For Quick Alerts
ALLOW NOTIFICATIONS  
For Daily Alerts

ಮಲ ಮಗಳು ನೀಡಿರುವ ಸರ್ಪ್ರೈಸ್‌ಗೆ ಕಣ್ಣೀರಿಟ್ಟ ಮಲ ತಂದೆ: ವೈರಲ್‌ ಸ್ಟೋರಿ

|

ಹುಟ್ಟಿಸಿದ ಮಾತ್ರಕ್ಕೆ ಎಲ್ಲರೂ ತಂದೆ-ತಾಯಿಯಾಗಲು ಸಾಧ್ಯವಿಲ್ಲ, ಮಕ್ಕಳ ಮನಸ್ಸಿನಲ್ಲಿ ತಂದೆ-ತಾಯಿಯ ಮೇಲೆ ಪ್ರೀತಿ, ಗೌರವ ಇರಬೇಕೆಂದರೆ ಅವರು ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಎಂಬುವುದು ಮುಖ್ಯವಾಗಿರುತ್ತೆ. ಇನ್ನು ಮಲ ತಾಯಿ-ಮಲ ತಂದೆಯಾದರೆ ಮಕ್ಕಳ ಹಾಗೂ ಅವರ ಸಂಬಂಧ ಅಷ್ಟಕ್ಕಷ್ಟೆ ಇರುತ್ತೆ.

ಏಕೆಂದರೆ ಮಲ ತಂದೆ ಅಥವಾ ಮಲ ತಾಯಿ ತಮ್ಮ ಸಂಗಾತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ನೋಡಿಕೊಳ್ಳುವವರು ತುಂಬಾ ಕಡಿಮೆ, ಆದರೆ ಮಕ್ಕಳಂತೆಯೇ ಪ್ರೀತಿಸಿದರೆ ಅವರು ಕೂಡ ಪ್ರೀತಿ ತೋರುತ್ತಾರೆ ಎಂಬುವುದಕ್ಕೆ ಈ ಸಂಬಂಧ ಸಾಕ್ಷಿಯಾಗಿದೆ.

ಮಗಳ ಸರ್‌ಪ್ರೈಸ್‌ ನೋಡಿ ಕಣ್ಣೀರಿಟ್ಟ ಮಲ ತಂದೆ

ಮಗಳ ಸರ್‌ಪ್ರೈಸ್‌ ನೋಡಿ ಕಣ್ಣೀರಿಟ್ಟ ಮಲ ತಂದೆ

@Sophia_Kallie ಎಂಬವವರು ಟ್ವಿಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಫಾದರ್ಸ್ ಡೇಗೆ ತಂದೆ ಬಗ್ಗೆ ಕೆಲವೊಂದು ವಿಷಯವನ್ನು ಹೇಳಿ ಶೇರ್ ಮಾಡಿರುವ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಆಕೆ ಬರೆದ ಒಂದೊಂದು ಸಾಲುಗಳು ಮನ ಮುಟ್ಟುವಂತೆ ಇದೆ

ನಾನು ಮಿಡಲ್‌ ಸ್ಕೂಲ್‌ನಲ್ಲಿದ್ದಾಗ ನನ್ನ ಮಲ ತಂದೆ ನನ್ನಲ್ಲಿ ಸ್ಪೂರ್ತಿ ತುಂಬಲು ಪ್ರತಿದಿನ ಒಂದು ಚೀಟಿ ಇಟ್ಟು ಹೋಗುತ್ತಿದ್ದರು, 6 ವರ್ಷಗಳಿಂದ ಈ ಚೀಟಿಗಳೆನ್ನೆಲ್ಲಾ ಇಟ್ಟಿದ್ದೇನೆ, ಇಂದು ನಾನದನ್ನು ಅವರಿಗೆ ಮರಳಿಸಿದ್ದೇನೆ #HappyFathersDay ಎಂದು ಬರೆದಿರುವ ಸಾಲುಗಳು ಆಕೆಗೆ ತಂದೆ ಮೇಲಿರುವ ಪ್ರೀತಿಯನ್ನು ಹೇಳುತ್ತದೆ.

ಮಗಳು ನೀಡಿದ ಸರ್‌ಪ್ರೈಸ್‌ ನೋಡಿ ಕಣ್ಣೀರಿಟ್ಟ ತಂದೆ

ಮಗಳು ನೀಡಿದ ಸರ್‌ಪ್ರೈಸ್‌ ನೋಡಿ ಕಣ್ಣೀರಿಟ್ಟ ತಂದೆ

ನ್ಯೂಸ್‌ ಪೇಪರ್‌ನಲ್ಲಿ ಕವರ್‌ ಮಾಡಿದ ದೊಡ್ಡ ಫೋಟೋ ಫ್ರೇಮ್‌ ಒಂದನ್ನು ತಂದೆಗೆ ಕೊಡುತ್ತಾಳೆ, ತಂದೆ ಅದನ್ನು ಓಪನ್‌ ಮಾಡಿದಾಗ ಅದರ ಮಧ್ಯ ಭಾಗದಲ್ಲಿ ಅಪ್ಪ ಹಾಗೂ ಮಗಳ ಫೋಟೋ, (ಆ ಫೋಟೋದಲ್ಲಿ ಆತ ಮಗಳನ್ನು ಎತ್ತಿಕೊಂಡಿರುವುದನ್ನು ಕಾಣಬಹುದು) ಅದರ ಸುತ್ತ ತಂದೆ ತನಗೆ ಪ್ರತಿದಿನ ನೀಡುತ್ತಿದ್ದ ಚೀಟಿ ಅವುಗಳೆನ್ನೆಲ್ಲಾ ಜೋಡಿಸಿ ಫ್ರೇಮ್‌ ಮಾಡಲಾಗಿದೆ. ಈ ಫೋಟೋ ಫ್ರೇಮ್‌ ನೋಡುತ್ತಿದ್ದಂತೆ ತಂದೆ ಆನಂದ ಭಾಷ್ಪ ಸುರಿಸಿದ್ದಾರೆ.

ಸೋಫಿಯಾ ನೀಡಿರುವ ಸರ್‌ಫ್ರೈಸ್‌ ನೆಟ್ಟಿಗರ ಮನ ಗೆದ್ದಿದೆ

ಸೋಫಿಯಾ ನೀಡಿರುವ ಸರ್‌ಫ್ರೈಸ್‌ ನೆಟ್ಟಿಗರ ಮನ ಗೆದ್ದಿದೆ

ಮಗಳು ಅಪ್ಪನಿಗೆ ನೀಡಿರುವ ಸರ್‌ಪ್ರೈಸ್‌ ನೋಡಿದ ನೆಟ್ಟಿಗರು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಮಲ ತಂದೆಗೆ ಈ ರೀತಿ ಪ್ರೀತಿ ತೋರುವುದು ಕಡಿಮೆ, ನಿಮ್ಮಿಬ್ಬರ ಬಾಂಧವ್ಯ ನೋಡುವಾಗ ಖುಷಿಯಾಗುತ್ತಿದೆ ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ನನ್ನ ಜಗತ್ತನ್ನು ಬದಲಾಯಿಸಿದ ಅಪ್ಪ

ನನ್ನ ಜಗತ್ತನ್ನು ಬದಲಾಯಿಸಿದ ಅಪ್ಪ

ತನ್ನ ಮಲ ತಂದೆ ಬಗ್ಗೆ ಮತ್ತೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ನನ್ನ ಬದುಕಿನಲ್ಲಿ ಬಂದು 10 ವರ್ಷಗಳಾಯ್ತು. ಅವರು ತುಂಬಾ ಸಪೋರ್ಟಿವ್‌ , ನನ್ನ ಕೆಟ್ಟ ದಿನಗಳಲ್ಲೂ ನನ್ನನ್ನು ನಗಿಸಲು ಪ್ರಯತ್ನಸುತ್ತಾರೆ, ಅವರಿಂದಾಗಿ ನನ್ನ ಜಗತ್ತು ಬದಲಾಗಿದೆ, ನಾನು ಅವರಿಗೆ ತುಂಬಾ ಅಬಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ರಕ್ತ ಸಂಬಂಧದಿಂದ ಮಾತ್ರ ಕುಟುಂಬವಾಗಲ್ಲ, ಪ್ರೀತಿಯೂ ಇರಬೇಕು

ರಕ್ತ ಸಂಬಂಧದಿಂದ ಮಾತ್ರ ಕುಟುಂಬವಾಗಲ್ಲ, ಪ್ರೀತಿಯೂ ಇರಬೇಕು

ಹೌದು ಬರೀ ರಕ್ತ ಸಂಬಂಧದಿಂದ ಕುಟುಂಬವಾಗಲ್ಲ, ಅಲ್ಲಿ ಪ್ರೀತಿ ಕೂಡ ಮುಖ್ಯವಾಗುತ್ತೆ. ಮಕ್ಕಳು ದೊಡ್ಡವರು ಆದ ಮೇಲೆ ಪ್ರೀತಿ ಹಾಗೂ ಗೌರವದಿಂದ ಕಾಣಬೇಕೆಂದರೆ ಅವರನ್ನು ಅಷ್ಟೇ ಪ್ರೀತಿ - ವಿಶ್ವಾಸದಿಂದಲೂ ನೋಡಿಕೊಳ್ಳಬೇಕು. ಮಲ ತಾಯಿ ಅಥವಾ ಮಲ ತಂದೆ ನಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೇ ಮಕ್ಕಳ ಪ್ರತಿಕ್ರಿಯೆ ಇರುತ್ತೆ ಅಲ್ವಾ?

English summary

Teenager Brings Stepdad To Tears With Surprise He Never Expected, viral Story

On Fathers day teenager brings stepdad to tears with surprise he never expected, here story goes viral read on...
Story first published: Tuesday, July 12, 2022, 15:37 [IST]
X
Desktop Bottom Promotion