Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ! ಪ್ರಯತ್ನಿಸಿ ನೋಡಿ...
ಬೆಣ್ಣೆಹಣ್ಣು ಅಥವಾ ಆವಕಾಡೊ ಹಣ್ಣಿನ ತಿರುಳಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು ಇವು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮ ಹಾಗೂ ಕೂದಲಿಗೂ ಅತ್ಯುತ್ತಮ ಆರೈಕೆ ನೀಡುತ್ತದೆ. ಈ ಹಣ್ಣಿನಲ್ಲಿ ಕೊಬ್ಬಿನ ಆಮ್ಲಗಳು, ಚರ್ಮಕ್ಕೆ ಪುನಃಶ್ಚೇತನ ನೀಡುವ ವಿಟಮಿನ್ನುಗಳು ಹಾಗೂ ಇತರ ಪ್ರಮುಖ ಪೋಷಕಾಂಶಗಳ ಭಂಡಾರವೇ ಇದೆ. ಇವೆಲ್ಲವೂ ಬೆಣ್ಣೆಹಣ್ಣನ್ನು ಪರಿಗಣಿಸಲೇಬೇಕಾದ ಸೌಂದರ್ಯ ಪ್ರಸಾಧನವಾಗಿಸುತ್ತವೆ.
ಈ ಹಣ್ಣಿನ ತಿರುಳನ್ನು ಸೌಂದರ್ಯವರ್ಧಕದ ರೂಪದಲ್ಲಿ ಬಳಸುವ ಮೂಲಕ ಚರ್ಮ ಮತ್ತು ಕೂದಲಿಗೆ ಹಲವು ವಿಧದ ಪ್ರಯೋಜನಗಳನ್ನು ಪಡೆಯಬಹುದು. ಕೆನ್ನೆಯ ಮೇಲಿನ ಮೊಡವೆ, ಚರ್ಮದ ಸೆಳೆತ ಹೆಚ್ಚಿಸುವುದು, ಚರ್ಮದ ಕಾಂತಿ ಹೆಚ್ಚಿಸುವುದು, ಕೂದಲ ಕಾಂತಿ ಮತ್ತು ನುಣುಪನ್ನು ಹೆಚ್ಚಿಸುವುದು ಮೊದಲಾದ ಯಾವುದೇ ಆರೈಕೆ ಇರಲಿ ಇದನ್ನೊಮ್ಮೆ ಬಳಸದೇ ಇದರ ಕ್ಷಮತೆಯನ್ನು ಅಳೆಯಲು ಸಾಧ್ಯವಿಲ್ಲ.
ಒಂದು ವೇಳೆ ನೀವು ಇದುವರೆಗೂ ಈ ಹಣ್ಣಿನ ಆರೈಕೆಯನ್ನು ಪ್ರಯತ್ನಿಸದೇ ಇದ್ದರೆ ಇದನ್ನು ಹೇಗೆ ಬಳಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ನಿಮಗೆ ಸೂಕ್ತವಾದ ವಿಧಾನವನ್ನು ಆರಿಸಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು, ಇದರಲ್ಲಿ ಅನುಮಾನವೇ ಇಲ್ಲ.....

ಚರ್ಮದ ಕಾಂತಿ ಹೆಚ್ಚಿಸಲು ಬೆಣ್ಣೆಹಣ್ಣು, ಜೇನು ಮತ್ತು ಲಿಂಬೆಯ ಆರೈಕೆ
ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಚೆನ್ನಾಗಿ ಕಿವುಚಿಕೊಳ್ಳಿ. ಇದಕ್ಕೆ ಒಂದು ದೊಡ್ಡ ಚಮಚ ನೈಸರ್ಗಿಕ ಜೇನು ಮತ್ತು ಎರಡು ದೊಡ್ಡಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಚರ್ಮದ ಕಾಂತಿ ಹೆಚ್ಚಿಸಲು ಬೆಣ್ಣೆಹಣ್ಣು, ಜೇನು ಮತ್ತು ಲಿಂಬೆಯ ಆರೈಕೆ
ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖ ಮತ್ತು ಕುತ್ತಿಗೆಯ ಮೇಲೆ ಕೆಳಗಿನಿಂದ ಮೇಲೆ ಬರುವಂತೆ ನಯವಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ಸುಲಭವಾದ ಮತ್ತು ಸಮರ್ಥವಾದ ವಿಧಾನವಾಗಿದ್ದು ಕೆಲವೇ ದಿನಗಳಲ್ಲಿ ನೈಸರ್ಗಿಕ ಕಾಂತಿಯನ್ನು ನಿಮ್ಮ ತ್ವಚೆಯಲ್ಲಿ ಪಡೆಯಬಹುದು.

ಮೊಡವೆಗಳನ್ನು ನಿವಾರಿಸಲು
ಒಂದು ಗಾಜಿನ ಬೋಗುಣಿಯಲ್ಲಿ ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಇದಕ್ಕೆ ಒಂದು ಬಾಳೆಹಣ್ಣಿನ ತಿರುಳು ಮತ್ತು ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿ. ಈ ಲೇಪವನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿಕೊಂಡು ಸುಮಾರು ಮೂವತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮೊಡವೆಗಳನ್ನು ನಿವಾರಿಸಲು
ಈ ಲೇಪವನ್ನು ನಿವಾರಿಸಲು ಸೌಮ್ಯ ಫೇಸ್ ವಾಶ್ ಅನ್ನೂ ಬಳಸಬಹುದು. ಈ ವಿಧಾನವನ್ನು ತಿಂಗಳಿಗೊಂದು ಬಾರಿ ಅನುಸರಿಸುವ ಮೂಲಕ ಮೊಡವೆಗಳನ್ನು ಇಲ್ಲವಾಗಿಸಲು ಹಾಗೂ ಹೊಸ ಮೊಡವೆಗಳು ಬರದಂತೆ ನೋಡಿಕೊಳ್ಳಬಹುದು.

ಒಣಗಿದ ಚರ್ಮದ ಆರೈಕೆಗೆ ಬೆಣ್ಣೆಹಣ್ಣು ಮತ್ತು ಮೊಸರಿನ ಆರೈಕೆ
ಒಂದು ಬೋಗುಣಿಯಲ್ಲಿ ಒಂದು ದೊಡ್ಡಚಮಚ ತಾಜಾ ಮೊಸರನ್ನು ಹಾಕಿ ಇದಕ್ಕೆ ಒಂದು ದೊಡ್ಡಚಮಚ ಬೆಣ್ಣೆಹಣ್ಣಿನ ತಿರುಳನ್ನು ಬೆರೆಸಿ. ಎರಡನ್ನೂ ಗಂಟುಗಳಿಲ್ಲದಂತೆ ಕಲಸಿ. ಈ ಲೇಪವನ್ನು ಮುಖ ಮತ್ತು ಕುತ್ತಿಗೆಗೆ ತೆಳ್ಳಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ಒಣ ಹಾಗೂ ಬಿಸಿಲಿಗೆ ಘಾಸಿಗೊಂಡಿದ್ದ ಚರ್ಮವನ್ನು ಮತ್ತೆ ಮೊದಲಿನ ಸೌಂದರ್ಯವನ್ನು ದೊರಕಿಸಬಹುದು.

ತಲೆಹೊಟ್ಟು, ತಲೆತುರಿಕೆ ನಿವಾರಿಸಲು ಬೆಣ್ಣೆಹಣ್ಣು ಮತ್ತು ಲೋಳೆಸರದ ಆರೈಕೆ
ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಚೆನ್ನಾಗಿ ಕಿವುಚಿಕೊಳ್ಳಿ. ಇದಕ್ಕೆ ಎರಡು ದೊಡ್ಡಚಮಚ ತಾಜಾ ಲೋಳೆಸರದ ತಿರುಳನ್ನು ಅರೆದು ತಯಾರಿಸಿದ ಲೇಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ತಲೆಗೂದಲ ಬುಡಕ್ಕೆ ಹಾಗೂ ಅಂಚುಗಳವರೆಗೆ ನಯವಾದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಿ. ಈ ಲೇಪನವನ್ನು ಕನಿಷ್ಟ ಒಂದು ಗಂಟೆಯವರೆಗೆ ಒಣಗಲು ಬಿಟ್ಟು ಬಳಿಕ ನಿಮ್ಮ ನಿತ್ಯ ಬಳಕೆಯ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ತಲೆಹೊಟ್ಟು, ತುರಿಕೆ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ.

ಕೂದಲುದುರುವುದನ್ನು ತಡೆಗಟ್ಟಲು ಬೆಣ್ಣೆಹಣ್ಣು ಮತ್ತು ಕೊಬ್ಬರಿ ಎಣ್ಣೆಯ ಆರೈಕೆ
ಒಂದು ಬೋಗುಣಿಯಲ್ಲಿ ಒಂದು ದೊಡ್ಡಚಮಚ ಬೆಣ್ಣೆಹಣ್ಣಿನ ತಿರುಳು ಮತ್ತು ಎರಡು ದೊಡ್ಡಚಮಚ ಉಗುರುಬೆಚ್ಚಗೆ ಬಿಸಿಮಾಡಿದ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ತಲೆಗೂದಲಿನ ಬುಡಕ್ಕೆ ತಾಕುವಂತೆ ಇಡಿಯ ತಲೆಗೆ ಹಚ್ಚಿಕೊಂಡು ಕನಿಷ್ಠ ಒಂದು ಗಂಟೆ ಕಾಲ ಹಾಗೇ ಬಿಡಿ.

ಕೂದಲುದುರುವುದನ್ನು ತಡೆಗಟ್ಟಲು ಬೆಣ್ಣೆಹಣ್ಣು ಮತ್ತು ಕೊಬ್ಬರಿ ಎಣ್ಣೆಯ ಆರೈಕೆ
ಬಳಿಕ ಉಗುರುಬೆಚ್ಚನೆಯ ನೀರಿನೊಂದಿಗೆ ನಿಮ್ಮ ನಿತ್ಯದ ಕೂದಲ ಪ್ರಸಾಧನ ಬಳಸಿ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸುವ ಮೂಲಕ ಕೂದಲು ಉದುರುವುದನ್ನು ತಡೆಗಟ್ಟಬಹುದು.



Click it and Unblock the Notifications











