For Quick Alerts
ALLOW NOTIFICATIONS  
For Daily Alerts

ವಿಶ್ವ ಕುಟುಂಬ ದಿನ: ಮನುಷ್ಯನಿಗೆ ಈ ಎಲ್ಲಾ ಅನುಭವ, ಖುಷಿ ಕೂಡು ಕುಟುಂಬ ಮಾತ್ರ ಕೊಡಲು ಸಾಧ್ಯ

|

ಕುಟುಂಬ ಎಂಬ ಪರಿಕಲ್ಪನೆಯೇ ಸುಂದರ. ಮಗುವಿಗೆ ಮನೆಯೇ ಪಾಠ ಶಾಲೆ ಅಂತಾರೆ. ಒಂದು ಮಗು ಬೆಳೆದು ದೊಡ್ಡದಾಗುವಾಗ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕುಟುಂಬ ಬೀರುವ ಪ್ರಭಾವವು ದೊಡ್ಡದಾಗಿರುತ್ತದೆ. ಭಾರತದಲ್ಲಿ ಹಿಂದೆಯೆಲ್ಲಾ ಕೂಡು ಕುಟುಂಬ ಅಂದರೆ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದೆವು.

Advantages And Disadvantages Of Living In a Joint Family | Boldsky Kannada
International Family Day: Advantages and Disadvantages of Living in a Joint Family

ಆದರೆ ಆಧುನಿಕತೆ ಬೆಳೆದಂತೆ ಕುಟುಂಬದ ಚಿತ್ರಣವೇ ಬದಲಾಗುತ್ತಾ ಬಂತು. ಕೂಡು ಕುಟುಂಬದ ಬದಲು ಸಣ್ಣ ಕುಟುಂಬಗಳು ಹೆಚ್ಚಾದವು. ಒಂದು ಕುಟುಂಬ ಎಂದರೆ ಗಂಡ-ಹೆಂಡತಿ ಮಕ್ಕಳು ಅವರಷ್ಟೇ ಎಂಬಂತಾಯಿತು. ಇದೀಗ ನಮ್ಮಲ್ಲಿ ಸಣ್ಣ ಕುಟುಂಬಗಳೇ ಹೆಚ್ಚಾಗಿವೆ.

ಹಾಗಂತ ಈ ಸಣ್ಣ ಕುಟುಂಬದಲ್ಲಿ ಕೂಡು ಕುಟುಂಬದ ಸಂತೋಷ ಕಾಣಲು ಸಾಧ್ಯವೇ? ಖಂಡಿತ ಇಲ್ಲ... ಇದು ಅವಿಭಕ್ತ ಕುಟುಂಬದಲ್ಲಿದ್ದು ಇದೀಗ ಸಣ್ಣ ಕುಟುಂಬದಲ್ಲಿರುವವರಿಗೆ ತಾವೇನು ಮಿಸ್‌ ಮಾಡುತ್ತಿದ್ದೇವೆ ಎಂಬುವುದರ ಅರಿವು ಉಂಟಾಗಿರುತ್ತದೆ.

ಸಣ್ಣ ಕುಟುಂಬ ಆರ್ಥಿ ಕ ಹಾಗೂ ಖಾಸಗಿಯನದ ದೃಷ್ಟಿಯಿಂದ ನೋಡುವುದಾದರೆ ಒಳ್ಳೆಯದು ಎನಿಸಬಹುದು. ಆದರೆ ಅಲ್ಲಿ ಕೂಡು ಕುಟುಂಬದಲ್ಲಿ ಸಿಗುವ ಖುಷಿ ಹಾಗೂ ಅನುಭವದ ಪಾಠ ಸಿಗಲು ಸಾಧ್ಯವೇ? ಇಲ್ಲಿ ನಾವು ಕೂಡು ಕುಟುಂಬದ ಪ್ರಯೋಜಗಳು ಹಾಗೂ ಉಂಟಾಗುವ ತೊಂದರೆಗಳ ಬಗ್ಗೆ ಹೇಳಿದ್ದೇವೆ ನೋಡಿ:

ಕೂಡು ಕುಟುಂಬದ ಪ್ರಯೋಜನಗಳು

ಕೂಡು ಕುಟುಂಬದ ಪ್ರಯೋಜನಗಳು

1. ಮಗು ಒಂಟಿಯಾಗುವುದೇ ಇಲ್ಲ

ಸಣ್ಣ ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುವವರು ಆದರೆ ಮಕ್ಕಳನ್ನು ಸಾಕಿ ಬೆಳೆಸುವುದೇ ಒಂದು ದೊಡ್ಡ ಸವಾಲು. ಆದರೆ ಕೂಡು ಕುಟುಂಬದಲ್ಲಿ ನೋಡಿ ಅಂಥ ಸಮಸ್ಯೆಯೇ ಎದುರಾಗುವುದಿಲ್ಲ. ಅಲ್ಲಿ ಎಷ್ಟೇ ಮಕ್ಕಳಲಿರಲಿ ಅವರು ಬೆಳೆದು ದೊಡ್ಡದಾಗುವುದೇ ಗೊತ್ತಾಗುವುದಿಲ್ಲ. ಅಪ್ಪ-ಅಮ್ಮ ಹೊಲ, ಮನೆ ಕೆಲಸದಲ್ಲಿ ತೊಡಗಿದ್ದರೂ ಮಕ್ಕಳನ್ನು ನೋಡಿಕೊಳ್ಳಲು ಅಜ್ಜ-ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಯಾರಾದರು ಒಬ್ಬರು ಇದ್ದೇ ಇರುತ್ತಾರೆ. ಆದ್ದರಿಂದಲೇ ಅವರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ ಅನಿಸುವುದಿಲ್ಲ ಹಾಗೂ ಮಕ್ಕಳಿಗೆ ಒಂಟಿ ಎಂದು ಅನಿಸುವುದಿಲ್ಲ. ಅವರು ಇತರ ಮಕ್ಕಳ ಜೊತೆ ಆಡಿ ಕುಣಿದು ಬೆಳೆಯುತ್ತಾರೆ.

2. ದುಪ್ಪಟ್ಟು ಖುಷಿ

2. ದುಪ್ಪಟ್ಟು ಖುಷಿ

ನೀವು ಕೂಡು ಕುಟುಂಬದಲ್ಲಿದ್ದರೆ ಅದರ ಖುಷಿ ಗೊತ್ತಾಗಿರುತ್ತದೆ. ಅಲ್ಲಿ ಏನೇ ಹಬ್ಬ ಹರಿದಿನವಿರಲಿ ಅದರ ಸಡಗರವೇ ಬೇರೆ. ಕುಟುಂಬ ಸದಸ್ಯರ ಸಣ್ಣ ಪುಟ್ಟ ಸಾಧನೆಯನ್ನೂ ಸಂಭ್ರಮಿಸುತ್ತಾರೆ. ಇನ್ನು ಏನಾದರೂ ಬೇಸರವಾದರೆ ಸಮಧಾನ ಪಡಿಸಲು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ.

3. ಹಂಚಿಕೊಂಡು ತಿನ್ನುವುದು ಕಲಿಯುತ್ತಾರೆ

3. ಹಂಚಿಕೊಂಡು ತಿನ್ನುವುದು ಕಲಿಯುತ್ತಾರೆ

ಕೂಡು ಕುಟುಂಬದಲ್ಲಿ ಬೆಳೆಯುವ ಮಕ್ಕಳಿಗೆ ನಾನು, ನನ್ನದು ಎಂಬ ಸ್ವಾರ್ಥ ತುಂಬಾ ಕಡಿಮೆ. ಏನೇ ಸಿಕ್ಕಲಿ ಹಂಚಿಕೊಂಡು ತಿನ್ನುವುದನ್ನು ಕಲಿತಿರುತ್ತಾರೆ. ಈ ಗುಣ ಬೆಳೆಯುವಾಗ ಇದ್ದರೆ ಆ ವ್ಯಕ್ತಿ ಉತ್ತಮ ವ್ಯಕ್ತಿತ್ವದವನು ಆಗಿರುತ್ತಾನ ಎಂಬುವುದರಲ್ಲಿ ನೋಡೌಟ್.

4. ಗೌರವ ಕೊಡುವುದನ್ನುನಲಿಯುತ್ತಾರೆ

4. ಗೌರವ ಕೊಡುವುದನ್ನುನಲಿಯುತ್ತಾರೆ

ಕೂಡು ಕುಟುಂಬದಲ್ಲಿ ಅಪ್ಪ-ಅಮ್ಮ ಮಾತ್ರವಲ್ಲ ಪ್ರತಿಯೊಬ್ಬರೂ ಮಗುವನ್ನು ತಿದ್ದಿ ತೀಡುತ್ತಾರೆ. ಯಾವುದು ತಪ್ಪು-ಯಾವುದು ಸರಿ ಎಂದು ಹೇಳುತ್ತಾರೆ. ಇದರಿಂದಾಗಿ ಮಗು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯುತ್ತಾರೆ.

 5. ಪುಸ್ತಕ ಹೊರತುಪಡಿಸಿ ಬದುಕು ಕಲಿಯುತ್ತಾರೆ

5. ಪುಸ್ತಕ ಹೊರತುಪಡಿಸಿ ಬದುಕು ಕಲಿಯುತ್ತಾರೆ

ಕುಟುಂಬದಲ್ಲಿ ನಡೆಯುವ ಘಟನೆಗಳು, ಅವರ ಅನುಭವಗಳು ಇವುಗಳೆನ್ನೆಲ್ಲಾ ನೋಡಿ ಬೆಳೆಯುವುದರಿಂದ ಪುಸ್ತಕ ಹೊರತು ಪಡಿಸಿ ಅಲ್ಲಿ ಬೆಳೆಯುವ ಮಕ್ಕಳು ಬದುಕಿನ ಪಾಠ ಕಲಿಯುತ್ತಾರೆ. ಪುಸ್ತಕದಲ್ಲಿ ಕಲಿತ ಪಾಠಕ್ಕಿಂತ ಬದುಕು ರೂಪಿಸಲು ಬದುಕು ಕಲಿಸಿದ ಪಾಠ ಮುಖ್ಯವಾಗಿರುತ್ತದೆ ಅಲ್ಲವೇ? ಇಲ್ಲಿ ಬೆಳೆದ ಮಕ್ಕಳಿಗೆ ಸವಾಲುಗಳನ್ನು ಎದುರಿಸಲು ಗೊತ್ತಿರುತ್ತದೆ.

6. ಪ್ರೀತಿ ಮತ್ತು ಆರೈಕೆ

6. ಪ್ರೀತಿ ಮತ್ತು ಆರೈಕೆ

ಕೂಡು ಕುಟುಂಬದಲ್ಲಿ ಸಿಗುವ ಪ್ರೀತಿ ಮತ್ತು ಆರೈಕೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಲ್ಲಿಂದ ಪ್ರತಿಯೊಂದು ಹೆಜ್ಜೆಗೂ ನಿಮ್ಮನ್ನು ಆರೈಕೆ ಮಾಡುವವರು ಇರುತ್ತಾರೆ, ನೀವು ಖುಷಿಯಲ್ಲಿದ್ದೀರಾ, ದುಃಖದಲ್ಲಿದ್ದೀರಾ ಎಂದು ಗಮನಿಸುವವರು ಇರುತ್ತಾರೆ. ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಹೀಗೆ ಎಲ್ಲರ ಪ್ರೀತಿ, ಆರೈಕೆ ದೊರೆಯುತ್ತದೆ.

7. ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂಬ ಭಾವನೆ

7. ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂಬ ಭಾವನೆ

ಕೂಡು ಕುಟುಂಬದಲ್ಲಿ ಏನೇ ಸಮಸ್ಯೆ ಬರಲಿ ಎಲ್ಲರೂ ಅದನ್ನು ಒಟ್ಟಾಗಿ ಕೂತು ಚರ್ಚಿಸಿ ಪರಿಹರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ನಾನು ಒಂಟಿ ಎಂದು ಕಷ್ಟದ ಸಮಯದಲ್ಲಿ ಅನಿಸುವ ಬದಲು, ನಾವೆಲ್ಲಾ ಇದ್ದೇವೆ ಎಂದು ಅನಿಸಲಾರಂಭಿಸುತ್ತದೆ. ಇನ್ನು ಮನೆ ಕೆಲಸ, ಇತರ ಕೆಲಸಗಳಿಗೆ ಹೊರಗಿನ ವ್ಯಕ್ತಿ ಬೇಕಾಗುವುದಿಲ್ಲ, ಎಲ್ಲರೂ ಒಟ್ಟಾಗಿ ಮಾಡಿ ಮುಗಿಸುತ್ತಾರೆ. ಎಲ್ಲರೂ ಮನೆಯ ಏಳಿಗೆಯ ಕುರಿತು ಚಿಂತಿಸುತ್ತಾರೆ.

8. ಸಾಮಾಜಿಕವಾಗಿ ಬೆರೆಯಲು ಕಲಿತಿರುತ್ತಾರೆ

8. ಸಾಮಾಜಿಕವಾಗಿ ಬೆರೆಯಲು ಕಲಿತಿರುತ್ತಾರೆ

ಯಾರು ಅವಿಭಕ್ತ ಕುಟುಂಬದಿಂದ ಬೆಳೆದು ಬಂದಿರುತ್ತಾರೋ ಅವರು ಎಲ್ಲಾ ವಯಸ್ಸಿನವರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರಿರ ಮನಸ್ಸನ್ನು ಅರಿತು ಅವರೊಂದಿಗೆ ಬೆರೆಯುತ್ತಾರೆ. ಅವಿಭಕ್ತ ಕುಟುಂಬದ ವ್ಯಕ್ತಿಗಳು ಭಿನ್ನ ಸ್ವಭಾವದ ವ್ಯಕ್ತಿಗಳನ್ನು ನೋಡಿರುತ್ತಾರೆ. ಆದ್ದರಿಂದ ಎಲ್ಲಾ ಸ್ವಭಾವದವರೊಂದಿಗೆ ಬೆರೆಯುವುದು ಕಷ್ಟವಾಗಲ್ಲ.

9. ಕೂಡು ಕುಟುಂಬದಲ್ಲಿ ಎದುರಾಗುವ ಸವಾಲುಗಳು

9. ಕೂಡು ಕುಟುಂಬದಲ್ಲಿ ಎದುರಾಗುವ ಸವಾಲುಗಳು

ಕೂಡು ಕುಟುಂಬದಲ್ಲಿ ಸಣ್ಣ ಕುಟುಂಬಕ್ಕಿಂತ ಹೆಚ್ಚಿನ ಸವಾಲುಗಳಿರುತ್ತವೆ.

ಆರ್ಥಿಕ ಪರಿಸ್ಥಿತಿ ಕೆಲವರಷ್ಟೇ ತೂಗಿಸಿಕೊಂಡು ಹೋಗಬೇಕು

ಕೂಡು ಕುಟುಂಬದಲ್ಲಿ ಇದೊಂದು ದೊಡ್ಡ ಸವಾಲು. ಮನೆಯಲ್ಲಿ ಕೆಲವರು ದುಡಿದರೆ ಮತ್ತೆ ಕೆಲವರು ಆ ಕಡೆ ಚಿಂತೆನೇ ಮಾಡುವುದಿಲ್ಲ. ಎಲ್ಲರ ಹೊಟ್ಟೆ ತುಂಬಿಸುವ ಜವಾಬ್ದಾರಿ ಕೆಲವರ ಮೇಲಷ್ಟೇ ಬೀಳುತ್ತದೆ. ಇದು ಅವರಿಗೆ ಹೊರೆಯಾಗಬಹುದು. ಇನ್ನು ಆರ್ಥಿಕ ಸ್ವಾತಂತ್ರ್ಯ ಕೂಡ ಕೆಲವರ ಕೈಯಲ್ಲಿಯಷ್ಟೇ ಇರುತ್ತದೆ. ಇವುಗಳನ್ನು ಸರಿದೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲು.

10. ಖಾಸಗಿತನ ಇರುವುದಿಲ್ಲ

10. ಖಾಸಗಿತನ ಇರುವುದಿಲ್ಲ

ಕೂಡು ಕುಟುಂಬದಲ್ಲಿ ನಾನು, ನನ್ನದು ಎನ್ನುವುದಕ್ಕೆ ಅವಕಾಶವಿಲ್ಲ. ಇಲ್ಲಿ ವ್ಯಕ್ತಿಗೆ ಖಾಸಗಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಎಲ್ಲರಿಗೆ ಎಲ್ಲಾ ವಿಷಯಗಳು ತಿಳಿದಿರುತ್ತದೆ ಅಲ್ಲದೆ ವೈಯಕ್ತಿಕ ವಿಷಯಗಳ ಮೇಲೆ ಬೇರೆಯವರು ತಮ್ಮ ಅನಿಸಿಕೆ ಹೇರಲು ಪ್ರಯತ್ನಿಸುತ್ತಾರೆ. ಯಾವುದನ್ನೂ ಸ್ವ ನಿರ್ಧಾರದಿಂದ ಮಾಡಲು ಸಾಧ್ಯವಾಗುವುದಿಲ್ಲ. ಯಾವುದೇ ಚಿಕ್ಕ ನಿರ್ಧಾರಕ್ಕೂ ಎಲ್ಲರ ಅಭಿಪ್ರಾಯ ಮುಖ್ಯವಾಗಿರುತ್ತದೆ.

English summary

International Family Day: Advantages and Disadvantages of Living in a Joint Family

In India Joint Family system disappearing. On International Family Day let we discuss advantages and disadvantages of joint family.
X
Desktop Bottom Promotion