For Quick Alerts
ALLOW NOTIFICATIONS  
For Daily Alerts

ಸಂಬಂಧಕ್ಕಾಗಿ ನೀವು ವೃತ್ತಿಜೀವನವನ್ನು ಬಿಟ್ಟುಕೊಡದಿರಲು ಇಲ್ಲಿದೆ ಕಾರಣ

|

ಇಂದು ಸಾಕಷ್ಟು ಮಹಿಳೆಯರು ಕೆಲಸಕ್ಕೂ ಹೋಗಿ, ಮನೆಯಲ್ಲಿಯೂ ಕೆಲಸಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಇದರಲ್ಲೇ ನೆಮ್ಮದಿಯನ್ನು ಕಂಡುಕೊಂಡರೆ ಇನ್ನೂ ಕೆಲವರಿಗೆ ಅದು ಅತ್ಯಂತ ಹೊರೆ ಎನಿಸುತ್ತದೆ. ಅಂತೆಯೇ ಆರಂಭದಲ್ಲಿ ಕೆಲಸಕ್ಕೆ ಹೋಗಿ ತಮ್ಮ ವೃತ್ತಿ ಜೀವನದಲ್ಲಿ ಒಂದು ಒಳ್ಳೆಯ ಹೆಸರನ್ನೂ ಸಂಪಾದಿಸಿ ಮದುವೆ ಸಂಬಂಧಗಳಿಂದಾಗಿ ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿರುತ್ತಾರೆ.

ಕೆಲವು ಅನಿವಾರ್ಯತೆಗಳನ್ನು ಹೊರತುಪಡಿಸಿ ಮದುವೆಯಾದ ನಂತರವೂ ಅಥವಾ ಯಾವುದೇ ಸಂಬಂಧವನ್ನು ಬೆಳೆಸಲು ನಿಮ್ಮ ವೃತ್ತಿ ಜೀವನ ಅಡ್ಡಿಯಾಗುವುದಿಲ್ಲ. ಹಾಗಾದರೆ ಸಂಬಂಧಗಳನ್ನು ಉಳಿಸಿಕೊಳ್ಳಲು ನೀವು ಸಂಪೂರ್ಣವಾಗಿ ವೃತ್ತಿ ಜೀವನವನ್ನೇ ಬಿಟ್ಟುಬಿಡಬೇಕೇ? ಇದು ಎಷ್ಟು ಸರಿ?

Reasons Why You Should Never Give Up On Career For Your Relationship

ನೀವು ಇಷ್ಟಪಡುವ ಕೆಲಸ ಅಥವಾ ನೀವು ಪ್ರೀತಿಸುವ ಕೆಲಸ ಇದ್ದಾಗ ಪ್ರತಿದಿನ ಎದುರಿಸಬೇಕಾದ ಸವಾಲುಗಳು ಅಥವಾ ಅಡೆತಡೆಗಳ ಬಗ್ಗೆ ನೀವು ಹೆದರುವುದಿಲ್ಲ. ನೀವು ಯಾವುದಾದರೂ ಸಂಬಂಧದಲ್ಲಿದ್ದರೂ ಇದೇ ಅನ್ವಯಿಸುತ್ತದೆ.

ನೀವು ನಿಮ್ಮ 20 ರ ಹರೆಯದಲ್ಲಿದ್ದೀರಿ ಮತ್ತು ನೀವು ಪ್ರೀತಿಸುವ ವೃತ್ತಿಯನ್ನು ಆರಿಸಿದ್ದೀರಿ ಎಂದು ಭಾವಿಸೋಣ, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನೀವು ಎಲ್ಲವನ್ನೂ ಬಿಟ್ಟುಬಿಡುತ್ತೀರಾ? ಕೆಲವರು ಹೌದು ಎಂದು ಹೇಳಬಹುದು, ಇತರರು ಇಲ್ಲ ಎಂದು ಹೇಳುತ್ತಾರೆ, ಆದರೆ ನಿಮ್ಮ ಸಂಬಂಧದ ಕಾರಣಕ್ಕಾಗಿ ನಿಮ್ಮ ವೃತ್ತಿಜೀವನವನ್ನು ಏಕೆ ಬಿಡಬಾರದು ಎಂಬುದಕ್ಕೆ 8 ಕಾರಣಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

1. ಸ್ವತಂತ್ರ ವ್ಯಕ್ತಿ ಮತ್ತು ನಿಮ್ಮದೇ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಾಮರ್ಥ್ಯವಿದೆ

1. ಸ್ವತಂತ್ರ ವ್ಯಕ್ತಿ ಮತ್ತು ನಿಮ್ಮದೇ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಾಮರ್ಥ್ಯವಿದೆ

ನೀವು ಸ್ವತಂತ್ರ ವ್ಯಕ್ತಿಯಾಗಿದ್ದೀರಿ ಮತ್ತು ನಿಮಗೆ ನಿಮ್ಮದೇ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಾಮರ್ಥ್ಯವಿದೆ. ಯಾವುದೇ ವ್ಯಕ್ತಿಯ ಮೇಲೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಅವಲಂಬಿತರಾಗಿರುವ ಬದಲು. ಸ್ವತಂತ್ರರಾಗಿರುವುದು, ನಿಮ್ಮ ಆಯ್ಕೆಗಳಿಗೆ ಅನುಗುಣವಾಗಿ ನಿಮ್ಮ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ನೀವು ಬೇರೊಬ್ಬರ ಸೂಚನೆಗಳನ್ನು ಅನುಸರಿಸಬೇಕಾಗಿಲ್ಲ ಮತ್ತು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಿದೆ.

2. ಹಣಕಾಸಿನ ಸ್ಥಿರತೆ

2. ಹಣಕಾಸಿನ ಸ್ಥಿರತೆ

ನೀವು ಹಣಕಾಸಿನ ಸ್ಥಿರತೆಯನ್ನು ಪಡೆಯುತ್ತೀರಿ ಇದು ಬಹುಶಃ ನಿಮ್ಮ ವೃತ್ತಿಜೀವನವನ್ನು ಉಜ್ವಲವಾಗಿಸುವ ಅತ್ಯುತ್ತಮ ವಿಷಯಗಳಲ್ಲಿ ಒಂದಾಗಿದೆ. ನೀವು ನಿಮಗಾಗಿ ಹಣವನ್ನು ಸಂಪಾದಿಸುತ್ತಿದ್ದೀರಿ ಮತ್ತು ಆ ಹಣದಿಂದ, ನೀವು ಅನೇಕ ಕೆಲಸಗಳನ್ನು ಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಡೇಟಿಂಗ್, ಶಾಪಿಂಗ್ ಮತ್ತು ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿಸುವಲ್ಲಿ ನೀವು ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡುವ ಸಂಬಂಧಗಳಿಗಿಂತ ಭಿನ್ನವಾಗಿ, ನಿಮ್ಮ ವೃತ್ತಿಜೀವನವು ನಿಮ್ಮ ಕೌಶಲ್ಯ ಮತ್ತು ಕಠಿಣ ಪರಿಶ್ರಮಕ್ಕಾಗಿ ಹಣವನ್ನು ನೀಡುತ್ತದೆ ಇದು ನಿಮ್ಮ ಕಷ್ಟದ ಸಮಯದಲ್ಲಿ, ನೀವು ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಲು ನಿಮಗೆ ಸಾಧ್ಯವಾಗುತ್ತದೆ.

3. ಭವಿಷ್ಯವನ್ನು ಸುರಕ್ಷಿತ

3. ಭವಿಷ್ಯವನ್ನು ಸುರಕ್ಷಿತ

ನಿಮ್ಮ ವೃತ್ತಿಜೀವನದಲ್ಲಿ ನೀವು ಹೆಚ್ಚು ಶ್ರಮ ಮತ್ತು ಸಮಯವನ್ನು ನೀಡಿದಾಗ, ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಲು ನೀವು ಹೆಚ್ಚು ಗಮನವಹಿಸುತ್ತೀರಿ. ಇದು ನಿಮ್ಮ ಜೀವನಕ್ಕೆ ಒಂದು ಉದ್ದೇಶವನ್ನು ಒದಗಿಸುತ್ತದೆ.ನಿಮ್ಮ ವೃತ್ತಿಜೀವನದಲ್ಲಿ ಇನ್ನಷ್ಟು ಬೆಳೆಯಲು ನಿಮ್ಮ 20 ರ ಹರೆಯದಲ್ಲಿ ನೀವು ಹೆಚ್ಚು ಶ್ರಮವಹಿಸಬೇಕಾಗಬಹುದು, ಆದರೆ ನಿಮ್ಮ ಈ ಪರಿಶ್ರಮ ನಿಮ್ಮ ಮುಂದಿನ ಜೀವನವನ್ನು ಶಾಂತಿಯುತವಾಗಿ ಕಳೆಯಲು ಸಹಾಯಮಾಡುತ್ತದೆ.

4. ಕೆಲಸ ನಿಮ್ಮನ್ನೆಂದೂ ಕೈ ಬಿಡುವುದಿಲ್ಲ

4. ಕೆಲಸ ನಿಮ್ಮನ್ನೆಂದೂ ಕೈ ಬಿಡುವುದಿಲ್ಲ

ಹೆಚ್ಚು ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡಿದರೆ, ಆ ಕೆಲಸ ನಿಮ್ಮನ್ನೆಂದೂ ಕೈ ಬಿಡುವುದಿಲ್ಲ. ನೀವು ನಿಮ್ಮ ಕೆಲಸದಲ್ಲಿ ಮುಂದುವರೆದಷ್ಟು ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೆಚ್ಚು ಸಮಯ ಮತ್ತು ಕೌಶಲ್ಯವನ್ನು ಹೂಡಿಕೆ ಮಾಡಿದರೆ ಅದರಿಂದ ಸಿಗುವ ಯಶಸ್ಸು ಮತ್ತು ಸಾಧನೆಗಳು ದೊಡ್ಡದಾಗಿರುತ್ತವೆ. ಕಠಿಣ ಸಂದರ್ಭಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಲು ನೀವು ಯಾವಾಗಲೂ ನಿಮ್ಮ ವೃತ್ತಿಜೀವನವನ್ನೇ ಅವಲಂಬಿಸಬೇಕು ಏಕೆಂದರೆ ಇದು ಮನುಷ್ಯರ ಹಾಗೆ ಎಂದಿಗೂ ನಿಮ್ಮನ್ನು ತ್ಯಜಿಸುವುದಾಗಲಿ ಅಥವಾ ನಿಮ್ಮನ್ನು ತಿರಸ್ಕರಿಸುವುದಾಗಲಿ ಮಾಡುವುದಿಲ್ಲ.

5. ಕುಟುಂಬ ನೋಡಿಕೊಳ್ಳಲು ಸಮರ್ಥರು

5. ಕುಟುಂಬ ನೋಡಿಕೊಳ್ಳಲು ಸಮರ್ಥರು

ನೀವು ನಿಮ್ಮ ವೃತ್ತಿ ಜೀವನವನ್ನು ಆಯ್ದುಕೊಂಡರೆ, ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನೀವು ಸಮರ್ಥರಾಗಿರುತ್ತೀರಿ. ನೀವು ನಿಮ್ಮ ಕುಟುಂಬದ ಏಕೈಕ ಗಳಿಕೆಯ ಸದಸ್ಯರಾಗಿರಬಹುದು, ಅಂತಹ ಸಂದರ್ಭದಲ್ಲಿ, ನೀವು ನಿಮ್ಮ ಕೆಲಸಕ್ಕೆ ಅಂಟಿಕೊಳ್ಳುವುದು ಮತ್ತು ಇನ್ನಷ್ಟು ಉತ್ತಮ ಅವಕಾಶಗಳನ್ನು ಹುಡುಕುವುದು ಅತ್ಯಗತ್ಯ. ನಿಮ್ಮ ಕುಟುಂಬವನ್ನು ನೀವು ನೋಡಿಕೊಳ್ಳಬೇಕಾದ ಸಮಯ ಮತ್ತು ಅವರು ಯಾವುದೇ ಹಣದ ಕೊರತೆ ಅಥವಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸದಂತೆ ನೋಡಿಕೊಳ್ಳುವ ಸಮಯ ಎದುರಾಗಬಹುದು. ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನಿಮಗೆ ಸಾಧ್ಯವಾದಾಗ, ನಿಮಗೆ ಹೆಮ್ಮೆ ಮತ್ತು ಆಂತರಿಕ ಶಾಂತಿಯ ಭಾವನೆ ಉಂಟಾಗುವುದು ಸಹಜ. ಆದರೆ ನಿಮ್ಮ ವೃತ್ತಿ ಮತ್ತು ಆದಾಯದ ಮೂಲ ಸ್ಥಿರವಾಗಿದ್ದರೆ ಮಾತ್ರ ಇದು ಸಾಧ್ಯ.

6. ವೃತ್ತಿಜೀವನವು ಎಂದಿಗೂ ಕೈಬಿಡುವುದಿಲ್ಲ

6. ವೃತ್ತಿಜೀವನವು ಎಂದಿಗೂ ಕೈಬಿಡುವುದಿಲ್ಲ

ನಿಮ್ಮ ವೃತ್ತಿಜೀವನವು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ನಿಮ್ಮ ಸಂಬಂಧಗಳಲ್ಲಿ ನಿಮ್ಮ ಸಂಗಾತಿ ಮೋಸ ಮಾಡುವುದರಿಂದ ಎಲ್ಲಾ ಸಂಬಂಧಗಳು ಕೊನೆಗೊಳ್ಳುತ್ತವೆ ಎಂದು ನಾವು ಹೇಳುತ್ತಿಲ್ಲ. ಆದರೆ ಕೆಲವು ಜನರು ತಮ್ಮ ಸಂಗಾತಿಗೆ ನಾಚಿಕೆಯಿಲ್ಲದೆ ಮೋಸ ಮಾಡುತ್ತಾರೆ ಮತ್ತು ಅದರ ಬಗ್ಗೆ ತಪ್ಪಿತಸ್ಥ ಮನೋಭಾವ ಕೂಡ ಅವರಿಗೆ ಇರುವುದಿಲ್ಲ. ಆದರೆ ನಿಮ್ಮ ವೃತ್ತಿಜೀವನದಿಂದ, ನೀವು ಮಾಡುವ ಕೆಲಸದಿಂದ ನಿಮಗೆ ಅಂತಹ ಭಯವಿಲ್ಲ. ನಿಮ್ಮ ವೃತ್ತಿಜೀವನವು ಬೇರೆಯವರಿಗೆ ಎಂದಿಗೂ ಮೋಸ ಮಾಡುವುದಿಲ್ಲ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲಿ ಸಿಕ್ಕೇಸಿಗುತ್ತದೆ.

7. ವೃತ್ತಿಜೀವನ ಸಂಬಂಧಕ್ಕೆ ಸಮಸ್ಯೆಯಲ್ಲ

7. ವೃತ್ತಿಜೀವನ ಸಂಬಂಧಕ್ಕೆ ಸಮಸ್ಯೆಯಲ್ಲ

ನಿಮ್ಮ ವೃತ್ತಿಜೀವನವು ಸಂಬಂಧವನ್ನು ಹೊಂದುವುದಕ್ಕೆ ಎಂದಿಗೂ ತಡೆಯಾಗುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮತ್ತು ಅವನು ಅಥವಾ ಅವಳು ನಿಮ್ಮಲ್ಲಿ ನಂಬಿಕೆಯುಳ್ಳವರಾಗಿದ್ದರೆ, ನಿಮ್ಮ ಸಂಬಂಧದ ಕಾರಣಕ್ಕಾಗಿ ನೀವು ನಿಮ್ಮ ವೃತ್ತಿಜೀವನವನ್ನು ಯಾವತ್ತೂ ತ್ಯಜಿಸಬೇಕಾಗಿಲ್ಲ. ಸರಿಯಾದ ವ್ಯಕ್ತಿ ಯಾವಾಗಲೂ ನಿಮ್ಮ ಕನಸುಗಳನ್ನು ಬೆಂಬಲಿಸುತ್ತಾನೆ ಮತ್ತು ನಿಮ್ಮ ಉತ್ಸಾಹವನ್ನು ನೀವು ಅನುಸರಿಸುತ್ತಿದ್ದೀರಿ ಮತ್ತು ನಿಮ್ಮ ಕನಸುಗಳನ್ನು ನೀವು ಸಾಕಾರಗೊಳಿಸಲು ದುಡಿಯುತ್ತಿದ್ದೀರಿ ಎಂಬುದನ್ನು ಎಂದಿಗೂ ಅರ್ಥ ಮಾಡಿಕೊಳ್ಳುತ್ತಾನೆ. ನಿಮಗೆ ಸರಿಹೊಂದುವ ಸಂಗಾತಿ, ತಮ್ಮ ಸಂಬಂಧಕ್ಕಾಗಿ, ನಿಮ್ಮ ವೃತ್ತಿಜೀವನವನ್ನು ಬಿಡಲು ಎಂದಿಗೂ ಒತ್ತಾಯಿಸುವುದಿಲ್ಲ.

8. ಸ್ವಂತ ಗುರುತನ್ನು ಹೊಂದಲು ವೃತ್ತಿಜೀವನ ಸಹಾಯ ಮಾಡುತ್ತದೆ

8. ಸ್ವಂತ ಗುರುತನ್ನು ಹೊಂದಲು ವೃತ್ತಿಜೀವನ ಸಹಾಯ ಮಾಡುತ್ತದೆ

ನಿಮ್ಮ ಸ್ವಂತ ಗುರುತನ್ನು ಹೊಂದಲು ನಿಮ್ಮ ವೃತ್ತಿಜೀವನವು ನಿಮಗೆ ಸಹಾಯ ಮಾಡುತ್ತದೆ ಇದು ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಸಮಯವನ್ನು ಹೂಡಿಕೆ ಮಾಡುವುದರ ಅತ್ಯುತ್ತಮ ಪ್ರತಿಫಲ! ಅದು ಯಾವಾಗಲೂ ನಿಮಗೆ ನಿಮ್ಮದೇ ಆದ ಗುರುತನ್ನು ನೀಡುತ್ತದೆ. ನೀವು ಹೆಸರು, ವಾಸಿಸಲು ಸ್ಥಳ ಮತ್ತು ನಿಮ್ಮ ಪೋಷಕರು ನಿಮಗೆ ನೀಡಿದ ಗುರುತನ್ನು ಹೊಂದಿದ್ದರೂ ಸಹ ವೃತ್ತಿ ಜೀವನದಲ್ಲಿ ನೀವು ಮೂಡಿಸುವ ಛಾಯೆ ಅತ್ಯಂತ ಅಮೂಲ್ಯವಾದುದು. ಆದರೆ ನಿಮ್ಮ ಕಠಿಣ ಪರಿಶ್ರಮ, ಕೌಶಲ್ಯ ಮತ್ತು ದೃಢ ನಿಶ್ಚಯದ ಆಧಾರದ ಮೇಲೆ ನಿಮ್ಮ ಛಾಪನ್ನುಮೂಡಿಸುವುದು ಅಂದರೆ? ಈ ಗುರುತು ನಿಮಗೆ ಜೀವನೋಪಾಯವನ್ನು ಗಳಿಸಿಕೊಡುವುದು ಮಾತ್ರವಲ್ಲದೆ, ಸಮಾಜದಲ್ಲಿ ನಿಮಗೆ ಗೌರವ ಮತ್ತು ಖ್ಯಾತಿಯನ್ನು ಕೂಡ ತಂದುಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಿಮ್ಮ ವೃತ್ತಿಜೀವನದ ಸಲುವಾಗಿ ನಿಮ್ಮ ಸಂಬಂಧವನ್ನು ನೀವು ಬಿಟ್ಟೇ ಬಿಡಬೇಕು ಎಂಬುದಲ್ಲ, ಆದರೆ ನಿಮಗೆ ಯಾವ ಸಮಯದಲ್ಲಿ ಯಾವುದು ಸೂಕ್ತವಾದುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ಈ ನಿಮ್ಮ ಸರಿಯಾದ ಆಯ್ಕೆ ನಿಮ್ಮ ಜೀವನವನ್ನು ಸುಗಮವಾಗಿಸುತ್ತದೆ.

English summary

Reasons Why You Should Never Give Up On Career For Your Relationship

Here we are discussing about Reasons Why You Should Never Give Up On Career For Your Relationship. When you have a job you like or the work you love, you don't care about the challenges or the obstacles you have to face on a daily basis. The same applies if you are in a relationship. Read more.
X
Desktop Bottom Promotion