For Quick Alerts
ALLOW NOTIFICATIONS  
For Daily Alerts

ಮುಖದ ಕಲೆ ಅನಾರೋಗ್ಯದ ಸಂಕೇತವೂ ಹೌದು

|
Skin Shows Health Disorder
ತ್ವಚೆ ಸೌಂದರ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ದೈಹಿಕ ಆರೋಗ್ಯಕ್ಕೂ ಸಂಬಂಧಪಟ್ಟಿದೆ. ನಮ್ಮ ದೇಹದಲ್ಲಿನ ಬದಲಾವಣೆ, ಏರುಪೇರುಗಳು ಚರ್ಮದ ಮೂಲಕ ಗೋಚರಿಸುತ್ತೆ. ರೋಗ ನಿರೋಧಕ ಶಕ್ತಿಯಿದ್ದಷ್ಟು ಚರ್ಮ ಹೊರಗಿನ ಪರಿಸರದೊಂದಿಗೆ ಸೆಣಸಾಡುತ್ತದೆ.

ಆದರೆ ದೇಹ ಸಮಸ್ಯೆಗೆ ತುತ್ತಾದಾಗ ರೋಗನಿರೋಧಕ ಶಕ್ತಿ ಕುಂದುತ್ತಿರುವುದನ್ನು ಕೆಲವು ತ್ವಚೆ ಸಮಸ್ಯೆ ನಮಗೆ ತೋರಿಸಿಕೊಡುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ನಮ್ಮ ಕೈಯ್ಯಲ್ಲಿರುತ್ತದೆ.

* ಕೆನ್ನೆಯ ಮೇಲಿನ ಗುಳ್ಳೆ ಯಾವುದರ ಸಂಕೇತ?
ಕೆಲವು ಮಹಿಳೆಯರಿಗೆ ತಿಂಗಳ ಮುಟ್ಟಿನ ಸಂದರ್ಭ ಮುಖದಲ್ಲಿ, ಅದರಲ್ಲೂ ಕೆನ್ನೆಯ ಮೇಲೆ ಗುಳ್ಳೆಗಳೇಳಲು ಆರಂಭಿಸುತ್ತದೆ. ಇದರ ಹಿಂದೆ ಹಾರ್ಮೋನಿನ ಬದಲಾವಣೆ ಅಡಗಿದೆ. ಅದಲ್ಲದೆಯೂ ಕೆಲವು ವೇಳೆ ಗುಳ್ಳೆಗಳು ಮುಖದ ಮೇಲೆ ಏಳುತ್ತವೆ. ಇದು ದೇಹದಲ್ಲಿನ ಹಾರ್ಮೋನು ಏರುಪೇರಾಗಿದೆ ಎಂಬುದರ ಸಂಕೇತ.

* ಕಣ್ಣ ಕಪ್ಪು ವರ್ತುಲ ಏನನ್ನು ಸೂಚಿಸುತ್ತೆ?
ದೇಹದಲ್ಲಿ ಉಂಟಾಗುವ ಕೆಲವು ಅಲರ್ಜಿಗಳು ಕಣ್ಣಿನ ಕೆಳಗಿನ ಕಪ್ಪು ವರ್ತುಲಕ್ಕೆ ಕಾರಣವಾಗುತ್ತದೆ. ಈ ಸಣ್ಣ ಸಣ್ಣ ಅಲರ್ಜಿಗಳು ಚರ್ಮಕ್ಕೆ ಊತ ಮತ್ತು ಕಪ್ಪು ಬಣ್ಣ ಉಂಟುಮಾಡುವ ಹಿಸ್ಟಮೈನ್ ಎಂಬ ರಾಸಾಯನಿಕ ಬಿಡುಗಡೆ ಮಾಡುವುದರಿಂದ ಈ ರೀತಿ ಆಗುತ್ತದೆ. ಆದರೆ ಇದನ್ನು ಕೇವಲ ಸೌಂದರ್ಯ ಸಮಸ್ಯೆಯನ್ನಾಗಿ ಕಡೆಗಣಿಸುತ್ತೇವೆ.

* ಕೆಂಪು ಮತ್ತು ಕಪ್ಪು ಮಚ್ಚೆಯ ಗುರುತು ಏನು ಹೇಳುತ್ತೆ?
ಕೆಂಪು ಮತ್ತು ಕಪ್ಪು ಮಚ್ಚೆಗಳು ದೇಹದಲ್ಲಿ ಹೆಚ್ಚಿದ ಒತ್ತಡ ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ಸೂಚಿಸುತ್ತೆ. ಕೆಂಪು ಕಲೆಗಳು ಮುಖ ಮತ್ತು ಕುತ್ತಿಗೆಯಲ್ಲಿ ಆಗಾಗ್ಗೆ ಕಾಣಿಸಿಕೊಂಡು ಮರೆಯಾಗುತ್ತಿರುತ್ತವೆ. ಇದಕ್ಕೆಲ್ಲ ಒತ್ತಡದ ಏರಿಳಿತವೇ ಕಾರಣ ಎನ್ನಲಾಗಿದೆ.

ಒತ್ತಡ ತರುವ ಹಾರ್ಮೋನು ದೇಹದಲ್ಲಿ ಹೆಚ್ಚಾದಾಗ ಈ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಹಾಗೆಯೇ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳು ಕಾಣಿಸಿಕೊಂಡರೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗಿರುತ್ತದೆ ಎಂದರ್ಥ.

English summary

Skin Shows Health Disorder | Skin is a symbol of Health | ಆರೋಗ್ಯ ಸಮಸ್ಯೆ ತ್ವಚೆಯಿಂದ ಗೋಚರ | ತ್ವಚೆ ಆರೋಗ್ಯದ ಸಂಕೇತ

Skin is not only a matter of beauty, it also a symbol of our health. Some skin disorder may be an indication of our inner health. So take a look at some of the health disorder which can be know by skin problems.
Story first published: Saturday, November 12, 2011, 14:04 [IST]
X
Desktop Bottom Promotion