For Quick Alerts
ALLOW NOTIFICATIONS  
For Daily Alerts

ಮದುವೆಯಾದ ಮೊದಲ ವರ್ಷದ ಸವಾಲುಗಳು ಹೇಗಿರುತ್ತದೆ?

|

ಮದುವೆ ಎನ್ನುವ ಮೂರಕ್ಷಕರವು ಹಲವಾರು ಜವಾಬ್ದಾರಿ ಹೆಗಲ ಮೇಲೇರಿಸುವ ಜತೆಗೆ ಜೀವನದಲ್ಲಿ ಹೊಸ ಹೊಸ ಪಾಠಗಳನ್ನು ಕಲಿಸಿಕೊಡುತ್ತದೆ. ಮದುವೆ ಮೊದಲು ಪ್ರೀತಿ ಮಾಡಿ ಮದುವೆಯಾಗಿದ್ದರೆ ಆಗ ಹೊಂದಿಕೊಳ್ಳಲು ಹೆಚ್ಚು ಸಮಯ ಬೇಕಾಗದು. ಆದರೆ ಹಿರಿಯರು ನಿಶ್ಚಯಿಸಿದ ಮದುವೆಯಾದರೆ ಆಗ ಖಂಡಿತವಾಗಿಯೂ ಹುಡುಗ ಹಾಗೂ ಹುಡುಗಿ ಪರಸ್ಪರ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತಿದೆ. ಇದಕ್ಕಾಗಿಯೇ ಹನಿಮೂನ್ ಗೆ ಹೋಗಿ ಅಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

Reasons That Tell Why First Year Of Marriage Is Hardest

ಆದರೆ ಒಮ್ಮೆ ಹನಿಮೂನ್ ನಿಂದ ಹಿಂತಿರುಗಿದ ಬಳಿಕ ವಾಸ್ತವದಲ್ಲಿ ಬದುಕಬೇಕಾಗುತ್ತದೆ. ಹನಿಮೂನ್ ಬಳಿಕದ ಜೀವನಕ್ಕೆ ಒಗ್ಗಿಕೊಳ್ಳಬೇಕು. ಅದರಲ್ಲೂ ಇಬ್ಬರು ಉದ್ಯೋಗದಲ್ಲಿದ್ದರೆ, ಆಗ ಅವರ ದೈನಂದಿನ ದಿನಚರಿಯು ಮನೆ, ಕಚೇರಿಯೊಂದಿಗೆ ಆರಂಭವಾಗುತ್ತದೆ. ಆದರೆ ಎರಡಕ್ಕೂ ಹೊಂದಿಕೊಳ್ಳಲು ಕೆಲವರು ಒದ್ದಾಡುತ್ತಿರುತ್ತಾರೆ.

ಮದುವೆಗೆ ಮೊದಲು ಕಚೇರಿಯಲ್ಲಿನ ಜವಾಬ್ದಾರಿ ಮಾತ್ರವಿದ್ದರೆ, ಈಗ ಮನೆ ಹಾಗೂ ಕಚೇರಿ ಎರಡೂ ಜವಾಬ್ದಾರಿಯು ಹೆಗಲ ಮೇಲಿರುವುದು. ಹೀಗಾಗಿ ಮೊದಲ ವರ್ಷದಲ್ಲಿ ದಂಪತಿಗೆ ಹೊಂದಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ ಮತ್ತು ಹಲವಾರು ರೀತಿಯ ಸವಾಲು ಹಾಗೂ ಜವಾಬ್ದಾರಿಗಳನ್ನು ಅವರು ಎದುರಿಸಬೇಕು.

ವಿವಿಧ ರೀತಿಯ ಜವಾಬ್ದಾರಿಗಳು

ವಿವಿಧ ರೀತಿಯ ಜವಾಬ್ದಾರಿಗಳು

ಪುರುಷನಾಗಲಿ ಅಥವಾ ಮಹಿಳೆಗಾಗಲಿ ಮದುವೆ ಎನ್ನುವುದು ಒಂದು ಸಂಭ್ರಮಿಸುವಂತಹ ಸಮಯ ನಿಜವಾದರೂ, ಮದುವೆ ಬಳಿಕ ಹಲವಾರು ರೀತಿಯ ಜವಾಬ್ದಾರಿಗಳು ಹೆಗಲ ಮೇಲೇರುವುದು. ನೀವು ಕುಟುಂಬ, ಪತಿ ಅಥವಾ ಪತ್ನಿ ಮತ್ತು ಮನೆಗೆಲಸ ನೋಡಿಕೊಳ್ಳಬೇಕು. ನೀವು ಮಹಿಳೆಯಾಗಿದ್ದರೆ ಆಗ ನೀವು ಅತ್ತೆ-ಮಾವನನ್ನು ನೋಡಿಕೊಂಡು ಅವರನ್ನು ಸಂತೋಷವಾಗಿಡಬೇಕು.

ಹೊಸ ಕುಟುಂಬ

ಹೊಸ ಕುಟುಂಬ

ಮಹಿಳೆಯಾದರೆ ಆಗ ನೀವು ಅತ್ತೆ-ಮಾವನ ಜತೆಗೆ ನೀವು ವಾಸಿಸಬೇಕು. ಹೀಗಾಗಿ ನೀವು ಒಂದು ಹೊಸ ಕುಟುಂಬವನ್ನು ಸೇರಿಕೊಳ್ಳುತ್ತೀರಿ ಮತ್ತು ಅಲ್ಲಿನ ಪರಿಸ್ಥಿತಿ ನಿಮಗೆ ಹೊಸದಾಗಿರುವುದು. ಹೊಸ ಕುಟುಂಬ ಸದಸ್ಯರೊಂದಿಗೆ ನಿಮಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು.

ಹೊಸ ಸಂಪ್ರದಾಯ ಮತ್ತು ಅಭ್ಯಾಸ ಕಲಿಯಬೇಕಾಗಬಹುದು

ಹೊಸ ಸಂಪ್ರದಾಯ ಮತ್ತು ಅಭ್ಯಾಸ ಕಲಿಯಬೇಕಾಗಬಹುದು

ನಿಮ್ಮ ತಾಯಿ ಮನೆಯಲ್ಲಿ ಇರುವಂತಹ ಸಂಪ್ರದಾಯವು ಪತಿಯ ಮನೆಯಲ್ಲಿ ಇರಲಿಕ್ಕಿಲ್ಲ ಮತ್ತು ಅಲ್ಲಿನ ಕೆಲವೊಂದು ಅಭ್ಯಾಸಗಳಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಬಹುದು. ಅಲ್ಲಿನ ಸಂಪ್ರದಾಯ, ಅಲ್ಲಿನ ಜನರ ಅಭಿರುಚಿ ಮತ್ತು ಯಾವುದು ಇಷ್ಟವಿಲ್ಲವೆನ್ನುವುದನ್ನು ತಿಳಿಯಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಇದಕ್ಕೆಲ್ಲಾ ಹೊಂದಿಕೊಳ್ಳಬೇಕು ಎಂದು ಅತ್ತೆ-ಮಾವನವರು ಬಯಸಬಹುದು. ಆದರೆ ನಿಮಗೆ ಹಾಗೆ ಮಾಡಲು ಸಾಧ್ಯವಾಗದೆ ಇದರಬಹುದು. ಇದರಿಂದ ಸಮಸ್ಯೆಗಳು ಉಂಟಾಗಬಹುದು.

ಹಲವಾರು ನಿರೀಕ್ಷೆಗಳನ್ನು ಈಡೇರಿಸಬೇಕಾಗಬಹುದು

ಹಲವಾರು ನಿರೀಕ್ಷೆಗಳನ್ನು ಈಡೇರಿಸಬೇಕಾಗಬಹುದು

ನಿಮ್ಮ ಅತ್ತೆ-ಮಾವ ಮತ್ತು ಪತಿಗೆ ಹಲವಾರು ರೀತಿಯ ನಿರೀಕ್ಷೆಗಳು ಇರಬಹುದು. ಪತಿ ಹಾಗೂ ಕುಟುಂಬದ ಇತರ ಸದಸ್ಯರನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಬಯಸಬಹುದು. ಅದು ಮಾತ್ರವಲ್ಲದೆ, ಆದಷ್ಟು ಬೇಗನೆ ನೀವು ಮಕ್ಕಳನ್ನು ಪಡೆಯಬೇಕು ಎಂದು ಬಯಸುವರು. ಕುಟುಂಬ ಸದಸ್ಯರಿಗಾಗಿ ಅಡುಗೆ ಮಾಡುವುದು, ಮನೆಗೆಲಸ ಮಾಡುವುದು ಮತ್ತು ಕುಟುಂಬಕ್ಕಾಗಿ ಸಮಯ ನೀಡಬೇಕೆಂದು ಒತ್ತಾಯಿಸಬಹುದು. ಇದರಿಂದ ನಿಮಗೆ ತುಂಬಾ ಒತ್ತಡ ಬೀಳಬಹುದು ಮತ್ತು ಎಲ್ಲವೂ ಅಷ್ಟು ಸುಲಭವಲ್ಲವೆಂದು ಅನಿಸಬಹುದು.

ಪರಸ್ಪರರೊಂದಿಗೆ ಹೆಚ್ಚು ಸಮಯ ಕಳೆಯಲು ಸಿಗದು

ಪರಸ್ಪರರೊಂದಿಗೆ ಹೆಚ್ಚು ಸಮಯ ಕಳೆಯಲು ಸಿಗದು

ಮದುವೆಯಾದ ಮೊದಲ ವರ್ಷದಲ್ಲಿ ಪತಿ ಹಾಗೂ ಪತ್ನಿ ಪರಸ್ಪರ ಜತೆಯಾಗಿ ಸಮಯ ಕಳೆಯಬೇಕು ಎಂದು ಬಯಸುವರು. ಆದರೆ ಇದೆಲ್ಲವೂ ನೀವು ಅಂದುಕೊಂಡಷ್ಟು ಸುಲಭವಾಗಿ ಇರಲ್ಲ. ಮದುವೆಯಾದ ಬಳಿಕ ನೀವಿಬ್ಬರು ಜತೆಯಾಗಿ ಸಮಯ ಕಳೆಯಬಹುದು ಎಂದು ಅನಿಸಿರಬಹುದು. ಆದರೆ ಪರಿಸ್ಥಿತಿಯು ಇದಕ್ಕೆ ಸಂಪೂರ್ಣ ವಿರುದ್ಧವಾಗಿರುವುದು. ಮದುವೆಯಾದ ಆರಂಭದಲ್ಲಿ ಹಲವಾರು ಮಂದಿ ಅತಿಥಿಗಳು ಮತ್ತು ಸಂಬಂಧಿಕರು ಬಂದು ಹೋಗುತ್ತಿರುವರು. ನಿಮ್ಮಿಬ್ಬರಿಗೆ ಹೆಚ್ಚಿನ ಕೆಲಸವೂ ಇರಬಹುದು. ಇದರಿಂದ ನಿಮಗಿಬ್ಬರಿಗೆ ಜತೆಯಾಗಿ ಹೆಚ್ಚು ಸಮಯ ಕಳೆಯಲು ಸಿಗದು.

ಪರಸ್ಪರ ದುರ್ಬಲತೆಯು ತಿಳಿದುಬರುವುದು

ಪರಸ್ಪರ ದುರ್ಬಲತೆಯು ತಿಳಿದುಬರುವುದು

ಪತಿ ಮತ್ತು ಪತ್ನಿ ಕೆಲವು ತಿಂಗಳು ಜತೆಯಾಗಿ ಕಳೆದ ಬಳಿಕ ಪರಸ್ಪರ ದುರ್ಬಲತೆ ಹಾಗೂ ಒಳ್ಳೆಯ ಗುಣಗಳು ತಿಳಿದುಬರುವುದು. ಇದರಿಂದ ನಿಮಗೆ ಉತ್ತಮ ರೀತಿಯಲ್ಲಿ ಅರಿತುಕೊಳ್ಳಲು ಸಾಧ್ಯವಾಗುವುದು. ಸಂಗಾತಿಯ ನಕಾರಾತ್ಮಕ ಗುಣಗಳು ಕೂಡ ನಿಮಗೆ ತಿಳಿದುಬರುವುದು. ಇಂತಹ ಸಂದರ್ಭದಲ್ಲಿ ನೀವು ನಿರೀಕ್ಷೆ ಮಾಡಿದೆಲ್ಲವೂ ತಲೆಕೆಳಗೆ ಆಗಬಹುದು. ಆಲೋಚನೆ, ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು.

ಸರಣಿ ವಾಗ್ವಾದಗಳು ನಡೆಯಬಹುದು

ಸರಣಿ ವಾಗ್ವಾದಗಳು ನಡೆಯಬಹುದು

ಎಲ್ಲಾ ಮನುಷ್ಯರು ಒಂದೇ ರೀತಿಯಾಗಿ ಇರಲ್ಲ, ನಿಮ್ಮ ಸಂಗಾತಿ ಮತ್ತು ನೀವು ಕೂಡ ಇದಕ್ಕೆ ಹೊರತಾಗಿಲ್ಲ. ನೀವಿಬ್ಬರು ತುಂಬಾ ಭಿನ್ನ ಹಿನ್ನೆಲೆಯಿಂದ ಬಂದವರಾಗಿರುವ ಕಾರಣದಿಂದಾಗಿ ನಿಮ್ಮ ಅಭಿಪ್ರಾಯ ಮತ್ತು ಯೋಚನೆಗಳು ಭಿನ್ನವಾಗಿ ಇರಬಹುದು. ಪ್ರತೀ ಸಲವೂ ನೀವು ಒಂದೇ ವಿಚಾರದ ಬಗ್ಗೆ ಒಪ್ಪಿಕೊಳ್ಳುವಂತಹ ಸಾಧ್ಯತೆಯು ಇಲ್ಲ. ನಿಮ್ಮಿಬ್ಬರ ಆದ್ಯತೆಗಳು ಭಿನ್ನವಾಗಿರಬಹುದು ಮತ್ತು ಇದರಿಂದ ವಾಗ್ವಾದ ಉಂಟಾಗುವ ಸಾಧ್ಯತೆಗಳು ಇರುವುದು.

ಪ್ರತಿಯೊಂದು ಸಂಬಂಧದಲ್ಲೂ ಹಲವಾರು ಏಳುಬೀಳುಗಳು ಇದ್ದೇ ಇರುತ್ತದೆ. ಆದರೆ ನೀವು ಮದುವೆಯಾದ ಮೊದಲ ವರ್ಷದಲ್ಲೇ ನೀವು ಹೊಂದಿಕೊಳ್ಳಲು ಸಾಧ್ಯವಿಲ್ಲವೆಂದೇನಿಲ್ಲ. ಮದುವೆ ಬಳಿಕ ಬರುವಂತಹ ಸವಾಲುಗಳಿಗೆ ನೀವು ಹೆದರುವ ಬದಲು ಅದನ್ನು ನಿಭಾಯಿಸಲು ಕಲಿತುಕೊಳ್ಲಿ. ಸರಿಯಾದ ಪ್ರಯತ್ನದೊಂದಿಗೆ ಪ್ರೀತಿ ಮತ್ತು ಆರೈಕೆ ಮಾಡಿದರೆ ನಿಮ್ಮ ಮದುವೆಯು ಖಂಡಿತವಾಗಿಯೂ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.

English summary

Reasons That Tell Why First Year Of Marriage Is Hardest

Here we are discussing about Reasons That Tell Why First Year Of Marriage Is Hardest. To know what those reasons are, scroll down this article to read more. Read more.
X
Desktop Bottom Promotion