For Quick Alerts
ALLOW NOTIFICATIONS  
For Daily Alerts

ಹಿಮ್ಮಡಿಗಳ ಬಿರುಕಿನ ಸಮಸ್ಯೆಗೆ-ಸಿಂಪಲ್ ಮನೆಮದ್ದುಗಳು

By Jaya subramanya
|

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ ಅಲ್ಲವೇ?

ಅಷ್ಟೇ ಅಲ್ಲದೆ ಇದರಲ್ಲಿ ಕೊಳೆ ತುಂಬಿ ಅದು ಇನ್ನಷ್ಟು ಅಸಹ್ಯವಾಗಿ ಕಾಣುವ ಸಾಧ್ಯತೆ ಕೂಡ ಇರುತ್ತದೆ. ಒಮ್ಮೊಮ್ಮೆ ಇದನ್ನು ಉಜ್ಜಿ ತೊಳೆದಾಗ ಕೂಡ ಇದು ಸ್ವಚ್ಛವಾಗಿ ಕಂಡರೂ ಪುನಃ ಅದೇ ರೂಪಕ್ಕೆ ಮರಳುತ್ತದೆ. ಹಿಮ್ಮಡಿಯ ಬಿರುಕು ತೀವ್ರವಾಗಿದ್ದರೆ ಇದು ನೋವನ್ನು ಉಂಟುಮಾಡುತ್ತದೆ. ಆರೋಗ್ಯಕಾರಿ ಟಿಪ್ಸ್: ಹಿಮ್ಮಡಿ ನೋವೇ? ಇನ್ನು ಚಿಂತೆ ಬಿಡಿ!

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಮ್ಮಡಿಯ ಬಿರುಕು ಇನ್ನಷ್ಟು ಆಳವಾಗಿ ಉಂಟಾಗಿ ಅಸಾಧ್ಯವಾದ ನೋವನ್ನು ತರುತ್ತದೆ. ನಡೆಯಲೂ ಆಗದಂತಹ ಸ್ಥಿತಿ ಕೂಡ ಉಂಟಾಗುತ್ತದೆ. ಇದಕ್ಕಾಗಿ ಶೂ ಸಾಕ್ಸ್‎ಗಳ ಬಳಕೆಯನ್ನು ಜನರು ಮಾಡುತ್ತಾರೆ. ಮುಜುಗರವನ್ನು ತಪ್ಪಿಸಿ ಬಿರುಕನ್ನು ಶೂ ಮುಚ್ಚುತ್ತದೆ ಅಂತೆಯೇ ಬಿರುಕಿಗೆ ರಕ್ಷಣೆಯನ್ನು ಉಂಟುಮಾಡುತ್ತದೆ.

ಆದರೆ ಇದನ್ನು ಹಾಗೆಯೇ ಬಿಟ್ಟಲ್ಲಿ ಅದು ದೀರ್ಘಕಾಲದ ಸಮಸ್ಯೆಯಾಗಿಯೇ ಉಳಿಯುವ ಸಾಧ್ಯತೆ ಇರುತ್ತದೆ. ಮನೆಯಲ್ಲೇ ನೈಸರ್ಗಿಕ ಚಿಕಿತ್ಸೆಯನ್ನು ಮಾಡಿ ಬಿರುಕನ್ನು ನಿವಾರಿಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಹಿಮ್ಮಡಿ ಬಿರುಕಿನ ಸಮಸ್ಯೆಗೆ ಪರಿಹಾರವನ್ನುಂಟು ಮಾಡುವ ಮನೆಮದ್ದುಗಳ ಪಟ್ಟಿಯನ್ನು ನೀಡುತ್ತಿದ್ದು ಕೆಳಗಿನ ಸ್ಲೈಡರ್ ನೋಡಿ....

ಲಿಂಬೆ ಮತ್ತು ಉಪ್ಪು ನೀರು

ಲಿಂಬೆ ಮತ್ತು ಉಪ್ಪು ನೀರು

ಲಿಂಬೆ ರಸ ಬೆರೆಸಿದ ಉಗುರು ಬಿಸಿ ನೀರಿನಲ್ಲಿ ಕಾಲನ್ನು ಊರಿಡಿ. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಕಿ. ಮೃತ ಕೋಶಗಳನ್ನು (ಡೆಡ್‌ಸೆಲ್) ತೆಗೆದುಹಾಕುವಲ್ಲಿ ಲಿಂಬೆ ಹೆಚ್ಚು ಪರಿಣಾಮಕಾರಿಯಾದುದು. ಅಂತೆಯೇ ಉಪ್ಪು ಎಲ್ಲಾ ರೀತಿಯ ಸೋಂಕಿನಿಂದ ನಿವಾರಣೆಯನ್ನುಂಟು ಮಾಡುತ್ತದೆ.

ರೋಸ್ ವಾಟರ್ ಮತ್ತು ಗ್ಲಿಸರಿನ್

ರೋಸ್ ವಾಟರ್ ಮತ್ತು ಗ್ಲಿಸರಿನ್

ರೋಸ್ ವಾಟರ್ ಮತ್ತು ಗ್ಲಿಸರಿನ್ ಮಿಶ್ರಣವನ್ನು ಒಡೆದ ಹಿಮ್ಮಡಿಗೆ ಹಚ್ಚಿರಿ ಮತ್ತು ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ. ನಿಯಮಿತವಾಗಿ ಇದನ್ನು ಬಳಸುವುದು ನಿಮ್ಮ ಹಿಮ್ಮಡಿಯನ್ನು ಮೃದುವಾಗಿಸುತ್ತದೆ.

ಕೆಲವೊಂದು ಎಣ್ಣೆಗಳು

ಕೆಲವೊಂದು ಎಣ್ಣೆಗಳು

ಬಿರುಕು ಬಿಟ್ಟ ಹಿಮ್ಮಡಿಯ ಚಿಕಿತ್ಸೆಗೆ ಯಾವುದೇ ರೀತಿಯ ವೆಜಿಟೇಬಲ್ (ತರಕಾರಿ) ಎಣ್ಣೆಯನ್ನು ಬಳಸಿ. ಆಲೀವ್, ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬಳಸಬಹುದಾಗಿದೆ. ಮಾಯಿಶ್ಚರೈಸರ್ ಅನ್ನು ಭದ್ರಪಡಿಸುವಂತೆ ತ್ವಚೆಯ ಆಳಕ್ಕೆ ಇದು ಹೋಗುತ್ತದೆ.

ಪೆಟ್ರೋಲಿಯಮ್ ಜೆಲ್ಲಿ

ಪೆಟ್ರೋಲಿಯಮ್ ಜೆಲ್ಲಿ

ಒಡೆದ ಹಿಮ್ಮಡಿಗೆ ಪೆಟ್ರೋಲಿಯಮ್ ಜೆಲ್ಲಿಯನ್ನು ದಪ್ಪನಾಗಿ ಹಚ್ಚಿಕೊಳ್ಳಿ. ನಂತರ ಸಾಕ್ಸ್ ಧರಿಸಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಜೆಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಹಿಮ್ಮಡಿಯನ್ನು ಗುಣಪಡಿಸುತ್ತದೆ. ಮರುದಿನ ಬಿರುಕಿಲ್ಲದ ಹಿಮ್ಮಡಿ ನಿಮಗೆ ದೊರೆಯುತ್ತದೆ.

ಹಣ್ಣಿನ ಮಾಸ್ಕ್

ಹಣ್ಣಿನ ಮಾಸ್ಕ್

ಪಪ್ಪಾಯ ಮತ್ತು ಅವೊಕಾಡೊ ಮಾಸ್ಕ್ ಹಣ್ಣಿನ ಮಾಸ್ಕ್ ಆಯ್ಕೆಯಲ್ಲಿ ಪ್ರಮುಖವಾಗಿದ್ದು, ಒಣ ತ್ವಚೆಗೆ ಮಾಯಿಶ್ಚರೈಸ್ ಅನ್ನು ಒದಗಿಸುವಲ್ಲಿ ನೆರವನ್ನು ನೀಡಲಿದೆ. ಅವೊಕಾಡೊ ನಿಮಗೆ ದೊರೆಯಲಿಲ್ಲ ಎಂದಾದಲ್ಲಿ ಬಾಳೆಹಣ್ಣನ್ನು ಬಳಸಿಕೊಳ್ಳಬಹುದಾಗಿದೆ.

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಮುಖಕ್ಕೆ ಹಾಲು ಮತ್ತು ಜೇನು ಹೇಗೆ ಅತ್ಯುತ್ತಮವಾಗಿದೆಯೋ ಅಂತೆಯೇ ಹಿಮ್ಮಡಿಗೂ ಇದರ ಬಳಕೆಯನ್ನು ಮಾಡಬಹುದಾಗಿದೆ. ಜೇನು ಉತ್ತಮ ಎಕ್ಸ್‎ಫೋಲಿಯೇಂಟ್ ಎಂದೆನಿಸಿದ್ದು ತ್ವಚೆಗೆ ಬೇಕಾದಷ್ಟು ಮಾಯಿಶ್ಚರೈಸ್ ಅನ್ನು ಒದಗಿಸಿ ಮೃತ ಕೋಶಗಳನ್ನು ನಿವಾರಿಸುತ್ತದೆ. ತ್ವಚೆಗೆ ಇದು ಹೆಚ್ಚು ಹಾನಿಯನ್ನೂ ಉಂಟುಮಾಡುವುದಿಲ್ಲ. ಮಾಯಿಶ್ಚರೈಸ್ ಒದಗಿಸುವಲ್ಲಿ ಹಾಲು ಅತ್ಯುತ್ತಮವಾದುದಾಗಿದೆ.

ಬೇವು

ಬೇವು

ಬೇವು ಮತ್ತು ಅರಿಶಿನದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ನಿಮ್ಮ ಪಾದಗಳಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಇದರಲ್ಲಿ ಆಂಟಿಫಂಗಲ್ ಅಂಶವಿದ್ದು ಬ್ಯಾಕ್ಟೀರಿಯಾವನ್ನು ಹೋಗಲಾಡಿಸುವಲ್ಲಿ ಇದು ಉತ್ತಮವಾದುದಾಗಿದೆ. ಅಂತೆಯೇ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ. ಇನ್‎ಫ್ಲಾಮೇಶನ್ ಅನ್ನು ಕಡಿಮೆ ಮಾಡುವಲ್ಲಿ ಅರಿಶಿನ ಸಹಕಾರಿಯಾಗಿದೆ.

ಅಕ್ಕಿ ಹುಡಿ ಮತ್ತು ಜೇನು

ಅಕ್ಕಿ ಹುಡಿ ಮತ್ತು ಜೇನು

ಅಕ್ಕಿ ಮತ್ತು ಜೇನಿನ ಸ್ಕ್ರಬ್ ಅನ್ನು ಮಾಡಿಕೊಳ್ಳಬಹುದಾಗಿದ್ದು ಇದು ವೇಗವಾಗಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಜೇನು ಎಕ್ಸ್‎ಫೋಲೊಯೇಟ್ ತರಹ ಕೆಲಸ ಮಾಡುತ್ತದೆ ಮತ್ತು ಮಾಯಿಶ್ಚರೈಸ್ ಮಾಡುತ್ತದೆ. ಅಕ್ಕಿ ಹುಡಿಯ ಮಿಶ್ರಣವು ಒಡೆದ ಹಿಮ್ಮಡಿಯನ್ನು ನಿವಾರಿಸುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಬಳಸಿ ಒಡೆದ ಹಿಮ್ಮಡಿಗೆ ಸರಿಯಾಗಿ ಮಸಾಜ್ ಮಾಡಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಸಾಕ್ಸ್ ಧರಿಸಿ. ಬೆಳಗ್ಗಿನ ಹೊತ್ತು ಉತ್ತಮ ಆರೋಗ್ಯಕರವಾದ ಹಿಮ್ಮಡಿಯನ್ನು ನೀವು ಹೊಂದಿರುತ್ತೀರಿ.

ವಿನೇಗರ್

ವಿನೇಗರ್

ವಿನೇಗರ್ ಮತ್ತು ಉಗುರು ಬೆಚ್ಚನೆಯ ನೀರಿನಲ್ಲಿ ಪಾದಗಳನ್ನು ನೆನೆಯಿಸಿ. ಮೃತಕೋಶಗಳನ್ನು ಮೃದುವಾಗಿಸುವಲ್ಲಿ ಇದು ಸಹಕಾರಿಯಾಗಿದ್ದು ಪ್ಯುಮೈಸ್ ಸ್ಟೋನ್ ಬಳಸಿ ಹಿಮ್ಮಡಿಯನ್ನು ಉಜ್ಜಿಕೊಳ್ಳಿ. ನಂತರ ಬಲವಾದ ಮಾಯಿಶ್ಚರೈಸರ್ ಬಳಸಿ.

English summary

Miraculous Remedies To Treat Cracked Heels At Home

Cracked heels is a very common problem. It may be a cosmetic problem, or the heels may be so badly cracked that it may turn painful. Cracked heels can give rise to thick, peeling-off skin around the heels that is sometimes accompanied by pain.However, for moderate cracks, these home remedies are surely going to be enough. So, keep reading!
X
Desktop Bottom Promotion