For Quick Alerts
ALLOW NOTIFICATIONS  
For Daily Alerts

ಬಾಳ ಸಂಗಾತಿ ಜೊತೆ ಮಾಜಿ ಪ್ರೇಮಿ ಕುರಿತು ಹೆಚ್ಚಾಗಿ ಹೇಳಬಾರದು, ಏಕೆ?

By ಶ್ರೀರಕ್ಷಾ
|

ಪ್ರೀತಿ ಎನ್ನುವುದು ಒಂದು ವಿಶೇಷವಾದ ಭಾವನೆ. ಈ ಭಾವನೆಯು ಒಬ್ಬ ವ್ಯಕ್ತಿಯ ಮೇಲೆ ಹೆಚ್ಚಿನ ಕಾಳಜಿ ಹಾಗೂ ಪ್ರೀತಿಯನ್ನು ತೋರುವಂತೆ ಮಾಡುವುದು. ಸಂಬಂಧದಲ್ಲಿ ಪ್ರೀತಿ ತೋರುವುದರ ಮೂಲಕ ಸುಲಭವಾಗಿ ಪ್ರೀತಿಯನ್ನು ಗಟ್ಟಿಗೊಳಿಸಬಹುದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇಂತಹ ಪ್ರೀತಿಯಲ್ಲೂ ಕೆಲವೊಮ್ಮೆ ಬಿರುಕುಗಳು ಮೂಡಿ ಪರಸ್ಪರ ದೂರವಾಗಿರುತ್ತಾರೆ. ದೂರವಾದ ಬಳಿಕ ಎಲ್ಲವೂ ಮುಗಿದು ಹೋಗುತ್ತದೆ ಎಂದರ್ಥವಲ್ಲ.

Life After Breakup

ಯಾಕಂದ್ರೆ ಹಲವಾರು ಸಮಯಗಳ ಕಾಲ ಜೊತೆಯಾಗಿ ಇದ್ದು, ಒಬ್ಬರಿಗೊಬ್ಬರಂತೆ ಬದುಕುತ್ತಿರುತ್ತಾರೆ. ಹಾಗಂತ ಬಿಟ್ಟುಹೋದ ಬಳಿಕ ಜೀವನವೇ ಮುಗಿದುಹೋಯಿತು ಎನ್ನಲು ಆಗುವುದಿಲ್ಲ. ನಾಳೆ ಮತ್ತೊಬ್ಬರು ನಮ್ಮ ಜೀವನಕ್ಕೆ ಕಾಲಿಡಬಹುದು. ಆಗ ಹಳೆಯದನ್ನು ಮರೆತು ಹೊಸ ಲೈಫ್ ಶುರು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಅಂದ್ರೆ ನಿಮ್ಮ ಜೀವನಕ್ಕೆ ಹೊಸಬರು ಎಂಟ್ರಿಯಾದಾಗ ಹಳೇ ಸಂಬಂಧ ಅಥವಾ ಮಾಜಿ ಪ್ರೇಮಿಯ ಕುರಿತು ಅತೀಯಾಗಿ ಮಾತನಾಡಿ ಸಂಬಂಧ ಹಾಳುಮಾಡಿಕೊಳ್ಳಬಾರದು.

ನಿಮ್ಮ ಹೊಸ ಸಂಬಂಧದ ಆರಂಭಿಕ ಹಂತದಲ್ಲಿ ನಿಮ್ಮ ಮಾಜಿಪ್ರೇಮಿ ಬಗ್ಗೆ ಮಾತನಾಡುವುದು ಇಬ್ಬರ ನಡುವೆ ಹೋಲಿಕೆಗಳು, ಅನುಮಾನಗಳು, ನಾಟಕ ಅಥವಾ ಅಭದ್ರತೆಗಳಿಗೆ ಕಾರಣವಾಗಬಹುದು. ಹೊಸ ಸಂಬಂಧದ ಆರಂಭಿಕ ಹಂತದಲ್ಲಿ ಇವುಗಳನ್ನು ವಿವರವಾಗಿ ಹೇಳುವ ಅಗತ್ಯವಿಲ್ಲ. ನಿಮ್ಮ ಹೊಸ ಸಂಗಾತಿಯೊಂದಿಗೆ ನಿಮ್ಮ ಮಾಜಿ ವ್ಯಕ್ತಿಯನ್ನು ಎಂದಿಗೂ ಮಧ್ಯೆ ತರಬಾರದು. ಯಾಕಂದ್ರೆ ಕಾರಣಗಳು ಹೀಗಿವೆ.

1. ಇದು ಕೆಟ್ಟ ಸಂಭಾಷಣೆಗೆ ದಾರಿ ಮಾಡಿಕೊಡುತ್ತದೆ.

1. ಇದು ಕೆಟ್ಟ ಸಂಭಾಷಣೆಗೆ ದಾರಿ ಮಾಡಿಕೊಡುತ್ತದೆ.

ನಿಮ್ಮ ಗೆಳತಿಯ ಜೊತೆಗೆ ಸಂಭಾಷಣೆಯನ್ನು ಆರಂಭಿಸಲು ನಿಮ್ಮ ಮಾಜಿ ಗೆಳತಿ ಇದ್ದುದರ ಬಗ್ಗೆ ಕ್ಷಮೆಯಾಚಿಸಿ ಮಾತು ಶುರು ಮಾಡುವುದು ಮೂರ್ಖತನದ ಕೆಲಸ. ಯಾಕಂದ್ರೆ ಇದು ನಿಮ್ಮಿಬ್ಬರನ್ನು ಕೆಟ್ಟ ಸಂಭಾಷಣೆಗೆ ದಾರಿ ಮಾಡಿಕೊಡುತ್ತದೆ. ಬ್ರೇಕ್‌ಅಪ್‌ಗೆ ರೀಸನ್ ಏನು? ಯಾರದು ತಪ್ಪು? ಯಾರು ಸರಿ? ಇಂತಹ ಹಲವಾರು ಪ್ರಶ್ನೆಗಳು ನಿಮ್ಮ ಗೆಳೆಯ ಅಥವಾ ಗೆಳತಿಯ ಮನಸ್ಸಲ್ಲಿ ಮೂಡುತ್ತದೆ. ನಿಮ್ಮ ಪ್ರೇಮಿಯ ಜೊತೆ ಮಾತನಾಡಲೂ ಬೇಕಾದಷ್ಟು ವಿಚಾರಗಳಿರುತ್ತವೆ. ಈ ಸಮಯವನ್ನು ಪರಸ್ಪರ ಆಸಕ್ತಿ ತಿಳಿದುಕೊಳ್ಳಲು ವಿನಿಯೋಗಿಸಿ. ಅದು ಬಿಟ್ಟು, ಮಾಜಿ ಪ್ರೇಮಿ ಕುರಿತು ಮಾತನಾಡಿದರೆ ನಿಮ್ಮ ಗೆಳೆಯ-ಗೆಳತಿಗೆ ಇರುಸುಮುರುಸಾಗಬಹುದು. ಸಂಭಾಷಣೆ ನಿಮ್ಮಿಬ್ಬರ ಸುತ್ತ ಇರಲು ಪರಸ್ಪರರ ಇಷ್ಟ-ಕಷ್ಟಗಳ ಕುರಿತು ಚರ್ಚೆ ಮಾಡಬೇಕೇ ಹೊರತು ಮಾಜಿ ಪ್ರೇಮಿಯ ಕುರಿತಲ್ಲ.

2 ಇದು ಹೋಲಿಕೆಗಳಿಗೆ ಕಾರಣವಾಗುತ್ತದೆ

2 ಇದು ಹೋಲಿಕೆಗಳಿಗೆ ಕಾರಣವಾಗುತ್ತದೆ

ನೀವು ನಿಮ್ಮ ಮಾಜಿ ಗೆಳತಿಯ ಬಗ್ಗೆ ಪದೇ ಪದೇ ಮಾತನಾಡುವುದು ಹಾಗೂ ನೀವು ಕಳೆದ ಖುಷಿ ದಿನಗಳನ್ನು ನಿಮ್ಮ ಈಗಿನ ಗೆಳತಿಯೊಂದಿಗೆ ಹಂಚಿಕೊಳ್ಳುವುದರಿAದ ಇಬ್ಬರ ನಡುವೆ ಹೋಲಿಕೆ ಶುರುವಾಗುತ್ತದೆ. ನಿಮ್ಮ ಗಮನ ಮಾಜಿ ಗೆಳತಿಯ ಕಡೆ ಹೋಗುತ್ತಿದ್ದರೆ ಈಗಿನ ಗೆಳತಿ ಹೋಲಿಕೆ ಮಾಡಲು ಆರಂಭಿಸುತ್ತಾರೆ. ನಿಮ್ಮೊಂದಿಗೆ ಉತ್ತಮ ಸಂಬAಧ ಬೆಳೆಸಲು ಬಯಸುತ್ತಿರುವ ಹುಡುಗಿಯ ಎದುರು ನಿಮ್ಮ ಹಳೆಯ ಗೆಳತಿಯ ಕುರಿತು ದನಿಯೆತ್ತಿದರೆ ನಿಮ್ಮ ಅನುಮಾನಗಳಿಗೂ ಕಾರಣವಾಗಬಹುದು. ನೀವು ಹಳೆಯ ಗೆಳತಿ ಬಗ್ಗೆಯೇ ಮಾತನಾಡುತ್ತಿದ್ದರೆ ನನ್ನಿಂದ ಸಂತೋಷವಾಗಿಲ್ಲವೇ ಎಂಬ ಸಂಶಯವೂ ಮೂಡಬಹುದು. ನಿಮ್ಮ ಈಗಿನ ಗೆಳತಿ ಮಾಜಿ ಗೆಳತಿಯೊಂದಿಗೆ ಹೋಲಿಕೆ ಮಾಡಲು ಆರಭಿಸುತ್ತಾರೆ. ಇದು ನಿಮ್ಮ ಸಂಬಂಧದಲ್ಲೂ ಬಿರುಕು ಮೂಡಲು ಕಾರಣವಾಗಬಹುದು.

3. ನೀವು ಇನ್ನೂ ಹಳೇ ವಿಚಾರವನ್ನು ಬಿಡಲಲ್ಲ ಎಂದು ಅವರು ಭಾವಿಸುತ್ತಾರೆ

3. ನೀವು ಇನ್ನೂ ಹಳೇ ವಿಚಾರವನ್ನು ಬಿಡಲಲ್ಲ ಎಂದು ಅವರು ಭಾವಿಸುತ್ತಾರೆ

ನಿಮ್ಮ ಮಾಜಿ ಪ್ರೇಮದ ಕುರಿತು ಮಾತನಾಡುತ್ತಿದ್ದರೆ ನೀವು ಆ ನೆನಪುಗಳಿಂದ ಇನ್ನೂ ಹೊರ ಬಂದಿಲ್ಲ ಎಂದು ನಿಮ್ಮ ಪ್ರಸ್ತುತ ಸಂಗಾತಿ ಆಲೋಚನೆ ಮಾಡಲು ಪ್ರಾರಂಭಿಸುತ್ತಾರೆ. ನಿಮಗೆ ಹಳೆ ಸಂಬಂಧದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇನ್ನೂ ಅದೇ ನೆನಪುಗಳೊಂದಿಗೆ ಜೀವಿಸುತ್ತಿದ್ದಾರೆ. ನನ್ನೊಂದಿಗೆ ಬೆರೆಯಲು ಅಸಾಧ್ಯವಾಗುತ್ತಿದೆ ಎಂದು ಆಲೋಚಿಸಿಲು ಪ್ರಾರಂಭಿಸುತ್ತಾರೆ. ಯಾವುದೇ ವ್ಯಕ್ತಿಯಾಗಲೀ ಒಂದು ಬಾರಿ ನಿಮ್ಮ ಜೊತೆ ಸಂಬAಧದಲ್ಲಿ ಇರಲು ಇಚ್ಛೀಸಿದರೆ, ಕೇವಲ ಅವರ ಬಗ್ಗೆ ಮಾತ್ರ ಯೋಚಿಸಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ, ಈ ಸಂದರ್ಭದಲ್ಲಿ ನೀವು ನಿಮ್ಮ ಮಾಜಿ ಸಂಬAಧದ ಕುರಿತು ಮಾತಾಡಿದ್ರೆ ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುವ ಸಂಭವವಿದೆ.

4. ಇದು ಸಂಬಂಧದಲ್ಲಿ ಪ್ರಮುಖ ತಿರುವಿಗೆ ಕಾರಣವಾಗಬಹುದು.

4. ಇದು ಸಂಬಂಧದಲ್ಲಿ ಪ್ರಮುಖ ತಿರುವಿಗೆ ಕಾರಣವಾಗಬಹುದು.

ಹೊಸ ಸಂಗಾತಿಯ ಮೊದಲ ಭೇಟಿಯಲ್ಲಿ ಅಥವಾ ಈಗಷ್ಟೇ ಸಂಬಂಧ ಗಟ್ಟಿಯಾಗುತ್ತಿರುವ ಹಂತದಲ್ಲಿ ನಿಮ್ಮ ಮಾಜಿ ಪ್ರೇಯಸಿಯ ಕುರಿತ ಮಾತು ನಿಮ್ಮ ಪ್ರೀತಿ ಜೀವನದಲ್ಲಿ ಪ್ರಮುಖ ತಿರುವಿಗೆ ಕಾರಣವಾಗಬಹದು. ಮೊದಲ ಭೇಟಿಯಲ್ಲಿಯೇ ಹಳೇ ಸಂಬಂಧದ ಎಲ್ಲಾ ವಿಚಾರವನ್ನೂ ಹೇಳಿಬಿಡಬೇಕು ಎಂಬುದು ನಿಮ್ಮ ಮೂರ್ಖತನದ ಕೆಲಸ. ಯಾಕಂದ್ರೆ ನಿಮ್ಮ ಹೊಸ ಸಂಗಾತಿ ನಿಮ್ಮ ಹಳೇ ಕಥೆ-ಪುರಾಣಗಳಲನ್ನು ಕೇಳುವ ಮನಸ್ಥಿಯಲ್ಲಿರುವುದಿಲ್ಲ. ಹಾಗಂತ ವಿಚಾರವನ್ನು ಮುಚ್ಚಿಡಿ ಅಂತಲ್ಲ. ಎಷ್ಟು ಬೇಕೋ ಅಷ್ಟು, ಚೊಕ್ಕದಾಗಿ ಆಕೆಗೆ ಮನವರಿಕೆ ಮಾಡಿಸಿ. ಮಾಜಿ ಪ್ರೇಮಿಯ ಜೊತೆ ಕಳೆದ ಪ್ರತಿ ಕ್ಷಣವನ್ನು ವಿವರಿಸುವ ಅಗತ್ಯವಿಲ್ಲ. ಹಾಗೆ ಏನಾದರೂ ಮಾಡಿದರೆ ನಿಮ್ಮ ಮೇಲೆ ಹುಟ್ಟಬೇಕಾದ ಪ್ರೀತಿ ಅಸೂಯೆಯಾಗಿ ಬದಲಾಗಬಹುದು.

5. ಓವರ್‌ಶೇರಿಂಗ್ ಯಾವಾಗಲೂ ಕೆಟ್ಟ ಆಲೋಚನೆ

5. ಓವರ್‌ಶೇರಿಂಗ್ ಯಾವಾಗಲೂ ಕೆಟ್ಟ ಆಲೋಚನೆ

ನಿಮ್ಮ ಮಾಜಿ ಸಂಬಂಧದ ಬಗ್ಗೆ ಪ್ರಸ್ತುತ ಸಂಗಾತಿಯ ಜೊತೆಗೆ ಶೇರ್ ಮಾಡಿಕೊಳ್ಳುವುದು ಪ್ರಾಮಾಣಿಕತೆಯ ಸಂಕೇತ. ಆದರೆ ಅದೇ ಶೇರಿಂಗ್ ಅತೀಯಾದ್ರೆ ಅದು ನಿಮ್ಮ ಇಮ್ಮೆಚ್ಯುರಿಟಿಯ ಪ್ರತೀಕ. ಆದ್ದರಿಂದ ನಿಮ್ಮ ಹಳೇ ಸಂಬಂಧದ ಕುರಿತು ಜಾಸ್ತಿ ಶೇರ್ ಮಾಡಬೇಡಿ. ಇದು ಒಂದಲ್ಲ ಒಂದು ದಿನ ನಿಮ್ಮ ಜೀವನಕ್ಕೆ ಮುಳುವಾಗಬಹುದು. ನಿಮ್ಮ ಪ್ರಸ್ತುತ ಸಂಗಾತಿಯ ಮೇಲಿನ ಅತಿಯಾದ ನಂಬಿಕೆಯಿಂದ ಓವರ್ ಸೇರಿಂಗ್ ಮಾಡಿಕೊಂಡರೆ ನಿಮ್ಮ ಮೇಲೆ ಅನುಮಾನ ಮೂಡಿಸಲೂ ಬಹುದು. ಅತೀ ಎಂಬುದು ಎಂದಿಗೂ ಅಪಾಯಕಾರಿಯೇ, ಅದು ಪ್ರೀತಿ ವಿಚಾರಕ್ಕಾಗಲೀ ಅಥವಾ ನಂಬಿಕೆ ವಿಚಾರಕ್ಕಾಗಲೀ. ಹಾಗಂತ ನಿಮ್ಮ ಸಂಗಾತಿಯೇ ಎಲವನ್ನೂ ವಿವರಿಸುವಂತೆ ಕೇಳಿದರೆ ಧಾರಾಳವಾಗಿ ಹೇಳಿ. ಆಗ ಏನನ್ನೂ ಮುಚ್ಚಿಡಬೇಡಿ. ಇಲ್ಲವಾದಲ್ಲಿ ಓವರ್‌ಶೇರಿಂಗ್ ಮಾಡಬೇಡಿ.

English summary

Reasons Why You Should Not Bring up Your Ex With Your New Partner

Here we talking about the reasons why your should noy bring up your ex with your new partner. Read on.
Story first published: Thursday, December 3, 2020, 18:44 [IST]
X
Desktop Bottom Promotion