For Quick Alerts
ALLOW NOTIFICATIONS  
For Daily Alerts

ನಿಮಗೂ ಹಿಂಬದಿಯಿಂದ ಚೂರಿ ಹಾಕುವ ಸ್ನೇಹಿತರಿದ್ದಾರೆಯೇ? ಎಚ್ಚರ!

|

ಜೀವನದಲ್ಲಿ ಒಂದೊಳ್ಳೆ ಸ್ನೇಹಿತೆ/ತ ಸಿಗುವುದು ಅದೃಷ್ಟವೇ. ಅದರಲ್ಲೂ ಒಬ್ಬರನ್ನೊಬ್ಬರು ಉತ್ತಮವಾಗಿ ಅರ್ಥಮಾಡಿಕೊಳ್ಳುವ, ಹೆಗಲಿಗೆ ಹೆಗಲು ಕೊಡುವ ಸ್ನೇಹಿತರಿದ್ದರಂತೂ ಇನ್ನೂ ಉತ್ತಮ.

ನಮಗೆ ಜೀವನದ ಪ್ರತಿ ಹೆಜ್ಜೆಯಲ್ಲೂ ಧೈರ್ಯ ತುಂಬಬಲ್ಲ, ಪ್ರತಿ ಸಂತೋಷ-ದುಃಖ ಸಂದರ್ಭಗಳಲ್ಲೂ ಹಂತದಲ್ಲೂ ಜತೆಯಾಗಿ ನಿಲ್ಲುವವರು ಸ್ನೇಹಿತರೇ. ಕುಟುಂಬದಲ್ಲಿ ಚರ್ಚಿಸಲಾಗದ ಅದೆಷ್ಟೋ ನಮ್ಮ ಸೀಕ್ರೆಟ್ ಗಳನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ.

ಆದರೆ ಎಲ್ಲಾ ಸ್ನೇಹಿತರು ಇದಕ್ಕೆ ಅರ್ಹರೇ?

ನೀವೇಷ್ಟೇ ಬುದ್ದಿವಂತ ಅಥವಾ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರೂ, ನೀವು ಬಹಳ ನಂಬಿರುವ ವಿಷಕಾರಿ/ನಕಾರಾತ್ಮಕ ಮನಸ್ಸುಳ್ಳ ಸ್ನೇಹಿತರೇ ನಿಮ್ಮ ಜೀವನದ ತೊಡಕಾಗಬಹುದು. ಅನಾರೋಗ್ಯಕರ ಸ್ನೇಹಿತರು ನಮಗೇ ತಿಳಿಯದಂತೆ ನಮ್ಮ ಜೀವನದ ಬಹುದೊಡ್ಡ ಭಾರವಾಗವಹುದು, ಅವರು ನಮ್ಮ ಗುರಿ, ಸಾಧನೆ, ಕನಸು ಎಲ್ಲಕ್ಕೂ ಅಡ್ಡವಾಗಬಹುದು. ಆದ್ದರಿಂದ ಸ್ನೇಹಿತರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರದಿಂದಿರಬೇಕು. ನಮ್ಮ ವ್ಯಕ್ತಿತ್ವ ಅಥವಾ ವರ್ತನೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರವ ಸ್ನೇಹಿತರು ಎಂದಿಗೂ ಅಪಾಯಕಾರಿ.

ಜತೆಯಲ್ಲೇ ಪ್ರಾಣಸ್ನೇಹಿತರಂತೆ ಇದ್ದರೂ ಹಿಂಬದಿಯಲ್ಲಿ ಕತ್ತಿ ಮಸಿಯುವ ಸ್ನೇಹಿತರ ವರ್ತನೆ ಹೇಗಿರುತ್ತದೆ ಎಂದು ಈ ಲೇಖನದಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ಈ ಮೂಲಕ ಇಂತಹ ಸ್ನೇಹಿತರ ಬದಲಾವಣೆಗೆ ಪ್ರಯತ್ನಿಸಿ, ಇಲ್ಲವಾದಲ್ಲಿ ದೂರಾಗಿ ನಿಮ್ಮ ಉತ್ತಮ ಭವಿಸ್ಯವನ್ನು ರೂಪಿಸಿಕೊಳ್ಳಿ.

1. ಬಹಳ ಬೇಗ ಕೋಪಗೊಳ್ಳುತ್ತಾರೆ

1. ಬಹಳ ಬೇಗ ಕೋಪಗೊಳ್ಳುತ್ತಾರೆ

ಬಹಳ ಸಣ್ಣ-ಸಣ್ಣ ವಿಷಯಗಳಿಗೂ ಬೇಗ ಕೋಪಗೊಳ್ಳುತ್ತಾರೆ. ನಿಮ್ಮ ಸುತ್ತಮುತ್ತ ವಾತಾವರಣವನ್ನು ಸಂತೋಷದಿಂದ, ಖುಷಿಖುಷಿಯಾಗಿಡಲು ನೀವು ಮಾಡುವ ಸಣ್ಣಪುಟ್ಟ ತಮಾಷೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಉತ್ತಮವಾಗಿ ನಾಟಕವಾಡುವ ಗುಣ ಅವರಿಗಿರುತ್ತದೆ. ಕ್ಷುಲ್ಲಕ ವಿಷಯಗಳಿಗೆ ನಿಮ್ಮೊಂದಿಗೆ ಮಾಡುವ ಜಗಳ ದಿನ, ವಾರ, ತಿಂಗಳು ಕಳೆದರೂ ಮುನಿಸು ಹಾಗೇ ಮುಂದುವರೆದಿರುತ್ತದೆ.

2. ನಿಮ್ಮ ಸ್ಥಾನದಲ್ಲಿ ಅವರು ಯೋಚನೆ ಮಾಡುವುದೇ ಇಲ್ಲ

2. ನಿಮ್ಮ ಸ್ಥಾನದಲ್ಲಿ ಅವರು ಯೋಚನೆ ಮಾಡುವುದೇ ಇಲ್ಲ

ವಿಷಕಾರಿ ಗುಣವುಳ್ಳ ಸ್ನೇಹಿತರು ಎಂದಿಗೂ ನಿಮ್ಮ ಸ್ಥಾನದಲ್ಲಿ ನಿಂತು ಯೋಚನೆ ಮಾಡುವುದೇ ಇಲ್ಲ. ಬಾಯಿ ಮಾತಿಗೆ ನಿಮ್ಮನ್ನು ಕಾಳಜಿ ಮಾಡುವಂತೆ ಹೇಳುತ್ತಾರಾದರೂ, ಅವರ ಕ್ರಿಯೆ ಬೇರೆಯೇ ಇರುತ್ತದೆ. ಇದಕ್ಕೆ ಕಾರಣ ಅವರು ನಿಮ್ಮ ಭಾವನೆ ಅಥವಾ ನೋವನ್ನು ಅರ್ಥ ಮಾಡಿಕೊಳ್ಳುವ ಸ್ವಭಾವದವರಲ್ಲ. ಇನ್ನೂ ಹೆಚ್ಚಾಗಿ ನೋವು, ನಿರಾಶೆಯನ್ನುಂಟು ಮಾಡುತ್ತಾರೆ.

3. ಸಹಾನುಭೂತಿಯ ಕೊರತೆ

3. ಸಹಾನುಭೂತಿಯ ಕೊರತೆ

ಸಹಾನುಭೂತಿ ಎಂಬುದು ಬಹಳ ದೊಡ್ಡ ಪದ. ಇದನ್ನು ಇಂಥಹ ಸ್ನೇಹಿತರಿಂದ ಎಂದಿಗೂ ಬಯಸಬೇಡಿ. ನಿಮ್ಮ ನೋವನ್ನೇ ಭಾವಿಸದ ಅವರು ನಿಮ್ಮ ಮೇಲೆ ಸಹಾನುಭೂತಿ ತೋರುವರೇ.

ಸ್ವಾರ್ಥಿಗಳು

ಸ್ವಾರ್ಥಿಗಳು

ಸಹಾನುಭೂತಿ ಇಲ್ಲದೆ, ಬೇರೆಯವರ ಭಾವನೆ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದವರು ಖಂಡಿತವಾಗಿಯೂ ಸ್ವಾರ್ಥಿಯಾಗಿರುತ್ತಾರೆ. ಅವರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ, ಬೇರೆಯವರ ಬಗ್ಗೆ ಅವರದ್ದು ನಿರ್ಲಕ್ಷ್ಯಧೋರಣೆ. ಅವರ ಈ ಸ್ವಾರ್ಥ ಧೋರಣೆಯಿಂದಾಗಿ ನೀವೇನಾದರೂ ಸಣ್ಣ ತಪ್ಪು ಮಾಡಿದರೂ ಸ್ನೇಹಿದ ಮೌಲ್ಯವನ್ನು ಕಡೆಗಣಿಸಿ ನಿಮ್ಮ ಮೇಲೆ ಹರಿಹಾಯ್ದು, ದ್ವೇಷಕಾರುತ್ತಾರೆ.

ಗರ್ವಿಗಳು

ಗರ್ವಿಗಳು

ಸಣ್ಣ ತಪ್ಪು ನಿಮ್ಮಂದಾಗಲಿ ಅವರಿಂದಾಗಲಿ ಸ್ನೇಹಕ್ಕಾಗಿ ನೀವೇ ಪ್ರತಿ ಬಾರಿ ಕ್ಷಮೆ ಕೋರಬೇಕು, ಆಗಲೇ ಅವರು ನಿಮ್ಮನ್ನು ಕ್ಷಮಿಸುವುದು. ತಮ್ಮ ತಪ್ಪನ್ನು ಅವರು ಎಂದಿಗೂ ಒಪ್ಪಿಕೊಳ್ಳುವುದೇ ಇಲ್ಲ, ಕ್ಷಮೆಯಂತೂ ಇಲ್ಲವೇ ಇಲ್ಲ. ಇವರು ಎಂದಿಗೂ ಸತ್ಯಾಂಶವನ್ನು ಸಹ ಒಪ್ಪಿಕೊಳ್ಳುವುದೇ ಇಲ್ಲ. ತಮ್ಮ ಭ್ರಮಾಲೋಕದಲ್ಲೇ ಇರುತ್ತಾರೆ, ಅದೇ ಸತ್ಯ ಎಂದು ವಾದಿಸುತ್ತಾರೆ, ನಂಬಿಸುತ್ತಾರೆ.

ನಿಮಗೇ ತಪ್ಪಿತಸ್ಥ ಮೂಡಿಸುತ್ತಾರೆ

ನಿಮಗೇ ತಪ್ಪಿತಸ್ಥ ಮೂಡಿಸುತ್ತಾರೆ

ತಮ್ಮ ತಪ್ಪುಗಳನ್ನು ಮರೆಮಾಚಲು ನಿಮ್ಮದೆ ತಪ್ಪು ಎಂದು ಬಿಂಬಿಸುತ್ತಾರೆ, ತಮ್ಮ ತನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಉಂಟು ಮಾಡಿ ನೀವು ಬಳಲುವಂತೆ ಮಾಡುತ್ತಾರೆಯೇ ಹೊರತು ಅವರು ಎಂದಿಗೂ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ.

ಎಲ್ಲ ತಿಳಿದಿದೆ ಎನ್ನುವಂತೆ ತೋರಿಸಿಕೊಳ್ಳುತ್ತಾರೆ

ಎಲ್ಲ ತಿಳಿದಿದೆ ಎನ್ನುವಂತೆ ತೋರಿಸಿಕೊಳ್ಳುತ್ತಾರೆ

ಇಂತಹ ಸ್ವಭಾವ ಉಳ್ಳ ಸ್ನೇಹಿತರೊಂದಿಗೆ ಹೆಚ್ಚಾಗಿ ಆರೋಗ್ಯಕರ ಚರ್ಚೆಗಳು ನಡೆಯುವುದೇ ಇಲ್ಲ. ಏಕೆಂದರೆ ಅವರು ಎಂದಿಗೂ ನಮ್ಮದು ತಪ್ಪು, ಅವರದ್ದೇ ಸರಿ ಎನ್ನುತ್ತಾರೆ. ತಮಗೇ ಎಲ್ಲಾ ತಿಳಿದಂತೆ ವರ್ತಿಸುತ್ತಾರೆ. ಕೊನೆಗೆ ಬೇಸತ್ತು ನೀವೇ ವಾದ ನಿಲ್ಲಿಸಬೇಕಷ್ಟೇ.

ತಮ್ಮ ಮೇಲೆ ಮಾತ್ರ ಆಸಕ್ತಿ ಹೊಂದಿರುತ್ತಾರೆ

ತಮ್ಮ ಮೇಲೆ ಮಾತ್ರ ಆಸಕ್ತಿ ಹೊಂದಿರುತ್ತಾರೆ

ನಿಮ್ಮ ಸಮಸ್ಯೆ, ಕತೆಗಳನ್ನು ಕೇಳಲು ಅವರಿಗೇ ಆಸಕ್ತಿಯೇ ಇರುವುದಿಲ್ಲ. ನಿಮ್ಮ ಜೀವನದ ಗಂಭೀರ ವಿಷಯಗಳ ಬಗ್ಗೆ ಕೇಳಲು ಸಹ ಆವರು ನಿರಾಸಕ್ತಿ ತೋರುತ್ತಾರೆ, ಬದಲಾಗಿ ಅವರ ಮಾತುಗಳೇ ಮೇಲುಗೈ ಸಾಧಿಸುತ್ತದೆ.

ನಿಮ್ಮ ನಂಬಿಕೆಗೆ ಅರ್ಹರಲ್ಲ

ನಿಮ್ಮ ನಂಬಿಕೆಗೆ ಅರ್ಹರಲ್ಲ

ಇವರು ಎಂದಿಗೂ ನಂಬಿಕೆಗೆ ಅರ್ಹರಲ್ಲ, ಇವರೊಂದಿಗೆ ಎಂದೂ, ಅಪ್ಪಿತಪ್ಪಿಯೂ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ನಿಮಗೆ ಮುಜುಗರ ಉಂಟುಮಾಡುವುದಲ್ಲದೆ, ನಿಮ್ಮ ಗೌರವಕ್ಕೂ ಧಕ್ಕೆ ತರುತ್ತಾರೆ.

ನಿಯತ್ತಿಲ್ಲದ ವ್ಯಕ್ತಿಗಳು

ನಿಯತ್ತಿಲ್ಲದ ವ್ಯಕ್ತಿಗಳು

ಮುಂದೆ ನಿಮ್ಮ ಸ್ನೇಹಿತರಂತೆ ಪ್ರೀತಿಯ ಮಾತುಗಳನ್ನೇ ಆಡಿದರೂ ಹಿಂಬದಿಯಲ್ಲಿ ನಿಮ್ಮ ಶತ್ರುಗಳಂತೆ ಪಿತೂರಿ ಮಾಡುತ್ತಾರೆ. ಇದನ್ನೂ ಮೀರಿ ನಿಮ್ಮ ದ್ವೇಷಿಗಳ ಜತೆ ಸೇರಿ ನಿಮ್ಮ ವಿರುದ್ಧವೇ ಕತ್ತಿಮಸೆಯುತ್ತಾರೆ.

ನಿಮ್ಮ ಸಾಧನೆ ಕಂಡು ಅಸೂಯೆ ಪಡುತ್ತಾರೆ

ನಿಮ್ಮ ಸಾಧನೆ ಕಂಡು ಅಸೂಯೆ ಪಡುತ್ತಾರೆ

ಯಾರೇ ಒಳ್ಳೆಯ ಸ್ನೇಹಿತರಾದರೆ ನಿಮ್ಮ ಸಾಧನೆ ಕಂಡು ಹೆಮ್ಮೆ ಪಡುತ್ತಾರೆ. ಆದರೆ ಇವರು ನಿಮ್ಮ ಪ್ರತಿಸ್ಫರ್ಧಿಯಂತೆ ನೋಡುತ್ತಾರೆ. ಖುಷಿ ಪಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಅಸೂಯೆ ಪಡುತ್ತಾರೆ. ಅಲ್ಲದೇ ನಿಮ್ಮನ್ನು ಅಗಾಧವಾಗಿ ಪ್ರೀತಿಸುವವರನ್ನು ಅವರು ದ್ವೇಷಿಸುತ್ತಾರೆ.

ಸ್ನೇಹಕ್ಕಾಗಿ ಯಾವ ತ್ಯಾಗಕ್ಕೂ ಅವರು ಸಿದ್ಧರಿರುವುದಿಲ್ಲ

ಸ್ನೇಹಕ್ಕಾಗಿ ಯಾವ ತ್ಯಾಗಕ್ಕೂ ಅವರು ಸಿದ್ಧರಿರುವುದಿಲ್ಲ

ನಿಮ್ಮಿಬ್ಬರ ಸ್ನೇಹಕ್ಕಾಗಿ ಅವರು ಏನನ್ನು ತ್ಯಾಗ ಮಾಡಲು ಸಿದ್ಧರಿರುವುದಿಲ್ಲ. ಅವರ ಗರ್ವ, ಜಂಭದಿಂದಲೇ ನಿಮ್ಮ ಸ್ನೇಹವನ್ನು ಸಹ ಅವರೇ ಕಳೆದುಕೊಳ್ಳುತ್ತಾರೆ. ನಿಮ್ಮ ಸ್ನೇಹಕ್ಕಿಂತ ಅವರಿಗೆ ತಮ್ಮ ಸ್ವಾಭಿಮಾನವೇ ಹೆಚ್ಚಾಗುತ್ತದೆ.

ಎಂದಿಗೂ ಬದಲಾವಣೆಗೆ ಇವರು ಒಪ್ಪುವುದಿಲ್ಲ

ಎಂದಿಗೂ ಬದಲಾವಣೆಗೆ ಇವರು ಒಪ್ಪುವುದಿಲ್ಲ

ಯಾವುದೇ ಸಕಾರಣಕ್ಕೂ ಅವರು ತನ್ನ ವರ್ತನೆಯನ್ನು ಸಹ ಬದಲಿಸಿಕೊಳ್ಳವುದಿಲ್ಲ. ತನ್ನ ಪೋಷಕರನ್ನು ಸಹ ಧಿಕ್ಕರಿಸುತ್ತಾರೆ. ನೀವೇನಾದರು ಅವರಿಗೆ ಬುದ್ದಿ ಹೇಳಿದರೆ ಕೇಳಿಸಿಕೊಳ್ಳಲು ಸಹ ಸಿಧ್ದರಿಲ್ಲದ ಇವರು ನಿಮ್ಮನ್ನೆ ದೂರುತ್ತಾರೆ.

ತಾವು ಮಾಡುವ ತಪ್ಪುಗಳ ಬಗ್ಗೆ ಹೆಮ್ಮೆ ಪಡುತ್ತಾರೆ

ತಾವು ಮಾಡುವ ತಪ್ಪುಗಳ ಬಗ್ಗೆ ಹೆಮ್ಮೆ ಪಡುತ್ತಾರೆ

ಇನ್ನೂ ವಿಚಿತ್ರವೆಂದರೆ ಇವರು ತಾವು ಮಾಡುವ ತಪ್ಪುಗಳನ್ನೇ ಬಹಳ ಹೆಮ್ಮೆ ಸಂಗತಿ ಎಂದು ಭಾವಿಸುತ್ತಾರೆ. ತಮ್ಮ ಮಾಜಿ ಸ್ನೇಹಿತರ ಜತೆ ರಾಜಿಗೆ ಮುಂದಾಗುವುದಿಲ್ಲ, ಅವರಿಗೂ ಅವಕಾಶ ನೀಡುವುದಿಲ್ಲ. ಬದಲಾಗಿ ಅವರ ಅಹಂ ಅನ್ನು ಹೇಗೆ ಅಡಗಿಸಿದೆ ಗೊತ್ತಾ? ಎಂದು ಹೆಮ್ಮೆಯಿಂದ ಬೀಗುತ್ತಾರೆ.

ತಾಳ್ಮೆಯನ್ನು ಅವರು ಪರೀಕ್ಷಿಸುತ್ತಾರೆ

ತಾಳ್ಮೆಯನ್ನು ಅವರು ಪರೀಕ್ಷಿಸುತ್ತಾರೆ

ನಿಮ್ಮ ವಿನಯತೆಯನ್ನು, ಪ್ರತಿ ಸಂದರ್ಭದಲ್ಲೂ ನೀವು ಅವರನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಿರಂತರವಾಗಿ ಕ್ಷಮಿಸುವ ನಿಮ್ಮ ಗುಣವನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಮತ್ತೆ ಮತ್ತೆ ನಿಮಗೆ ನೋವುಂಟು ಮಾಡುತ್ತಲೇ ಇರುತ್ತಾರೆ. ಸಾರಿ ಕೇಳಿ ಮತ್ತೆ ಇಂಥ ತಪ್ಪು ಮಾಡುವುದಿಲ್ಲ ಎಂದು ಹೇಳಿದರೂ, ಮತ್ತೆ ಅದೇ ತಪ್ಪನ್ನೇ ಮುಂದುವರೆಸುತ್ತಾರೆ.

 ಅಂತಿಮವಾಗಿ ನಿಮ್ಮ ಸ್ವಭಾವದ ಮೇಲೂ ನಕಾರಾತ್ಮಕ ಪ್ರಭಾವ ಬೀರಬಹುದು

ಅಂತಿಮವಾಗಿ ನಿಮ್ಮ ಸ್ವಭಾವದ ಮೇಲೂ ನಕಾರಾತ್ಮಕ ಪ್ರಭಾವ ಬೀರಬಹುದು

ಅವರು ತಮ್ಮ ಮೇಲೆ ತಾವು ಹೆಮ್ಮೆ ಪಟ್ಟುಕೊಳ್ಳುವ ಸ್ವಭಾವ ಮತ್ತು ಅವರ ಸ್ವಾರ್ಥತೆಯ ಗುಣದಿಂದ ನೀವು ಸಹ ಬಲಿಪಶುವಾಗಿರುತ್ತೀರಿ, ಅಲ್ಲದೇ ಇಂತಹ ಸ್ವಭಾವ ನಿಮ್ಮ ಮೇಲೂ ಸಹ ಪ್ರಭಾವ ಬೀರಬಹುದು. ಇಂತಹ ಸಂಬಂಧಗಳು ಅತ್ಯಂತ ವಿಷಕಾರಿ ಹಾಗೂ ಹಾನಿಕಾರಕ. ನಿಮ್ಮ ತಾಳ್ಮೆ ಈ ಹಂತದಲ್ಲಾಗಲೇ ಕುಸಿದಿರುತ್ತದೆ. ನಿಮ್ಮ ಸ್ನೇಹಿತರ ಪ್ರಭಾವದಿಂದ ನೀವು ಸಹ ದ್ವೇಷ ಮತ್ತು ಕರುಣೆಯ ಗುಣಗಳನ್ನು ಕಳೆದುಕೊಳ್ಳಬಹುದು.

English summary

Warning Signs Of a Toxic Friend

Having friends by our side who are ready to help and support us gives us the confidence to go on in life no matter what it throws to us. We enjoy sharing the laughter with them; we are relieved when they voluntarily share our pain. However, not all friends are the same. No matter how kind and smart you are, you will always encounter toxic friends who will disappoint you over and over again.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more