For Quick Alerts
ALLOW NOTIFICATIONS  
For Daily Alerts

ಅಶ್ಲೀಲ ಚಿತ್ರ ವೀಕ್ಷಿಸಿದರೆ ಸೆಕ್ಸ್‌ ಲೈಫ್ ಹಾಳಾಗುವುದು!

|

ಕಾಮಬಯಕೆ ನಿಸರ್ಗದತ್ತ ಬಯಕೆಯಾಗಿದ್ದು ಪ್ರತಿ ಜೀವಿಗೂ ಇದನ್ನು ಸಂಗಾತಿಯ ಮೂಲಕ ಪಡೆಯುವಂತೆ ನಿಸರ್ಗವೇ ನಿಯಮವನ್ನು ರೂಪಿಸಿದೆ. ವಿವಾಹ ಸಂಬಂಧದ ಮೂಲಕ ದಂಪತಿಗಳು ಪರಸ್ಪರರ ಬಯಕೆಗಳನ್ನು ಪೂರೈಸಿಕೊಂಡು ವಂಶವನ್ನು ಮುಂದುವರೆಸಲು ಸಮಾಜವೇ ಕ್ರಮ ರೂಪಿಸಿದೆ. ಆದರೆ ದಾಂಪತ್ಯಕ್ಕೂ ಹೊರತಾದ ಸಂಬಂಧಗಳನ್ನು ನೋಡುವುದೇ ಅಶ್ಲೀಲತೆಯಾಗುತ್ತದೆ. ಇದೇನೂ ಹೊಸದಲ್ಲ, ಆದರೆ ಇಂದಿನ ದಿನಗಳಲ್ಲಿ ಅಶ್ಲೀಲತೆಯನ್ನು ನೋಡಲು ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳೇ ಇದನ್ನೊಂದು ವ್ಯಸನದಂತೆ ಮಾಡಿಬಿಟ್ಟಿವೆ. ಎಲ್ಲಿ ವ್ಯಸನವಿದೆಯೋ, ಅಲ್ಲಿದೆ ವ್ಯಾಪಾರ! ವ್ಯಾಪಾರ ಹೆಚ್ಚಿಸಲು ವ್ಯಾಪಾರಿಗಳು ತಮ್ಮ ಉತ್ಪನ್ನಕ್ಕೆ ಬಣ್ಣ ಹಚ್ಚಿ ಹೊಗಳಿ ಮಾರಾಟ ಮಾಡುವಂತೆಯೇ ಈ ವ್ಯಾಪಾರಿಗಳೂ ಇಲ್ಲದ ಕ್ಷಮತೆ ಮತ್ತು ಅಸಾಧ್ಯ ಸಾಹಸಗಳನ್ನು ತೋರಿಸಿ ನೋಡುವವರ ಮನವನ್ನೇ ಕೆಡಿಸುತ್ತಿವೆ.

2018ರಲ್ಲಿ ಖ್ಯಾತ ಅಶ್ಲೀಲ ತಾಣವಾಗಿರುವ ಪೋರ್ನ್ ಹಬ್ ಎಂಬ ತಾಣ ಪ್ರಕಟಿಸಿದ ಸಮೀಕ್ಷೆಯ ಪ್ರಕಾರ ಇಡಿಯ ವಿಶ್ವದಲ್ಲಿ ಅಶ್ಲೀಲತೆಯನ್ನು ಅಂತರ್ಜಾಲದಲ್ಲಿ ವೀಕ್ಷಿಸುವವರ ಸಂಖ್ಯೆಯಲ್ಲಿ ಅಮೇರಿಕಾ ಮತ್ತು ಇಂಗ್ಲೆಂಡ್ ಬಳಿಕ ಭಾರತ ಮೂರನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಅಶ್ಲೀಲ ತಾಣಗಳಿಗೆ ಕಡಿವಾಣ ಇದ್ದರೂ 18ರಿಂದ 24 ವರ್ಷ ವಯಸ್ಸಿನ ನಡುವಣ ಅಂತರ್ಜಾಲ ವೀಕ್ಷಿಸುವ ವ್ಯಕ್ತಿಗಳಲ್ಲಿ 44 % ಹಾಗೂ 25 ರಿಂದ 34 ವರ್ಷ ವಯಸ್ಸಿನ ನಡುವಣ ಅಂತರ್ಜಾಲ ವೀಕ್ಷಿಸುವ ವ್ಯಕ್ತಿಗಳಲ್ಲಿ 41% ವ್ಯಕ್ತಿಗಳು ಅಶ್ಲೀಲ ತಾಣಗಳನ್ನು ವೀಕ್ಷಿಸುತ್ತಾರೆ. ಇವರ ಒಟ್ಟು ಸರಾಸರಿ ಸಮಯವನ್ನು ಪರಿಗಣಿಸಿದರೆ ಇದು ಎಂಟು ನಿಮಿಷ ಇಪ್ಪತ್ತಮೂರು ಸೆಕೆಂಡ್‌ಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಇಂದು ಭಾರತದಲ್ಲಿ ಅತಿ ಅಗ್ಗವಾಗಿ ಮತ್ತು ಮುಕ್ತವಾಗಿ ದೊರಕುತ್ತಿರುವ ಅಂತರ್ಜಾಲ ಸೌಲಭ್ಯವಾಗಿದೆ.

Reasons Why Watching Porn Can Affect Your Relationships And Sex Life

ಅಶ್ಲೀಲ ತಾಣವನ್ನು ನೋಡುವುದು ದೊಡ್ಡ ವಿಷಯವಲ್ಲದಿದ್ದರೂ ಇದರಿಂದಾಗಿ ಸಂಬಂಧಗಳೇ ಹಾಳಾಗುತ್ತಿರುವುದು ಮಾತ್ರ ಗಂಭೀರವಾದ ವಿಷಯವಾಗಿದೆ. ಹಾಗಾಗಿ, ಒಂದು ವೇಳೆ ನೀವು ಸಂಬಂಧ ಬೆಳೆಸುವ ಚಿಂತನೆಯಲ್ಲಿದ್ದು ಸೂಕ್ತ ಸಂಗಾತಿಯನ್ನು ಹುಡುಕಿ ಇನ್ನೂ ಮನಗಳು ಬೆಸೆಯುವ ಹಂತದಲ್ಲಿರುವಾಗ ಪರಸ್ಪರ ಹಂಚಿಕೊಳ್ಳುವ ಯಾವುದೇ ಚಿಕ್ಕ ಚಿಕ್ಕ ವಿಷಯಗಳೂ ಸಂತೋಷ ನೀಡುತ್ತವೆ. ಆದರೆ ಇದರಲ್ಲಿ ಅಪ್ಪಿತಪ್ಪಿ ಅಶ್ಲೀಲ ತಾಣ ನೋಡುವುದು ಅಥವಾ ಸಾಹಿತ್ಯ ಓದುವುದೇನಾದರೂ ಇನ್ನೊಬ್ಬರಿಗೆ ಗೊತ್ತಾದರೆ ಇದುವರೆಗಿನ ಪ್ರಯತ್ನಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಬಹುದು. ಆದರೆ ಸಂಬಂಧ ಕಡಿದುಕೊಳ್ಳುವುದಕ್ಕೂ ಅಶ್ಲೀಲ ತಾಣ ನೋಡುವುದಕ್ಕೂ ಏನು ಸಂಬಂಧ? ಬನ್ನಿ ನೋಡೋಣ

1. ಇವು ಅಸಾಧ್ಯ ಬಯಕೆಗಳನ್ನು ಜನರಲ್ಲಿ ಹುಟ್ಟಿಸುತ್ತವೆ

1. ಇವು ಅಸಾಧ್ಯ ಬಯಕೆಗಳನ್ನು ಜನರಲ್ಲಿ ಹುಟ್ಟಿಸುತ್ತವೆ

ಈ ತಾಣಗಳಲ್ಲಿ ಪ್ರದರ್ಶಿಸುವ ಚಿತ್ರಗಳನ್ನು ನೋಡುವ ವ್ಯಕ್ತಿಯ ಮನದಲ್ಲಿ ಈ ಪರಿಯ ಚಟುವಟಿಕೆಯನ್ನು ತನ್ನ ಸಂಗಾತಿಯಿಂದ ಪಡೆಯುವ ಬಯಕೆ ಮೂಡುತ್ತದೆ. ಸಾಮಾನ್ಯವಾಗಿ ಈ ಚಿತ್ರಗಳು ಕೃತ್ರಿಮತೆಯನ್ನು ವಿಜೃಂಭಿಸುವ ಪರಿಯಾಗಿದ್ದು ವಾಸ್ತವದಿಂದ ಬಹಳ ದೂರ ಇರುತ್ತವೆ. ಈ ಬಯಕೆ ಸಂಬಂಧಕ್ಕೂ ಹಾಗೂ ಲೈಂಗಿಕ ಜೀವನಕ್ಕೂ ಮಾರಕವಾಗಿದೆ. ಅಲ್ಲದೇ ವಾಸ್ತವದಲ್ಲಿ ದಾಂಪತ್ಯದ ನಿಜವಾದ ಬೆಸುಗೆ ಇರುವುದು ಮನಗಳ ಮಿಲನದಲ್ಲಿಯೇ ಹೊರತು ದೇಹದ ಮಿಲನದಲ್ಲಲ್ಲ. ಒಂದು ವೇಳೆ ಈ ಬಯಕೆಯೇ ಪ್ರಮುಖವಾಗಿರುವುದನ್ನು ಸಂಗಾತಿ ಗಮನಿಸಿದರೆ 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂಬ ಗಾದೆಮಾತನ್ನು ಆತ/ಆಕೆ ತನ್ನ ತಂದೆ ತಾಯಿಯರಲ್ಲಿ ಆಡಿ ತೋರಿಸಬಹುದು. ಕೆಲವೊಮ್ಮೆ ಈ ಚಿತ್ರಗಳಲ್ಲಿ ತೋರಿಸಿದ್ದೇ ನಿಜ, ತಾನು ಅಷ್ಟು ಪರಾಕ್ರಮ ತೋರಿಸದಿದ್ದಲ್ಲಿ ತಾನು ಸಮರ್ಥನೇ ಅಲ್ಲ ಎಂಬ ಭಾವನೆ ಮನದಲ್ಲಿ ಮೂಡಬಹುದು. ಈ ಅಗತ್ಯತೆ ಅನಗತ್ಯವಾದ ಮಾನಸಿಕ ಒತ್ತಡವನ್ನು ಹೇರುವುದಂತೂ ಖಂಡಿತಾ! ಅಲ್ಲದೇ ಕೆಲವು ವ್ಯಕ್ತಿಗಳು ಈ ಚಿತ್ರದಲ್ಲಿ ಕಂಡುಬರುವ ವ್ಯಕ್ತಿಗಳಂತೆಯೇ ಆಕರ್ಷಕರಾಗಿರಲು ಅವರ ಅನುಕರಣೆ ಮಾಡಲೂಬಹುದು. ಇದು ನಮ್ಮ ಸ್ವಂತಿಕೆಗೆ ಮಾಡುವ ದ್ರೋಹವಾಗಿದೆ. ವಾಸ್ತವದಲ್ಲಿ, ಈ ಚಿತ್ರಗಳಲ್ಲಿ ತೋರಿಸುವುದೆಲ್ಲಾ ಬಹುಪಾಲು ಉತ್ಪ್ರೇಕ್ಷೆಯಾಗಿದ್ದು ಸಹಜ ಮಿಲನಕ್ಕೂ ಬಹಳವೇ ವ್ಯತ್ಯಾಸವಿರುತ್ತದೆ.

2. ಇದು ನಿಮ್ಮ ಸಂಗಾತಿಯನ್ನೊಂದು ವಸ್ತುವನ್ನಾಗಿ ಪರಿಣಮಿಸಬಹುದು

2. ಇದು ನಿಮ್ಮ ಸಂಗಾತಿಯನ್ನೊಂದು ವಸ್ತುವನ್ನಾಗಿ ಪರಿಣಮಿಸಬಹುದು

ದಾಂಪತ್ಯ ಜೀವನವೆಂದರೆ ಕೇವಲ ಲೈಂಗಿಕ ಜೀವನವೇ ಎಲ್ಲವೂ ಅಲ್ಲ! ಇದೊಂದು ಭಾಗ ಅಷ್ಟೇ. ಅಶ್ಲೀಲ ಚಿತ್ರದಲ್ಲಿ ವೈಭವೀಕರಿಸುವುದು ಈ ಅಂಶವನ್ನು ಮಾತ್ರವೇ ಹೊರತು ದಾಂಪತ್ಯದ ಇತರ ಯಾವುದೇ ಅಂಶಗಳನ್ನು ಇಲ್ಲಿ ಪರಿಗಣಿಸಲಾಗುವುದೇ ಇಲ್ಲ. ಅಂದರೆ ಇಲ್ಲಿ ನಟಿಸುವವರಿಗೆ ತಮ್ಮೊಂದಿಗೆ ಕೂಡುವವರು ಒಂದು ಭೋಗವಸ್ತು ಮಾತ್ರವೇ ಹೊರತು ಇವರಲ್ಲಿ ಯಾವುದೇ ಪ್ರೀತಿಯಾಗಲೀ ಪ್ರೇಮವಾಗಲೀ ಇರುವುದಿಲ್ಲ. ಹಾಗಾಗಿ ಈ ಚಿತ್ರಗಳ ಯಾವುದೇ ಪ್ರಭಾವ ದಂಪತಿಗಳ ಮೇಲೆ ಬಿದ್ದರೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಈ ಚಿತ್ರದ ಹೆಸರುಗಳೂ ಹೀಗೇ ಇರುತ್ತವೆ. 'ಮೋಸ ಮಾಡುವ ಹೆಂಡತಿ', 'ನೆರೆಯಾತನೊಂದಿಗಿನ ಜೊತೆ' ಇಂತಹದ್ದೇ ಹತ್ತು ಹಲವು ರೋಚಕ ಹೆಸರುಗಳಿರುತ್ತವೆ. ಈ ಚಿತ್ರದಲ್ಲಿ ನಟಿಸುವವರಿಗೆ ಕೇವಲ ಕಾಮ ಮಾತ್ರವೇ ಪ್ರಧಾನ, ಹೊರತು ಇತರ ಯಾವುದೇ ಸಂಬಂಧಗಳಲ್ಲ! ಬಹುತೇಕ ಚಿತ್ರಗಳಲ್ಲಿ ಕಾಮಕೇಳಿ ನಡೆಯುವ ಜೋಡಿಗಳ ಪೈಕಿ ಹೆಣ್ಣಿನ ದೇಹವನ್ನೇ ಹೆಚ್ಚಿನ ಸಮಯ ತೋರಿಸಲಾಗುತ್ತದೆಯೇ ಹೊರತು ಪುರುಷನ ಮುಖವನ್ನಲ್ಲ! ಈ ಕ್ರಿಯೆ ಮಹಿಳೆಗೆ ಎಷ್ಟು ಇಷ್ಟವಾಗುತ್ತಿದೆ ಎಂಬುದನ್ನೂ ವೈಭವೀಕರಿಸಲಾಗುತ್ತದೆ. ಕೆಲವೊಮ್ಮೆ ಹಿಂಸಾಕೃತ್ಯಗಳೂ ನಡೆಯುತ್ತವೆ. ಆದರೆ ಈ ಹಿಂಸೆ ಮಹಿಳೆಗೆ ಇಷ್ಟವಾಗುತ್ತದೆ ಎಂಬಂತೆಯೇ ಪ್ರದರ್ಶಿಸುವ ಮೂಲಕ ಪುರುಷ ಮಹಿಳೆಯನ್ನು ಹೇಗೆ ಭೋಗವಸ್ತುವಾಗಿ ಬಳಸುತ್ತಿದ್ದಾರೆ ಎಂದು ಅರಿವಾಗುತ್ತದೆ. ಇಂತಹ ಯಾವುದೇ ಸಂಗತಿಯನ್ನು ಈ ಚಿತ್ರ ನೋಡಿದವರು ತಮ್ಮ ಮನದಲ್ಲಿ ತುಂಬಿಕೊಂಡರೆ ಇದು ನೇರವಾಗಿ ಅವರ ಸಂಗಾತಿಯೊಡನ ಸಂಬಂಧದ ಮೇಲಾಗುತ್ತದೆ ಹಾಗೂ ಸಂಗಾತಿಯನ್ನು ಓರ್ವ ವ್ಯಕ್ತಿಯ ರೂಪಕ್ಕಿಂತಲೂ ಭೋಗವಸ್ತುವಿನ ರೂಪದಲ್ಲಿ ಕಾಣುವ ಅಪಾಯವಿದೆ.

3. ಇದು ದೈಹಿಕ ಮತ್ತು ಭಾವನಾತ್ಮಕ ಅಸುರಕ್ಷತೆಗೆ ಕಾರಣವಾಗಬಹುದು

3. ಇದು ದೈಹಿಕ ಮತ್ತು ಭಾವನಾತ್ಮಕ ಅಸುರಕ್ಷತೆಗೆ ಕಾರಣವಾಗಬಹುದು

ದಾಂಪತ್ಯದಲ್ಲಿ ಭಾವನಾತ್ಮಕ ಮಿಲನಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಶೇಕಡಾವಾರು ಪ್ರಮಾಣವನ್ನು ಗಮನಿಸಿದರೆ ದೈಹಿಕ ಮಿಲನ ಶೇಕಡಾ ಎಂಟರಿಂದ ಹನ್ನೆರಡರಷ್ಟು ಮಾತ್ರವೇ ಎಂದು ತಜ್ಞರು ವಿವರಿಸುತ್ತಾರೆ. ಹಾಗಾಗಿ ನಿಜವಾದ ದಂಪತಿಗಳು ಪರಸ್ಪರರನ್ನು ಗೌರವಿಸುತ್ತಾರೆ ಹಾಗೂ ಪರಸ್ಪರರಿಗೆ ಪೂರಕವಾಗಿ ನಡೆದುಕೊಳ್ಳುತ್ತಾರೆ. ಲೈಂಗಿಕ ಮಿಲನದ ಸಮಯದಲ್ಲಿಯೂ ಈ ಗೌರವ ಉಳಿಯುತ್ತದೆ. ಒಂದು ವೇಳೆ ನೀವು ಅಶ್ಲೀಲ ಚಿತ್ರ ವೀಕ್ಷಿಸುವ ವ್ಯಕ್ತಿಯಾಗಿದ್ದರೆ ನೀವು ಸಂಗಾತಿಯೊಂದಿಗಿದ್ದರೂ ಆ ಸಮಯದಲ್ಲಿ ನಿಮ್ಮ ಮನದಲ್ಲಿ ಆ ಚಿತ್ರಗಳಲ್ಲಿ ನೋಡಿರುವ ಮಹಿಳೆಯ ಮುಖವೇ ಇರಬಹುದು. ಇದು ಸ್ಪಷ್ಟವಾದ ವಿಶ್ವಾಸದ್ರೋಹವಾಗಿದೆ. ಇದನ್ನು ನಿಮ್ಮ ಸಂಗಾತಿ ಗಮನಿಸಿದರೆ ಇದು ಭಾವನಾತ್ಮಕ ಅಸುರಕ್ಷತೆಗೆ ಕಾರಣವಾಗಬಹುದು. ಮುಂದುವರೆದರೆ ದೈಹಿಕ ಅಸುರಕ್ಷತೆಗೂ ಕಾರಣವಾಗಬಹುದು. ಈ ವಿಷಯವೇ ತೇಜಸ್ವಿಯವರ 'ಅಬಚೂರಿನ ಪೋಸ್ಟಾಫೀಸು' ಎಂಬ ಕಥೆಯಲ್ಲಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ.

4. ಅಸಾಧ್ಯ ಪರಿಸ್ಥಿತಿಯಲ್ಲಿ ಲೈಂಗಿಕತೆಯ ಬಯಕೆ

4. ಅಸಾಧ್ಯ ಪರಿಸ್ಥಿತಿಯಲ್ಲಿ ಲೈಂಗಿಕತೆಯ ಬಯಕೆ

ಈ ಚಿತ್ರದಲ್ಲಿ ತೋರುವ ಬಹುತೇಕ ಸಂದರ್ಭ ಮತ್ತು ಪರಿಸ್ಥಿತಿಗಳು ವಿಪರೀತ ಮತ್ತು ಅಸಾಧ್ಯವಾಗಿದೆ. ಭಾರತದಂತಹ ಕಟ್ಟುಪಾಡುಗಳ ದೇಶದಲ್ಲಂತೂ ಇದನ್ನು ಊಹಿಸಲೂ ಸಾಧ್ಯವಿಲ್ಲ. ಉದಾಹರಣೆಗೆ ಇಂತಹ ಚಿತ್ರವೊಂದರಲ್ಲಿ ತರಗತಿಯಲ್ಲಿ ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವೆ ಎಲ್ಲರೆದುರು ಕಾಮಕೇಳಿ ನಡೆಯುತ್ತದೆ. ಇದು ವಾಸ್ತವಕ್ಕೆ ಬಲುದೂರವಾಗಿದೆ. ಆದರೆ ಈ ಚಿತ್ರಗಳನ್ನು ನೋಡಿ ಪ್ರಭಾವಿತರಾದ ಕೆಲವರು ಇವುಗಳಲ್ಲಿ ಕೆಲವನ್ನಾದರೂ ತಮ್ಮ ಸಂಗಾತಿಯೊಡನೆ ಪ್ರಯತ್ನಿಸಬೇಕೆಂಬ ಹಂಬಲದಲ್ಲಿರುತ್ತಾರೆ. ಆದರೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ತಿಳಿಯದೇ ಇರುತ್ತದೆಯೇ? ನಿಜಜೀವನದಲ್ಲಿ ಇದು ಅಸಾಧ್ಯವಾದ ಮಾತು. ಆದರೂ ಇದನ್ನು ಮೀರಿ ಕೆಲವು ಅಸಾಧ್ಯ ಪರಿಸ್ಥಿತಿಗಳನ್ನು ಪ್ರಯತ್ನಿಸಲು ಹೋಗುವ ವ್ಯಕ್ತಿಗಳು ಬಳಿಕ ಪರಿಸ್ಥಿತಿ ಕೈಮೀರಿ ತಾವೂ ಮುಜುಗರಕ್ಕೆ ಒಳಗಾಗುವುದಲ್ಲದೇ ಮನೆಯವರನ್ನೂ ಮುಜುಗರಕ್ಕೀಡು ಮಾಡುತ್ತಾರೆ. ಕೆಲವೊಮ್ಮೆ ಇದರಿಂದ ಅಪಾಯವೂ ಎದುರಾಗಬಹುದು.

5. ಮೋಸ ಮಾಡುವುದು ವಿಜೃಂಭಣೆಯಾಗುವ ಅಪಾಯ

5. ಮೋಸ ಮಾಡುವುದು ವಿಜೃಂಭಣೆಯಾಗುವ ಅಪಾಯ

ಈ ಚಿತ್ರಗಳಲ್ಲಿ ಸಂಗಾತಿಗೆ ನಿಷ್ಠತೆ ತೋರುವುದು ಮಾತ್ರ ಇಲ್ಲದೇ ಇರುವ ಮಾತು. ಚಿತ್ರಗಳಲ್ಲಿ ಓರ್ವ ವ್ಯಕ್ತಿ ಹಲವರೊಡನೆ ಕೂಡುವುದನ್ನೂ ಸಂಗಾತಿಗೆ ಮೋಸ ಮಾಡುವುದನ್ನೂ ವಿಜೃಂಭಿಸಲಾಗುತ್ತದೆ. ಈ ಚಿತ್ರಗಳನ್ನು ಸತತವಾಗಿ ನೋಡುತ್ತಿದ್ದರೆ ಮನಸ್ಸು ಒಂದು ಸ್ಥಿತಿಗೆ ತಲುಪುತ್ತದೆ ಎಂದರೆ ಸಂಗಾತಿಗೆ ಮೋಸ ಮಾಡುವುದು ವಿಶೇಷ ಎನಿಸುವುದೇ ಇಲ್ಲ, ಬದಲಿಗೆ ಜಗತ್ತೇ ಹೀಗೆ ಎಂಬ ಭಾವನೆ ಮೂಡುತ್ತದೆ. ಅಲ್ಲದೇ ಈ ಚಿತ್ರಗಳಲ್ಲಿ ಬಹುಸಂಗಾತಿಯರ ಮೂಲಕ ಜೀವನದಲ್ಲಿ ಹೆಚ್ಚು ರಂಗು ಮೂಡುತ್ತದೆ ಹಾಗೂ ವೈವಿಧ್ಯತೆ ಪಡೆಯಬಹುದು ಎಂದು ಬಿಂಬಿಸಲಾಗುತ್ತದೆ. ಹಾಗಾಗಿ ಈ ಸಂಗತಿಗಳೇ ಚಿತ್ರ ನೋಡಿದವರ ಮನದಲ್ಲಿ ಉಳಿದು ನಿಜಜೀವನದಲ್ಲಿಯೂ ಇವರು ತಮ್ಮ ದಾಂಪತ್ಯದ ಹೊರಗೆ ಲಭಿಸುವ ಅವಕಾಶಕ್ಕಾಗಿ ಎದುರು ನೋಡುತ್ತಾರೆ. ಯಾವಾಗ ಅವಕಾಶ ಸಿಕ್ಕಿತೋ ಇದು ದಾಂಪತ್ಯಕ್ಕೆ ಅಪಾಯಕಾರಿಯಾಗಬಹುದು. ಅಥವಾ ತಮ್ಮ ಸಂಗಾತಿಯನ್ನೇ ಇಬ್ಬರ ಹೊರತಾದ ವ್ಯಕ್ತಿಗಳ ಜೊತೆಗೆ ಕೂಡಲು ಕರೆಯಬಹುದು! ಆದರೆ ಈ ಬಯಕೆ ದಾಂಪತ್ಯಕ್ಕೆ ಬಹಳ ಅಪಾಯಕಾರಿಯಾಗಿದೆ. ದಾಂಪತ್ಯದಲ್ಲಿ ಮೋಸ ಎಂದರೆ ಹಾಲಿನಲ್ಲಿ ಒಂದು ತೊಟ್ಟು ಲಿಂಬೆ ಹಾಕಿದಂತೆ. ಹಾಲಿನಂತಿರುವ ದಾಂಪತ್ಯ ಒಂದೇ ಒಂದು ಮೋಸದ ಕ್ಷಣದಿಂದ ಹಾಳಾಗಬಹುದು.

6. ಇವರಿಗೆ ಹೆಚ್ಚು ಹೆಚ್ಚು ದೈಹಿಕ ವಾಂಛೆಯ ಆಸೆ ಮೂಡುತ್ತದೆ

6. ಇವರಿಗೆ ಹೆಚ್ಚು ಹೆಚ್ಚು ದೈಹಿಕ ವಾಂಛೆಯ ಆಸೆ ಮೂಡುತ್ತದೆ

ಗುಣ ನೋಡಿ ಹೆಣ್ಣು ಕೊಡು ಎಂಬುದು ಕನ್ನಡದ ಗಾದೆ. ಯಾರೂ ವಿವಾಹವಾಗುವ ಪುರುಷನ ದೈಹಿಕ ಸಾಮರ್ಥ್ಯ, ಗಾತ್ರಗಳನ್ನು ವಿಚಾರಿಸಲು ಹೋಗುವುದಿಲ್ಲ. ಏಕೆಂದರೆ ನಿಜವಾಗಿ ದೈಹಿಕ ಅಳತೆಗಳಿಗೂ ದಾಂಪತ್ಯ ಸಾಮರಸ್ಯಕ್ಕೂ ಯಾವುದೇ ಸಂಬಂಧವಿಲ್ಲ. ನಿಜವಾದ ದಾಂಪತ್ಯದಲ್ಲಿ ದಂಪತಿಗಳು ಪರಸ್ಪರರಿಗೆ ಏನನ್ನು ಕೊಟ್ಟು ಪಡೆದುಕೊಳ್ಳುತ್ತಾರೆ ಎಂಬುದೇ ಮುಖ್ಯವಾಗಿದೆಯೇ ಹೊರತು ಎಷ್ಟು ಎಂಬುದು ಮುಖ್ಯವಾಗುವುದಿಲ್ಲ. ಆದರೆ ಅಶ್ಲೀಲ ಚಿತ್ರಗಳಲ್ಲಿ ತೋರಿಸುವುದು ಇದಕ್ಕೆ ತೀರಾ ವ್ಯತಿರಿಕ್ತವಾದುದನ್ನೇ! ಪರಾಕಾಷ್ಠೆಯನ್ನು ತಲುಪಲು ಎಷ್ಟು ಹೊತ್ತು ಇವರು ಕಳೆದರು ಹಾಗೂ ಎಷ್ಟು ದೀರ್ಘಾವಧಿಯ ಬಳಿಕ ತಲುಪಿದರು ಎಂಬುದನ್ನೇ ವೈಭವೀಕರಿಸಲಾಗುತ್ತದೆ. ವಾಸ್ತವದಲ್ಲಿ ಇವು ನಿಜವೇ ಅಲ್ಲ. ಈ ಚಿತ್ರಗಳನ್ನು ಸಂಕಲನ್ನಕ್ಕೊಳಪಡಿಸಲಾಗಿರುತ್ತದೆ ಹಾಗೂ ಹಲವಾರು ಚಿತ್ರಗಳನ್ನು ಒಂದಕ್ಕೊಂದು ಜೋಡಿಸಿ ನಿಜವಾಗಿಯೂ ಇಷ್ಟು ದೀರ್ಘಾವಧಿಯ ಬಳಿಕವೇ ಪರಾಕಾಷ್ಠೆ ತಲುಪಿದಂತೆ ಪ್ರದರ್ಶಿಸಲಾಗುತ್ತದೆ. ಹಾಗಾಗಿ, ಈ ಚಿತ್ರವನ್ನು ನೋಡಿದವರು ಇದೇ ನಿಜ ಎಂದು ತಿಳಿದುಕೊಂಡು ತಾವೂ ಅಷ್ಟೇ ಹೊತ್ತು ವಿಜೃಂಭಿಸಲು ಹೋಗುತ್ತಾರೆ. ಆದರೆ ನಿಸರ್ಗ ಇದಕ್ಕೆ ಅವಕಾಶ ಮಾಡಿಕೊಡದ ಕಾರಣ ಸಹಜಸಮಯದಲ್ಲಿಯೇ ಪ್ರಾಪ್ತವಾಗುವ ಪರಾಕಾಷ್ಠೆಯನ್ನು ತನ್ನ ಅಸಾಮರ್ಥ್ಯ ಎಂದು ತಿಳಿದುಕೊಂಡು ಮನಸ್ಸಿನಲ್ಲಿ ಕುಗ್ಗಲು ಆರಂಭಿಸುತ್ತಾರೆ. ಈ ವ್ಯಕ್ತಿಗಳು ತಮ್ಮಲ್ಲಿಯೇ ಕೀಳರಿಮೆ ಬೆಳೆಸಿಕೊಳ್ಳುತ್ತಾ ಈ ಚಿತ್ರಗಳನ್ನು ನೋಡುವುದನ್ನು ಹೆಚ್ಚಿಸುತ್ತಾ ಸಂಗಾತಿಯೊಡನೆ ಕಳೆಯಬೇಕಾದ ಸಮಯವನ್ನು ಮೊಟಕುಗೊಳಿಸುತ್ತಾ ಬರುತ್ತಾರೆ. ಇದು ದಾಂಪತ್ಯ ಬಿರುಕು ಬಿಡಲು ಕಾರಣವಾಗಬಹುದು.

7. ನೀವು ನೋಡುವ ಎಲ್ಲವೂ ಸತ್ಯವಲ್ಲ

7. ನೀವು ನೋಡುವ ಎಲ್ಲವೂ ಸತ್ಯವಲ್ಲ

ಈ ಚಿತ್ರಗಳನ್ನು ಚಿತ್ರೀಕರಿಸುವಾಗ ಕ್ಯಾಮೆರಾ ಯಾವ ಕೋನದಲ್ಲಿದೆ ಎಂಬುದು ಪ್ರಮುಖವಾದ ಅಂಶವಾಗಿದ್ದು ನೋಡುವವರಲ್ಲಿ ಲೈಂಗಿಕ ಬಯಕೆಯನ್ನು ಹುಟ್ಟು ಹಾಕುವುದೇ ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಮೂಲಕ ಜೋಡಿಗಳು ಯಾವ ಭಂಗಿಯಲ್ಲಿದ್ದಾರೆ ಎಂಬುದನ್ನು ಅತಿ ಸೂಕ್ಷ್ಮವಾಗಿ ವಿವರಿಸುವ ಈ ಚಿತ್ರಗಳು ನೋಡುಗನಲ್ಲಿ ಕಾಮವನ್ನು ಉದ್ದೀಪನಗೊಳಿಸುತ್ತವೆ. ಹಾಗಾಗಿ, ಈ ಚಿತ್ರವನ್ನು ನೋಡುವ ಯಾವುದೇ ವ್ಯಕ್ತಿಗೆ ಉದ್ರೇಕವಾಗದೇ ಇರುವುದಿಲ್ಲ. ಆದರೆ ನೀವು ನೋಡುವ ಯಾವುದೇ ದೃಶ್ಯ ನಿಜಕ್ಕೂ ಸತ್ಯವಲ್ಲ ಅಥವಾ ಸಾಧ್ಯವಾಗದೇ ಇರುವಂತಹದ್ದಾಗಿರಬಹುದು. ಉದಾಹರಣೆಗೆ ಈ ಚಿತ್ರದಲ್ಲಿ ನಟಿಸುವವರು ಅತಿ ಸುಂದರರೂ ಮಾದಕ ಮೈಮಾಟ ಹೊಂದಿರುವವರೂ ಆಗಿರುತ್ತಾರೆ. ಈ ಮೈಮಾಟ ಮತ್ತು ಸೌಂದರ್ಯವನ್ನು ನಿಮ್ಮ ಸಂಗಾತಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಆರೋಗ್ಯದ ದೃಷ್ಟಿಯಿಂದ ಸುಂದರ ಮೈಕಟ್ಟನ್ನು ಹೊಂದಿರುವುದು ಬೇರೆ ಮಾತು. ಆದರೆ ನಿಮ್ಮ ಸಂಗಾತಿಯನ್ನು ಚಿತ್ರದಲ್ಲಿ ಕಂಡಿರುವ ವ್ಯಕ್ತಿಗೆ ಹೋಲಿಸಿ ಆ ವ್ಯಕ್ತಿಯನ್ನೇ ತನ್ನ ಸಂಗಾತಿಯಲ್ಲಿ ಬಯಸುವ ಪರಿ ಮಾತ್ರ ಅಪಾಯಕಾರಿ! ಅಲ್ಲದೇ ಈ ಚಿತ್ರದಲ್ಲಿ ನಟಿಸುವವರು ತಮ್ಮ ದೇಹಗಳನ್ನು ಪರಿಪೂರ್ಣವಾಗಿ ಕಾಣುವಂತೆ ಶಸ್ತ್ರಕ್ರಿಯೆಗೆ ಒಳಗಾಗುವ, ಭಾರೀ ಪ್ರಮಾಣದ ಪ್ರಸಾದನಗಳನ್ನು ಬಳಸುವ ಮೂಲಕ ಸುಂದರರಾಗಿ ಕಾಣುತ್ತಿದ್ದಾರೆಯೇ ಹೊರತು ಇದೇ ಅವರ ನಿಜರೂಪವಲ್ಲ! ವಿಶೇಷವಾಗಿ ಸ್ಖಲನದ ಸಮಯದಲ್ಲಿ ಚಿಮ್ಮುವ ದ್ರವ ನಿಜವಾಗಿ ವೀರ್ಯವೇ ಅಲ್ಲ, ಬದಲಿಗೆ ಅನ್ನ ಬಸಿದ ನೀರನ್ನು ಗಾಢವಾಗಿಸಿ ಚಿಕ್ಕ ನಳಿಕೆಯ ಮೂಲಕ ಹಿಂದಿನಿಂದ ಚಿಮ್ಮಿಸಲಾಗುತ್ತದೆ. ಇದನ್ನೇ ಸತ್ಯ ಎಂದುಕೊಂಡು ತನ್ನನ್ನು ಹೋಲಿಸಿಕೊಳ್ಳುವವರು ಭಾರೀ ನಿರಾಶೆಗೆ ಒಳಗಾಗುತ್ತಾರೆ. ಇದು ಮುಂದೆ ಖಿನ್ನತೆ ಹಾಗೂ ಇತರ ತೊಂದರೆಗಳಿಗೆ ಕಾರಣವಾಗಬಹುದು.

8. ಚಿತ್ರದಲ್ಲಿ ನಟಿಸುವವರು ದಂಪತಿಗಳಂತೂ ಅಲ್ಲ

8. ಚಿತ್ರದಲ್ಲಿ ನಟಿಸುವವರು ದಂಪತಿಗಳಂತೂ ಅಲ್ಲ

ಕೆಲವು ಚಿತ್ರಗಳಲ್ಲಿ ದಂಪತಿಗಳಾಗಿ ನಟಿಸುವ ವ್ಯಕ್ತಿಗಳೂ ನಿಜಜೀವನದಲ್ಲಿ ದಂಪತಿಗಳಾಗಿರಲು ಸಾಧ್ಯವಿಲ್ಲ. ಆದರೆ ಇವರು ಆ ದೃಶ್ಯಗಳಲ್ಲಂತೂ ತಾವು ನಿಜವಾದ ದಂಪತಿಗಳೇ ಎಂಬಂತೆ ನಟಿಸುತ್ತಾರೆ. ನಟನೆ ಎಂದರೇ ಅದಲ್ಲವೇ? ಹಾಗಾಗಿ, ಇವನ್ನು ನೋಡಿದ ಕೆಲವು ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಹೀಗೇ ಮಾಡುವಂತೆ ಬಲವಂತ ಮಾಡಬಹುದು. ಆದರೆ, ನಿಜಾಂಶದಲ್ಲಿ ಈ ಚಿತ್ರದಲ್ಲಿ ಹಾಗೆ ನಟಿಸಿದ್ದಕ್ಕೆ ಭಾರೀ ಸಂಭಾವನೆಯನ್ನು ಆ ನಟ ನಟಿಯರು ಪಡೆದಿರುತ್ತಾರೆ. ಚಿತ್ರದ ನಿರ್ದೇಶಕರು ಏನು ಮಾಡಬೇಕೆಂದು ಹೇಳಿದರೂ ಅವರು ಹಾಗೆ ಮಾಡುತ್ತಾರೆ. ಇತರ ಚಲನಚಿತ್ರಗಳಂತೆಯೇ ಈ ಚಿತ್ರಗಳೂ ಓರ್ವ ನಿರ್ದೇಶಕನ ನಿರ್ದೇಶನದಂತೆಯೇ ನಡೆದಿರುತ್ತದೆ.

ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಅಶ್ಲೀಲ ಚಿತ್ರ ವೀಕ್ಷಣೆಯೂ ಅಲ್ಪ ಮಟ್ಟಿಗಿದ್ದರೆ ತೊಂದರೆ ಇಲ್ಲವೆನ್ನಬಹುದು. ಆದರೆ ಇದರಿಂದ ಪಡೆಯುವ ಮಾಹಿತಿಗಳೇ ಸತ್ಯ ಎಂದರಿತು ಸಂಗಾತಿಯಿಂದ ನಿರೀಕ್ಷಿಸುವುದು ಮಾತ್ರ ತಪ್ಪು. ಉದಾಹರಣೆಗೆ ಚಲನಚಿತ್ರದಲ್ಲಿ ನಟನೊಬ್ಬ ರೌಡಿಗಳೊಂದಿಗೆ ಸೆಣೆಸುವ ದೃಶ್ಯವಿರುತ್ತದೆ. ಇದನ್ನು ನೋಡಿ ಸಂಭ್ರಮಿಸಿ ಹೊರಬಂದ ಬಳಿಕ ನಾವೇನು ರಸ್ತೆಯಲ್ಲಿ ಅಡ್ಡಬರುವ ಎಲ್ಲರನ್ನೂ ಹೊಡೆಯಹೋಗುತ್ತೇವೆಯೇ? ಇದೂ ಹಾಗೇ, ಚಿತ್ರವನ್ನು ಮನಸ್ಸಿಗೆ ಮುದ ನೀಡುವಷ್ಟು ಮಾತ್ರವೇ ನೋಡಿದರೆ ಸಾಕು ಅದರ ಬದಲಿಗೆ ಬಹಳವೇ ನೋಡಿ ಮನಸ್ಸನ್ನು ಕೆಡಿಸಿಕೊಂಡು ಸಂಗಾತಿ ಮನಸ್ಸನ್ನೂ ಕೆಡಿಸಿ ದಾಂಪತ್ಯವನ್ನು ಹಾಳುಮಾಡಿಕೊಳ್ಳುವುದು ಮಾತ್ರ ಸಲ್ಲದ ಸಂಗತಿ. ಲೈಂಗಿಕತೆ ದಂಪತಿಗಳ ನಡೆಯುವ ಅತ್ಯಂತ ಖಾಸಗಿ ವಿಷಯವಾಗಿದ್ದು ಇದರಲ್ಲಿ ಮೂರನೆಯವರಿಗೆ ಅವಕಾಶವೇ ಇಲ್ಲವೆಂದು ಪ್ರತಿ ಧರ್ಮವೂ ಹೇಳಿರುವಾಗ ಇಬ್ಬರ ಸಾಮೀಪ್ಯವನ್ನು ಮೂರನೆಯವರು ನೋಡುವುದೇ ತಪ್ಪು. ದಾಂಪತ್ಯದಲ್ಲಿ ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಮತ್ತು ಮುಖ್ಯವಾಗಿ ಪರಸ್ಪರ ಬದ್ದತೆಗಳೇ ಬೆಸುಗೆಯ ಭದ್ರ ಬುನಾದಿಯಾಗುತ್ತದೆಯೇ ಹೊರತು ಲೈಂಗಿಕ ಸಾಮರ್ಥ್ಯ ಅಥವಾ ವಿಜೃಂಭಣೆಯಲ್ಲ. ಈ ವಿಷಯವನ್ನೇ ತೋರದ ಈ ಚಿತ್ರಗಳನ್ನು ನೋಡಲೇ ಬೇಕೇ?

English summary

Reasons Why Watching Porn Can Affect Your Relationships And Sex Life

Well, watching porn is not a big issue, but if it is ruining your relationship, you need to think twice. If you really want to make your bonding stronger with your partner then spending time with each other and doing little things for them are good ideas, not watching 'pornography' at any cost. But, why does it affect a relationship? Let's find out!
X
Desktop Bottom Promotion