For Quick Alerts
ALLOW NOTIFICATIONS  
For Daily Alerts

ನಿಮ್ಮ ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?

|

ನಿಮ್ಮ ಉಗುರಿನ ಸ್ವಭಾವ ಹೇಗಿದೆ. ಬೇಗನೆ ಮುರಿದು ಹೋಗುತ್ತದೆಯೇ? ಹಾಗಾದರೆ ಉಗುರಿನ ಆರೈಕೆ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಸಾಕಷ್ಟು ಬಾರಿ ನಾವು ಯೋಚಿಸುತ್ತೇವೆ ಛೇ! ನಮ್ಮ ಉಗುರುಗಳು ಯಾಕಿಷ್ಟು ದುರ್ಬಲವಾಗಿದೆ. ಪ್ರತಿವಾರ ಮೆನಿಕ್ಯೂರ್ ಮಾಡಿಸಿಕೊಳ್ಳುತ್ತಿದ್ದರೂ ಉಪಯೋಗವಾಗುತ್ತಿಲ್ಲವಲ್ಲ ಎಂದು ಕೊರಗುತ್ತಿದ್ದೀರಾ? ಚಿಂತೆ ಬಿಡಿ. ಇಲ್ಲಿ ನಾವು 16 ರಹಸ್ಯಗಳನ್ನು ನಿಮಗೆ ಹೇಳುತ್ತೇವೆ.

ನಿಮ್ಮ ಉಗುರುಗಳನ್ನು ಬಲಗೊಳಿಸುವುದು ಹೇಗೆ? ಸಲೂನ್ ನಲ್ಲಿ ಎಲ್ಇಡಿ ಲ್ಯಾಂಪ್ ಕೆಳಗೆ ನಿಮ್ಮ ಕೈ ಇಡುವ ಮೊದಲು ಏನು ಮಾಡಬೇಕು? ಏನನ್ನಾದರೂ ಉಗುರಿನಲ್ಲಿ ಕೀಳುವ ಮೊದಲು ಯಾಕೆ ಯೋಚಿಸಬೇಕು? ಇವುಗಳ ಬಗ್ಗೆ ಸಂಪೂರ್ಣ ವಿವರ ನೋಡಿ ಇಲ್ಲಿದೆ.

1. ಉಗುರುಗಳನ್ನು ಕಚ್ಚುವುದನ್ನು ಮೊದಲು ನಿಲ್ಲಿಸಿ

1. ಉಗುರುಗಳನ್ನು ಕಚ್ಚುವುದನ್ನು ಮೊದಲು ನಿಲ್ಲಿಸಿ

"ಉಗುರುಗಳನ್ನು ಕಚ್ಚುವುದು ಅಥವ ಉಗುರಿನ ಹಿಂದೆ ಸೇರಿದ ಕೊಳೆಯನ್ನು ಒರಟಾಗಿ ಕ್ಲೀನ್ ಮಾಡಲು ಹೋದರೆ ಅದರಿಂದ ಉಗುರಿನ ತುದಿಗಳ ಮೇಲೆ ಒತ್ತಡವುಂಟಾಗಿ ಮುರಿಯುತ್ತವೆ" ಉಗುರುಗಳ ತುದಿಯನ್ನು ಉಜ್ಜುವುದು ನೀವು ಒತ್ತಡದಲ್ಲಿ ನರ್ವಸ್ ಆಗಿದ್ದೀರಿ ಎಂದು ಸೂಚಿಸುತ್ತದೆ. ಈ ವರ್ತನೆಯನ್ನು ಹಲವರಲ್ಲಿ ನೀವು ಕಾಣಬಹುದು. ಹೀಗೆ ಮಾಡುವುದರಿಂದ ಉಗುರಿನಲ್ಲಿ ಸೀಳುಂಟಾಗುತ್ತದೆ.

2. ಏನನ್ನಾದರೂ ಸ್ವಚ್ಛ ಮಾಡಬೇಕಾದಾಗ ಯಾವಾಗಲೂ ರಬ್ಬರ್ ಗ್ಲೌಸ್ ಗಳನ್ನು ಹಾಕಿಕೊಳ್ಳಿ ಎಂದು

2. ಏನನ್ನಾದರೂ ಸ್ವಚ್ಛ ಮಾಡಬೇಕಾದಾಗ ಯಾವಾಗಲೂ ರಬ್ಬರ್ ಗ್ಲೌಸ್ ಗಳನ್ನು ಹಾಕಿಕೊಳ್ಳಿ ಎಂದು

ಮಹಿಳೆಯರು ಮನೆಗೆಲಸಗಳನ್ನು ಅಂದರೆ ಮನೆಯ ಸ್ವಚ್ಛತೆಗೆ ಸಂಬಂಧಿಸಿದ ಕೆಲಸ ಮಾಡುವಾಗ ರಬ್ಬರ್ ಗ್ಲೌಸ್ ಗಳನ್ನು ಧರಿಸುವುದು ಉತ್ತಮ ಏಕೆಂದರೆ ಇದರಿಂದ ಉಗುರು ಬೀಳುವಂತೆ ಮಾಡುವ ಹಾನಿಕಾರಕ ಕೆಮಿಕಲ್ ಗಳಿಂದ ಉಗುರಿಗೆ ರಕ್ಷಣೆ ದೊರೆಯುತ್ತದೆ.

3. ನೀರಿನಿಂದ ಒದ್ದೆಯಾದ ಉಗುರಿನ ಬಗ್ಗೆ ಕಾಳಜಿ ವಹಿಸಿ

3. ನೀರಿನಿಂದ ಒದ್ದೆಯಾದ ಉಗುರಿನ ಬಗ್ಗೆ ಕಾಳಜಿ ವಹಿಸಿ

"ನೀವು ಹೆಚ್ಚು ಹೊತ್ತು ನೀರಿನಲ್ಲಿದ್ದಾಗ ಉಗುರುಗಳು ವೀಕ್ ಆಗುತ್ತವೆ ಮತ್ತು ಆ ಸಮಯದಲ್ಲಿ ಅವುಗಳನ್ನು ಸುಲಭವಾಗಿ ಕಿತ್ತುಹಾಕಬಹುದು. ಏಕೆಂದರೆ ಉಗುರುಗಳು ನೀರನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ನೀವು ಸ್ನಾನ ಮಾಡಿದ ನಂತರ ಅಥವ ನೀರನ್ನು ಬಳಸಿ ಕೆಲಸ ಮಾಡಿದ ನಂತರ ಅವುಗಳನ್ನು ಸ್ವಲ್ಪ ಹೊತ್ತು ಒಣಗಿಸಬೇಕು."

4. ಪ್ರತಿವಾರವೂ ಉಗುರಿನ ಬಗ್ಗೆ ಕಾಳಜಿ ವಹಿಸಿ

4. ಪ್ರತಿವಾರವೂ ಉಗುರಿನ ಬಗ್ಗೆ ಕಾಳಜಿ ವಹಿಸಿ

ನಿಯಮಿತವಾಗಿ ಮೆನಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಉಗುರು ಮತ್ತು ಅದರ ಹೊರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಇದರೊಂದಿಗೆ ದಿನವೂ ಮಾಯಿಶ್ಚರೈಸರ್ ಬಳಕೆ ಕೂಡ ಉಗುರಿನ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ.

5. ಚಳಿಗಾಲದಲ್ಲಿ ಕೈಗಳನ್ನು ಬೆಚ್ಚಗಿರಿಸಲು ಗ್ಲೌಸ್ ಬಳಸುವುದು ಉತ್ತಮ

5. ಚಳಿಗಾಲದಲ್ಲಿ ಕೈಗಳನ್ನು ಬೆಚ್ಚಗಿರಿಸಲು ಗ್ಲೌಸ್ ಬಳಸುವುದು ಉತ್ತಮ

ಏಕೆಂದರೆ ಚಳಿಗಾಲದಲ್ಲಿನ ಉಷ್ಣತೆಯು ಉಗುರುಗಳ ಮೇಲೆ ಪ್ರಭಾವ ಬೀರುತ್ತದೆ. ಒಣ ಚರ್ಮದಂತೆ ಉಗುರುಗಳು ಕೂಡ ಒಣಗುತ್ತವೆ ಆದ್ದರಿಂದ ಗ್ಲೌಸ್ ಬಳಸುವುದು ಉತ್ತಮ.

6. ವಿಷಕಾರಿ ಮತ್ತು ಹಾನಿಕಾರಕ ಕೆಮಿಕಲ್ ಗಳಿಂದ ದೂರವಿರಿ

6. ವಿಷಕಾರಿ ಮತ್ತು ಹಾನಿಕಾರಕ ಕೆಮಿಕಲ್ ಗಳಿಂದ ದೂರವಿರಿ

ವಿಷಕಾರಿ ನೈಲ್ ಪಾಲೀಷ್ ಗಳಲ್ಲಿನ ಫಾರ್ಮಲ್ಡಿಹೈಡ್, ಫಾರ್ಮಲ್ಡಿಹೈಡ್ರೀಸಿನ್ ಮತ್ತು ಟೊಲ್ಯೂನೆಯ ವಾಸನೆ ಹೀರಿದಾಗ ಏನಾಗುತ್ತದೆ ಎಂದು ನಮಗೆ ಗೊತ್ತು. ಆದರೆ ಇವುಗಳನ್ನು ಒಳಗೊಂಡ ಉಗುರಿನ ಚಿಕಿತ್ಸೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಕಿವಿ ಮಾತು ಹೇಳುತ್ತಾರೆ.

7. ಸನ್ ಸ್ಕ್ರೀನ್ ಹಚ್ಚಿಕೊಳ್ಳವುದು ಉತ್ತಮ

7. ಸನ್ ಸ್ಕ್ರೀನ್ ಹಚ್ಚಿಕೊಳ್ಳವುದು ಉತ್ತಮ

UV or LED light ಗಳ ಬಳಿ ಹೋಗುವಾಗ ಯಾವಾಗಲೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ ಎಂದು ಹೇಳುತ್ತಾರೆ. ಇದು ನಿಮ್ಮ ಉಗುರುಗಳನ್ನು ಮತ್ತು ಕೈಯನ್ನು ರಕ್ಷಿಸುತ್ತದೆ ಎನ್ನುತ್ತಾರೆ.

8. ವಿಟಮಿನ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ಮರೆಯಿದಿರಿ

8. ವಿಟಮಿನ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ಮರೆಯಿದಿರಿ

ವಿಟಮಿನ್ ಗಳು ಉಗುರಿಗೆ ಅತ್ಯವಶ್ಯಕವಾದ ಪೋಷಕಾಂಶಗಳು. ಅದರಲ್ಲೂ ಬಯೋಟಿನ್ ಉಗುರುಗಳಿಗೆ ಉತ್ತಮವಾದದ್ದು. ಬಯೋಟಿನ್ ಇರುವ ಉತ್ಪನ್ನಗಳನ್ನು ಉಗುರಿನ ಮೆಲೆ ನೇರವಾಗಿ ಬಳಸಬಹುದು.

9. ನಿಮ್ಮ ಚರ್ಮಕ್ಕೆ ಹೆಚ್ಚಿನ ಮಸಾಜ್ ಅಗತ್ಯ

9. ನಿಮ್ಮ ಚರ್ಮಕ್ಕೆ ಹೆಚ್ಚಿನ ಮಸಾಜ್ ಅಗತ್ಯ

ಉಗುರು ಬೆಳೆಯುವುದು ಚರ್ಮದ ಒಳಗೆ. ನೀವು ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆಯನ್ನು ಹೆಚ್ಚು ಸರಾಗಗೊಳಿಸುತ್ತೀರಿ ಇದು ಆರೋಗ್ಯವಂತ ಉಗುರಿನ ಬೆಳವಣಿಗೆಗೆ ಕಾರಣವಾಗುತ್ತದೆ. ಮಸಾಜ್ ಉಗುರಿನ ಬೆಳವಣಿಗೆಗೆ ಸಹಕಾರಿಯಾಗಿದ್ದು ಚಿಕಿತ್ಸೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ.

10. ಮಾಯಿಶ್ಚರೈಸಿಂಗ್ ಕ್ರೀಮ್ ಮೂಲಕ ಒಣಚರ್ಮವನ್ನು ಮೃದುವಾಗಿಸಿ

10. ಮಾಯಿಶ್ಚರೈಸಿಂಗ್ ಕ್ರೀಮ್ ಮೂಲಕ ಒಣಚರ್ಮವನ್ನು ಮೃದುವಾಗಿಸಿ

ಕೈಗಳನ್ನು ತೊಳೆದ ನಂತರ ತೇವವನ್ನು ಉಳಿಯುವಂತೆ ಮಾಡಬೇಕು. ಯಾವಾಗಲು ಮುಖವನ್ನು ಮಾಯಿಶ್ಚರೈಜರ್ ಬಳಸಿ ತೊಳೆಯಬೇಕು ಅದರಂತೆ ನಿಮ್ಮ ಕೈಗಳನ್ನು ಕೂಡ.

11. ಯಾವಾಗಲೂ ನೈಲ್ ಫೈಲ್ಅನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ

11. ಯಾವಾಗಲೂ ನೈಲ್ ಫೈಲ್ಅನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ

ನೈಲ್ ಫೈಲ್ ನಿಮ್ಮೊಂದಿಗೆ ಸದಾ ಇರುವುದು ಯಾವಾಗಲೂ ಇರುವುದು ಉತ್ತಮ. ಇದರಿಂದ ಒರಟಾದ ಉಗುರಿನ ತುದಿಗಳನ್ನು ಮೃದುವಾಗಿಸಬಹುದು ಮತ್ತು ಉಗುರಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಬಹುದು.

12. ಹೆಚ್ಚು ಹೆಚ್ಚು ಪ್ರೋಟಿನ್ಯುಕ್ತ ಆಹಾರ ಸೇವಿಸಿ

12. ಹೆಚ್ಚು ಹೆಚ್ಚು ಪ್ರೋಟಿನ್ಯುಕ್ತ ಆಹಾರ ಸೇವಿಸಿ

ಸಮತೋಲನ ಡಯೆಟ್ ಮತ್ತು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಬಹುದು. ಇವು ಕೂಡ ಆರೋಗ್ಯವಂತ ಉಗುರುಗಳನ್ನು ಪಡೆಯಲು ಇರುವ ಸರಳ ದಾರಿಗಳು. ಪ್ರೊಟೀನ್ ಹೆಚ್ಚಿರುವ ಮೀನಿನಂತಹ ಆಹಾರ ಉಗುರನ್ನು ಶಕ್ತಿಶಾಲಿಯಾಗಿಸುತ್ತದೆ.

13. ಎಂದೂ ನಿಮ್ಮ ಉಗುರನ್ನು ಆಯುಧವಾಗಿ ಬಳಸಬೇಡಿ!

13. ಎಂದೂ ನಿಮ್ಮ ಉಗುರನ್ನು ಆಯುಧವಾಗಿ ಬಳಸಬೇಡಿ!

ಡಬ್ಬಿಗಳನ್ನು, ಪತ್ರಗಳನ್ನು ಅಥವ ಏನನ್ನಾದರೂ ತೆಗೆಯಲು ಅಥವಾ ಆ ರೀತಿಯ ಕೆಲಸ ಮಾಡಲು ಎಂದೂ ಉಗುರುಗಳನ್ನು ಆಯುಧವಾಗಿ ಬಳಸಬೇಡಿ. ಇದು ಉಗುರನ್ನು ಹಿಂದಕ್ಕೆ ಬಾಗಿಸುತ್ತದೆ. ಉಗುರಲ್ಲಿನ ಬಿಳಿಭಾಗವನ್ನು ಒತ್ತಡ ಪ್ರದೇಶ ಎನ್ನುತ್ತಾರೆ ಇದು ದುರ್ಬಲ ಮತ್ತು ಸುಲಭವಾಗಿ ಮುರಿಯುವಂತದ್ದು. ಇದು ನಮ್ಮಲ್ಲಿ ಅನೇಕರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಉಗುರನ್ನು ಬಳಸುವಾಗ ಎಚ್ಚರಿಕೆ ವಹಿಸಿ.

14. ಮೆನಿಕ್ಯೂರ್ ಲ್ಲಿ ಬೇಸ್ ಮತ್ತು ಟಾಪ್ ಕೋಟ್ ಗಳು ಅತ್ಯಗತ್ಯ

14. ಮೆನಿಕ್ಯೂರ್ ಲ್ಲಿ ಬೇಸ್ ಮತ್ತು ಟಾಪ್ ಕೋಟ್ ಗಳು ಅತ್ಯಗತ್ಯ

ಪಾಲಿಷ್ ಹಚ್ಚಿಕೊಳ್ಳುವುದರಿಂದ ಉಗುರುಗಳನ್ನು ಉತ್ತಮ ಸ್ಥಿತಿಯಲ್ಲಿಡಬಹುದು. ಆದ್ದರಿಂದ ಯಾವಾಗಲೂ ಗುಣ ಮಟ್ಟದ ಪಾಲಿಷ್ ಹಚ್ಚುವುದನ್ನು ಮರೆಯದಿರಿ.

15. ಉಗುರನ್ನು ಬಲಪಡಿಸುವ ಉತ್ಪನ್ನಗಳು.. ನಿಜಕ್ಕೂ ನೆರವು ನೀಡುತ್ತವೆ

15. ಉಗುರನ್ನು ಬಲಪಡಿಸುವ ಉತ್ಪನ್ನಗಳು.. ನಿಜಕ್ಕೂ ನೆರವು ನೀಡುತ್ತವೆ

ಉಗುರನ್ನು ಬಲಪಡಿಸುವ ಉತ್ಪನ್ನಗಳು ಮುಖ್ಯವಾಗ ಕೆರೋಟಿನ್ ಪ್ರೊಟೀನ್ ಒಳಗೊಂಡಿರುತ್ತದೆ. ಉಗುರಲ್ಲಿ ಪ್ರಧಾನವಾಗಿರುವುದು ಇದೇ ಅಂಶ. ಇದು ಉಗುರಲ್ಲಿನ ಕಣಗಳನ್ನು ಒಟ್ಟಾಗಿರಿಸಿ ಉಗುರನ್ನು ಬಲಪಡಿಸುತ್ತದೆ. ಇವುಗಳ ಬಳಕೆಯನ್ನು ನಿಲ್ಲಿಸಿಬಿಟ್ಟರೆ ಉಗುರುಗಳು ಮತ್ತೆ ಮೊದಲಿನಂತಾಗುತ್ತವೆ.

16. ಹಳೆಯ ನೈಲ್ ಪಾಲಿಷ್ ಗಳನ್ನು ಅಳಿಸಿಬಿಡಿ

16. ಹಳೆಯ ನೈಲ್ ಪಾಲಿಷ್ ಗಳನ್ನು ಅಳಿಸಿಬಿಡಿ

ನೇಲ್ ಪಾಲಿಷ್ ಹಚ್ಚಿದ ಒಂದು ವಾರದ ನಂತರ ಅಳಿಸಿಬಿಡುವುದು ಉತ್ತಮ. ಇದರಿಂದ ಕಿತ್ತುಬಂದ ಪಾಲಿಷ್ ಉಗುರಿನ ಅಂದಗೆಡಿಸುವುದನ್ನು ತಪ್ಪುತ್ತದೆ.

English summary

16 Tips To Grow Strong, Healthy Nails

Frustrated with how weak our nails have become and beyond baffled over our manicures barely making it to the five-day mark, we asked three nail pros to spill their secrets on growing strong and healthy nails.
X
Desktop Bottom Promotion