ಸಾಬೂನು ಪಕ್ಕಕ್ಕಿಡಿ, ನೈಸರ್ಗಿಕ ಗಿಡಮೂಲಿಕೆ ಬಳಸಿ ನೋಡಿ....

By vani nayak
Subscribe to Boldsky

ದೇಹವನ್ನು ಸ್ವಚ್ಛಗೊಳಿಸಲು ಸಾಬೂನಿನ ಅವಶ್ಯಕತೆ ಇಲ್ಲ ಎಂದು ನಿಮಗೆ ಗೊತ್ತೇ? ದೇಹವನ್ನು ಸ್ವಚ್ಛಗೊಳಿಸಲು ಹಲವಾರು ನೈಸರ್ಗಿಕ ವಿಧಾನಗಳಿವೆ. ಸಾಬೂನಿನಲ್ಲಿ ದೇಹವನ್ನು ತೊಳೆದರೆ, ಅದರಿಂದ ಬರುವ ಬುರುಗಿನ ಕಾರಣದಿಂದ ನಿಮಗೆ ಸ್ವಚ್ಛತೆಯ ಅನುಭವವೇನೋ ಆಗಬಹುದು, ಆದರೆ ಅದರಲ್ಲಿರುವ ಎಮಲ್ಸಿಫೈಯರ್ಸ್ ಮತ್ತು ಸರ್ಫೆಕ್ಟೆಂಟ್ಸ್‌ಗಳು ನಿಮ್ಮ ದೇಹದಲ್ಲಿರುವ ನೈಸರ್ಗಿಕ ತೈಲಗಳನ್ನು ತೆಗೆದುಬಿಡುತ್ತದೆ.

ಹಾಗಾಗಿ ಸ್ನಾನದ ನಂತರ ನಿಮ್ಮ ತ್ವಚೆ ಬಿರುಸಾಗಿ ಕಾಣುತ್ತದೆ. ಈ ತರಹದ ಒಣ ತ್ವಚೆಗೆ ಹೆಚ್ಚು ಆರೈಕೆ ಮಾಡಬೇಕಾಗುತ್ತದೆ. ಮಾಯಿಶ್ಚರೈಸರ್ , ಬಾಡಿ ಬಟರ್‌ನ ಬಳಕೆ ಹೆಚ್ಚಾಗಿ ಮಾಡಬೇಕಾಗುತ್ತದೆ. ಅದು ಹೇಗೇ ಇರಲಿ, ಟಾಕ್ಸಿನ್ಸ್ ಬಳಕೆ ಮಾಡದೇ, ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಂಡು ತ್ವಚೆಯ ತೇವಾಂಶವನ್ನೂ ಹೋಗಲಾಡಿಸದೇ ದೇಹವನ್ನು ಸ್ವಚ್ಛಗೊಳಿಸಬಹುದಾಗಿದೆ. ಇದರಿಂದ ತ್ವಚೆಯೂ ಮೃದುಗೊಳ್ಳುತ್ತದೆ.  ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ಸೀಗೆಕಾಯಿ ಸೋಪ್

ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ ಮತ್ತೊಂದು ಲಾಭದಾಯಕ ವಿಚಾರವೇನೆಂದರೆ, ತ್ವಚೆಯ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ. ಚರ್ಮದ ಉರಿಯೂತ, ಮೊಡವೆಗಳು, ಗುಳ್ಳೆಗಳ ಸಮಸ್ಯೆಗಳಿಂದ ಹೊರಬರಬಹುದು. ಕೆಲವು ತ್ವಚೆ ಎಷ್ಟು ಸೂಕ್ಷ್ಮವಿರುತ್ತದೆ ಎಂದರೆ ಹೊರಗೆ ಕೊಂಡು ತಂದ ಕ್ಲೆನ್ಸರ್‌ಗಳ ಬಳಕೆಯಿಂದ ತ್ವಚೆಯ ಊತವಾಗುವ ಸಂಭವವಿರುತ್ತದೆ. ಆದ್ದರಿಂದ ಸಾಬೂನಿನ ಬದಲಾಗಿ ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡುವುದರಿಂದ ವೆಚ್ಚವೂ ಕಡಿಮೆಯಾಗುತ್ತದೆ. ಆದ್ದರಿಂದ ಇದರ ಬಳಕೆಯನ್ನು ಮಾಡಲು ಪ್ರಯತ್ನಸಿ.        ತ್ವಚೆಗೆ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ!

clay

ಜೇಡಿ ಮಣ್ಣು

ಯಾವುದೇ ರೀತಿಯ ಜೇಡಿ ದೇಹದಲ್ಲಿನ ಅಧಿಕ ತೈಲ ಅಥವಾ ಕೊಳಕನ್ನು ಹೀರಿಕೊಂಡು ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ನೀವು ಜೀಡಿಯ ಲೇಪನ ಮಾಡಿಕೊಳ್ಳಬೇಕಾಗುತ್ತದೆ. ಇದು ತ್ವಚೆಯಲ್ಲಿರುವ ಟಾಕ್ಸಿನ್ಸ್ ಗಳನ್ನು ಕೋಮಲವಾದ ರೀತಿಯಲ್ಲಿ ತ್ವಚೆಗೆ ಹೆಚ್ಚು ಹಾನಿ ಮಾಡದೇ ತೆಗೆದು ಹಾಕುತ್ತದೆ. ನಿಮ್ಮ ತ್ವಚೆಗೆ ಸೂಕ್ತವೆನಿಸುವ ಜೇಡಿಯ ಮಾದರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಫುಲ್ಲರ್ಸ್ ಅರ್ಥ್ ಆಯಿಲಿ ತ್ವಚೆಗೆ ಮತ್ತು ರೆಡ್ ಕ್ಲೇ ಒಣ ತ್ವಚೆಗೆ ಬಳಸಿ, ನೈಸರ್ಗಿಕ ರೀತಿಯಲ್ಲಿ ನಿಮ್ಮ ದೇಹವನ್ನು ಶುಚಿಗೊಳಿಸಬಹುದು.

 

Chickpea Flour

ಕಡಲೇ ಹಿಟ್ಟು

ಇದು ಆಯಿಲಿ ತ್ವಚೆಗೆ ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ. ಇದನ್ನು ನೀರಿನ ಜೊತೆ, ಗುಲಾಬರಿ ಜೊತೆ ಅಥವಾ ಮೊಸರಿನ ಜೊತೆಗೂ ಮಿಶ್ರಣ ಮಾಡಿ ಬಳಸಬಹುದು. ಇದರಿಂದ ದೇಹವು ಶುಚಿಯಾಗುವುದಲ್ಲದೇ ಸತ್ತ ಜೀವ ಕೋಶಗಳನ್ನು ತೆಗೆದು ಹಾಕುತ್ತದೆ.

Buttermilk
 

ಮಜ್ಜಿಗೆ

ಮಜ್ಜಿಗೆ ಅಥವಾ ಸಾಕಷ್ಟು ಹಾಲಿನ ಉತ್ಪನ್ನಗಳಲ್ಲಿ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ತ್ವಚೆಯನ್ನು ಶುಚಿಗೊಳಿಸುವುದಷ್ಟೇ ಅಲ್ಲದೇ ಸತ್ತ ಜೀವ ಕೋಶಗಳನ್ನೂ, ಕೊಳಕನ್ನೂ ಕೋಮಲ ರೀತಿಯಿಂದಲೇ ತೆಗೆದು ಹಾಕುತ್ತದೆ. ಇದನ್ನು ಚರ್ಮದ ಮೇಲೆ ಲೇಪಿಸಿಕೊಂಡು ಎಂದಿನೆತೆ ಸ್ನಾನ ಮಾಡಿರಿ.

coconut oil
 

ಎಣ್ಣೆ

ನೈಸರ್ಗಿಕ ರೀತಿಯಲ್ಲಿ ಚರ್ಮವನ್ನು ಶುಚಿಗೊಳಿಸಲು ಎಣ್ಣೆಗಿಂತ ಸುಲಭವಾದ ವಿಧಾನ ಮತ್ತೊಂದಿಲ್ಲ. ಯಾವುದೇ ರೀತಿಯ ಎಣ್ಣೆ ಅಂದರೆ ಕೊಬ್ಬರಿ ಎಣ್ಣೆಯಾಗಿರಬಹುದು ಅಥವಾ ಆಲಿವ್ ಎಣ್ಣೆಯಾಗಿರಬಹುದು, ಮೈ ಮೇಲೆಲ್ಲಾ ಧಾರಳವಾಗಿ ಲೇಪಿಸಿಕೊಂಡು ಒಂದು ಬಟ್ಟೆಯನ್ನು ಬಳಸಿ ಒರಸಿ ಕೊಳಕನ್ನು ತೆಗೆದುಬಿಡಿ. ಇದರಿಂದ ದೇಹದಲ್ಲಿನ ಕೊಳೆಯೆಲ್ಲಾ ತೆಗೆದಂತಾಗುತ್ತದೆ.

cucumber peace
 

ಹಿಸುಕಿದ ಸೌತೇಕಾಯಿ

ಸೂಕ್ಷ್ಮ ತ್ವಚೆ ಇರುವವರು, ಮನೆಯಲ್ಲೇ ತಯಾರಿಸಬಹುದಾದ ಸೌತೇಕಾಯಿ ರುಬ್ಬಿದ ಮಿಶ್ರಣವನ್ನು ಹಚ್ಚಿಕೊಳ್ಳಬಹುದು. ಇದರಿಂದ ತ್ವಚೆಗೆ ತಂಪಾದ ಅನುಭವ ಸಿಗುತ್ತದೆ.

baking soda
 

ಬೇಕಿಂಗ್ ಸೋಡ

ಬೇಕಿಂಗ್ ಸೋಡವನ್ನು ನೀರಿನಲ್ಲಿ ಮಿಶ್ರಣ ಮಾಡಿ ಬಳಸಿದರೆ ಸಾಬೂನು ಬಳಸಿದಂತೆಯೇ ಅನುಭವ ನೀಡುತ್ತದೆ ಅದು  ನೈಸರ್ಗಿಕವಾಗಿಯೇ. ಇದು ದೇಹದ ಎಲ್ಲಾ ಕೊಳಕನ್ನು ತೆಗೆದು ಹಾಕುತ್ತದೆ. ಬೇಕಾದರೆ ಈ ಮಿಶ್ರಣಕ್ಕೆ ಯಾವುದೇ ಎಣ್ಣೆಯನ್ನೂ ಸುವಾಸನೆಗಾಗಿ ಸಹ ಬಳಸಬಹುದು.

Honey
 

ಜೇನು

ಜೀನುತುಪ್ಪ ಆನ್ಟಿ ಬ್ಯಾಕ್ಟೀರಿಯಲ್ ಗುಣ ಹೊಂದಿರುವುದರಿಂದ ಕೋಮಲವಾದ ರೀತಿಯಲ್ಲಿ ತ್ವಚೆಯನ್ನು ಶುಚಿಗೊಳಿಸುತ್ತದೆ. ಅದನ್ನು ಲೇಪಿಸಿ, 5 ರಿಂದ 10 ನಿಮಿಷಗಳ ಬಿಟ್ಟು ನಂತರ ತೊಳೆಯಬೇಕು. 

Apple cider vinegar
 

ಆಪಲ್ ಸಿಡೆಲ್ ವಿನೇಗರ್

ಆಪಲ್ ಸಿಡೆಲ್ ವಿನೇಗರ್ ನೈಸರ್ಗಿಕ ಸಾಮಗ್ರಿಯಾಗಿದ್ದು ದೇಹವನ್ನು ಶುಚಿಗೊಳಿಸುವುದಷ್ಟೇ ಅಲ್ಲದೇ ತ್ವಚೆಯಲ್ಲಿರುವ ಪಿಹೆಚ್ ಬ್ಯಾಲೆನ್ಸ್ ಅನ್ನೂ ನಿರ್ವಹಿಸುತ್ತದೆ. ವಿನೇಗರ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ದೇಹದ ಎಲ್ಲಾ ಕಡೆ ಲೇಪಿಸಬೇಕು. ನಂತರ ನಿಮಗೇ ಅರಿವಾಗುತ್ತದೆ ಅದರ ಚಮತ್ಕಾರ.           ಇನ್ನು ಮುಖ ತೊಳೆಯುವಾಗ ಸೋಪನ್ನು ಮಾತ್ರ ಬಳಸಬೇಡಿ!

For Quick Alerts
ALLOW NOTIFICATIONS
For Daily Alerts

    English summary

    Natural Herbs To Cleanse Your Body Without Using Soap!

    Did you know that you don't really need a soap to be clean? There are natural ways in which you can cleanse your body! Yes, soap makes you feel all squeaky clean because of how well it can lather up. Most soaps contain emulsifiers and surfactants that could strip the skin of its natural oils.
    Story first published: Tuesday, October 18, 2016, 10:16 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more