For Quick Alerts
ALLOW NOTIFICATIONS  
For Daily Alerts

ವಿಚ್ಛೇದನವೇನೋ ಆಯಿತು? ಮುಂದಿನ ಜೀವನ ಹೇಗೆ?

By Prasad
|
How To Deal With Life After Divorce?
"ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ" ಅಂತ ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಸ್ನೇಹಿತರೊಬ್ಬರು ಸಂದೇಶ ಪ್ರಕಟಿಸಿದ್ದರು. ಅವರ ಆ ಪರಿಯ ಸಂತೋಷಕ್ಕೆ ಕಾರಣವೇನೆಂದರೆ ಅವರಿಗೆ ಆ ದಿನವೇ ಕೌಟುಂಬಿಕ ನ್ಯಾಯಾಲಯದಲ್ಲಿ ಅವರ ಹೆಂಡತಿಯಿಂದ ವಿಚ್ಛೇದನ ದೊರೆತಿತ್ತು.

ಮುಂದೆ? ಎಂಬ ಪ್ರಶ್ನೆಗೆ ಆತ ಕಕ್ಕಾಬಿಕ್ಕಿಯೂ ಆಗಲಿಲ್ಲ, ಆತನ ಬಳಿ ಅದಕ್ಕೆ ಉತ್ತರವೂ ಇರಲಿಲ್ಲ. ಪುರುಷರಿಗೆ ಆ ಪ್ರಶ್ನೆ ಹೆಚ್ಚಾಗಿ ಕಾಡುವುದೂ ಇಲ್ಲ. ಕಾಡಿದರೂ ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ, ವಿಚ್ಛೇದಿತ ಮಹಿಳೆಯರ ನಂತರದ ಜೀವನ ತೀರಾ ಭಿನ್ನ. ಸಮಾಜ ನಾನಾ ಪ್ರಶ್ನೆಗಳನ್ನು ಎಸೆಯುತ್ತದೆ.

ಆ ಪ್ರಶ್ನೆಗಳನ್ನು ನಿರ್ಭೀತರಾಗಿ ಎದುರಿಸುವ ಛಾತಿ ಕೆಲವರಲ್ಲಿರುತ್ತದೆ, ಅನೇಕರು ನಮ್ಮ ಹಣೆಬರಹವೇ ಇಷ್ಟು ಅಂತ ಚಿಪ್ಪಿನೊಳಗೆ ಹುದುಗಿಕೊಂಡೇ ಕಾಲ ದೂಡುತ್ತಾರೆ. ವಿಚ್ಛೇದನದ ನಂತರದ ದಿನಗಳನ್ನು ಎದುರಿಸುವುದು ಪುರುಷರಿಗೇ ಆಗಲಿ, ಸ್ತ್ರೀಯರಿಗೇ ಆಗಲಿ ನಿಜಕ್ಕೂ ಸವಾಲಿನ ಕೆಲಸ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ.

1) ಮನದಲ್ಲಿ ಶಾಂತಿ ಇರಲಿ : ಆಘಾತಕಾರಿ ಘಟನೆಗಳನ್ನೆಲ್ಲ ಮರೆತು ಧ್ಯಾನ, ಯೋಗ, ಓದಿನ ಮುಖಾಂತರ ಮನಸ್ಸನ್ನು ಸಾಧ್ಯವಾದಮಟ್ಟಿಗೆ ತಹಬದಿಗೆ ತರಲು ಪ್ರಯತ್ನಿಸಬೇಕು. ಎಂಥದೇ ಪ್ರರಿಸ್ಥಿತಿ ಬಂದರೂ ಧೈರ್ಯವಾಗಿ ಎದುರಿಸಲು ಮನಸ್ಸನ್ನು ಹುರಿಗೊಳಿಸಬೇಕು. ಮಹಾತ್ಮಾ ಗಾಂಧೀಜಿ ಬೋಧಿಸಿದ ಮೂರು ಮಂಗಗಳ ತತ್ವವನ್ನು ಪರಿಪಾಲಿಸಬೇಕು.

2) ಕೆಲಸದಲ್ಲಿ ತೊಡಗಿಸಿಕೊಳ್ಳಿ : ವೃತ್ತಿ ಅಥವಾ ಅಧ್ಯಯನದಲ್ಲಿ ತೊಡಗಿಕೊಳ್ಳುವ ಮುಖಾಂತರ ಕಹಿ ನೆನಪುಗಳು ಹತ್ತಿರವೂ ಸುಳಿಯದಂತೆ ನೋಡಿಕೊಳ್ಳಿ. ಮಕ್ಕಳಿದ್ದರಂತೂ ಅವರನ್ನು ಸಾಕುವ ಜವಾಬ್ದಾರಿಯೂ ನಿಮ್ಮ ಮೇಲೆ ಇರುತ್ತದೆ. ಆದಿದ್ದಾಯಿತು ಅಂತ ಸೋಲನ್ನೊಪ್ಪಿಕೊಳ್ಳುವುದು ಸುಲಭ, ಆದರೆ ದುಡಿಮೆಯ ಮುಖಾಂತರ ಹೊಸ ಜೀವನವನ್ನು ಮತ್ತೆ ರೂಪಿಸಿಕೊಳ್ಳುವದು ಬಲು ಕಷ್ಟ.

3) ಸಂತೋಷವಗಿರಿ :
ಜೀವನವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲು ಪ್ರಾಂಭಿಸಿ. ಹೊಸ ಸ್ನೇಹಿತರನ್ನು ಸಂಪಾದಿಸಿ. ಸಂತೋಷ ಮತ್ತು ದುಃಖಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಕೆಲವರು ನಿಮ್ಮ ದುಃಖಗಳಿಗೆ ಹೆಗಲು ಕೊಡಬಹುದು. ಆದರೆ, ಹೆಗಲು ಕೊಡಬೇಕೆಂದು ನಿರೀಕ್ಷಿಸಬೇಡಿ. ಸಣ್ಣಪುಟ್ಟ ಸಂಗತಿಗಳಿಗೂ ಸಂತೋಷಪಡುವುದನ್ನು ರೂಢಿಸಿಕೊಳ್ಳಿ. ಆಗ, ಆನಂದವೇ ನಿಮ್ಮನ್ನು ಆವರಿಸಿಕೊಳ್ಳಲು ಆರಂಭಿಸುತ್ತದೆ.

4) ಹೊಸ ಸಂಬಂಧಗಳಿಗೆ ಮುಕ್ತವಾಗಿರಿ : ವಿಚ್ಛೇದನವಾದರೆ ಜೀವನವೇನೂ ಮುಗಿದು ಹೋಗುವುದಿಲ್ಲ. ಅಸಲಿಗೆ ಅಲ್ಲಿಂದಲೇ ಹೊಸ ಲೋಕಕ್ಕೆ ಬಾಗಿಲು ತೆರೆಯಬೇಕು. ಇಂದಿನ ಆಧುನಿಕ ಸಮಾಜದಲ್ಲಿ ಹಳೆಯ ಕಾಲದವರಂತೆ ಬದುಕಿರಲು ಸಾಧ್ಯವಿಲ್ಲ. ಹೀಗಾಗಿ ಹೊಸ ಸಂಬಂಧಗಳಿಗೆ ಯಾವತ್ತೂ ಮುಕ್ತವಾಗಿರಿ. ಆದಿದ್ದಾಗಲಿ ಅಂತ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬೇಡಿ.

5) ಹಳೆ ತಪ್ಪುಗಳ ಪುನರಾವರ್ತನೆ ಬೇಡ : ಹೊಸ ಸಂಗಾತಿ ಸಿಕ್ಕಾಗ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಜಾಗೃತವಾಗಿರಿ ಮತ್ತು ಯಾವುದನ್ನೂ ಮುಚ್ಚಿಡಬೇಡಿ. ಹಿಂದೆ ನಿಮ್ಮಿಂದಲೇ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಮತ್ತೆ ದೊರೆಯುವುದಿಲ್ಲ. ಜೀವನಶೈಲಿ ಬದಲಿಸಿಕೊಳ್ಳಿ, ಜೀವನ ಸರಳವಾಗಿರಲಿ, ಸಂತಸದಿಂದ ಕೂಡಿರಲಿ.

English summary

How To Deal With Life After Divorce? | ವಿಚ್ಛೇದನವೇನೋ ಆಯಿತು? ಮುಂದಿನ ಜೀವನ ಹೇಗೆ?

Although marriages are made in heaven some make life as bad as hell. Not all people are blessed with good partners for life, some turn to show true colors after the wedding day and at that time it is too late to rewind whatever happened. Let's look at how a divorcee can deal with the new life and move away from the past.
Story first published: Monday, January 9, 2012, 15:29 [IST]
X
Desktop Bottom Promotion