For Quick Alerts
ALLOW NOTIFICATIONS  
For Daily Alerts

ಖುಷಿ ದಾಂಪತ್ಯಕ್ಕೆ ವಾರದಲ್ಲಿ ಎಷ್ಟು ಬಾರಿ ಸೆಕ್ಸ್ ಮಾಡಿದರೆ ಸಾಕು?

|

ದಾಂಪತ್ಯ ಬದುಕಿನಲ್ಲಿ ಸೆಕ್ಸ್‌ಗೆ ತುಂಬಾ ಮಹತ್ವವಿದೆ. ಗಂಡ-ಹೆಂಡತಿಯ ನಡುವಿನ ಬಾಂಧವ್ಯ ಗಟ್ಟಿಯಾಗುವುದೇ ಸೆಕ್ಸ್‌ನಿಂದ ಎಂಬುವುದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ಇಬ್ಬರಲ್ಲಿ ಒಬ್ಬರಿಗೆ ದೈಹಿಕ ಅತೃಪ್ತಿ ಇದ್ದರೆ ಆ ಸಂಸಾರದಲ್ಲಿ ನಾನಾ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಸೆಕ್ಸ್ ಬಗ್ಗೆ ಹೇಳುವಾಗ ಎಷ್ಟೋ ದಂಪತಿಗಳು ತಮ್ಮ ಸಂಗಾತಿ ಬಳಿ ಈ ಕುರಿತು ಮನಬಿಚ್ಚಿ ಮಾತನಾಡಲು ಹಿಂಜರಿಯುತ್ತಾರೆ.

ತಮ್ಮ ಬೇಡಿಕೆಗಳ ಕುರಿತು, ತೃಪ್ತಿಯ ಕುರಿತು ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿದರೆ ಆ ದಂಪತಿ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿರುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಗಂಡ-ಹೆಂಡತಿ ಖುಷಿಯಾಗಿರಲು ವಾರದಲ್ಲಿ ಎಷ್ಟು ಬಾರಿ ಸೆಕ್ಸ್ ಮಾಡಬೇಕು ಎಂಬ ಪ್ರಶ್ನೆ ಕೆಲವರನ್ನು ಕಾಡುವುದುಂಟು. ಆದರೆ ನಿಮಗೆ ಗೊತ್ತೇ? ಗಂಡ-ಹೆಂಡತಿ ಖುಷಿಯಾಗಿರಲು ವಾರದಲ್ಲಿ ಒಮ್ಮೆ ಸೆಕ್ಸ್ ಮಾಡಿದರೂ ಸಾಕು. ಆದರೆ ಇಬ್ಬರಿಗೂ ತೃಪ್ತಿ ಇರಬೇಕು ಅಷ್ಟೇ.

ಉದ್ಯೋಗದ ಕಾರಣದಿಂದ ದೂರ-ದೂರ ಇರುವ ದಂಪತಿಗಳಿಗೆ ಸೆಕ್ಸ್ ಬದುಕು ಅಪರೂಪವಾಗಿರುತ್ತದೆ, ಹಾಗಂತ ಅವರ ಮಧ್ಯ ಪ್ರೀತಿ ಇರುವುದಿಲ್ಲವೇ ಎಂದು ನೀವು ಕೇಳಬಹುದು. ಇಲ್ಲಿ ಗಂಡ-ಹೆಂಡತಿ ದೂರವಿರಲಿ, ಹತ್ತಿರವಿರಲಿ ಆದರೆ ಕೂಡುವಾಗ ಇಬ್ಬರಿಗೂ ಅದರಿಂದ ಖುಷಿ ಸಿಕ್ಕಿದೆಯೇ ಎಂಬುವುದು ಮುಖ್ಯವಾಗಿರುತ್ತದೆ.

 ತೃಪ್ತಿ ಸಿಗಲು ವಾರದಲ್ಲಿ ಒಮ್ಮೆ ಸೆಕ್ಸ್ ಮಾಡಿದರೂ ಸಾಕು

ತೃಪ್ತಿ ಸಿಗಲು ವಾರದಲ್ಲಿ ಒಮ್ಮೆ ಸೆಕ್ಸ್ ಮಾಡಿದರೂ ಸಾಕು

2017ರಲ್ಲಿ Archives of Sexual Behaviorನಲ್ಲಿ ಒಂದು ಅಧ್ಯಯನ ವರದಿ ಪ್ರಕಟವಾಗುತ್ತದೆ. ಅದರಲ್ಲಿ ಬಹುತೇಕ ದಂಪತಿ ವರ್ಷದಲ್ಲಿ ಸರಿಸುಮಾರು 54 ಬಾರಿ ಸೆಕ್ಸ್‌ ನಡೆಸುತ್ತಾರೆ ಎಂದಿದೆ. ಹೀಗೆ ನೋಡಿದರೆ ವಾರದಲ್ಲಿ ಒಂದು ಬಾರಿ ಸೆಕ್ಸ್ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಎಂದಿದೆ. Social Psychological and Personality Science ಎಂಬುವುದರಲ್ಲಿ ಮತ್ತೊಂದು ಅಧ್ಯಯನ ವರದಿ ಪ್ರಕಟವಾಗಿತ್ತು. ಈ ಅಧ್ಯಯನವನ್ನು 40 ವರ್ಷಗಳ ಮೂರು ಪ್ರತ್ಯೇಕ ಪ್ರಾಜೆಕ್ಟ್‌ನಲ್ಲಿ ಅಮೆರಿಕದಲ್ಲಿ ನಡೆಸಲಾಗಿತ್ತು. ಅದರಲ್ಲಿ ವಾರದಲ್ಲಿ ಒಂದಕ್ಕಿಂತ ಅಧಿಕ ಬಾರಿ ಸೆಕ್ಸ್ ಮಾಡುವ ದಂಪತಿ ತುಂಬಾ ಖುಷಿಯಾಗಿರುತ್ತಾರೆ ಎಂಬುವುದಾಗಿ ಹೇಳಿಲ್ಲ. ಆದರೆ ತಿಂಗಳಿನಲ್ಲಿ ಒಮ್ಮೆ ಅಥವಾ ತುಂಬಾ ಕಡಿಮೆ ಸೆಕ್ಸ್ ಕ್ರಿಯೆ ನಡೆಸುವವರಲ್ಲಿ ಅತೃಪ್ತಿ ಇದೆ ಎಂಬುವುದಾಗಿ ಈ ವರದಿ ಹೇಳಿದೆ.

 ಲೈಂಗಿಕ ತೃಪ್ತಿಗಾಗಿ ಸಂವಹನ ತುಂಬಾ ಮುಖ್ಯ

ಲೈಂಗಿಕ ತೃಪ್ತಿಗಾಗಿ ಸಂವಹನ ತುಂಬಾ ಮುಖ್ಯ

ಒಂದು ವರದಿಯ ಪ್ರಕಾರ ದಿನಾ ಕಚ್ಚಾಡುವ ದಂಪತಿ ನಡುವೆ ಲೈಂಗಿಕ ತೃಪ್ತಿ ಇರುವುದಿಲ್ಲ. ಲೈಂಗಿಕ ತೃಪ್ತಿಗಾಗಿ ಸಂವಹನ ತುಂಬಾ ಅವಶ್ಯಕ. ಇಬ್ಬರು ತಮ್ಮ ಭಾವನೆ ಹಾಗೂ ಬೇಡಿಕೆಗಳನ್ನು ಮನಸ್ಸು ಬಿಚ್ಚಿ ಹಂಚಿಕೊಳ್ಳಬೇಕು. ಆಗ ಮಾತ್ರ ಲೈಂಗಿಕ ತೃಪ್ತಿ ಪಡೆಯಬಹುದು.

ದಂಪತಿ ನಡುವೆ ತುಂಬಾ ಕಡಿಮೆ ಸೆಕ್ಸ್ ಅಥವಾ ಸೆಕ್ಸ್ ಅತೃಪ್ತಿಗೆ ಪ್ರಮುಖ ಕಾರಣಗಳು

ದಂಪತಿ ನಡುವೆ ತುಂಬಾ ಕಡಿಮೆ ಸೆಕ್ಸ್ ಅಥವಾ ಸೆಕ್ಸ್ ಅತೃಪ್ತಿಗೆ ಪ್ರಮುಖ ಕಾರಣಗಳು

1. ಒತ್ತಡ

ಒತ್ತಡ ಅನುಭವಿಸುತ್ತಿದ್ದರೆ ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ತುಂಬಾ ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಲೈಂಗಿಕ ಆಸಕ್ತಿ ಮೂಡುವುದಿಲ್ಲ, ಇದರಿಂದಾಗಿ ಸೆಕ್ಸ್ ಕಡೆ ಅಥವಾ ಸಂಗಾತಿಯ ಭಾವನೆ ಕಡೆ ಆಸಕ್ತಿ ತೋರುವುದಿಲ್ಲ. ಇದರಿಂದ ಸಂಗಾತಿಯಲ್ಲಿ ಲೈಂಗಿಕ ಅತೃಪ್ತಿ ಉಂಟಾಗುವುದು.

2. ದೇಹದ ಬಗ್ಗೆ ಕೀಳರಿಮೆ

2. ದೇಹದ ಬಗ್ಗೆ ಕೀಳರಿಮೆ

ಕೆಲವರಿಗೆ ತಮ್ಮ ದೇಹದ ಬಗ್ಗೆ ತುಂಬಾ ಕೀಳರಿಮೆ ಇರುತ್ತದೆ. ಈ ಕಾರಣದಿಂದಾಗ ತನ್ನ ಸಂಗಾತಿ ನನ್ನ ದೇಹ ನೋಡಿ ಏನು ಅಂದುಕೊಳ್ಳುತ್ತಾರೋ ಎಂಬ ಹಿಂಜರಿಕೆಯಲ್ಲಿ ಸೆಕ್ಸ್‌ಗೆ ಹಿಂಜರಿಯುತ್ತಾರೆ. ಈ ರೀತಿಯ ಸಮಸ್ಯೆ ಇರುವವರು ಮನೋತಜ್ಞರು ಹಗೂ ಲೈಂಗಿಕ ತಜ್ಞರ ಬಳಿ ಮಾತನಾಡಿ, ಅದಕ್ಕಿಂತ ಮೊದಲು ನಿಮ್ಮ ಸಂಗಾತಿ ಬಳಿ ಮಾತನಾಡಿ, ಅವರ ಮಾತುಗಳು ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸಬಹುದು.

 3. ದೀರ್ಘಕಾಲಿಕ ಕಾಯಿಲೆಗಳು

3. ದೀರ್ಘಕಾಲಿಕ ಕಾಯಿಲೆಗಳು

ದೀರ್ಘಕಾಲದಿಂದ ಯಾವುದಾದರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂಥವರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಕಾಯಿಲೆಗೆ ತೆಗೆದುಕೊಳ್ಳುವ ಔಷಧಗಳು ಲೈಂಗಿಕ ಆಸಕ್ತಿ ಕಡಿಮೆಯಾಗುವಂತೆ ಮಾಡುವುದು. ಇದಕ್ಕೆ ವೈದ್ಯರ ಬಳಿ ಸಲಹೆ ಕೇಳಿದರೆ ಪರಿಹಾರ ಸಿಗುವುದು.

4. ಮೊಬೈಲ್ ಗೀಳು

4. ಮೊಬೈಲ್ ಗೀಳು

ಎಷ್ಟೋ ದಾಂಪತ್ಯಗಳಲ್ಲಿ ಬಿರುಕು ಮೂಡಲು ಮೊಬೈಲ್ ಒಂದು ಕಾರಣವಾಗುತ್ತದೆ. ಸಂಗಾತಿ ತುಂಬಾ ಹೊತ್ತು ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದರೆ ದಂಪತಿ ನಡುವೆ ಸಂವಹನ ಕಡಿಮೆಯಾಗುತ್ತದೆ. ಇದರಿಂದ ಅಸಮಧಾನ ಉಂಟಾಗುವುದು. ಬೆಡ್‌ರೂಂನಲ್ಲಿ ಟಿವಿ ಇದ್ದರೆ ಮಲಗಲು ಹೋಗುವ ಮುನ್ನ ಆಫ್‌ ಮಾಡುವ ರೂಲ್ಸ್ ತನ್ನಿ. ಇಬ್ಬರು ಮೊಬೈಲ್ ದೂರವಿಟ್ಟು ನಿಮ್ಮ ಮಾತುಗಳನ್ನು ಹಂಚಿಕೊಳ್ಳಿ. ಇದರಿಂದ ಇಬ್ಬರಲ್ಲಿ ರೊಮ್ಯಾನ್ಸ್ ಭಾವನೆ ಮೂಡುವುದು.

ಮತ್ತೆ ಮೂಡಲಿ ರೊಮ್ಯಾಂಟಿಕ್ ಭಾವನೆ

ಮತ್ತೆ ಮೂಡಲಿ ರೊಮ್ಯಾಂಟಿಕ್ ಭಾವನೆ

ಮನೆ, ಸಂಸಾರ, ಮಕ್ಕಳು ಈ ಜಂಜಾಟದಲ್ಲಿ ಇಬ್ಬರಿಗೆ ತಮ್ಮ ಅವಶ್ಯಕತೆಗಳನ್ನು ಹೇಳುವುದಕ್ಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಮಯವೇ ಸಿಗದೇ ಹೋದಂತೆ ಅನಿಸುವುದು. ಇದರ ಪ್ರಭಾವ ನಿಮ್ಮ ಲೈಂಗಿಕ ಜೀವನದ ಮೇಲೆ ಕೂಡ ಬಿದ್ದಿದೆಯೇ? ಹಾಗಾದರೆ ನಿಮ್ಮ ಬದುಕಿನಲ್ಲಿ ಮತ್ತೆ ರೊಮ್ಯಾನ್ಸ್ ಮೂಡಲು ನೀವು ಪ್ರಯತ್ನಿಸಬೇಕು. ಮಕ್ಕಳನ್ನು ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ ಅವರ ಬಳಿ ಬಿಟ್ಟು ಇಬ್ಬರು ಚಿಕ್ಕ ಔಟಿಂಗ್ ಹೋಗಿ ಬನ್ನಿ, ಸ್ವಿಟ್ ಮೆಸೇಜ್ ಕಳುಹಿಸಿ. ಸಮಯ ಸಿಕ್ಕಾಗ ತುಂಟಾಂಟದ ಮಾತುಗಳನ್ನಾಡಿ. ಇವುಗಳು ನಿಮ್ಮಿಬ್ಬರ ನಡುವೆ ಮತ್ತೆ ಕಳೆದು ಹೋದ ಆ ರೊಮ್ಯಾನ್ಸ್ ಅನ್ನು ಮರಳಿ ತರಲು ಸಹಕಾರಿಯಾದೀತು.

English summary

How Often Do The Happiest Couple Will Have Sex

how often do the happiest couple will have sex, less than what you think
Story first published: Saturday, September 12, 2020, 17:17 [IST]
X
Desktop Bottom Promotion