For Quick Alerts
ALLOW NOTIFICATIONS  
For Daily Alerts

ಕಾಂತಿಯುಕ್ತ ತ್ವಚೆಗೆ-ಹರ್ಬಲ್ ಬಾಡಿ ವಾಶ್

By Jaya subramanya
|

ನಿಮ್ಮ ದೈಹಿಕ ಸೌಂದರ್ಯ ಮಸುಕಾಗಿದೆ ಎಂದಾದಲ್ಲಿ ನೀವು ಸೇವಿಸುವ ಆಹಾರ ಅತ್ಯುತ್ತಮವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೌದು ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಉತ್ತಮ ಜೀವನ ಕ್ರಮವನ್ನು ನೀವು ಅನುಸರಿಸಬೇಕಾಗುತ್ತದೆ. ಹೊಳೆಯುವ ತ್ವಚೆ ಎಲ್ಲರಿಗೂ ದೈವದತ್ತ ಕೊಡುಗೆಯಾಗಿರುವುದಿಲ್ಲ. ಈ ಸಂದರ್ಭದಲ್ಲಿ ಈ ತ್ವಚೆಯನ್ನು ನಾವೇ ಪಡೆದುಕೊಳ್ಳಬೇಕು ಎಂದಾದಲ್ಲಿ ಅದಕ್ಕಾಗಿ ಕೆಲವೊಂದು ಪರಿಹಾರ ಕ್ರಮಗಳನ್ನು ನಾವು ಅನುಸರಿಸಲೇಬೇಕು.

ಅನಾರೋಗ್ಯಕರ ಆಹಾರ, ಕಡಿಮೆ ಗುಣಮಟ್ಟದ ಆಹಾರ ಸೇವನೆ, ವಾತಾವರಣದ ದೋಷ, ಹಾರ್ಮೋನು ಅಸಮತೋಲತೆಯಿಂದಾಗಿ ತ್ಚಚೆ ಕಳೆಗುಂದುತ್ತದೆ. ನಿಮ್ಮ ಸೌಂದರ್ಯವೇ ಮಸುಕಾಗಿದೆ ಎಂದಾದಲ್ಲಿ ನೀವು ಎಷ್ಟೇ ಅತ್ಯುತ್ತಮವಾಗಿ ಸಿಂಗರಿಸಿಕೊಂಡರೂ ಅದು ವ್ಯರ್ಥವಾಗುತ್ತದೆ. ಆದರೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಇವುಗಳಲ್ಲಿರುವ ರಾಸಾಯನಿಕಗಳು ತ್ವಚೆಗೆ ಮತ್ತಷ್ಟು ಹಾನಿಯನ್ನು ತಂದೊಡ್ಡುತ್ತವೆ. ಹಾಗಿದ್ದರೆ ನಿಮ್ಮ ಸೌಂದರ್ಯ ಉತ್ಪನ್ನಗಳನ್ನು ನೀವೇ ತಯಾರಿಸಿಕೊಂಡರೆ ಅದೇ ಬೆಸ್ಟ್ ಉಪಾಯವಲ್ಲವೇ?

ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಉತ್ಪನ್ನಗಳನ್ನು ಹೇಗೆ ಸಿದ್ಧಪಡಿಸುವುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದು ಇದನ್ನು ಬಳಸಿ ತ್ವಚೆಯ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದಾಗಿದೆ. ಇಂದಿನ ಲೇಖದನಲ್ಲಿ ನೈಸರ್ಗಿಕ ಬಾಡಿ ವಾಶ್ ಅನ್ನು ನೀವೇ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದು ಹೆಚ್ಚು ಸುಲಭವಾಗಿ ಇದನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ.

Easy Herbal Body Wash Recipe For Amazing Skin

ಬಾಡಿ ವಾಶ್ ರೆಸಿಪಿ ಸಿದ್ಧತೆ
ಸಾಮಾಗ್ರಿಗಳು: ಕ್ಯಾಸ್ಟೈಲ್ ಸೋಪ್, ತೆಂಗಿನೆಣ್ಣೆ, ರೋಸ್ ವಾಟರ್ ಮತ್ತು ಲ್ಯಾವೆಂಡರ್. ಕ್ಯಾಸ್ಟೈಲ್ ಸೋಪ್ ಸುಗಂಧವಿಲ್ಲದ ಸೋಪು ಆಗಿದ್ದು, ಅಗತ್ಯ ಎಣ್ಣೆಗಳನ್ನ ಬಳಸಿ ತಯಾರಿಸುತ್ತಾರೆ. ಇದಕ್ಕೆ ರಾಸಾಯನಿಕಗಳನ್ನು ಬಳಸಿರುವುದಿಲ್ಲ. ಮನೆಯಲ್ಲೇ ತಯಾರಿಸುವ ಬಾಡಿ ವಾಶ್ ರೆಸಿಪಿಗೆ ಇದು ಅಗತ್ಯವಾಗಿ ಬೇಕೇ ಬೇಕು. ದೇಹದ ಕೊಳೆಯನ್ನು ನಿವಾರಿಸುವಲ್ಲಿ ಇದು ಸಹಕಾರಿ.

ಈ ಸೋಪು ಅನ್ನು ಅಲಂಕಾರಿಕ/ಔಷಧಾಲಯಗಳಲ್ಲಿ ಖರೀದಿಸಬಹುದು. ತೆಂಗಿನೆಣ್ಣೆ ನೈಸರ್ಗಿಕ ಹೈಡ್ರೇಟಿಂಗ್ ಏಜೆಂಟ್ ಆಗಿರುವುದರಿಂದ ತ್ವಚೆಯನ್ನು ಮೃದುವಾಗಿಸುತ್ತದೆ. ಅಂತೆಯೇ ತ್ವಚೆ ಒಣಗುವುದನ್ನು ಇದು ನಿವಾರಿಸುತ್ತದೆ. ರೋಸ್ ವಾಟರ್ ದೇಹವನ್ನು ತಂಪಾಗಿಸುವ ಗುಣವನ್ನು ಪಡೆದುಕೊಂಡಿದೆ. ದೇಹದ ಪಿಎಚ್ ಬ್ಯಾಲೆನ್ಸ್ ಅನ್ನು ಇದು ಕಾಪಾಡುತ್ತದೆ. ಮನೆಯಲ್ಲೇ ತಯಾರಿಸುವ ಸೋಪಿಗೆ ಸುಗಂಧವನ್ನು ಉಂಟುಮಾಡಲು ಲ್ಯಾವೆಂಡರ್ ಎಣ್ಣೆ ಸಹಾಯಕ. ನಿಮ್ಮ ತ್ವಚೆಯ ಕೋಶಗಳನ್ನು ಇದು ಪೋಷಿಸಲಿದ್ದು ಇದನ್ನು ಹೊಳೆಯುವಂತೆ ಮಾಡುತ್ತದೆ.

ಸಿದ್ಧತಾ ಹಂತಗಳು
ಪ್ಯಾನ್‌ನಲ್ಲಿ ಕ್ಯಾಸ್ಟೈಲ್ ಸೋಪನ್ನಿಟ್ಟು ಅದನ್ನು ಕರಗಿಸಿಕೊಳ್ಳಿ. 2 ಕಪ್‌ನಷ್ಟು ಸೋಪಿನ ದ್ರಾವಣವನ್ನು ಎತ್ತಿಟ್ಟುಕೊಳ್ಳಿ. ಇದಕ್ಕೆ 2 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ, 1 ಕಪ್‌ನಷ್ಟು ರೋಸ್ ವಾಟರ್ ಮಿಶ್ರಮಾಡಿ ಅಂತೆಯೇ 10-15 ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಬಾಟಲ್‌ನಲ್ಲಿ ಇದನ್ನು ಸಂಗ್ರಹಿಸಿಟ್ಟುಕೊಳ್ಳಿ. ನಿಮ್ಮ ನೈಸರ್ಗಿಕ ಬಾಡಿ ವಾಶ್ ಬಳಸಲು ಸಿದ್ಧವಾಗಿದೆ. ಬಳಸುವ ಮುನ್ನ ಚೆನ್ನಾಗಿ ಕುಲುಕಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ನಿತ್ಯವೂ ಬಳಸಿ.

English summary

Easy Herbal Body Wash Recipe For Amazing Skin

Have you ever fantasised about a day when people would do double-takes to get another look at your amazing complexion? Do you ever feel that attaining a fabulous complexion would be too much of hard work? Well, most of us do feel that way about our looks. Some people are born with a great complexion, whereas the rest of us have to make an effort to get healthy, radiant skin.
Story first published: Tuesday, April 26, 2016, 19:55 [IST]
X
Desktop Bottom Promotion