For Quick Alerts
ALLOW NOTIFICATIONS  
For Daily Alerts

ಕಾಲಿನ ಆನಿ ನಿವಾರಣೆಗೆ ಮನೆಯೌಷಧಿ

By Prasad
|
Home remedy for corns on feet
ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡು ಸೊಂಟ ಬಳುಕಿಸಿಕೊಂಡು ಪೋನಿ ಕೇಶರಾಶಿಯನ್ನು ಹಾರಾಡಿಸುತ್ತ ವೈಯಾರದಿಂದ ನಡೆಯುವುದು ಇಂದಿನ ಆಧುನಿಕ ಮಹಿಳೆಯರಿಗೆ ಬಲು ಇಷ್ಟ. ಅಂಥವರನ್ನು ನೋಡುವುದೆಂದರೆ ಪೋಲಿ ಹುಡುಗರಿಗೂ ಇಷ್ಟ. ಆದರೆ, ಮುದ್ದು ಮೊಗದ ಪೋರಿಯರ ನುಣುಪಾದ ಕಾಲುಗಳಿಗೆ ಇಂಥ ಪಾದರಕ್ಷೆಗಳು ಹಾನಿ ಉಂಟುಮಾಡಿರುತ್ತವೆ ಎಂಬುದು ಕಷ್ಟ ಬಂದಾಗಲೇ ಅರಿವಿಗೆ ಬಂದಿರುತ್ತದೆ.

ಮುದ್ದಾದ ಮುಖದ ಆರೈಕೆ, ಕೂದಲ ಆರೋಗ್ಯ, ಸ್ಟಾಟಿಸ್ಟಿಕ್ಸ್ ಗಳತ್ತ ಹೆಚ್ಚು ಗಮನ ಕೊಡುವ ವೈಯಾರಿಯರು ಪಾದಗಳ ಆರೈಕೆಯ ಬಗ್ಗೆ ಗಮನವನ್ನೇ ನೀಡಿರುವುದಿಲ್ಲ. ಹುಡುಗಿಯರು ತಲೆತಗ್ಗಿಸಿ ನಡೆಯುವ ಕಾಲ ಎಂದೋ 'ಕಾಲ'ವಾಗಿರುವುದರಿಂದ ಕಾಲುಗಳ ಆರೋಗ್ಯದೆಡೆಗೆ ಹೆಚ್ಚು ಆಸ್ಥೆವಹಿಸಿರುವ ಕಾರಣವೂ ಹೆಚ್ಚು. ಕಾಲಿನ ಪಾದದಲ್ಲಿ ಮುಳ್ಳಿನ ಹಾಗೆ ಚುಚ್ಚಲು ಪ್ರಾರಂಭಿಸಿದಾಗಲೇ ಹುಡುಗಿಯರು ಎಚ್ಚೆತ್ತುಕೊಂಡಿರುತ್ತಾರೆ.

ಇದರಿಂದ ಒದಗುವ ತೊಂದರೆಗಳು ಹೀಗಿವೆ : ಕಾಲು ಉಳುಕುವುದು, ಹಿಮ್ಮಡಿಗಳಲ್ಲಿ ಅಸಾಧ್ಯ ನೋವು ಕಾಣಿಸಿಕೊಳ್ಳುವುದು, ನಡಿಗೆಯ ನಿಯತ್ತೇ ಬದಲಾಗುವುದರಿಂದ ಮೊಳಕಾಲಲ್ಲೂ ನೋವು ಕಾಣಿಸುತ್ತದೆ. ಇನ್ನೊಂದು ಪ್ರಮುಖ ತೊಂದರೆಯೆಂದರೆ ಆನಿ ಉಂಟಾಗುವುದು.

ಆನಿ ಉಂಟಾದರೆ ಪರಿಹಾರವೇನು? : ವೈದ್ಯರನ್ನು ಕಂಡು ಆನಿಯನ್ನು ತೆಗೆಸಿಕೊಳ್ಳಬಹುದು. ವೈದ್ಯರಿಗೆ ಸುಮ್ಮನೆ ದುಡ್ಡು ಯಾಕೆ ಸುರಿಯುವುದು ಎಂಬ ಜಾಣತನ ತೋರಿದರೆ ಮನೆಯೌಷದಿಯಿಂದಲೇ ಈ ಕಂಟಕವನ್ನು ನಿವಾರಿಸಬಹುದು.

1. ನಿಂಬೆಹಣ್ಣು :
ನಿಂಬೆಹಣ್ಣಿ ಹೋಳನ್ನು ಆನಿಯಿದ್ದ ಸ್ಥಕ್ಕೆ ಕಟ್ಟಿ ಇಡೀ ರಾತ್ರಿ ಇರಲು ಬಿಡಿ. ಇದು ಆನಿ ಒಣಗುವಂತೆ ಮಾಡುತ್ತದೆ.

2. ಪಪ್ಪಾಯ : ಆನಿ ನಿವಾರಣೆಗೆ ಪಪ್ಪಾಯ ರಸ ಒಳ್ಳೆ ಮದ್ದು. ಪಪ್ಪಾಯ ಹೋಳನ್ನು ಹಿಂಡಿ ರಸ ತೆಗೆದು ದಿನಕ್ಕೆ ಮೂರು ಬಾರಿ ಆನಿಯಿದ್ದೆಡೆ ಹಚ್ಚಿರಿ.

3. ಚಾಕ್ ಪೌಡರ್ : ಚಾಕ್ ಪೀಸನ್ನು ಪುಡಿ ಪುಡಿ ಮಾಡಿ ಸ್ವಲ್ಪ ನೀರಲ್ಲಿ ಮಿಶ್ರಣ ಮಾಡಿ ಆನಿ ಮೇಲೆ ಹಚ್ಚಿರಿ.

4. ಜೇಷ್ಠಮಧು ಕಡ್ಡಿ : ಆನಿ ತೊಗಲಿಸಲು ಇದು ಅತ್ಯಂತ ಪರಿಣಾಮಕಾರಿ ಔಷಧಿ. ಮೂರ್ನಾಲ್ಕು ಕಡ್ಡಿಗಳನ್ನು ಎಳ್ಳು ಮತ್ತು ಸಾಸಿವೆ ಎಣ್ಣೆ ಜೊತೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟನ್ನು ಆನಿಯ ಮೇಲೆ ತಿಕ್ಕಿ ತೊಳೆಯದೇ ಹಾಗೆಯೇ ಇಡೀ ರಾತ್ರಿ ಬಿಡಬೇಕು.

5. ಅಂಜೂರ : ಹಸಿರು ಬಣ್ಣದ ಅಂಜೂರದ ಕಾಯಿಯ ಹಾಲು ತೆಗೆದು ಆನಿಯ ಮೇಲೆ ದಿನಕ್ಕೆ ಎರಡು ಮೂರು ಬಾರಿ ಹಚ್ಚಿರಿ. ಆನಿಯನ್ನು ಇದು ಮೆತ್ತಗೆ ಮಾಡಲು ಸಹಕಾರಿ.

ಈ ಮನೆಯೌಷಧಿಗಳನ್ನು ಪ್ರತಿನಿತ್ಯ ಬಳಸಿದರೆ ತೊಂದರೆ ಕೊಡುವ ಆನಿಯನ್ನು ನಿಧಾನವಾಗಿಯಾದರೂ ಸಂಪೂರ್ಣವಾಗಿ ನಿವಾರಿಸಲು ಸಾಧ್ಯ. ಎಲ್ಲಕ್ಕಿಂತ ಮೊದಲು ಹೈ ಹೀಲ್ಡ್ ಚಪ್ಪಲಿ ಹಾಕುವುದನ್ನು ಬಿಡಿ.

Story first published: Friday, March 30, 2012, 16:25 [IST]
X
Desktop Bottom Promotion