For Quick Alerts
ALLOW NOTIFICATIONS  
For Daily Alerts

ದಂಪತಿ ಹೀಗೆ ಮಲಗಿದರೆ ವಿಚ್ಚೇದನೆ ಆಗಬಹುದು ಎಂಬ ಮುನ್ಸೂಚನೆಗಳು

|

ಅಷ್ಟು ವರ್ಷ ಚೆನ್ನಾಗಿದ್ದ ದಾಂಪತ್ಯದಲ್ಲಿ ಸ್ವಲ್ಪ ದಿನಗಳಿಂದ ಏನೋ ಒಂದು ಕೊರತೆ ಎಂಬಂತೆ ಅವಳಿಗೆ ಭಾಸವಾಗುತ್ತದೆ, ಗಂಡ ಏಕೋ ತನ್ನಿಂದ ದೂರ ಸರಿಯುತ್ತಿದ್ದಾನಾ ಎಂಬ ಭಾವನೆ, ಆತ ಎಲ್ಲಾದರೂ ಬೇರೆ ಸಂಬಂಧದಲ್ಲಿ ಸಿಲುಕಿರಬಹುದಾ ಎಂಬ ಸಣ್ಣ ಅನುಮಾನ ಕಾಡುತ್ತದೆ, ಆದರೆ ಕೇಳಲು ಸಾಧ್ಯವಾಗುವುದಿಲ್ಲ, ಸಾಧ್ಯವಾಗುವುದಿಲ್ಲ ಎಂಬುವುದಕ್ಕಿಂತ ಒಂದು ವೇಳೆ ಅದು ನಿಜವಾದರೆ ಎಂಬ ಅವ್ಯಕ್ತ ಭಯ.

Study says if you sleep in this position

ಒಂದೇ ಕೋಣೆಯಲ್ಲಿ ಒಂದೇ ಮಂಚದಲ್ಲಿ ಇಬ್ಬರು ಮಲಗಿದ್ದರೂ ಅಲ್ಲಿ ಮಾತಿಲ್ಲ, ಬೆಚ್ಚಗಿನ ಅಪ್ಪುಗೆಯಿಲ್ಲ, ಇಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿರುತ್ತಾರೆ, ಆಕೆ ಅವನ ಗಮನ ಸೆಳೆಯಲು ಆತನ ಕಡೆ ತಿರುಗಿ ಮಲಗಿದರೂ ಆತನಿಂದ ಯಾವುದೇ ಸ್ಪಂದನೆಯಿಲ್ಲ, ಒಂದು ದೀರ್ಘ ನಿಟ್ಟುಸಿರು ಬಿಟ್ಟು ಹಾಗೇ ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸುತ್ತಾನೆ.

ಮತ್ತೊಂದು ಸಂಸಾರದಲ್ಲಿ ಆತನಿಗೆ ಅವಳಲ್ಲಿ ಏನೋ ಬದಲಾವಣೆ ಆದಂತೆ ಅನಿಸುತ್ತದೆ. ರಾತ್ರಿ ಅಪ್ಪಿಕೊಳ್ಳಲು ಹೋದರೆ ಕೊಸರಾಟ, ತನ್ನ ಮಂಡಿ ಮಡಚಿ ಮುಖವನ್ನು ಮಂಡಿಯತ್ತ ತಂದು ಮುದುರಿ ಮಲಗಿರುತ್ತಾಳೆ, ಅವಳಿಗೆ ಆತನ ಕಡೆ ಇರುವ ನಿರ್ಲಕ್ಷ್ಯ, ನಿರಾಸಕ್ತಿ ಎದ್ದು ಕಾಣುತ್ತಿರುತ್ತದೆ.

ಇವೆಲ್ಲಾ ದಾಂಪತ್ಯದಲ್ಲಿ ಕಂಡು ಬಂದರೆ ಎಚ್ಚರವಹಿಸಲೇ ಬೇಕು, ಏಕೆಂದರೆ ನಿಮ್ಮ ದಾಂಪತ್ಯ ಜೀವನ ಮುರಿದು ಬೀಳಲಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ.

ದಂಪತಿ ಮಲಗುವ ಭಂಗಿಗೂ ವಿಚ್ಛೇದನಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಅಧ್ಯಯನ ನಡೆಸಲಾಯಿತು. ಈ ಸಮೀಕ್ಷೆಯಲ್ಲಿ 4,987 ವಿಚ್ಛೇದಿತ ಪುರುಷರು, 4,786 ವಿಚ್ಛೇದಿತ ಮಹಿಳೆಯರು ಭಾಗವಹಿಸಿದ್ದರು.
ಅವರಲ್ಲಿ ಶೇ. 80ರಷ್ಟು ಮಹಿಳೆಯರು ವಿಚ್ಚೇದನಕ್ಕೆ ಮೊದಲು ಗಂಡನಿಗೆ ಬೆನ್ನು ಮಾಡಿ ಮುದುಡಿ ಮಲಗುತ್ತಿದ್ದೆ ಎಂದು ಹೇಳಿದ್ದಾರೆ.
ಈ ಸಮೀಕ್ಷೆ ಆಧಾರದ ಮೇಲೆ ಗಂಡ ಹೆಂಡತಿ ಯಾವ ರೀತಿ ಮಲಗಿದ್ದರೆ ಅದು ಮುಂದೆ ಗಂಡ-ಹೆಂಡತಿ ಬೇರೆಯಾಗಬಹುದು ಎಂದು ಹೇಳಲಾಗಿದೆ.

ಒಂದು ವೇಳೆ ನೀವು ಈ ರೀತಿ ಮಲಗುತ್ತಿದ್ದರೆ ಗಾಬರಿಯಾಗಬೇಡಿ, ನಿಮ್ಮ ಸಂಬಂಧದ ಬಗ್ಗೆ ಅವಲೋಕನ ಮಾಡಿ, ಇಬ್ಬರ ಬಾಂಧವ್ಯ ಹೇಗೆ ಬಲಪಡಿಸುವುದು ಎಂಬ ನಿಟ್ಟಿನಲ್ಲಿ ಯೋಚಿಸಿ.

ಬನ್ನಿ ಯಾವ ರೀತಿ ಮಲಗುವುದು ದಂಪತಿ ನಡುವೆ ಬಿರುಕು ಮೂಡಿದೆ ಎಂಬ ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ:

1. ಒಬ್ಬರ ಕಾಲು ಮೇಲೆ ಮತ್ತೊಬ್ಬರು ಹಾಕಿ ಮಲಗುವುದು

1. ಒಬ್ಬರ ಕಾಲು ಮೇಲೆ ಮತ್ತೊಬ್ಬರು ಹಾಕಿ ಮಲಗುವುದು

ಶೇ.82ರಷ್ಟು ಜನರು ವಿಚ್ಚೇದನಕ್ಕೆ ಮುನ್ನ ಈ ರೀತಿ ಮಲಗುತ್ತಿದ್ದರು ಎಂದು ಹೇಳಿದ್ದಾರೆ. ಹೀಗೆ ಒಬ್ಬರ ಮೇಲೆ ಒಬ್ಬರು ಕಾಲು ಹಾಕಿ ಮಲಗುತ್ತಿದ್ದೇವೆ ಹೊರತು ಯಾವುದೇ ರೊಮ್ಯಾನ್ಸ್ ಇರಲಿಲ್ಲ ಎಂದು ಹೇಳಿದ್ದಾರೆ.

 2. ಬೆನ್ನು ತಿರುಗಿಸಿ ಒಬ್ಬರಿಗೊಬ್ಬರು ತಾಗದಂತೆ ಮಲಗುವುದು

2. ಬೆನ್ನು ತಿರುಗಿಸಿ ಒಬ್ಬರಿಗೊಬ್ಬರು ತಾಗದಂತೆ ಮಲಗುವುದು

ಶೇ.78ರಷ್ಟು ಜನರು ನಮ್ಮಲ್ಲಿ ಬಿರುಕು ಮೂಡಿದ ಮೇಲೆ ಒಂದೇ ರೂಮ್‌ನಲ್ಲಿ ಇದ್ದರೂ ಬೆನ್ನು ತಿರುಗಿಸಿ ಮಲಗುತ್ತಿದ್ದೆವು ಎಂದು ಹೇಳಿದ್ದಾರೆ.

3. ದೂರ ಮಲಗುವುದು

3. ದೂರ ಮಲಗುವುದು

ಶೇ.73ರಷ್ಟು ಜನರು ವಿಚ್ಛೇದನಕ್ಕೆ ಮುನ್ನ ನಾವಿಬ್ಬರು ದೂರ-ದೂರ ಮಲಗುತ್ತಿದ್ದೆವು ಎಂದು ಹೇಳಿದ್ದಾರೆ.

4. ಅಂಗಾಂತ ಮಲಗುವುದು

4. ಅಂಗಾಂತ ಮಲಗುವುದು

ಶೇ.71ರಷ್ಟು ಜನರು ನಾವಿಬ್ಬರು ಮೇಲ್ಛಾವಣೆ ನೋಡಿ ಮಲಗುತ್ತಿದ್ದೆವು, ಇಬ್ಬರಲ್ಲಿ ಯಾವುದೇ ರೊಮ್ಯಾನ್ಸ್ ಇರಲಿಲ್ಲ ಎಂದಿದ್ದಾರೆ.

5. ಆಕೆ ಮಾತ್ರ ಅಪ್ಪಿಕೊಂಡು ಮಲಗುವುದು

5. ಆಕೆ ಮಾತ್ರ ಅಪ್ಪಿಕೊಂಡು ಮಲಗುವುದು

ಶೇ. 70 ಮಹಿಳೆಯರು ನಾನು ಮಾತ್ರ ಅಪ್ಪಿಕೊಳ್ಳುತ್ತಿದ್ದೆ, ಅವನ ಗಮನ ನನ್ನತ್ತ ಸೆಳೆಯಲು ಹಾಗೆ ಮಾಡುತ್ತಿದ್ದೆ ಎಂದಿದ್ದಾರೆ. ನೀವು ಅಪ್ಪಿಕೊಂಡಾಗ ಆತನಿಂದ ನೀವು ಬಯಸಿದ ಪ್ರತಿಕ್ರಿಯೆ ಬಾರದಿದ್ದರೆ ಒಳ್ಳೆಯ ಲಕ್ಷಣವಲ್ಲ, ನಿಮ್ಮ ಸಂಬಂಧದ ನಡುವೆ ಬಿರುಕು ಆಗಿದೆ ಎಂದು ಹೇಳಬಹುದು.

6. ಕೈ ಹಿಡಿದು ಮಲಗುವುದು

6. ಕೈ ಹಿಡಿದು ಮಲಗುವುದು

ಶೇ.64 ದಂಪತಿ ವಿಚ್ಛೇದನಕ್ಕೆ ಮುನ್ನ ಹೀಗೆ ಮಲಗುತ್ತಿದ್ದರು ಎಂದು ಹೇಳಿದ್ದಾರೆ. ಇಬ್ಬರು ಒಬ್ಬರ ಕೈಯನ್ನು ಒಬ್ಬರು ಹಿಡಿದು ಮಲಗಿದ್ದರೂ ಅದರಲ್ಲಿ ಒಬ್ಬರಿಗೆ ತನ್ನ ಸಂಗಾತಿ ಏಕೋ ಬದಲಾವಣೆಯಾಗಿದೆ ಎಂಬ ಅನಿಸಿಕೆ ಬಂದಿರುತ್ತದೆ.

ಗಂಡ ಮಾತ್ರ ಅಪ್ಪಿಕೊಂಡು ಮಗುವುದು

ಗಂಡ ಮಾತ್ರ ಅಪ್ಪಿಕೊಂಡು ಮಗುವುದು

ಆಕೆ ಆತನಿಂದ ದೂರ ಸರಿಯುತ್ತಿದ್ಅದಾಳೆ ಎಂದು ಅನಿಸಿದಾಗ ಅವನು ಅವಳ ಗಮನ ಸೆಳೆಯಲು ಅವಳನ್ನು ಅಪ್ಪಿಕೊಂಡು ಮಲಗಲು ಬಯಸುತ್ತಾನೆ.

ಮಂಚದ ಈ ತುದಿಲ್ಲಿ ಇವನು ಆ ತುದಿಯಲ್ಲಿ ಅವಳು

ಮಂಚದ ಈ ತುದಿಲ್ಲಿ ಇವನು ಆ ತುದಿಯಲ್ಲಿ ಅವಳು

ಶೇ.51ರಷ್ಟು ಜನರು ಇಬ್ಬರು ದೂರವಾಗುವ ಮುನ್ನ ಒಂದೇ ಮಂಚದಲ್ಲಿ ಮಲಗಿದರೂ ದೂರ-ದೂರ ಮಲಗುತ್ತಿದ್ದೆವು ಎಂದು ಹೇಳಿದ್ದಾರೆ

ಆತ ಮಾತ್ರ ಮೆಲ್ಲನೆ ಮುಟ್ಟುವುದು, ಮೈ ಸವರುವುದು

ಆತ ಮಾತ್ರ ಮೆಲ್ಲನೆ ಮುಟ್ಟುವುದು, ಮೈ ಸವರುವುದು

ಆಕೆಯ ಗಮನ ಸೆಳೆಯಲು ಆತ ಆಕೆಯ ಮೈ ಮುಟ್ಟುವುದು, ಸವರುವುದು ಮಾಡಿದಾಗ ಆಕೆಯಿಂದ ನೀರಸ ಪ್ರತಿಕ್ರಿಯೆ.

English summary

If You Sleep in This Position, You're More Likely to Divorce : Survey

Study says if you sleep in this position, you are more likely to divorce, read on.
Story first published: Saturday, November 21, 2020, 18:53 [IST]
X
Desktop Bottom Promotion