For Quick Alerts
ALLOW NOTIFICATIONS  
For Daily Alerts

ವ್ಯಂಗ್ಯ ಮಾಡುವ ವ್ಯಕ್ತಿಗಳಿಂದ ಪಾರಾಗಲು ಕೆಲವು ಟಿಪ್ಸ್

|

ಸ್ನೇಹಿತರ ಬಳಗದಲ್ಲಿ ವ್ಯಂಗ್ಯ ಮಾಡುವುದು, ಗೇಲಿ ಮಾಡುವುದು ಇಂತಹದೆಲ್ಲವೂ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಇಂತಹ ವ್ಯಂಗ್ಯವು ಅತಿರೇಕಕ್ಕೆ ಹೋಗಿ ಜಗಳವು ಉಂಟಾಗುವುದು. ಕೆಲವೊಂದು ಸಲ ಹಾಸ್ಯಕ್ಕಾಗಿ ಮಾಡುವಂತಹ ವ್ಯಂಗ್ಯವು ಜಗಳದಲ್ಲಿ ಸಮಾಪ್ತಿಯಾದ ಉದಾಹರಣೆಗಳು ಇವೆ. ಪರಿಚಯವಿದ್ದವರನ್ನು ನಾವು ವ್ಯಂಗ್ಯ ಮಾಡಿ ಕರೆಯಬಹುದು ಅಥವಾ ಮಾತನಾಡಬಹುದು. ಆದರೆ ಇಂತಹ ವ್ಯಂಗ್ಯದ ಮಾತುಗಳು ಪದೇ ಪದೇ ಬಂದರೆ ಆಗ ಆ ವ್ಯಕ್ತಿಯ ತಾಳ್ಮೆಯ ಕಟ್ಟೆಯೊಡೆಯುತ್ತದೆ.

How To Deal With Sarcastic Person

ನಿಮ್ಮ ಸುತ್ತಲು ವ್ಯಂಗ್ಯವಾಡುವಂತಹ ವ್ಯಕ್ತಿಯು ಇದ್ದರೆ ಆಗ ನೀವು ಖಂಡಿತವಾಗಿಯೂ ಅವರಿಂದ ದೂರ ಹೋಗುವುದೇ ಒಳಿತು. ಕೆಲವೊಮ್ಮೆ ವ್ಯಂಗ್ಯವಾಡುತ್ತಿರುವ ವ್ಯಕ್ತಿಗೆ ನಗುವವರು ಬೇಕಿರುವರು. ಹೀಗಿರುವಾಗ ನೀವು ಕೂಡ ನಕ್ಕರೆ ಆಗ ಅವರು ಅದನ್ನು ನಿಲ್ಲಿಸಿಬಿಡುವರು. ನೀವು ವ್ಯಂಗ್ಯ ಮಾಡುತ್ತಿರುವ ವ್ಯಕ್ತಿಗೆ ಏನಾದರೂ ಹೇಳಲು ಬಯಸಿದ್ದರೆ ಆಗ ನೀವು ಈ ಲೇಖನ ಓದಲೇಬೇಕು.

ವ್ಯಂಗ್ಯವಾಡುವವರ ಮನಶಾಸ್ತ್ರದ ಬಗ್ಗೆ ವಿವರ ನೀಡಲಿದ್ದೇವೆ ಮತ್ತು ಇದರ ಬಳಿಕ ನಿಮಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದಕ್ಕೆ ಆರು ವಿಧಾನಗಳನ್ನು ತಿಳಿಸುತ್ತೇವೆ.

ವ್ಯಂಗ್ಯವನ್ನು ತಪ್ಪಾಗಿ ಅರ್ಥೈಸಿದಂತೆ ಪ್ರತಿಕ್ರಿಯಿಸಿ

ವ್ಯಂಗ್ಯವನ್ನು ತಪ್ಪಾಗಿ ಅರ್ಥೈಸಿದಂತೆ ಪ್ರತಿಕ್ರಿಯಿಸಿ

ವ್ಯಂಗ್ಯವಾಡುತ್ತಿರುವಂತಹ ನಿಮ್ಮ ಸ್ನೇಹಿತನಿಗೆ ಆತನ ಶೈಲಿಯಲ್ಲೇ ಉತ್ತರ ನೀಡಬೇಕಾದರೆ ನಿಮಗೆ ಆತ ಹೇಳಿರುವುದು ಅರ್ಥ ಆಗಿಲ್ಲ ಎನ್ನುವಂತೆ ವರ್ತಿಸಿ. ಕೇವಲ ನಗುವಿಗೆ ಅಥವಾ ಇತರ ಕಾರಣಕ್ಕೆ ವ್ಯಂಗ್ಯವಾಡುತ್ತಿರುವ ವ್ಯಕ್ತಿಯು ತನ್ನ ಗುರಿ ಮುಟ್ಟದೆ ಇದ್ದರೆ ಆಗ ಅವರಿಗೆ ಕೋಪ ಬರುವುದು. ನೀವು ಕೂಡ ಇದೇ ವ್ಯಂಗ್ಯವಾಗಿ ಅವರಿಗೆ ಪ್ರತಿಕ್ರಿಯೆ ನೀಡಿ.

ಕಡೆಗಣಿಸುವುದೇ ಒಳ್ಳೆಯದು

ಕಡೆಗಣಿಸುವುದೇ ಒಳ್ಳೆಯದು

ನಿಮ್ಮನ್ನು ಗೇಲಿ ಮಾಡುವುದೇ ವ್ಯಂಗ್ಯವಾಡುವವರ ಗುರಿಯಾಗಿರುವುದು. ಇಂತಹ ಸಮಯದಲ್ಲಿ ನೀವು ಇದನ್ನು ಕಡೆಗಣಿಸಬೇಕು. ಆದರೆ ವ್ಯಂಗ್ಯವಾಡುತ್ತಿರುವವರನ್ನು ಕಡೆಗಣಿಸುವುದು ತುಂಬಾ ಕಷ್ಟದ ಕೆಲಸವಾದರೂ ಕಡೆಗಣಿಸುವಂತಹ ಕೌಶಲ್ಯವನ್ನು ನೀವು ಕಲಿಯಬೇಕು.

ಚರ್ಚೆಯನ್ನು ಮತ್ತೆ ಮೊದಲಿನ ಸ್ಥಾನಕ್ಕೆ ತನ್ನಿ

ಚರ್ಚೆಯನ್ನು ಮತ್ತೆ ಮೊದಲಿನ ಸ್ಥಾನಕ್ಕೆ ತನ್ನಿ

ಸ್ನೇಹಿತರು ಮಾಡುವಂತಹ ವ್ಯಂಗ್ಯವನ್ನು ಕಡೆಗಣಿಸಿ, ಒಳ್ಳೆಯ ಸಂಬಂಧ ಕಾಪಾಡಲು ಮೊದಲಿಗೆ ನೀವು ಮಾತನಾಡುತ್ತಿರುವ ವಿಷಯಕ್ಕೆ ಪುನಃ ಬರಬೇಕು. ಇದರ ಬದಲು ವ್ಯಂಗ್ಯದ ಮಾತನ್ನು ಚರ್ಚಿಸಲು ಹೋಗಬೇಡಿ. ನಿಮ್ಮ ಸ್ನೇಹಿತನು ವ್ಯಂಗ್ಯ ಮಾಡುವುದನ್ನು ನಿಲ್ಲಿಸಬೇಕೆಂದಿದ್ದರೆ ಇದು ಒಳ್ಳೆಯ ವಿಧಾನವಾಗಿದೆ.

ಮನಸ್ಸನ್ನು ಹತೋಟಿಯಲ್ಲಿಡಿ

ಮನಸ್ಸನ್ನು ಹತೋಟಿಯಲ್ಲಿಡಿ

ವ್ಯಂಗ್ಯದ ಮಾತನ್ನು ಯಾರಿಗೂ ಕೇಳಲು ಆಗಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಪದಗಳು ಮತ್ತು ಅದರ ಭಾಷೆಯು ನಮ್ಮನ್ನು ಅನಕ್ಷರಸ್ಥನಂತೆ ಭಾವಿಸುವಂತೆ ಮಾಡುವುದು. ಕೆಲವು ತಮ್ಮ ಸಮಸ್ಯೆಗಳಿಂದ ಹೊರಗೆ ಬರಲು ಬೇರೆಯವರ ಮೇಲೆ ವ್ಯಂಗ್ಯ ಮಾಡುವುದು ಇದೆ. ಇಂತಹ ಸಂದರ್ಭದಲ್ಲಿ ನೀವು ಅವರಿಗೆ ಅವರ ಸ್ಥಿತಿ ನೆನಪಿಸಿ ಅಲ್ಲಿಂದ ಹೋಗಿಬಿಡಿ.

 ಇದರ ಬಗ್ಗೆ ಮಾತನಾಡಿ

ಇದರ ಬಗ್ಗೆ ಮಾತನಾಡಿ

ನೀವು ಪದೇ ಪದೇ ವ್ಯಂಗ್ಯದ ಮಾತುಗಳನ್ನು ಎದುರಿಸುತ್ತಿದ್ದರೆ ಮತ್ತು ಇದರಿಂದ ಬೇಸತ್ತು ಹೋಗಿದ್ದರೆ ಆಗ ನೀವು ಇದರ ಬಗ್ಗೆ ವ್ಯಂಗ್ಯ ಮಾಡುತ್ತಿರುವ ವ್ಯಕ್ತಿಯ ಜತೆಗೆ ಮಾತನಾಡಿ. ನಿಮಗೆ ಯಾವ ರೀತಿಯ ಭಾವನೆ ಆಗುತ್ತಿದೆ ಮತ್ತು ಅದನ್ನು ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿಯಿರಿ. ಅವರ ವ್ಯಂಗ್ಯದ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂಧು ಹೇಳಿ ಮತ್ತು ಅವರಿಗೆ ವ್ಯಂಗ್ಯ ಮಾಡಿದರೆ ಹೇಗೆ ಅನಿಸಬಹುದು ಎಂದು ಕೇಳಿ. ವ್ಯಂಗ್ಯವಾಡುತ್ತಲಿದ್ದರೆ ಸ್ನೇಹವು ಮುಂದುವರಿಯಲು ಸಾಧ್ಯವಿಲ್ಲವೆಂದು ಹೇಳಿ. ಅವರು ವ್ಯಂಗ್ಯವಾಡುವುದನ್ನು ನಿಲ್ಲಿಸದೆ ಇದ್ದರೆ ಸ್ನೇಹವು ಇರಲ್ಲ ಎಂದು ಸ್ಪಷ್ಟವಾಗಿ ಹೇಳಿ.

ಎದ್ದು ಹೋಗಿ

ಎದ್ದು ಹೋಗಿ

ಸ್ನೇಹಿತರು ಮಾಡುವ ವ್ಯಂಗ್ಯವನ್ನು ನಿಲ್ಲಿಸಲು ಇದು ಸರಿಯಾದ ರೀತಿಯಾಗಿದೆ. ನೀವು ಅಲ್ಲಿಂದ ಎದ್ದು ಹೋದರೆ ಆಗ ಅವರ ವ್ಯಂಗ್ಯವು ವಿಫಲವಾಗುವುದು. ನಿಮ್ಮ ಸ್ವಾಭಿಮಾನವು ಇಲ್ಲಿ ಮುಖ್ಯವಾಗಿರುವುದು. ಸ್ನೇಹಿತರು ನಿಮಗೆ ಗೌರವ ನೀಡದೆ ಇದ್ದರೆ ಆಗ ನೀವು ಅಲ್ಲಿಂದ ಎದ್ದು ಹೋಗುವುದು ಒಳ್ಳೆಯದು.

English summary

How To Deal With Sarcastic Person

Here we are discussing about how To Deal With Sarcastic Person. Sarcasm can be funny if you don’t take things personally, but it can also be a form of hostile bulldozing. Read more.
X
Desktop Bottom Promotion