಾಂತಿ ಮತ್ತು ರಚನೆ ಪಡೆಯಬೇಕಾದರೆ ಈ ಸ್ಕ್ರಬ್ ನ್ನು ವಾರದಲ್ಲಿ ಒಂದು ಸಲ ಬಳಸಿ.

ಜೇನುತುಪ್ಪ ಬಾಳೆಹಣ್ಣು ಪುದೀನಾ ಸಾರಭೂತ ತೈಲ

ಜೇನುತುಪ್ಪ ಬಾಳೆಹಣ್ಣು ಪುದೀನಾ ಸಾರಭೂತ ತೈಲ

*ಸರಿಯಾಗಿ ಹಣ್ಣಾಗಿರುವ ಎರಡು ಬಾಳೆಹಣ್ಣು ಮತ್ತು 3-4 ಚಮಚ ಜೇನುತುಪ್ಪ ಮತ್ತು 7-8 ಪುದೀನಾ ಸಾರಭೂತ ತೈಲ ಹಾಕಿ ಮಿಶ್ರಣ

ಮಾಡಿ.

*ಇದನ್ನು ನಿಮ್ಮ ಚರ್ಮಕ್ಕೆ ಸಂಪೂರ್ಣವಾಗಿ ಹಚ್ಚಿ.

*ಮಿಶ್ರಣವನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.

*ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿ. ಯೌವನಭರಿತ ಚರ್ಮವನ್ನು ಪಡೆಯಲು ಈ ನೈಸರ್ಗಿಕ ಸ್ಕ್ರಬ್ ಅನ್ನು ಬಳಸಿ.

ಜೇನುತುಪ್ಪ+ಕೋಕಾ ಪೌಡರ್+ರೋಸ್ ವಾಟರ್

ಜೇನುತುಪ್ಪ+ಕೋಕಾ ಪೌಡರ್+ರೋಸ್ ವಾಟರ್

* ಮೂರು ಚಮಚ ಜೇನುತುಪ್ಪ, 2-3 ಚಮಚ ಕೋಕಾ ಹುಡಿ ಮತ್ತು 2 ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ.

* ಇದು ತಯಾರಾದ ಬಳಿಕ ಸಂಪೂರ್ಣ ದೇಹಕ್ಕೆ ಇದನ್ನು ಹಚ್ಚಿರಿ.

* ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವ ಮೊದಲು ಐದು ನಿಮಿಷ ಕಾಲ ಮಸಾಜ್ ಮಾಡಿ.

* ನಯ ಹಾಗೂ ಸುಂದರ ಚರ್ಮ ಪಡೆಯಲು ವಾರದಲ್ಲಿ ಒಂದು ಸಲ ಈ ಸ್ಕ್ರಬ್ ಬಳಸಿ.

English summary

All-natural Honey Body Scrubs For Soft And Supple Skin

If you are someone whose skin is rough and dry, then you should try honey scrubs to improve its texture. Either purchase the one available in beauty stores or just whisk it at home by using only natural ingredients. Today at Boldsky, have ve compiled a list of all-natural honey body scrubs that can help your skin become baby-soft and supper supple. Pamper your body and skin with any of the following scrubs and soften its texture. Take a look at the recipes here...
X
Desktop Bottom Promotion