For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಭೀತಿ: ಯಾವ ರೀತಿಯ ಸೆಕ್ಸ್ ಸುರಕ್ಷಿತ, ಯಾವುದು ಸುರಕ್ಷಿತವಲ್ಲ, ಪರಿಣಿತ ಅಭಿಪ್ರಾಯವೇನು?

|

ಕೊರೊನಾವೈರಸ್‌ ತಡೆಗಟ್ಟಲು ಈ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕಾಂಡೋಮ್‌ಗಳ ಹಾಗೂ ಸೆಕ್ಸ್‌ ಆಟಿಕೆಗಳ ಬೇಡಿಕೆ ಹೆಚ್ಚಿದೆ. ಕಾಂಡೋಮ್‌ಗಳ ಬೇಡಿಕೆ ಈ ಹಿಂದಿಗಿಂತಲೂ ದುಪ್ಪಟ್ಟು ಆಗಿದೆ ಎಂದು ಮಲೇಷ್ಯಾ ಮೂಲದ ಕಾಂಡೋಮ್ ತಯಾರಿಕಾ ಕಂಪನಿ Karex Bhd ಹೇಳಿದೆ.

ಕೋವಿಡ್‌ 19 ಇರುವ ಈ ಸಮಯದಲ್ಲಿ ಸಂಭೋಗ ನಡೆಸಬಹುದೇ? ಇದು ಸುರಕ್ಷಿತವೇ? ಎಂದು ಸೆಕ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳೂ ಜನರ ಮನಸ್ಸಿನಲ್ಲಿವೆ.

ಮೊದಲಿಗೆ ನೋವೆಲ್ ಕೊರೊನಾವೈರಸ್ ಎನ್ನುವುದು ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ ಅಂದರೆ ಸೋಂಕಿತ ವ್ಯಕ್ತಿ 6 ಅಡಿಯೊಳಗಿನ ಅಂತರದಲ್ಲಿ ನಿಂತು ಮಾತನಾಡಿದರೂ ಸೋಂಕು ತಗುಲುವುದು. ಇನ್ನು ಸೋಂಕಿತ ವ್ಯಕ್ತಿ ಕೆಮ್ಮಿದಾದ, ಸೀನಿದಾಗ ಆ ಮೂಲಕ ರೋಗಾಣುಗಳು ಹರಡುವುದು, ಆ ವ್ಯಕ್ತಿ ಮಾತನಾಡಿದಾಗಲೂ ಹರಡುತ್ತದೆ ಎಂದು ಅಧ್ಯಯನಗಳು ಹಾಗೂ ಸಿಡಿಸಿ(Centers for disease control and prevention)ಹೇಳಿವೆ.

ಆದ್ದರಿಂದ ಸಂಭೋಗದಿಂದಲೂ ಕೊರೊನಾವೈರಸ್ ಹರಡುವುದು. ಆದ್ದರಿಂದ ಸಾಂಕ್ರಾಮಿಕ ಪಿಡುಗು ಆಗಿರುವ ಕೊರೊನಾವೈರಸ್ ತಡೆಗಟ್ಟಲು ಲೈಂಗಿಕ ಕ್ರಿಯೆಯಲ್ಲಿ ಸುರಕ್ಷಾಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

ದಿ ನ್ಯೂಯಾರ್ಕ್‌ ಸಿಟಿ ಆರೋಗ್ಯ ಇಲಾಖೆ ಕೊರೊನಾವೈರಸ್ ಇರುವ ಸಮಯದಲ್ಲಿ ಲೈಂಗಿಕ ಜೀವನದ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಿದೆ.

ನೀವು ಸಿಂಗಲ್ ಆಗಿದ್ದು, ಡೇಟಿಂಗ್‌ನಲ್ಲಿದ್ದರೆ

ನೀವು ಸಿಂಗಲ್ ಆಗಿದ್ದು, ಡೇಟಿಂಗ್‌ನಲ್ಲಿದ್ದರೆ

ಈ ಸಮಯದಲ್ಲಿ ಯಾವುದೇ ಡೇಟಿಂಗ್ ಅಂತ ಹೋಗುವುದು ಸುರಕ್ಷಿತವಲ್ಲ. ಈ ಸಂದರ್ಭದಲ್ಲಿ ಲೈಂಗಿಕ ತೃಪ್ತಿಗಾಗಿ ಹಸ್ತಮೈಥುನ ಮಾಡುವುದು ಒಳ್ಳೆಯದೆಂದು ದಿ ನ್ಯೂಯಾರ್ಕ್ ಸಿಟಿ ಗೈಡ್‌ಲೈನ್ ಹೇಳಿದೆ. ಕೈಗಳನ್ನು ಸೋಪ್ ಹಾಕಿ ತೊಳೆಯುವುದು ಹಾಗೂ ಸೆಕ್ಸ್ ಆಟಿಕೆಯನ್ನು 209 ನಿಮಿಷ ಸೋಪ್‌ನಿಂದ ತೊಳೆದು ನಂತರ ಬಳಸುವುದು ಒಳ್ಳೆಯದೆಂದು ಅದು ಹೇಳಿದೆ.

ಡೇಟಿಂಗ್‌ನಲ್ಲಿದ್ದು ಜೊತೆಯಲ್ಲಿ ಇಲ್ಲದಿದ್ದರೆ

ಡೇಟಿಂಗ್‌ನಲ್ಲಿದ್ದು ಜೊತೆಯಲ್ಲಿ ಇಲ್ಲದಿದ್ದರೆ

ಕ್ವಾರೆಂಟೈನ್‌ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮ ಜೊತೆ ಇಲ್ಲದಿದ್ದರೆ ಆಗ ಅವರನ್ನು ಬೇಟಿ ಮಾಡಿ ಸೆಕ್ಸ್ ಮಾಡುವುದು ಸುರಕ್ಷಿತವಲ್ಲ. ಇಂಥವರು ಈ ಕ್ವಾರೆಂಟೈನ್ ಹಾಗೂ ಲಾಕ್‌ಡೌನ್ ಅವಧಿಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ವೀಡಿಯೋ ಕಾಲ್ ಮಾಡಿ ಸೆಕ್ಸ್ ಚಾಟ್‌ ಮಾಡುವುದಾದರೂ ನಂಬಿಕೆ ಅರ್ಹ ಸಂಗಾತಿಯೊಂದಿಗೆ ಮಾಡಬೇಕು, ಇಲ್ಲಾಂದರೆ ಮುಂದೆ ನಿಮ್ಮ ನಗ್ನ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವ ಸಾಧ್ಯತೆ ಇದೆ, ಎಚ್ಚರ.

ನಿಮ್ಮ ಸಂಗಾತಿಯೊಂದಿಗೆ ವಾಸಿಸುತ್ತಿದ್ದರೆ

ನಿಮ್ಮ ಸಂಗಾತಿಯೊಂದಿಗೆ ವಾಸಿಸುತ್ತಿದ್ದರೆ

ಕೋವಿಡ್‌ 19 ಲಕ್ಷಣಗಳಿರುವವರು ಹಾಗೂ ಶಂಕಿತರು ಸಂಗಾತಿಯೊಂದಿಗೆ ಲೈಂಗಿಕ ಕ್ರೊಯೆ ನಡೆಸಬಾರದು ಹಾಗೂ ಪ್ರತ್ಯೇಕವಾಗಿ ದಿಗ್ಬಂಧನದಲ್ಲಿ ಇರಬೇಕು. ಇದರಿಂದ ಅವರಿಗೆ ಕೋವಿಡ್ 19 ಹರಡುವ ಅಪಾಯ ತಡೆಗಟ್ಟಬಹುದು.

ಇನ್ನು ನೀವು ಅಥವಾ ನಿಮ್ಮ ಸಂಗಾತಿ ಮಧುಮೇಹಿಗಳಾಗಿದ್ದರೆ ದೈಹಿಕವಾಗಿ ಒಂದಾಗುವುದನ್ನು ಸ್ವಲ್ಪ ಸಮಯ ಮುಂದೂಡುವುದೇ ಒಳ್ಳೆಯದು ಎಂದು ದಿ ನ್ಯೂಯಾರ್ಕ್ ಸಿಟಿ ಆರೋಗ್ಯ ಇಲಾಖೆ ಹೇಳಿದೆ.

ಆರೋಗ್ಯವಂತರಾಗಿದ್ದರೆ

ಆರೋಗ್ಯವಂತರಾಗಿದ್ದರೆ

ನಿಮಗೂ-ನಿಮ್ಮ ಸಂಗಾತಿ ನಡುವೆ ಯಾವುದೇ ಕೋವಿಡ್‌ 19 ಲಕ್ಷಣಗಳು ಇಲ್ಲದಿದ್ದರೆ, ಇಬ್ಬರು ಆರೋಗ್ಯವಾಗಿದ್ದರೆ, ಎಲ್ಲಿಯೂ ಹೊರಗಡೆ ಹೋಗದೆ ಮನೆಯಲ್ಲಿಯೇ ಇದ್ದರೆ ಲೈಂಗಿಕ ಸುಖ ಪಡೆಯಬಹುದು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರತಜ್ಞರಾದ ಡಾ. ಮಾರ್ಕ್‌(UCLA's David Geffen School of Medicine,)ಸಮೀಕ್ಷೆ ಮಾಡಿ ಹೇಳಿದ್ದಾರೆ.

ಮಗುವಿನ ಪ್ಲ್ಯಾನಿಂಗ್ ಮಾಡುತ್ತಿದ್ದರೆ

ಮಗುವಿನ ಪ್ಲ್ಯಾನಿಂಗ್ ಮಾಡುತ್ತಿದ್ದರೆ

ಮಗುವಿಗಾಗಿ ಪ್ಲ್ಯಾನಿಂಗ್ ಮಾಡುತ್ತಿದ್ದರೆ ಅಂಥ ದಂಪತಿ ಪ್ರಯತ್ನಈ ಸಂದರ್ಭದಲ್ಲಿ ಪ್ರಯತ್ನ ಮಾಡಬಹುದೇ ಎಂಬ ಗೊಂದಲ ಹಲವರಲ್ಲಿದೆ. ಡಾ, ಸಮೀಕ್ಷೆ ಹೇಳುವ ಪ್ರಕಾರ ಸೋಂಕು ತಾಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ಹರಡುವ ಸಾಧ್ಯತೆ ಇದೆ. (ಇದರ ಬಗ್ಗೆ ಇನ್ನೂ ಹೆಚ್ಚಿನ ಸಮೀಕ್ಷೆ ನಡೆಯಬೇಕಾಗಿದೆ).

ಈ ಸಂದರ್ಭದಲ್ಲಿ ಮಗುವಿಗಾಗಿ ಪ್ರಯತ್ನಿಸುವವರು ಕೈಗಳನ್ನು ಚೆನ್ನಾಗಿ ತೊಳೆಯಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಬೇಕು, ಪತಿ-ಪತ್ನಿ ಆರೋಗ್ಯವಾಗಿರಬೇಕು ಎಂದು ಡಾ. ಸಮೀಕ್ಷೆ ಹೇಳಿದೆ. ಕೊರೊನಾವೈರಸ್‌ ಹರಡುತ್ತಿರುವಾಗ ಮಗುವಿಗಾಗಿ ಪ್ಲ್ಯಾನೀಂಗ್ ಮಾಡುತ್ತಿದ್ದರೆ ಈ ಸಮಸ್ಯೆ ಕಡಿಮೆಯಾಗುವವರೆಗೆ ಮುಂದೂಡುವುದು ಒಳ್ಳೆಯದು ಎಂದು ಸ್ತ್ರೀ ತಜ್ಞ ವೈದ್ಯರು ಸಲಹೆ ಕೂಡ ನೀಡುತ್ತಿದ್ದಾರೆ.

English summary

Sex During the Coronavirus: What Experts Says About Sex Life

The idea of having a “sex buddy”, where you and they only have sex with each other during the pandemic, is not recommended, wrote ob-gyn Jen Gunter in The New York Times.
Story first published: Monday, April 6, 2020, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X