For Quick Alerts
ALLOW NOTIFICATIONS  
For Daily Alerts

ಸ್ಟ್ರಾಂಗ್‌ ಮಹಿಳೆಯನ್ನು ಪುರುಷ ಸಂಗಾತಿಯಾಗಿ ಬಯಸುವುದಿಲ್ಲವೇ? ಏಕೆ?

|

ನಿನಗೆ ಮದುವೆಯಾಗಲು ಎಂಥ ಹುಡುಗಿ ಬೇಕೆಂದು ಯುವಕರಲ್ಲಿ ಕೇಳಿದರೆ 'ನನ್ನನ್ನು ಅರ್ಥ ಮಾಡಿಕೊಳ್ಳಬೇಕು, ನನ್ನ ಮಾತನ್ನು ಕೇಳುವಂತವಳು ಬೇಕು' ಎಂದೇ ಬಹುತೇಕರು ಹೇಳುತ್ತಾರೆ, ಅದೇ ಒಂದು 'ಸ್ಟ್ರಾಂಗ್‌ ವುಮೆನ್' ಬೇಕೆಂದು ಬಯಸುವವರು ತುಂಬಾ ವಿರಳ, ಏಕೆಂದರೆ ಸ್ಟ್ರಾಂಗ್‌ ಮಹಿಳೆ ಜೊತೆ ಬಾಳುವುದು ಅಷ್ಟು ಸುಲಭವಲ್ಲ ಎಂಬುವುದು ಅವರಿಗೆ ಗೊತ್ತಿರುತ್ತದೆ, ಏಕೆಂದರೆ ಸ್ಟ್ರಾಂಗ್‌ ಮಹಿಳೆಯನ್ನು ಹ್ಯಾಂಡಲ್‌ ಮಾಡುವುದು ಅಷ್ಟು ಸುಲಭವಲ್ಲ.

ಅವಳು ಅವಳ ಇಷ್ಟದಂತೆ ನಿರ್ಧಾರ ತೆಗೆದುಕೊಳ್ಳುತ್ತಾಳೆ, ಅವಳ ಬದುಕು ಹೇಗಿರಬೇಕೆಂದು ನಿರ್ಧರಿಸಲು ಇನ್ನೊಬ್ಬರಿಗೆ ಅವಕಾಶ ನೀಡಲ್ಲ. ಇದು ಬಹುತೇಕ ಪುರುಷರಿಗೆ ಇಷ್ಟವಾಗಲ್ಲ.

ಸ್ಟ್ರಾಂಗ್‌ ವುಮೆನ್‌ ಎಲ್ಲರೂ ಆಗಲು ಸಾಧ್ಯವಿಲ್ಲ, ಜೀವನದಲ್ಲಿ ಅಂಥ ಕಠಿಣ ಪರಿಸ್ಥಿತಿಯನ್ನು ಎದುರಿಸಿದವರು ಮಾತ್ರ ಆಗುತ್ತಾರೆ, ಜೀವನದಲ್ಲಿ ಉಂಟಾದ ಕಹಿ ಘಟನೆಗಳು, ಎದುರಾದ ಸವಾಲುಗಳು ಇವುಗಳೆನ್ನೆಲ್ಲಾ ಎದುರಿಸಲು ಅವಳು ಸ್ಟ್ರಾಂಗ್ ಆಗಬೇಕಾಗಿರುತ್ತದೆ. ಆದರೆ ಇಂಥ ಸ್ಟ್ರಾಂಗ್ ಮಹಿಳೆಯನ್ನು ಹ್ಯಾಂಡಲ್‌ ಮಾಡುವುದು ಪುರುಷರಿಗೆ ಸುಲಭವಾಗಿರಲ್ಲ.

ಬಹುತೇಕ ಪುರುಷರಿಗೆ ಯಾವ ಕಾರಣಕ್ಕೆ ಈ ರೀತಿಯ ಸ್ಟ್ರಾಂಗ್ ಮಹಿಳೆ ಜೊತೆ ಬಾಳ್ವೆ ಮಾಡುವುದು ಇಷ್ಟವಾಗಲ್ಲ ಎಂದು ಇಲ್ಲಿ ಹೇಳಲಾಗಿದೆ ನೋಡಿ....

1. ಸ್ಟ್ರಾಂಗ್‌ ಮಹಿಳೆ ತನ್ನ ಬದುಕಿನಲ್ಲಿ ಇನ್ನೊಬ್ಬರ ಸಹಾಯ ಬಯಸಲ್ಲ

1. ಸ್ಟ್ರಾಂಗ್‌ ಮಹಿಳೆ ತನ್ನ ಬದುಕಿನಲ್ಲಿ ಇನ್ನೊಬ್ಬರ ಸಹಾಯ ಬಯಸಲ್ಲ

ಪುರುಷರಿಗೆ ಎಲ್ಲಾ ನನ್ನ ಮುಖಾಂತರ ಆಗಬೇಕು, ಮನೆಯ ಯಜಮಾನ ನಾನು ಎಂಬ ಅಹಂ ಇರುತ್ತೆ, ಪುರುಷ ಅಹಂಗೆ ಪೆಟ್ಟಾದರೆ ಅವನಿಗೆ ಸಹಿಸಲು ಸಾಧ್ಯವಾಗಲ್ಲ, ಆದರೆ ಸ್ಟ್ರಾಂಗ್‌ ಮಹಿಳೆ ಎಲ್ಲದಕ್ಕೂ ಪುರುಷನ ಪರ್ಮಿಷನ್‌ಗೆ ಕಾಯಲ್ಲ, ತನಗೆ ಸರಿ ಅನಿಸಿದ್ದನ್ನು ಮಾಡುತ್ತಾಳೆ, ತನ್ನ ಸಮಸ್ಯೆಯನ್ನು ತಾನೇ ಬಗೆ ಹರಿಸಲು ಪ್ರಯತ್ನಿಸುತ್ತಾಳೆ. ಎಲ್ಲದಕ್ಕೂ ಅವನ ಸಹಾಯ ಕೇಳಲು ಹೋಗಲ್ಲ.

2. ಅವಳಿಗೆ ಏನು ಬೇಕು ಎಂಬುವುದು ಅವಳಿಗೆ ಚೆನ್ನಾಗಿ ಗೊತ್ತಿರುತ್ತದೆ

2. ಅವಳಿಗೆ ಏನು ಬೇಕು ಎಂಬುವುದು ಅವಳಿಗೆ ಚೆನ್ನಾಗಿ ಗೊತ್ತಿರುತ್ತದೆ

ಅವಳಿಗೆ ಏನು ಬೇಕು ಎಂಬುವುದು ಅವಳಿಗೆ ಗೊತ್ತಿರುತ್ತದೆ, ಒಂದು ವೇಳೆ ಅವಳಿಗೆ ಯಾರನ್ನಾದರೂ ಇಷ್ಟವಾದರೆ ಅವಳೇ ಪ್ರಪೋಸ್‌ ಮಾಡುತ್ತಾಳೆ, ಪುರುಷನೇ ಫಸ್ಟ್‌ ಮಾಡಲಿ ಎಂದು ಯೋಚಿಸುವುದಿಲ್ಲ. ಒಬ್ಬರನ್ನು ಇಷ್ಟಪಟ್ಟರೆ ತುಂಬಾನೇ ಇಷ್ಟಪಡುತ್ತಾಳೆ ಅಲ್ಲದೆ ತನಗೆ ಏನು ಆಗಬೇಕೋ ಆ ಗುರಿಯತ್ತ ಕೂಡ ಗಮನ ನೀಡುತ್ತಾಳೆ, ಇದು ತುಂಬಾ ಜನರಿಗೆ ಇಷ್ಟವಾಗಲ್ಲ.

3. ಸ್ಟ್ರಾಂಗ್‌ ಮಹಿಳೆ ನಿಯತ್ತು ಬಯಸುತ್ತಾಳೆ

3. ಸ್ಟ್ರಾಂಗ್‌ ಮಹಿಳೆ ನಿಯತ್ತು ಬಯಸುತ್ತಾಳೆ

ಅವಳು ತನ್ನ ಪುರುಷನಿಗೆ ಎಂದಿಗೂ ಮೋಸ ಮಾಡಲ್ಲ, ಅದೇ ರೀತಿ ಅವನು ಕೂಡ ಮಾಡಬಾರದು ಎಂದು ಬಯಸುತ್ತಾಳೆ, ಆದರೆ ಮೋಸವಾದರೆ ಖಂಡಿತ ಅವನಿಗೆ ಕ್ಷಮೆ ಇರಲ್ಲ, ಎಲ್ಲವನ್ನು ಮರೆತು ನಿನ್ನ ಜೊತೆ ಬಾಳುತ್ತೇನೆ ಎಂದು ಅವಳು ಹೇಳುವುದೇ ಇಲ್ಲ, ಒಮ್ಮೆ ಅವಳ ನಂಬಿಕೆಗೆ ದ್ರೋಹವಾದರೆ ಜಸ್ಟ್‌ ಗುಡ್‌ ಬೈ ಹೇಳಿ ಮುಂದೆ ಹೋಗುತ್ತಾಳೆ.

4. ಆಪ್ತತೆಯನ್ನು ಎಲ್ಲಾ ರೀತಿಯಲ್ಲೂ ಬಯಸುತ್ತಾಳೆ

4. ಆಪ್ತತೆಯನ್ನು ಎಲ್ಲಾ ರೀತಿಯಲ್ಲೂ ಬಯಸುತ್ತಾಳೆ

ಬರೀ ಪ್ರೀತಿಯ ಮಾತಿನಲ್ಲಿ ಅಷ್ಟೇ ಅಲ್ಲ, ಲೈಂಗಿಕ ವಿಷಯದಲ್ಲಿ ತುಂಬಾ ಬೋಲ್ಡ್‌ ಆಗಿರುತ್ತಾಳೆ, ತನಗೆ ಅನಿಸಿದ್ದನ್ನು ತುಂಬಾ ಓಪನ್ ಆಗಿ ಮಾತನಾಡುತ್ತಾಳೆ, ಏನನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.

5. ಸುಳ್ಳನ್ನು ಬೇಗನೆ ಗುರುತಿಸುತ್ತಾಳೆ

5. ಸುಳ್ಳನ್ನು ಬೇಗನೆ ಗುರುತಿಸುತ್ತಾಳೆ

ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕು ಎಂದು ಭಾವಿಸಿದ್ದರೆ ತಪ್ಪು. ಅವಳು ಸುಳ್ಳನ್ನು ಬೇಗನೆ ಕಂಡು ಹಿಡಿಯುತ್ತಾಳೆ, ಆದ್ದರಿಂದ ಇಂಥ ಮಹಿಳೆ ಬಳಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.

6. ಸ್ವಗೌರವ ಬಿಟ್ಟುಕೊಡಲ್ಲ

6. ಸ್ವಗೌರವ ಬಿಟ್ಟುಕೊಡಲ್ಲ

ಅವಳು ತನ್ನ ಸ್ವಗೌರವ ಎಂದಿಗೂ ಬಿಟ್ಟುಕೊಡಲ್ಲ. ಅವಳ ಸ್ವಗೌರವಕ್ಕೆ ಏನಾದರೂ ಪೆಟ್ಟಾದರೆ ಕ್ಷಮಿಸಲು ಸಿದ್ಧವಿರಲ್ಲ. ಪುರುಷ ಅಹಂ ಇರುವವ ಎಲ್ಲ ನನ್ನಿದಷ್ಟೇ ನಡೆಯಬೇಕೆಂದು ಬಯಸುತ್ತಾನೆ, ಅಗ ಈಗೋ ಕ್ಲಾಷ್‌ ಬರುವುದು.

7. ನಿಮಗಾಗಿ ಕಾಯಲ್ಲ

7. ನಿಮಗಾಗಿ ಕಾಯಲ್ಲ

ಅವಳ ಬದುಕಿನಲ್ಲಿ ನೀವು ಇರಲಿ, ಇಲ್ಲದಿರಲಿ ಬದುಕು ನಡೆಯುತ್ತೆ, ನಿಮಗಾಗಿ ಯಾವುದಕ್ಕೂ ಕಾಯಲ್ಲ, ಅವಳನ್ನು ಅದು ಮಾಡಬೇಡ ಎಂದು ಹೇಳಿದರೂ ಕೇಳಲ್ಲ, ತನಗಾಗಿ ಸದಾ ಹೋರಾಟ ಮಾಡುತ್ತಾಳೆ.

8. ನೀವು ಯಾರು ಎಂಬುವುದನ್ನು ಹೇಳುತ್ತಾಳೆ

8. ನೀವು ಯಾರು ಎಂಬುವುದನ್ನು ಹೇಳುತ್ತಾಳೆ

ನಮ್ಮದೇ ಮಿಸ್ಟೇಕ್ಸ್‌ ಇದ್ದರೂ ನಮ್ಮ ಬಗ್ಗೆ ಯಾರಾದರೂ ನೆಗೆಟಿವ್ ಹೇಳಿದರೆ ಇಷ್ಟವಾಗಲ್ಲ, ಆದರೆ ಇವಳು ಮಾತ್ರ ತನಗೆ ಸರಿ ಕಾಣದ್ದನ್ನು ಹೇಳಲು ಹಿಂದೆ -ಮುಂದೆ ಯೋಚಿಸಲ್ಲ, ನಿಮ್ಮನ್ನು ತುಂಬಾ ಪ್ರೀತಿಸುತ್ತಾಳೆ ಅಷ್ಟೋ ನಿಷ್ಠೂರವಾಗಿ ಹೇಳುತ್ತಾಳೆ ಕೂಡ.

ಇಂಥವರಿಗೆ ಪತಿಯಾದರೆ ಅಮ್ಮವರ ಗಂಡ ಅನಿಸಿಕೊಳ್ಳುತ್ತೇನೆ ಎಂದು ಇಂಥ ಸ್ಟ್ರಾಂಗ್ ಮಹಿಳೆಯನ್ನು ಸಂಗಾತಿಯಾಗಿ ಮಾಡಿಕೊಳ್ಳಲು ಬಹುತೇಕ ಪುರುಷರು ಸಿದ್ಧವಿರಲ್ಲ.

ಆದರೆ ಅದು ತಪ್ಪು, ಇವರು ಯಾವತ್ತೂ ಪತಿಯನ್ನು ಕೀಳಾಗಿ ಕಾಣಲ್ಲ ಹಾಗಂತ ತನ್ನ ಸ್ವಗೌರವ ಬಿಟ್ಟು ಕೊಡಲ್ಲ. ಇಬ್ಬರು ಸಮಾನರು, ಅವಳಿಗೆ ಅವಳದ್ದೇ ಆದ ಸ್ಪೇಸ್‌ ನೀಡುತ್ತೇನೆ ಎನ್ನುವ ಪುರುಷ ಸ್ಟ್ರಾಂಗ್ ಮಹಿಳೆಯ ಜೊತೆ ಸ್ಟ್ರಾಂಗ್‌ ರಿಲೇಷನ್‌ಶಿಪ್‌ನಲ್ಲಿ ಇರಬಹುದು.

English summary

Reasons Why Most Men Can’t Handle A Strong Woman in Kannada

Do you know why most of the men don't like strong women,here are the reasons read on...
Story first published: Saturday, August 13, 2022, 17:03 [IST]
X
Desktop Bottom Promotion