For Quick Alerts
ALLOW NOTIFICATIONS  
For Daily Alerts

ದುಬಾರಿ ವಿಚ್ಛೇದನಕ್ಕೆ ರಷ್ಯಾ ಮರ್ಸಿಡಿಸ್ ಡೀಲರ್ ಅಂಕಿತ

By Srinath
|

ಲಂಡನ್, ಜುಲೈ24: ಬ್ರಿಟನ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತದ ವಿಚ್ಛೇದನ ಒಪ್ಪಂದವೊಂದು ರಷ್ಯದ ವಿವಾದಾತ್ಮಕ ಉದ್ಯಮಿ ಬೊರಿಸ್‌ ಬೆರೆಜೊವಸ್ಕಿ (64) ಹಾಗೂ ಅವರ ಮಾಜಿ ಪತ್ನಿ ಗಾಲಿನಾ ಬೆಶಾರೋವಾ (52) ನಡುವೆ ಏರ್ಪಟ್ಟಿದೆ. ಲಂಡನಿನ ಹೈಕೋರ್ಟಿನಲ್ಲಿ ಶನಿವಾರ ಈ ಸೆಟ್ಲಮೆಂಟ್ ಆಗಿದೆ.

ಬೆರೆಜೊವ್‌ಸ್ಕಿಯ ಸಹಿಸಲಾಗದಂತಹ ಅನಾಗರಿಕ ವರ್ತನೆಯಿಂದ ಬೇಸತ್ತು ಬೆಶಾರೋವಾ 2010 ಜುಲೈನಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು ಎಂದು ಬೆಶಾರೋವಾ ಪರ ವಕೀಲ ಹೇಳಿದ್ದಾರೆ. ಆದರೆ, ಈ ದಂಪತಿಯ ಬಾಳಲ್ಲಿ 42ರ ಯೆಲೆನಾ ಗೊರ್ಬೊನೊವಾ ಎಂಬ ಮಹಿಳೆ ಪ್ರವೇಶಿಸಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಬೆರೆಜೊವ್‌ಸ್ಕಿ ಸಂಸಾರ ನೌಕೆ ಇಂದಿಗೂ ಗೊರ್ಬೊನೊವಾ ಜತೆ ಸಾಗಿದೆ.

ರಷ್ಯಾ ಮೂಲದ ಬೆರೆಜೊವ್‌ಸ್ಕಿಗೆ 2003ರಿಂದ ಬ್ರಿಟನ್ ಆಶ್ರಯ ನೀಡಿದೆ. ಇಷ್ಟಕ್ಕೂ ಬೆರೆಜೊವಸ್ಕಿ ಭೂಪ ಮಾಸ್ಕೊದಲ್ಲಿ ಒಂದೇ ಒಂದು ಮರ್ಸಿಡಿಸ್ ಕಾರಿನ ಡೀಲರ್ ಷಿಪ್ ನೊಂದಿಗೆ ತನ್ನ ವ್ಯಾಪಾರಿ ಜೀವನ ಆರಂಭಿಸಿದ್ದ ಎಂಬುದು ಗಮನಾರ್ಹ.

ಈ ಮಧ್ಯೆ, ವಿಚ್ಛೇದನ ಒಪ್ಪಂದದಲ್ಲಿ ಪರಿಹಾರಾರ್ಥವಾಗಿ ಬೆರೆಜೊವಸ್ಕಿ ಎಷ್ಟು ಮೊತ್ತ ನೀಡಿದ್ದಾರೆ ಎಂದು ವಕೀಲರು ಸ್ಪಷ್ಟಪಡಿಸದಿದ್ದರೂ ಈ ಮೊತ್ತವು 10 ಕೋಟಿ ಪೌಂಡ್ ಗೂ (£100m) ಅಧಿಕ ಎಂದು ಮಾಧ್ಯಮಗಳು ವರದಿ ಮಾಡಿವೆ. 1991ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಎರಡು ವರ್ಷ ಮಾತ್ರವೇ ದಂಪತಿ ಜತೆಯಾಗಿ ನೆಲೆಸಿದ್ದರು ಎಂದು ಹೇಳಲಾಗಿದೆ.

2006ರಲ್ಲಿ ಏರ್ಪಟ್ಟಿದ್ದ ವಿಚ್ಛೇದನ ಒಪ್ಪಂದದಲ್ಲಿ ವಿಮಾ ಪಾಲಿಸಿದಾರನೋರ್ವ ತನ್ನ ಪತ್ನಿಗೆ 4.8 ಕೋಟಿ ಪೌಂಡ್ ಮೊತ್ತವನ್ನು ಪರಿಹಾರವಾಗಿ ನೀಡಿದ್ದು ಇದುವರೆಗಿನ ದಾಖಲೆಯ ಮೊತ್ತವಾಗಿತ್ತು.

English summary

Russia Mercedes dealer Boris Berezovsky-Galina Besharova in Britain's largest divorce settlement, ದುಬಾರಿ ವಿಚ್ಛೇದನಕ್ಕೆ ರಷ್ಯಾ ಮರ್ಸಿಡಿಸ್ ಡೀಲರ್ ಅಂಕಿತ

The Russian Mercedes dealer Boris Berezovsky and his ex-wife, Galina Besharova, have agreed to part company in Britain's largest ever divorce settlement on July 23. The court in London was not informed of the sum involved but it is understood that she received more than £100m from her ex-husband.
Story first published: Sunday, July 24, 2011, 8:40 [IST]
X