For Quick Alerts
ALLOW NOTIFICATIONS  
For Daily Alerts

ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆಯಾಗಬಹುದೇ?

|

ಹಿಂದೂ ಧರ್ಮದಲ್ಲಿ ಮದುವೆಯಾಗುವಾಗ ಜಾತಕ, ಕುಂಟಲಿ, ನಕ್ಷತ್ರ, ಗಣ ಇವೆಲ್ಲಾ ಹೊಂದಿಕೆಯಾಗುತ್ತದೆಯೇ ಎಂದು ನೋಡುತ್ತಾರೆ. ಮದುವೆಯಾದ ಬಳಿಕ ಗಂಡ-ಹೆಂಡತಿ ನಡುವೆ ಸಾಮರಸ್ಯ ಇರಬೇಕು, ಸುಖವಾಗಿ ಸಮಸಾರ ನಡೆಸಬೇಕೆಂದರೆ ಇವೆಲ್ಲಾ ಸರಿ ಹೊಂದಬೇಕೆಂಬ ನಮ್ಮಲ್ಲಿ ಇದೆ.

ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆಯಾಗಬಹುದೇ? | Boldsky Kannada
 Same Nakshtra Boy and Girl Can Get Married?


ಕೆಲವು ಮದುವೆಗಳಾಗಿ ಸ್ವಲ್ಪ ದಿನದಲ್ಲಿ ಆ ಕುಟುಂಬದಲ್ಲಿ ತೊಂದರೆ ಕಾಣಿಸಿದರೆ ಜಾತಕ ದೋಷ ಇತ್ತೆಂದೋ, ಇಲ್ಲಾ ಲವ್‌ ಮ್ಯಾರೇಜ್‌ ಆದವರ ಬದುಕಿನಲ್ಲಿ ಏನಾದರೂ ತೊಂದರೆಯಾಗ ಜಾತಕ, ನಕ್ಷತ್ರ ಎಲ್ಲಾ ನೋಡದೆ ಮದುವೆಯಾಗಿದ್ದಕ್ಕೆ ಹಾಗಾಯಿತು ಎಂದೆಲ್ಲಾ ಹೇಳುತ್ತಾರೆ.

ಏನೂ ನೋಡದೆ ಮದುವೆಯಾಗಿ ಚೆನ್ನಾಗಿರುವ ಎಷ್ಟೋ ಜೋಡಿಗಳಿವೆ, ಅದೇ ರೀತಿ ಎಲ್ಲಾ ಹೊಂದಾಣಿಕೆಯಾಗಿಯೂ ಮುರಿದು ಹೋದ ಮದುವೆಗಳೂ ಎಷ್ಟೋ ಇವೆ, ಆದರೆ ಎಲ್ಲವೂ ಒಂದು ನಂಬಿಕೆ. ನಾವು ಆ ವಿಚಾರ ಇನ್ನೊಮ್ಮೆ ಮಾತನಾಡೋಣ, ಇಲ್ಲಿ ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆಯಾಗಬಹುದೇ? ಎಂದು ತಿಳಿಯೋಣ:

ಯಾವ ನಕ್ಷತ್ರದವರು ಒಂದೇ ಆಗಿದ್ದರೆ ಶುಭ

ಯಾವ ನಕ್ಷತ್ರದವರು ಒಂದೇ ಆಗಿದ್ದರೆ ಶುಭ

ರೋಹಿಣಿ, ಆರಿದ್ರಾ, ಪುಷ್ಯಾ, ಮಖಾ, ವಿಶಾಖಾ, ಶ್ರವಣ, ಉತ್ತರಾಭಾದ್ರ ಹಾಗೂ ರೇವತಿ ನಕ್ಷತ್ರಗಳ ಪೈಕಿ ಮದುವೆ ಆಗುವ ಹುಡುಗ ಹಾಗೂ ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಅವರು ಮದುವೆಯಾಗಲು ಯಾವುದೇ ಅಡ್ಡಿಯಿಲ್ಲ.

ಈ ನಕ್ಷತ್ರದವರೂ ಆಗಬಹುದು

ಈ ನಕ್ಷತ್ರದವರೂ ಆಗಬಹುದು

ಅಶ್ವಿನಿ, ಕೃತ್ತಿಕಾ, ಮೃಗಶಿರಾ, ಪುನರ್ವಸು, ಚಿತ್ತಾ, ಅನೂರಾಧಾ ಹಾಗೂ ಪುರ್ವಾಭಾದ್ರಾ ನಕ್ಷತ್ರದವರು ಒಂದಾದರೆ ಅದು ಮಧ್ಯಮ, ಅಂದರೆ ಈ ನಕ್ಷತ್ರದವರು ಮದುವೆಯಾಗಲು ಯಾವುದೇ ತೊಂದರೆಯಿಲ್ಲ.

 ಯಾವ ನಕ್ಷತ್ರದವರು ಆಗಬಾರದು?

ಯಾವ ನಕ್ಷತ್ರದವರು ಆಗಬಾರದು?

ಉಳಿದ ನಕ್ಷತ್ರಗಳ ಪೈಕಿ ಯಾವುದಾದರೂ ಒಂದಾಗಿ, ಹುಡುಗ- ಹುಡುಗಿಯದು ಇಬ್ಬರದೂ ಒಂದೇ ನಕ್ಷತ್ರವಾದರೆ ಅವರಿಬ್ಬರ ಮದುವೆ ನಡೆದರೆ ಅದರಿಂದ ತೊಂದರೆ ಉಂಟಾಗುವುದು

ನಕ್ಷತ್ರ ಒಂದೇ ಪಾದ ಬೇರೆಯಾದರೆ ಆಗಬಹುದೇ?

ನಕ್ಷತ್ರ ಒಂದೇ ಪಾದ ಬೇರೆಯಾದರೆ ಆಗಬಹುದೇ?

ವಧು- ವರರ ನಕ್ಷತ್ರವು ಒಂದೇ ಆಗಿ, ಪಾದವು ಬೇರೆ ಬೇರೆಯಾಗಿ, ಹುಡುಗನ ನಕ್ಷತ್ರದ ಪಾದವು ಹುಡುಗಿಯದ್ದಕ್ಕಿಂತ ಮುಂದಿನದ್ದಾಗಿದ್ದರೆ, ಉದಾಹರಣೆಗೆ ಹುಡುಗನದು ಕೃತಿಕಾ ನಕ್ಷತ್ರ ಎರಡನೇ ಪಾದ, ಹುಡುಗಿಯದು ಕೃತಿಕಾ ನಕ್ಷತ್ರ ಮೂರನೇ ಪಾದ ಆಗಿದ್ದರೆ ಅಂಥವರು ಮದುವೆಯಾಗಬಹುದು.

ಈ ನಕ್ಷತ್ರದಲ್ಲಿ ಹುಡುಗಿಯ ಪಾದ ಮುಂದಿದ್ದರೆ ಮದುವೆಯಾಗಬಹುದು

ಈ ನಕ್ಷತ್ರದಲ್ಲಿ ಹುಡುಗಿಯ ಪಾದ ಮುಂದಿದ್ದರೆ ಮದುವೆಯಾಗಬಹುದು

ಏಕನಕ್ಷತ್ರ ಮದುವೆ ವಿಚಾರ ರೋಹಿಣಿ, ಮೃಗಶಿರಾ, ಆರಿದ್ರಾ, ಪುಷ್ಯಾ, ಮಖಾ, ಅಶ್ವಿನಿ, ಕೃತ್ತಿಕಾ, ಹಸ್ತಾ, ಸ್ವಾತಿ, ವಿಶಾಖಾ, ಪೂರ್ವಾಷಾಢ, ಶತಭಿಷಾ ಈ ಪೈಕಿ ಯಾವುದಾದರೂ ಒಂದು ಹುಡುಗಿಯ ನಕ್ಷತ್ರವಾಗಿದ್ದು, ಅದೇ ನಕ್ಷತ್ರವು ಹುಡುಗನದೂ ಆಗಿ, ಪಾದದ ವಿಚಾರದಲ್ಲಿ ಹುಡುಗಿಯ ನಕ್ಷತ್ರ ಪಾದವು ಮುಂದಿನದಾದರೆ ವಿವಾಹ ಶುಭ. ಉದಾಹರಣೆ: ಹುಡುಗಿಯದು ರೋಹಿಣಿ ನಕ್ಷತ್ರ ಎರಡನೇ ಪಾದ, ಹುಡುಗನದು ರೋಹಿಣಿ ನಕ್ಷತ್ರ ಮೂರನೇ ಪಾದ.

English summary

Same Nakshtra Boy and Girl Can Get Married?

In Hindu marriage looks so many things to do maarriage, here if boy and girl has same nakshtra who can do marriage?
Story first published: Saturday, June 27, 2020, 16:30 [IST]
X
Desktop Bottom Promotion