For Quick Alerts
ALLOW NOTIFICATIONS  
For Daily Alerts

ಈ ಒಂದೇ ಒಂದು ಸಂಗತಿ ಸಾಕು ಸುಖಕರ ದಾಂಪತ್ಯಕ್ಕೆ

|

ಹೆಣ್ಣು-ಗಂಡು ಮದುವೆ ಎಂಬ ಬಂಧನಕ್ಕೆ ಒಳಗಾಗಿ ಜೀವನ ನಡೆಸುವುದು ಇದೆಯಲ್ಲಾ ಅದು ಸುಂದರವೂ ಹೌದು ಅಷ್ಟೇ ಸವಾಲಿನಿಂದ ಕೂಡಿದ್ದು ಹೌದು. ಕೆಲವರು ತಮ್ಮ ಸಂಗಾತಿ ಕುರಿತು ಹೇಳುವಾಗ ಆಕೆ/ ಆತನ ನನಗೆ ಸಿಕ್ಕಿದ್ದು ಅದೃಷ್ಟ ಎಂಬುವುದಾಗಿ ಹೇಳಿದರೆ, ಇನ್ನು ಕೆಲವರಿಗೆ ತಮ್ಮ ಸಂಗಾತಿ ಬಗ್ಗೆ ಹೇಳಲು ಒಳ್ಳೆಯ ಮಾತುಗಳೇ ಇರಲ್ಲ. ಆತ/ಆಕೆಯನ್ನು ಮದುವೆಯಾದ ಬಳಿಕ ನನ್ನ ಬದುಕೇ ಹಾಳಾಯಿತು ಎಂದು ಹೇಳುವುದನ್ನೂ ಕೇಳುತ್ತೇವೆ.

Secrete for Successful marriage

ಆದರೆ ಸುಂದರ ದಾಂಪತ್ಯ ಎನ್ನುವುದು ಅದೃಷ್ಟ ಎನ್ನುವುದಕ್ಕಿಂತ ಇಬ್ಬರ ಗುಣಗಳು ಹಾಗೂ ಅವರಿಬ್ಬರ ನಡುವಿನ ಹೊಂದಾಣಿಕೆ ಎಂಬುವುದು ಮುಖ್ಯವಾಗಿರುತ್ತದೆ. ಒಂದು ಯಶಸ್ವಿ ದಾಂಪತ್ಯಕ್ಕೆ ಯಾವ ಅಂಶ ಮುಖ್ಯವಾಗುತ್ತದೆ ಎಂದು ಅಧ್ಯಯನ ಹೇಳಿವೆ.

ಇತ್ತೀಚೆಗೆ ವಿಜ್ಞಾನಿಗಳ ಸಂಬಂಧದ ಬಗ್ಗೆ ಒಂದು ಸಮೀಕ್ಷೆ ಮಾಡಿದರು. ಇದರಲ್ಲಿ 11000 ದಂಪತಿಗಳು ಭಾಗವಹಿಸಿದ್ದರು. ಈ ಸಮೀಕ್ಷೆಯಲ್ಲಿ ಒಂದು ಸಂಬಂಧ ಗಟ್ಟಿಯಾಗಲು ಹಾಗೂ ಮುರಿಯಲು ಕಾರಣವೇನು ಎಂಬ ಕೆಲ ಅಂಶಗಳು ತಿಳಿದು ಬಂದೆವು.

ಸುಂದರ ಸಂಬಂಧಕ್ಕೆ ಯಾವ ಅಂಶ ಮುಖ್ಯ ಎಂದು ನೋಡೋಣ ಬನ್ನಿ:

 ಗಟ್ಟಿಯಾದ ದಾಂಪತ್ಯ ಜೀವನದ ಹಿಂದಿರುವ ಸೂತ್ರಗಳು

ಗಟ್ಟಿಯಾದ ದಾಂಪತ್ಯ ಜೀವನದ ಹಿಂದಿರುವ ಸೂತ್ರಗಳು

ವೆಸ್ಟರ್ನ್ ಯೂನಿವರ್ಸಿಟಿನಲ್ಲಿರುವ ವಿಜ್ಞಾನಿಗಳು ಜುಲೈನಲ್ಲಿ ಗಂಡ-ಸಂಬಂಧ ಸುಂದರವಾಗಿರಲು ಮುಖ್ಯವಾಗಿರುವುದು ಏನು ಎಂಬುವುದರ ಬಗ್ಗೆ ಸಮೀಕ್ಷೆ ನಡೆಸಿದರು. ಇದರಲ್ಲಿ ತಿಳಿದು ಬಂದಿರುವ ಅಂಶವೆಂದರೆ ಒಂದು ಯಶಸ್ವಿ ದಾಂಪತ್ಯದ ರಹಸ್ಯವೆಂದರೆ ನಂಬಿಕೆ, ತಾಳ್ಮೆ, ಬೆಂಬಲ, ಅನುರಾಗ ಹಾಗೂ ಲೈಂಗಿಕ ತೃಪ್ತಿ.

ದಾಂಪತ್ಯದಲ್ಲಿ ಹೊಂದಾಣಿಕೆ ಇರಬೇಕು ಎನ್ನುತ್ತಾರೆ, ಆದರೆ ಹೊಂದಾಣಿಕೆ ಮಾತ್ರ ಸಾಲದು ಈ ಅಂಶಗಳು ಇರಲೇಬೇಕು.

 ಹೊಗಳಿಕೆ

ಹೊಗಳಿಕೆ

ಒಳ್ಳೆಯ ವಿಷಯಕ್ಕೆ ಸಂಗಾತಿಯನ್ನು ಹೊಗಳಬೇಕು. ಇದು ಅವರು ಮತ್ತಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಪ್ರೇರೇಪಿಸುವುದರ ಜೊತೆಗೆ ನಿಮ್ಮ ಮೇಲಿನ ಪ್ರೀತಿಯೂ ಹೆಚ್ಚುವುದು. ಅವರು ಒಂದು ಒಳ್ಳೆಯ ಅಡುಗೆ ಮಾಡಿದಾಗ ಅಥವಾ ಚೆನ್ನಾಗಿ ಕಂಡಾಗ ಹೀಗೆ ನಿಮಗೆ ಯಾವುದಾದರೂ ವಿಷಯಕ್ಕೆ ಮೆಚ್ಚುಗೆಯಾದರೆ ಮನಸ್ಸಿನಲ್ಲಿಯೇ ಇಟ್ಟುಕೊಳ್ಳಬೇಡಿ, ಮನಸಾರೆ ಅವರನ್ನು ಹೊಗಳಿ, ಇದು ನಿಮ್ಮ ಸಂಬಂಧಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಲೈಂಗಿಕ ತೃಪ್ತಿ

ಲೈಂಗಿಕ ತೃಪ್ತಿ

ದಾಂಪತ್ಯದಲ್ಲಿ ಇದು ಬಹು ಮುಖ್ಯವಾದ ಅಂಶವಾಗಿದೆ. ಲೈಂಗಿಕ ತೃಪ್ತಿ ಇಲ್ಲದಿದ್ದರೆ ದಾಂಪತ್ಯದಲ್ಲಿ ಬೇರೆ-ಬೇರೆ ಸಮಸ್ಯೆಗಳು ಉಂಟಾಗುವುದು. ಆದರೆ ಸಂಗಾತಿ ಆಸೆ ಈಡೇರಿಸುವುದು ಕೂಡ ಮುಖ್ಯವಾಗಿರುತ್ತದೆ.

ಬೇರೆಯವರ ಜೊತೆ ಹೋಲಿಸುವ ಅಭ್ಯಾಸ ಬೇಡ

ಬೇರೆಯವರ ಜೊತೆ ಹೋಲಿಸುವ ಅಭ್ಯಾಸ ಬೇಡ

ದಾಂಪತ್ಯದಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ, ಗಂಡ ಹೆಂಡತಿಯನ್ನು ಗೌರವಿಸಬೇಕು, ಹೆಂಡತಿ ಪತಿಯನ್ನು ಗೌರವದಿಂದ ಕಾಣಬೇಕು, ಅಲ್ಲದೆ ಒಬ್ಬರಿಗೊಬ್ಬರು ತಮ್ಮ ಸಂಗಾತಿಯ ಇಚ್ಛೆಗೆ ಅನುಸಾರ ನಡೆದುಕೊಳ್ಳಲು ಪ್ರಯತ್ನಿಸಬೇಕು, ಆಗ ಆ ದಾಂಪತ್ಯ ಜೀವನ ತುಂಬಾ ಸುಂದರವಾಗಿರುತ್ತದೆ. ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಕ್ಕೆ ಇತರರ ಜೊತೆ ಹೋಲಿಸಬೇಡಿ. ಇದು ನಿಮ್ಮ ನೆಮ್ಮದಿ ಹಾಳು ಮಾಡುವುದು, ನಿಮ್ಮ ಬದುಕು ನಿಮ್ಮದು, ಅವರ ಬದುಕು ನಿಮ್ಮದು.

English summary

The Number one Thing That makes Relationship Successful: New Study

New study says the number one thing that makes relationship successful, Read on.
Story first published: Wednesday, November 25, 2020, 18:40 [IST]
X
Desktop Bottom Promotion