For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆಯೇ? ಈ ಮಾರ್ಗಗಳನ್ನು ಅನುಸರಿಸಿ ನಿಮ್ಮ ಸಂಸಾರವನ್ನು ಸರಿಪಡಿಸಿಕೊಳ್ಳಿ

|

ಯಾವ ನೋವನ್ನಾದರೂ ಸಹಿಸಬಹುದು, ಆದರೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದನ್ನು ಸಹಿಸುವುದು ಬಹಳ ಕಷ್ಟ. ಒಮ್ಮೆ ಈ ವಿಚಾರ ತಿಳಿದುಬಿಟ್ಟರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಹೋಗಿ ಬಿಡುತ್ತೇವೆ. ಖಂಡಿತ ಇದೊಂದು ಭಾವನಾತ್ಮಕವಾಗಿ ಪರಿಣಾಮ ಬೀರುವ ವಿಚಾರವಾಗಿದೆ.

Ways To Deal With Your Cheating Spouse

ದಾಂಪತ್ಯ ದ್ರೋಹ ಒಬ್ಬ ವ್ಯಕ್ತಿಯನ್ನು ಅಸಹಾಯಕ ಸ್ಥಿತಿಗೆ ತಳ್ಳಿ ಬಿಡಬಹುದು. ದಾಂಪತ್ಯ ದ್ರೋಹದ ವಿಚಾರ ತಿಳಿದ ನಂತರ ಅದನ್ನು ಹೇಗೆ ಎದುರಿಸಬೇಕು ಎಂಬುದು ಕೆಲವರಿಗೆ ಅರಿಯದ ವಿಚಾರವೂ ಆಗಿರಬಹುದು. ಕೆಲವರು ಸಂಬಂಧದಿಂದ ಹೊರಗೆ ಬರುವ ನಿರ್ಧಾರ ಮಾಡಬಹುದು. ಆದರೆ ಇನ್ನೂ ಕೆಲವರು ತಮ್ಮ ಸಂಗಾತಿಯ ಮೋಸದ ವಿಚಾರವನ್ನು ಹೇಗೆ ಎದುರಿಸಿ ನಿಲ್ಲುವುದು ಎಂಬ ಬಗ್ಗೆ ಚಿಂತಿತರಾಗಬಹುದು ಅಥವಾ ಅದರಲ್ಲೇ ಕೊರಗಿ ಅಡ್ಜೆಸ್ಟ್ ಮೆಂಟ್ ಜೀವನಕ್ಕೆ ಬಲಿಯಾಗಿ ಬಿಡಬಹುದು.

ನಿಮ್ಮ ಸಂಗಾತಿಯ ಮೋಸವನ್ನು ಎದುರಿಸುವುದಕ್ಕೆ ಕೆಲವು ಮಾರ್ಗಗಳಿವೆ. ಹಾಗಾದ್ರೆ ಯಾವ ಮಾರ್ಗ ಅನುಸರಿಸಿ ನಿಮ್ಮ ಸಂಸಾರವನ್ನು ಸರಿಪಡಿಸಬೇಕು ಎಂಬುದನ್ನು ನೀವೂ ತಿಳಿದುಕೊಳ್ಳಲು ಬಯಸುತ್ತಿದ್ದರೆ ಈ ಲೇಖನದ ಮುಂದಿನ ಭಾಗವನ್ನು ತಪ್ಪದೇ ಓದಿ.

1. ತಪ್ಪಿತಸ್ಥ ಭಾವನೆಯನ್ನು ನಿಲ್ಲಿಸಿ

1. ತಪ್ಪಿತಸ್ಥ ಭಾವನೆಯನ್ನು ನಿಲ್ಲಿಸಿ

ಒಂದು ವೇಳೆ ನಿಮ್ಮ ಸಂಗಾತಿ ನಿಮಗೆ ಯಾಕೆ ಮೋಸ ಮಾಡುತ್ತಿದ್ದಾರೆ ಎಂಬ ಬಗೆಗಿನ ಕಾರಣವು ನಿಮಗೆ ತಿಳಿಯದೇ ಇದ್ದಲ್ಲಿ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸುಮ್ಮನೆ ನಿಮಗೆ ನೀವೇ ತಪ್ಪಿತಸ್ಥರಂತೆ ಭಾವಿಸಿಕೊಳ್ಳುವುದನ್ನು ಬಿಟ್ಟು ಸೂಕ್ತ ಕಾರಣದ ಸಂಶೋಧನೆ ನಡೆಸಿ. ಕೆಲವೊಮ್ಮೆ ಕೆಟ್ಟ ಉದ್ದೇಶ ಹೊಂದಿರುವ ಜನರು ನಿಮ್ಮನ್ನ ತಪ್ಪಿತಸ್ಥ ಭಾವನೆಗೆ ನೂಕುತ್ತಾರೆ ಮತ್ತು ನಿಮ್ಮ ಬಗ್ಗೆ ನೀವೇ ಕೊರಗುವಂತೆ ಮಾಡಿ ಬಿಡುತ್ತಾರೆ. ಯಾವ ಸಂಗಾತಿಯು ನಿಮಗೆ ಮೋಸ ಮಾಡುತ್ತಿರುತ್ತಾರೋ ಅವರು ಸಾಮಾನ್ಯವಾಗಿ ತಪ್ಪನ್ನು ನಿಮ್ಮ ತಲೆಯ ಮೇಲೆ ಹಾಕಲು ಪ್ರಯತ್ನಿಸುತ್ತಾರೆ. ತಮ್ಮನ್ನ ತಾವು ಇನ್ನೊಬ್ಬರ ಮುಂದೆ ಅತ್ಯುತ್ತಮ ವ್ಯಕ್ತಿಯೆಂಬಂತೆ ಬಿಂಬಿಸಿಕೊಳ್ಳಲು ಮಾಡಬೇಕಾದ ಎಲ್ಲಾ ತಂತ್ರಗಾರಿಕೆಯನ್ನೂ ಮಾಡುತ್ತಾರೆ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವುದರಲ್ಲಿ ಮೋಸಗಾರ ಸಂಗಾತಿ ಬಹಳ ಚಾಣಾಕ್ಷರಾಗಿರುತ್ತಾರೆ. ಇದರರ್ಥ ನೀವು ತಪ್ಪೆಂದು ಅಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ. ನಿಮ್ಮಲ್ಲಿ ತುಂಬಲಾಗುವ ಅಥವಾ ನೀವೇ ಸ್ವತಃ ತುಂಬಿಕೊಂಡಿರುವ ತಪ್ಪಿತಸ್ಥ ಭಾವನೆಯಿಂದ ಮೊದಲು ಹೊರಬನ್ನಿ.

2. ನಿಮ್ಮ ಸಂಗಾತಿಯನ್ನು ಎದುರಿಸಿ

2. ನಿಮ್ಮ ಸಂಗಾತಿಯನ್ನು ಎದುರಿಸಿ

ನಿಮ್ಮ ತಲೆಯಲ್ಲಿ ಬೇಡದ ವಿಚಾರಗಳನ್ನು ತುಂಬಿಸಿಕೊಂಡು ಅಯ್ಯೋ ನನ್ನ ಜೀವನ ಹೀಗಾಯಿತಲ್ಲ ಎಂದು ಕೊರಗುತ್ತಲೇ ಸಾಯುವ ಬದಲು ನಿಮ್ಮ ಸಂಗಾತಿಯ ತಪ್ಪು ಕೆಲಸವನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಮೌನ ನಿಮ್ಮ ಸಂಗಾತಿಯನ್ನು ಮತ್ತಷ್ಟು ತಪ್ಪು ಮಾಡುವುದಕ್ಕೆ ಪ್ರೊತ್ಸಾಹ ನೀಡಬಹುದು. ಸಮಸ್ಯೆಯನ್ನು ನಿಮ್ಮೊಳಗೆ ಇಟ್ಟುಕೊಂಡು ಪರಿಹರಿಸಲು ನೀವು ಇಚ್ಛಿಸುತ್ತೀರೋ ಅಥವಾ ಅದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಎದುರಿಸಿ ನಿಲ್ಲುತ್ತೀರೋ ನಿಮಗೆ ಬಿಟ್ಟ ವಿಚಾರ. ತಾಳ್ಮೆಯಿಂದ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಬಹುದು ಮತ್ತು ಅವರ ಮೋಸಗೊಳಿಸುವಿಕೆಗೆ ಕಾರಣವೇನು ಎಂಬ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ ಪರಿಹಾರ ಕಂಡುಕೊಳ್ಳುವುದು ಬಹಳ ಒಳ್ಳೆಯದು. ಈ ವಿಚಾರದಲ್ಲಿ ಮೌನ ಸಮಸ್ಯೆಯ ಉತ್ತರವಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.

3. ನಿಮ್ಮ ಕುಟುಂಬದವರು ಇಲ್ಲವೇ ನಂಬಿಕಸ್ಥ ಸ್ನೇಹಿತರನ್ನು ಸಂಪರ್ಕಿಸಿ

3. ನಿಮ್ಮ ಕುಟುಂಬದವರು ಇಲ್ಲವೇ ನಂಬಿಕಸ್ಥ ಸ್ನೇಹಿತರನ್ನು ಸಂಪರ್ಕಿಸಿ

ಕುಟುಂಬದವರು ಮತ್ತು ಸ್ನೇಹಿತರು ಎಲ್ಲಾ ಸಂದರ್ಭದಲ್ಲೂ ಕೂಡ ನಿಮ್ಮ ರಕ್ಷಕರು. ಅವರ ಸಹಾಯ ಪಡೆಯುವುದರಲ್ಲಿ ಖಂಡಿತ ತಪ್ಪಿಲ್ಲ. ಒಂದು ವೇಳೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿರುವ ಬಗ್ಗೆ ನಿಮಗೆ ಖಾತ್ರಿಯಿದ್ದಲ್ಲಿ ಖಂಡಿತ ನೀವು ನಿಮ್ಮ ಕುಟುಂಬದವರ ಅಥವಾ ನಂಬಿಕಸ್ಥ ಸ್ನೇಹಿತರ ಸಹಾಯ ಪಡೆಯಬಹುದು. ಈ ನೋವಿನಿಂದ ಹೊರಬರುವುದು ಹೇಗೆ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿ. ಅವರು ನೀಡುವ ಸಲಹೆ ನಿಮ್ಮ ಉಪಯೋಗಕ್ಕೆ ಬರಬಹುದು.

4. ನಿಮ್ಮ ಸಂಗಾತಿಯೊಂದಿಗೆ ಇರಲು ನೀವು ಇಚ್ಛಿಸುತ್ತೀರಾ ಎಂಬುದನ್ನು ಮೊದಲು ನಿರ್ಧರಿಸಿ

4. ನಿಮ್ಮ ಸಂಗಾತಿಯೊಂದಿಗೆ ಇರಲು ನೀವು ಇಚ್ಛಿಸುತ್ತೀರಾ ಎಂಬುದನ್ನು ಮೊದಲು ನಿರ್ಧರಿಸಿ

ನಿಮ್ಮ ಸಂಗಾತಿಯೊಂದಿಗೆ ಜೀವನ ಮುಂದುವರಿಸಲು ನೀವು ಇಚ್ಛಿಸುತ್ತೀರೋ ಅಥವಾ ಇಲ್ಲವೋ ಎಂಬುದು ಸಂಪೂರ್ಣವಾಗಿ 100% ನಿಮ್ಮದೇ ಸ್ವಂತ ನಿರ್ಧಾರವಾಗಿರುತ್ತದೆ. ಮತ್ತೊಂದು ಅವಕಾಶವನ್ನು ನೀಡಿ ನಿಮ್ಮ ಸಂಗಾತಿಯೊಂದಿಗೆ ಜೀವನ ನಡೆಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ಸ್ವತಃ ನೀವು ಮಾತ್ರ ತೆಗೆದುಕೊಳ್ಳುವುದಕ್ಕೆ ಸಾಧ್ಯ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಜೀವನ ಮುಂದುವರಿಸಲು ಇಚ್ಛಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಕೂಡ ನೀವು ಪರಿಶೀಲನೆ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ನಿಮ್ಮ ಸಂಗಾತಿಯನ್ನು ಕ್ಷಮಿಸುವುದಕ್ಕೆ ಬಯಸಿದರೆ ಭೂತಕಾಲದಲ್ಲಿ ನಡೆದ ಎಲ್ಲವನ್ನೂ ಮರೆತು ಮುನ್ನೆಡೆಯಿರಿ, ಖಂಡಿತ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಆಕೆ ಅಥವಾ ಆತ ಪುನಃ ನಿಮಗೆ ಮೋಸಗೊಳಿಸದಂತೆ ಜಾಗ್ರತೆ ವಹಿಸಿ.

5. ನಿಮ್ಮ ಸಂಗಾತಿಗಾಗಿ ಒಂದಷ್ಟು ನಿಯಮಗಳನ್ನು ಹೊಂದಿಸಿ

5. ನಿಮ್ಮ ಸಂಗಾತಿಗಾಗಿ ಒಂದಷ್ಟು ನಿಯಮಗಳನ್ನು ಹೊಂದಿಸಿ

ಅವನು ಅಥವಾ ಅವಳು ನಿಮಗೆ ಮೋಸ ಮಾಡಿದ ನಂತರವೂ ನೀವು ಅವರ ಜೊತೆಗೆ ಜೀವನ ಮುಂದುವರಿಸಲು ಬಯಸಿದ್ದೇ ಆದಲ್ಲಿ ಆತನಿಗೆ/ಳಿಗೆ ಒಂದಷ್ಟು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಿ. ಈ ರೀತಿ ನಿಯಮಗಳನ್ನು ಹೇರುವ ಮೂಲಕ ಆತ/ಆಕೆ ಪುನಃ ನಿಮಗೆ ಮೋಸ ಮಾಡದಂತೆ ಜಾಗ್ರತೆ ವಹಿಸಿದಂತಾಗುತ್ತದೆ. ನಿಮಗೆ ಅಗತ್ಯವೆನಿಸಿದಾಗೆಲ್ಲ ನೀವು ಅವರ ಫೋನ್ ನ್ನು ಪರಿಶೀಲಿಸಬಹುದು. ಇತರೆ ಯಾವುದೇ ವ್ಯಕ್ತಿಯೊಂದಿಗೆ ಫ್ಲರ್ಟ್ ಮಾಡದಂತೆ ನೋಡಿಕೊಳ್ಳಿ. ಹೆಚ್ಚು ಸಮಯ ನಿಮ್ಮೊಂದಿಗೆ ಕಳೆಯುವಂತೆ ಮಾಡಿ. ಪ್ರಾರಂಭದಲ್ಲಿ ಈ ನಿಯಮಗಳು ಸ್ವಲ್ಪ ಕಠಿಣವೆನ್ನಿಸಬಹುದು. ಆದರೆ ನಿಮ್ಮ ಸಂಗಾತಿ ನಿಮ್ಮೊಂದಿಗಿನ ಬದ್ಧತೆಗೆ ಪ್ರಾಮಾಣಿಕರಾಗಿರುವಂತೆ ನೋಡಿಕೊಳ್ಳಿ.

6. ಸಂಗಾತಿಯನ್ನು ಕ್ಷಮಿಸಿ ಬಿಡಿ

6. ಸಂಗಾತಿಯನ್ನು ಕ್ಷಮಿಸಿ ಬಿಡಿ

ದ್ವೇಷವನ್ನು ಮನಸ್ಸಿನಲ್ಲಿಯೇ ಹಿಡಿದಿಟ್ಟುಕೊಂಡರೆ ಸಮಸ್ಯೆಯ ಪರಿಹಾರಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗಾಗಿ ಹಿಂದಾಗಿರುವುದನ್ನು ಮರೆತು ಬಿಡಿ. ಮುಂದಾಗುವ ಬಗ್ಗೆ ಆಲೋಚಿಸಿ. ನಿಮ್ಮ ಸಂಗಾತಿಯೊಂದಿಗೆ ಜೀವನ ಮುಂದುವರಿಸಲು ನೀವು ನಿರ್ಧರಿಸಿದ್ದೇ ಆದಲ್ಲಿ ಹಿಂದೆ ನಡೆದ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಿ ಅರ್ಥಾತ್ ಅವರನ್ನು ಕ್ಷಮಿಸಿ ಬಿಡಿ. ನೀವು ಮೋಸಗೊಳಿಸಿದ ಸಂಗಾತಿಯೊಂದಿಗೆ ಜೀವನ ಮುಂದುವರಿಸಬೇಕು ಎಂದು ನಿರ್ಧರಿಸಿರುವುದು ನಿಮ್ಮ ಮಕ್ಕಳ ಹಿತದೃಷ್ಟಿಯಿಂದಲೂ ಆಗಿರಬಹುದು ಅಥವಾ ಕುಟುಂಬ ಸದಸ್ಯರ ಹಿತದೃಷ್ಟಿಯಿಂದಲೂ ಆಗಿರಬಹುದು. ಮೋಸಗೊಳಿಸಿದ ನಿಮ್ಮ ಸಂಗಾತಿಗೆ ತಾವು ಮಾಡಿದ ತಪ್ಪಿನ ಅರಿವಾಗುವಂತೆ ನೋಡಿಕೊಳ್ಳಿ ಮತ್ತು ಅವರ ತಪ್ಪನ್ನು ನೀವು ಮನ್ನಿಸಿಬಿಡಿ.

7. ಮುಂದುವರಿಯಿರಿ

7. ಮುಂದುವರಿಯಿರಿ

ನಿಮ್ಮ ಸಂಗಾತಿಯ ಬಗ್ಗೆ ಋಣಾತ್ಮಕ ಭಾವನೆಗಳನ್ನು ಹಾಗೆಯೇ ಮುಂದುವರಿಸುವ ಬದಲು ಅದನ್ನು ಪಕ್ಕಕ್ಕೆ ತಳ್ಳಿ ಮುಂದುವರಿದುಬಿಡಿ. ಕಹಿ ಘಟನೆಗಳನ್ನು ಪದೇ ಪದೇ ಮೆಲುಕು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ. ನೀವು ನಿಮ್ಮ ಸಂಗಾತಿಯ ಜೊತೆಗೆ ಜೀವನ ಮುಂದುವರಿಸಲು ನಿರ್ಧರಿಸಿರುವ ಬಗ್ಗೆ ನಿಮ್ಮ ಬಲವಾದ ವಿಶ್ವಾಸವಿರಬೇಕು. ಆಗ ಮಾತ್ರ ಧನಾತ್ಮಕ ಹೆಜ್ಜೆಯಲ್ಲಿ ನಿಮ್ಮ ಜೀವನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಹಿಂದಿನದ್ದು ಮರೆತು ಮುಂದೇನಾಗಬೇಕು ಎಂಬ ಬಗ್ಗೆ ಹೆಚ್ಚು ಆಲೋಚನೆ ಮಾಡಿದರೆ ಸಮಸ್ಯೆಯ ಪರಿಹಾರ ಸುಲಭವಾಗುತ್ತದೆ.

ಮೋಸ ಹೋಗುವುದರಿಂದಾಗಿ ನಿಮ್ಮ ಮನಸ್ಸಿನ ಮೇಲೆ ಖಂಡಿತ ಗಾಯವಾಗಿರುತ್ತದೆ. ಆದರೆ ಈ ಗಾಯವನ್ನು ನಿಮಗೆ ನೀವೇ ಔಷದಿ ಪಡೆಯುವುದರಿಂದ ಗುಣ ಮಾಡಿಕೊಳ್ಳಬಹುದು. ಆ ಮೂಲಕ ನೀವು ಯಾವಾಗಲೂ ಖುಷಿಯಾಗಿ ಇರುವಂತೆ ನೋಡಿಕೊಳ್ಳಬಹುದು. ಪ್ರಾರಂಭದಲ್ಲಿ ಎಲ್ಲವೂ ಕಷ್ಟವೆನಿಸುತ್ತದೆ ಆದರೆ ಮುಂದುವರಿದಂತೆ ಎಲ್ಲವೂ ಸರಳ ಮತ್ತು ವಾಸ್ತವವಾಗುತ್ತದೆ.

English summary

Ways To Deal With Your Cheating Spouse

For a person, finding out that his or her spouse is cheating on them can be a devastating thing and have a negative impact on their emotional health as being cheated is an unpleasant feeling. The infidelity of the spouse can make a person feel betrayed, rejected and helpless. After discovering the infidelity, a person might not know how to deal with it. Some people might prefer walking out of the relationship while others will think about some ways to deal with their cheating spouse.
X
Desktop Bottom Promotion