For Quick Alerts
ALLOW NOTIFICATIONS  
For Daily Alerts

ಶೂನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಇನ್ನು ಚಿಂತೆ ಬಿಡಿ...

By Deepak M
|

ಶೂಗಳು ವಾಸನೆ ಬರುವುದು ಕೇವಲ ಬೇಸಿಗೆ ಮತ್ತು ಮಳೆಗಾಲದ ಸಮಸ್ಯೆ ಮಾತ್ರವಲ್ಲ. ದುರ್ವಾಸನೆಯು ಯಾವಾಗಲು ಒಂದು ಸಮಸ್ಯೆಯೇ ಆಗಿರುತ್ತದೆ. ಇದು ನಿಮಗೆ ನಿಮ್ಮ ಸನಿಹದಲ್ಲಿರುವವರ ಮುಂದೆ ಮುಜುಗರಕ್ಕೆ ಗುರಿ ಮಾಡುತ್ತದೆ. ದುರ್ವಾಸನೆ ಬರುವ ಪಾದಗಳು ಬ್ಯಾಕ್ಟೀರಿಯಾದ ಕಾರಣದಿಂದ ಈ ಸಮಸ್ಯೆಯನ್ನುಂಟು ಮಾಡುತ್ತವೆ. ಕೆಲವೊಮ್ಮೆ ಫಂಗಸ್ ಅಥವಾ ಶಿಲೀಂಧ್ರದ ಸಮಸ್ಯೆಯಿಂದಾಗಿ ಸಹ ಅಧಿಕ ಬೆವರು ಮತ್ತು ತೇವಾಂಶವು ಕಾಣಿಸಿಕೊಂಡು ಪಾದದಲ್ಲಿ ಕೆಟ್ಟ ವಾಸನೆಯ ಬರುತ್ತದೆ.

ಕೆಲವೊಮ್ಮೆ ನಿಮ್ಮ ದುರ್ವಾಸನೆ ಬೀರುವ ಪಾದವು ಅಥ್ಲೆಟ್ ಫೂಟ್‌ನ ಸಮಸ್ಯೆಯಿಂದಲೂ ಸಹ ಬರಬಹುದು. ಅದಕ್ಕಾಗಿ ತಜ್ಞರು ನೀಡಿರುವ ಈ ಸಲಹೆಗಳನ್ನು ಪಾಲಿಸಿ. ನಿಮ್ಮ ಕಾಲಿನ ದುರ್ವಾಸನೆಗೆ ಬ್ಯಾಕ್ಟೀರಿಯಾ ಮತ್ತು ಬೆವರು ಮಾತ್ರವೇ ಕಾರಣವಲ್ಲ. ವಾಸ್ತವ ಏನೆಂದರೆ ಶೂಗಳು ಪಾದಗಳಲ್ಲಿರುವ ಆ ಎಲ್ಲಾ ತೇವಾಂಶವನ್ನು ಹೀರಿಕೊಂಡು ಬಿಡುತ್ತದೆ ಮತ್ತು ದುರ್ವಾಸನೆಯನ್ನುಂಟು ಮಾಡುತ್ತದೆ. ಆಗ ಶೂನಿಂದ ಈ ದುರ್ವಾಸನೆಯನ್ನು ದೂರ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕಾಗಿ ಪರೀಕ್ಷಿಸಲ್ಪಟ್ಟ ಈ ವಿಧಾನಗಳನ್ನು ಪ್ರಯೋಗಿಸಿ. ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ. ಮಳೆಗಾಲದಲ್ಲಿ ಕಾಡುವ ಪಾದಗಳ ದುರ್ವಾಸನೆಗೆ ಸರಳ ಟಿಪ್ಸ್

Smelly Shoes? Try these remedies

*ಒಂದೇ ಶೂವನ್ನು ಪ್ರತಿದಿನ ಹಾಕಿಕೊಳ್ಳಬೇಡಿ. ಕನಿಷ್ಠ ಎರಡು ಜೊತೆ ಶೂಗಳನ್ನು ಇರಿಸಿಕೊಳ್ಳಿ. ಒಂದೊಂದು ದಿನ ಒಂದೊಂದು ಶೂವನ್ನು ಧರಿಸಿ. ಇದರಿಂದ ನಿಮ್ಮ ಶೂ ಒಂದು ದಿನ ಒಣಗುತ್ತದೆ ಮತ್ತು ವಾಸನೆ ಮುಕ್ತವಾಗುತ್ತದೆ.

*ವಾಸನೆಯನ್ನು ಹೀರಿಕೊಳ್ಳುವಂತಹ ವೈದ್ಯಕೀಯ ಇನ್ಸೋಲ್‌ಗಳು ಇರುವ ಶೂಗಳನ್ನು ಧರಿಸಿ. ಈ ಇನ್ಸೋಲ್‌ಗಳು ಶೂಗಳಲ್ಲಿರುವ ವಾಸನೆಯನ್ನು ಹೀರಿಕೊಳ್ಳುವ ರೀತಿಯಲ್ಲಿ ರೂಪಿಸಲ್ಪಟ್ಟಿರುತ್ತವೆ.

*ನೀವು ಹೊರಗೆ ಹೋಗಿ ಸಂಜೆ ಬಂದ ಕೂಡಲೆ ನಿಮ್ಮ ಶೂಗಳ ಒಳಗೆ ಒಂದಷ್ಟು ದಿನ ಪತ್ರಿಕೆಗಳನ್ನು ಅಥವಾ ಪೇಪರ್ ಬಾಲ್‌ಗಳನ್ನು ಇಟ್ಟು ಗಾಳಿಯಾಡುವ ಸ್ಥಳದಲ್ಲಿ ಇರಿಸಿ. ಈ ದಿನ ಪತ್ರಿಕೆಯು ಶೂನಲ್ಲಿರುವ ತೇವಾಂಶವನ್ನು ಹೀರಿಕೊಂಡು, ಬ್ಯಾಕ್ಟೀರಿಯಾಗಳ ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ. ಶೂನಿಂದ ಕೆಟ್ಟ ವಾಸನೆ ತೆಗೆಯಲು 8 ಸಲಹೆಗಳು

*ಶೂ ಒಳಗೆ ಸ್ವಲ್ಪ ಬೇಕಿಂಗ್ ಸೋಡಾವನ್ನು (ಅಡುಗೆ ಸೋಡಾ) ಸಿಂಪಡಿಸಿ, ಇಡೀ ರಾತ್ರಿ ಹಾಗೆ ಬಿಡಿ. ಬೇಕಿಂಗ್ ಸೋಡಾವನ್ನು ಶಿಲೀಂಧ್ರ ನಾಶಕವಾಗಿ ಸಹ ಬಳಸುತ್ತಾರೆ. ಇದು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ.

*ನಿಮ್ಮ ಶೂ ಒಳಗೆ ಒಂದಷ್ಟು ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಇಡಿ. ಅಂದರೆ ಕಿತ್ತಳೆ, ನಿಂಬೆ ಅಥವಾ ಮೂಸಂಬಿಯ ಸಿಪ್ಪೆಗಳನ್ನು. ಇವು ನಿಮ್ಮ ಶೂಗಳಲ್ಲಿರುವ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ. ಮರುದಿನ ನಿಮ್ಮ ಶೂ ತಾಜಾ ಆಗಿ ಇರುತ್ತದೆ.

*ಶೂಗಳೊಳಗೆ 1-2 ಹನಿ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ. ಈ ಎಣ್ಣೆಯು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಒಳಗೊಂಡಿದ್ದು, ಇವು ನಿಮ್ಮ ಶೂಗಳನ್ನು ಉತ್ತಮ ಸುವಾಸನೆ ಬೀರುವಂತೆ ಮಾಡುತ್ತದೆ.

English summary

Smelly Shoes? Try these remedies

Smelly feet are not just a summer or monsoon issue. Bad odour from your feet is a yearlong problem. Smelly feet are due to contamination of the skin with bacteria. It is also sometimes due to fungus caused by excessive sweating or excessive wetness of the feet which leads to decomposition of skin causing bad odour. Here are some tried and tested remedies for getting rid of bad odour from your shoes:
Story first published: Tuesday, August 2, 2016, 19:43 [IST]
X
Desktop Bottom Promotion