For Quick Alerts
ALLOW NOTIFICATIONS  
For Daily Alerts

ಮೃದು ಮತ್ತು ಹೊಳಪಿನ ತ್ವಚೆಗೆ ಬೆಣ್ಣೆ ಹಣ್ಣಿನ ಪೋಷಣೆ

|
Avocado For Body
ಅವೊಕಾಡೊ ಅಥವಾ ಬೆಣ್ಣೆ ಹಣ್ಣಿ ತ್ವಚೆಗೆ ತುಂಬಾ ಒಳ್ಳೆಯದು, ಇದನ್ನು ಬಳಸಿ ತ್ವಚೆ ಪೋಷಣೆ ಮಾಡಿದರೆ ಮುಖದಲ್ಲಿ ಬೇಗನೆ ನೆರಿಗೆ ಉಂಟಾಗುವುದಿಲ್ಲ, ಮುಖ ಹೆಚ್ಚು ಹೊಳಪನ್ನು ಪಡೆಯತ್ತದೆ ಎಂದು ತ್ವಚೆ ಪೋಷಣೆಯಲ್ಲಿ ಸಾಕಷ್ಟು ಬಾರಿ ಹೇಳಲಾಗಿದೆ. ಇವತ್ತು ಈ ಬೆಣ್ಣೆ ಹಣ್ಣನ್ನು ತ್ವಚೆ ಹೊಳಪನ್ನು ಪಡೆಯಲು ಯಾವ ರೀತಿಯಲ್ಲಿ ಬಳಸಬಹುದು ಎಂದು ತಿಳಿಯೋಣ.

1. ಬೆಣ್ಣೆ ಹಣ್ಣು ಮತ್ತು ಬೆಣ್ಣೆ : ಬೆಣ್ಣೆ ಮತ್ತು ಕೋಕಾ ಬೆಣ್ಣೆ ( ಕೋಕಾ ಬಟರ್) ಜೊತೆ ಬೆಣ್ಣೆ ಹಣ್ಣಿನ ಎಣ್ಣೆಯನ್ನು ಮಿಶ್ರ ಮಾಡಿ ದೇಹಕ್ಕೆ ಮಸಾಜ್ ಮಾಡಲು ಬಳಸಬಹುದು. ಈ ಮಿಶ್ರಣವನ್ನು ಎಲ್ಲಾ ರೀತಿಯ ತ್ವಚೆಯವರು ಬಳಸಬಹುದಾಗಿದ್ದು, ಇದು ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ.

2. ಬೆಣ್ಣೆ ಹಣ್ಣಿನ ಬಾಡಿ ಮಾಸ್ಕ್: ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬೆಣ್ಣೆ ಹಣ್ಣಿನ ಮಾಯಿಶ್ಚರೈಸರ್ ಹಚ್ಚಬೇಕು. ಇದು ತ್ವಚೆ ಒಳಗಡೆ ಹೋಗಿ ತ್ವಚೆಯನ್ನು ಮೃದು ಮತ್ತು ಸುಂದರವಾಗಿ ಮಾಡಿಸುವಲ್ಲಿ ತುಂಬಾ ಪರಿಣಾಮಕಾರಿ. ಇದನ್ನು ಹಚ್ಚಿ ದೂಳಿಗೆ ಹೋಗಬಾರದು. ಸ್ವಲ್ಪ ಹೊತ್ತು ಬಿಟ್ಟು ಹಳೆಯ ಟವಲ್ ನಿಂದ ಒರೆಸಿ 15 ನಿಮಿಷದ ಬಳಕ ಸ್ನಾನ ಮಾಡಬೇಕು. ಈ ಅವೊಕಾಡೊ ಮಾಯಿಶ್ಚರೈಸರ್ ಮಾಡುವ ವಿಧಾನ ನೋಡಿ ಇಲ್ಲಿದೆ.
ಚೆನ್ನಾಗಿ ಕಳಿತ ಬೆಣ್ಣೆ ಹಣ್ಣು -1
ಬಾಳೆಹಣ್ಣು 1
ಮೊಸರು 1/4 ಕಪ್
ಈ 3 ವಸ್ತುಗಳನ್ನು ಚೆನ್ನಾಗಿ ಮಿಶ್ರ ಮಾಡಿದರೆ ಪೇಸ್ಟ್ ತರ ಆಗುತ್ತದೆ. ಈ ಮಾಯಿಶ್ಚರೈಸರ್ ಹಚ್ಚಿದರೆ ತ್ವಚೆ ಸುಂದರವಾಗುವುದು.

3. ಬೆಣ್ಣೆ ಹಣ್ಣಿನ ಬಾಡಿ ಸ್ಕ್ರಬ್: ಬೆಣ್ಣೆ ಹಣ್ಣು, ಓಟ್ ಮೀಲ್, ನಿಂಬೆರಸದೊಂದಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ ನಂತರ ಅದನ್ನು ದೇಹ ಮತ್ತು ಮುಖಕ್ಕೆ ಹಚ್ಚಿ 20 ನಿಮಿಷ ಉಜ್ಜ ಬೇಕು. ನಂತರ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಒಣ ಚರ್ಮ ಇರುವವರು ಈ ರೀತಿ ಮಾಡುವುದರಿಂದ ತ್ವಚೆ ಸುಂದರ ಮತ್ತು ಮೃದುವಾಗುವುದು.

4. ಬೆಣ್ಣೆ ಹಣ್ಣಿನ ಮಾಯಿಶ್ಚರೈಸರ್: ಬೆಣ್ಣೆ ಹಣ್ಣಿನ ಎಣ್ಣೆಯಲ್ಲಿ ಅದರ ತಿರುಳಿಗಿಂತ ಅದರ ಸಿಪ್ಪೆ ತುಂಬಾ ಪರಿಣಾಮಕಾರಿಯಾಗಿದೆ. ಆದ್ದರಿಂದ ಅದರ ಸಿಪ್ಪೆಯನ್ನು 10 ನಿಮಿಷ ಮುಖಕ್ಕೆ ಹಚ್ಚಿ ತೊಳೆಯ ಬೇಕು. ಈ ರೀತಿ ದಿನವೂ ಮಾಡಿದರೆ ಮುಖದ ಹೊಳಪು ಹೆಚ್ಚುವುದು.

English summary

Avocado For Body | Avocado Recipes | ದೇಹಕ್ಕೆ ಬೆಣ್ಣೆ ಹಣ್ಣು | ಅವೊಕಾಡೊ ರೆಸಿಪಿ

Avocados can be used as homemade mask, body scrub, body butter and what not.Today, we will discuss some popular avocado recipes that can nourish your body naturally without any expenditure.
Story first published: Thursday, December 15, 2011, 12:14 [IST]
X
Desktop Bottom Promotion