For Quick Alerts
ALLOW NOTIFICATIONS  
For Daily Alerts

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಟಿಪ್ಸ್

By Super
|

ಮೈಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಅತೀದೊಡ್ಡ ಸೌಂದರ್ಯ ಸಮಸ್ಯೆಯಾಗಿದೆ. ನಮ್ಮ ದೇಹದ ತೂಕ ಹೆಚ್ಚಾದರೆ, ತೂಕ ಹೆಚ್ಚಾಗಿದ್ದವರು ಇದ್ದಕ್ಕಿದ್ದ ಹಾಗೇ ತೂಕ ಕಳೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಅದಲ್ಲದೆ ಮಹಿಳೆಯರಲ್ಲಿ ಗರ್ಭಿಣಿಯಾದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ, ಕೆಲ ಬೀಳುವಾಗಲೇ ಅದನ್ನು ಹೋಗಲಾಡಿಸದಿದ್ದರೆ ಆ ಕಲೆ ಹಾಗೇ ಉಳಿದುಕೊಳ್ಳುತ್ತದೆ.

ಸ್ಟ್ರೆಚ್ ಮಾರ್ಕ್ಸ್ ಉದರ, ಎದೆ. ತೋಳು ದೇಹದ ಮೊದಲಾದ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪಟ್ಟೆಗಳು ಚರ್ಮವನ್ನು ಎಳೆದಂತೆ ಕಂಡುಬರುತ್ತವೆ.

ಆದಾಗ್ಯೂ ಇಂತಹ ಪಟ್ಟೆ ಅಥವಾ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೆಗೆಯಲು ಹಲವಾರು ಕ್ರೀಮ್ ಗಳು, ಹಾಗೂ ಔಷಧಗಳು ಲಭ್ಯ. ಇವು ತಕ್ಕಮಟ್ಟಿಗೆ ಉಪಶಮನವನ್ನೂ ನೀಡಬಹುದು. ಆದರೆ ಇವು ಹೆಚ್ಚು ದುಬಾರಿ ಮತ್ತು ಇದರಲ್ಲಿರುವ ರಾಸಾಯನಿಕಗಳು ನಿಮ್ಮ ತ್ವಚೆಗೆ ಹಾನಿಯನ್ನುಂಟುಮಾಡಬಹುದು. ಆದ್ದರಿಂದ ದೇಹದಲ್ಲಿ ಉಂಟಾದ ಈ ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಕೆಲವು ಸರಳವಾದ ಮನೆಮದ್ದುಗಳನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ನೀಡಿರುವ ಟಿಪ್ಸ್ ಪಾಲಿಸಿದರೆ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬಹುದು.

ನೀರು

ನೀರು

ನಿಮ್ಮ ತ್ವಚೆಯಲ್ಲಿ ಉಂಟಾದ ಪಟ್ಟೆಗಳನ್ನು ತೆಗೆಯಲು ಹಾಗೂ ನಿಮ್ಮ ತ್ವಚೆ ಆರೋಗ್ಯಕರವಾಗಿಡುವಲ್ಲಿ ನೀರಿನ ಚಿಕಿತ್ಸೆ ಅತ್ಯುತ್ತಮವಾದದ್ದು! ಇದು ಚರ್ಮವನ್ನು ತೇವಯುತವಾಗಿಟ್ಟು, ಚರ್ಮವು ಒಣಗಿಹೋಗದಂತೆ ತಡೆಯುತ್ತದೆ. ಆದ್ದರಿಂದ ಗರ್ಭಧಾರಣೆಯ ಸಂದರ್ಭದಲ್ಲಿ ಕನಿಷ್ಠ 8-10 ಲೋಟ ನೀರನ್ನು ಕುಡಿಯಿರಿ. ಇದರಿಂದ ಚರ್ಮದ ಮೇಲೆ ಯಾವುದೇ ಸ್ಟ್ರೆಚ್ ಮಾರ್ಕ್ಸ್ ಉಂಟಾಗುವುದನ್ನು ಸುಲಭವಾಗಿ ತಡೆಯಬಹುದು.

ಹೀಲಿಂಗ್ ಪೇಸ್ಟ್ ಬಳಸಿ ಮಸಾಜ್

ಹೀಲಿಂಗ್ ಪೇಸ್ಟ್ ಬಳಸಿ ಮಸಾಜ್

ನೈಸರ್ಗಿಕವಾಗಿ ದೊರೆಯುವ ಎಣ್ಣೆಗಳಾದ ಬೆಣ್ಣೆ ಹಣ್ಣು, ಜೊಜೊಬಾ,ಆಲೀವ್ ಎಣ್ಣೆ ಅಥವಾ ಸಿಹಿ ಬಾದಾಮಿ ಎಣ್ಣೆ ಮೊದಲಾದವುಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಬಹುದು. ಆರು ಹನಿ ಕ್ಯಮೊಮೈಲ್ ತೈಲ ಮತ್ತು ಎಂಟು ಹನಿ ಲೆವೆಂಡರ್ ತೈಲ ಅಥವಾ ನಾಲ್ಕು ಚಮಚ ಆಲೀವ್ ತೈಲ, ನಾಲ್ಕು ಚಮಚ ಅಲೋವೆರಾ ಮತ್ತು ಎರಡು ಚಮಚ ಸಕ್ಕರೆಯನ್ನು ಸೇರಿಸಿ ಮನೆಯಲ್ಲಿಯೇ ಪೇಸ್ಟ್ ತಯಾರಿಸಿ, ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿದರೆ ಕಲೆ ನಿಧಾನಕ್ಕೆ ಕಡಿಮೆಯಾಗುವುದು.

ಸ್ಟ್ರೆಚ್ ಮಾರ್ಕ್ಸ್ ನಿವಾರಣೆ

ಸ್ಟ್ರೆಚ್ ಮಾರ್ಕ್ಸ್ ನಿವಾರಣೆ

ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಸ್ನಾನದ ಮೊದಲು ಅಥವಾ ಮಲಗುವ ಮುನ್ನ ಸ್ಟ್ರೆಚ್ ಮಾರ್ಕ್ಸ್ ಉಂಟಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಈ ಮಸಾಜ್ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡುತ್ತಿರಿ.. ಇದು ರಕ್ತ ಪರಿಚಲನೆಯನ್ನೂ ಸುಲಭವಾಗಿಸುತ್ತದೆ.

ನೈಸರ್ಗಿಕ ಸ್ಕ್ರಬ್ಬಿಂಗ್

ನೈಸರ್ಗಿಕ ಸ್ಕ್ರಬ್ಬಿಂಗ್

ಓಟ್ ಹಿಟ್ಟು ಅಥವಾ ಆಪ್ರಿಕಾಟ್ (apricot)/ ಸಕ್ಕರೆ ಬಾದಾಮಿ ಬಳಸಿ ಸ್ಕ್ರಬ್ಬಿಂಗ್ ಮಾಡುವುದರಿಂದ ಶಕ್ತಿ ಹೀನ ಜೀವಕೋಶಗಳು ನಾಶವಾಗಿ ಚರ್ಮವು ಆರೋಗ್ಯಕರವಾಗುತ್ತದೆ. ಲೆಮನ್/ನಿಂಬು ಸ್ಕ್ರಬ್ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ಚರ್ಮಕ್ಕೆ ಬೇಕಾದ ವಿಟಮಿನ್ ಸಿ ಯನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುತ್ತದೆ.

ಲೆಮನ್ ಸ್ಕ್ರಬ್ ಮಾಡಿ ಒಂದೆರಡು ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ನಾನ ಮಾಡಿ. ಇದು ವಿಟಮಿನ್ ಸಿಯನ್ನು ಚರ್ಮಕ್ಕೆ ಒದಗಿಸಿ ಚರ್ಮದ ಆಳದವರೆಗೆ ಇದರ ಪ್ರಭಾವ ಬೀರುವಂತೆ ಮಾಡುತ್ತದೆ. ಇದರಿಂದ ದೇಹದ ಮೇಲೆ ಉಂಟಾದ ಪಟ್ಟೆಗಳು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಮಾಯವಾಗಬಹುದು!

ವಿಟಮಿನ್ ಭರಿತ ಆಹಾರ ಸೇವನೆ

ವಿಟಮಿನ್ ಭರಿತ ಆಹಾರ ಸೇವನೆ

ಆರೋಗ್ಯಕರ ಚರ್ಮ ಪಾಲನೆಯಲ್ಲಿ, ಉತ್ಕರ್ಷಣ ನಿರೋಧಕ ಮತ್ತು ಕೊಲೆಜಿನ್ -ಉತ್ಪಾದಿಸುವ ಗುಣಗಳುಳ್ಳ ಖನಿಜಗಳು ಮತ್ತು ಜೀವಸತ್ವಗಳ ಆಹಾರವನ್ನು ಹೆಚ್ಚೆಚ್ಚು ಸೇವಿಸುವುದು ಉತ್ತಮ. ಅಲ್ಲದೇ ಸುಂದರ ಚರ್ಮಕ್ಕೆ ಬೇಕಾದ ಪ್ರೊಟೀನ್ ಮತ್ತು ಫೈಬರ್ ಅಂಶಗಳುಳ್ಳ ಆಹಾರಗಳೂ ಕೂಡ ಅಗತ್ಯ. ಆದ್ದರಿಂದಲೇ ವೈದ್ಯರು ಭ್ರೂಣ ಬೆಳವಣಿಗೆಯ ಸಮಯದಲ್ಲಿ ಜೀವಸತ್ವ ಎ,ಸಿ,ಡಿ3, ಈ ಮತ್ತು ಫಾಲಿಕ್ ಆಮ್ಲವಿರುವ ಆಹಾರಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವುದು

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವುದು

ಈ ಜೀವಸತ್ವಗಳ ಸೇವನೆ ಕೂಡ ಚರ್ಮದ ದುರಸ್ತಿ ಮತ್ತು ಸ್ಟ್ರೆಚ್ ಗುರುತುಗಳನ್ನು ವಾಸಿಮಾಡುವ ವಿಷಯದಲ್ಲಿ ಗಣನೀಯವಾಗಿ ಕೊಡುಗೆ ನೀಡುತ್ತವೆ. ಇವು ಚರ್ಮದ ಹೊರಗಿನ ಮ್ಯಾಟ್ರಿಕ್ಸ್ ನ್ನು ಬಲಗೊಳಿಸುತ್ತವೆ ಹಾಗೂ ಕೊಲೆಜಿನ್ ನಾರುಗಳ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಸಿ ಜೀವಸತ್ವವುಳ್ಳ ಹಣ್ಣುಗಳು

ಸಿ ಜೀವಸತ್ವವುಳ್ಳ ಹಣ್ಣುಗಳು

ಸಿ ಜೀವಸತ್ವವುಳ್ಳ ಸಿಟ್ರಸ್ ಹಣ್ಣುಗಳು, ಮೆಣಸುಗಳು, ಕೋಸುಗಡ್ಡೆ, ಮುಂತಾದ ಆಹಾರಗಳು ಕಾಲಜನ್ ನ ಪ್ರಾಥಮಿಕ ಪೂರ್ವಗಾಮಿ ವರ್ತಿಸುವುದು ಮಾತ್ರವಲ್ಲ, ಒಂದು ಪ್ರಬಲವಾದ ಆಕ್ಸಿಡೀಕಾರಕ ವರ್ತನೆಯ ಮೂಲಕ ಚರ್ಮದ ಮೆಲೆ ಉಂಟಾದ ಗುರುತುಗಳಿಗೆ ವೇಗವಾಗಿ ಚಿಕಿತ್ಸಕ ಪ್ರಕ್ರಿಯೆ ನೀಡಲು ಸಹಾಯ ಮಾಡುತ್ತವೆ.

ಈ ಆಹಾರಗಳು ವಿಷಕಾರಿ ಮುಕ್ತ ರಾಡಿಕಲ್ ರಚನೆಗೆ ಸಹಾಯಮಾಡುತ್ತವೆ. ವಿಟಮಿನ್ ಈ ಆಧಾರಿತ ತೈಲಗಳ ಬಾಹ್ಯ ಭಾಗಗಳಿಗೆ ಹಚ್ಚುವುದರಿಂದ ಸ್ಟ್ರೆಚ್ಗುರುತುಗಳನ್ನು ತೊಡೆದುಹಾಕಿದ್ದೇವೆ ಎಂಬುದು ಅತ್ಯುತ್ತಮ ರೀತಿಯಲ್ಲಿ ಸಾಬೀತಾಗಿದೆ. ವಿಟಮಿನ್ ಈ ಯಲ್ಲಿರುವ ಕಾಲಜನ್ ಫೈಬರ್ ಹಾನಿಗೊಳಗಾದ ಚರ್ಮ ಮತ್ತು ಸ್ಟ್ರೆಚ್ಗುರುತುಗಳುಳ್ಳ ಪೀಡಿತ ಚರ್ಮದ ವಿನ್ಯಾಸವನ್ನು ಸುಧಾರಿಸುವ ಕಾರ್ಯವನ್ನು ಪ್ರಚೋದಿಸುತ್ತದೆ.

ಜೆನಿಸ್ಟೈನ್ (Genistein)

ಜೆನಿಸ್ಟೈನ್ (Genistein)

ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುವ Genistein ಸೋಯಾ ಮೊಸರು, ಸೋಯಾ ಹಾಲು, ಸೋಯಾ ಬೀನ್ಸ್ ಮತ್ತು ಇತರ ಸೋಯಾ ಉತ್ಪನ್ನದಲ್ಲಿ ಕಂಡುಬರುತ್ತವೆ. ಈ ಆಹಾರಗಳು ಕೊಲೆಜಿನ್ ಉತ್ಪಾದನೆಯನ್ನು ಹೆಚ್ಚಿಸಿ ಸುಕ್ಕುಗಳನ್ನು ಉಂಟುಮಾಡುವ ಕಿಣ್ವಗಳನ್ನು ನಿಷ್ಕ್ರೀಯಗೊಳಿಸಿ. ಬೇಗನೆ ನೆರಿಗೆಗಳು ಮೂಡುವುದನ್ನು ತಡೆಗಟ್ಟುತ್ತದೆ.

ಸ್ಟ್ರೆಚ್ ಗುರುತುಗಳ ನಿವಾರಣೆ

ಸ್ಟ್ರೆಚ್ ಗುರುತುಗಳ ನಿವಾರಣೆ

ಲ್ಯಾಟೂಸೆ ಮೂಲವಾಗಿರುವ ಪಾಲಕ್ ಸೊಪ್ಪು, ಎಲೆಗಳುಳ್ಳ ತರಕಾರಿಗಳು, ಬೆಂಡೆಕಾಯಿ, ಸೆಲರಿ, ಲೆಟಿಸ್ ಸೊಪ್ಪು, ಹಸಿರು ಬೀನ್ಸ್, ಶತಾವರಿ, ಆಲಿವ್, ಆವಕಾಡೊ, ಕಿವಿ, ಕಚ್ಚಾ ಟರ್ನಿಪ್ ಗೆಡ್ಡೆಗಳು, ಇತ್ಯಾದಿ ಆಹಾರಗಳು ಚರ್ಮದ ಹೈಡ್ರೇಶನ್ ನನ್ನು ಹೆಚ್ಚು ಮಾಡುತ್ತದೆ ಮತ್ತು ಸುಕ್ಕುಗಳು ಹಾಗೂ ಪ ಸ್ಟ್ರೆಚ್ ಮಾರ್ಕ್ಸ್ ಗುರುತುಗಳನ್ನು ಹೋಗಲಾಡಿಸುತ್ತವೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಸ್ಟ್ರೆಚ್ ಮಾರ್ಕ್ಸ್ ಗುರುತುಗಳನ್ನು ಗುಣಪಡಿಸುವಾಗ ತುರಿಕೆಗಳು ಉಂಟಾಗಬಹುದು. ಆದ್ದರಿಂದ ಈ ತುರಿಕೆ ನಿವಾರಣೆಗೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಸ್ಟ್ರೆಚ್ ಗುರುತುಗಳ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿ. ಈ ವಿಧಾನವನ್ನು ಎರಡು ವಾರಗಳವರೆಗೆ ನಿರಂತರವಾಗಿ ಪಾಲಿಸಿದರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ದೊರಕುವುದರಲ್ಲಿ ಸಂಶಯವಿಲ್ಲ!

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಸಮೃದ್ಧವಾದ ವಿಟಮಿನ್ ಈ ಅಂಶವಿರುವ ಬಾದಾಮಿಯನ್ನು ತಿನ್ನುವ ಅಥವಾ ಬಾದಾಮಿ ಎಣ್ಣೆ ಬಳಸಿ ಪಟ್ಟೆ ಗುರುತುಗಳ ಪೀಡಿತ ಪ್ರದೇಶಗಳಲ್ಲಿ ಮಸಾಜ್ ಮಾಡುವುದರಿಂದ ಕಾಲಜನ್ ಮತ್ತು ಎಲಾಸ್ಟಿಕ್ ಫೈಬರ್ ಎಂಬ ಎರಡು ಪ್ರೊಟೀನ್ ಗಳು ಆರೋಗ್ಯಕರ ಚರ್ಮ ಪಡೆಯಲು ಸಹಾಯ ಮಾಡುತ್ತವೆ.

ಸ್ಟ್ರೆಚ್ ಮಾರ್ಕ್ಸ್ ತೊಡೆದುಹಾಕುವುದು

ಸ್ಟ್ರೆಚ್ ಮಾರ್ಕ್ಸ್ ತೊಡೆದುಹಾಕುವುದು

ಇದನ್ನು ಗರ್ಭಾವಸ್ಥೆಯಲ್ಲಿ ಬಳಸಬೇಕಾದ ಸುರಕ್ಷಿತ ಪರಿಹಾರ ಎಂದು ಕರೆಯಲಾಗುತ್ತದೆ. ಹೆಚ್ಚುವರಿಯಾಗಿ ತಾಯಿಯ ಆರೋಗ್ಯ ಮತ್ತು ಭ್ರೂಣದ ಆರೋಗ್ಯಕರ ಮಿದುಳಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳನ್ನು ಇದು ಹೊಂದಿರುತ್ತದೆ.

ದೈಹಿಕ ವ್ಯಾಯಾಮ

ದೈಹಿಕ ವ್ಯಾಯಾಮ

ಹೊಟ್ಟೆಯ ವ್ಯಾಯಾಮಗಳಾದ ಕ್ರಂಚಿಂಗ್, ಸೈಕ್ಲಿಂಗ್ ಮೊದಲಾದ ವ್ಯಾಯಾಮಗಳು ಸ್ನಾಯುಗಳನ್ನು ಬಲಗೊಳಿಸಿ ಪಟ್ಟೆ ಗುರುತುಗಳ ತೊಂದರೆಯನ್ನು ತಪ್ಪಿಸುತ್ತವೆ. ಆಳ ಉಸಿರಾಟದ ವ್ಯಾಯಾಮಗಳು ಅಥವಾ ಪ್ರಾಣಾಯಾಮ ಒಳಗೊಂಡ ಯೋಗ, ಸಹ ಚರ್ಮದ ಸ್ಥಿತಿಸ್ಥಾಪಕತ್ವ ಗುಣ ಸುಧಾರಿಸುವ ಮೂಲಕ ದೇಹದ ಮೇಲಿನ ಪಟ್ಟೆ ಗುರುತುಗಳನ್ನು ನಿವಾರಿಸಲು ಸಹಕರಿಸುತ್ತವೆ.

ಗ್ಲೈಕೋಲಿಕ್ ಆಮ್ಲ

ಗ್ಲೈಕೋಲಿಕ್ ಆಮ್ಲ

ಆಲ್ಫಾ ಹೈಡ್ರಾಕ್ಸಿ ಆಮ್ಲ ಜಡ ಜೀವಕೋಶಗಳನ್ನು ತೆಗೆಯಲು ಉತ್ತಮ ಎಕ್ಸ್ಪೋಲಿಯೇಟರ್ (exfoliator) ನಂತೆ ವರ್ತಿಸುತ್ತದೆ. ಕಬ್ಬು ಮತ್ತು ಹಣ್ಣಾಗಿರದ ದ್ರಾಕ್ಷಿಗಳಲ್ಲಿ ಕಂಡುಬರುವ ಇದು ಚರ್ಮದ ಬಾಹ್ಯ ಹಾನಿಗೊಂಡ ಪದರಗಳಿಂದ ಚರ್ಮದ ಆಂತರಿಕ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ. ಇದು ತ್ವಚೆಯ ಪದರ ಮತ್ತು ಬಣ್ಣವನ್ನು ಉತ್ತಮಗೊಳಿಸುವ ಆರೋಗ್ಯಕರ ಹಾಗೂ ಜನಪ್ರಿಯ ಚಿಕಿತ್ಸೆಯಾಗಿದೆ.

ಸ್ಟ್ರೆಚ್ ಮಾರ್ಕ್ಸ್ ತೊಡೆದುಹಾಕುವುದು

ಸ್ಟ್ರೆಚ್ ಮಾರ್ಕ್ಸ್ ತೊಡೆದುಹಾಕುವುದು

ಈ ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ಪ್ರತಿದಿನವು ನಿರಂತರವಾಗಿ ಮಾಡಿದಾಗ, ಸ್ಟ್ರೆಚ್ ಗುರುತುಗಳನ್ನು ಕಡಿಮೆ ಮಾಡಿ ಅಥವಾ ತೆಗೆದುಹಾಕುವ ಮೂಲಕ ನಿಮ್ಮ ಚರ್ಮದ ನೈಸರ್ಗಿಕ ಗುಣವಾಗುವ ಶಕ್ತಿಯನ್ನು ಮರಳಿಸಬಹುದು. ಆದಾಗ್ಯೂ ಸುರಕ್ಷತೆಯ ದೃಷ್ಟಿಯಿಂದ ಈ ಪರ್ಯಾಯ ಚಿಕಿತ್ಸೆಯಿಂದ ಯಾವುದಾದರೂ ಅಡ್ದ ಪರಿಣಾಮವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಹೀಗೆ ಮನೆಯಲ್ಲಿ ಬಳಸುವ ಹಲವಾರು ವಸ್ತುಗಳು ನಿತ್ಯದ ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರವಾಗಬಲ್ಲದು ಏನಂತೀರಿ?

X
Desktop Bottom Promotion