For Quick Alerts
ALLOW NOTIFICATIONS  
For Daily Alerts

ಫೆಂಗ್‌ಶುಯಿ ಶಾಸ್ತ್ರ: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ದಾಂಪತ್ಯ ಚೆನ್ನಾಗಿರುತ್ತೆ

|

ಫೆಂಗ್‌ಶುಯಿ ಎನ್ನುವುದು ಚೈನೀಸ್‌ ತತ್ತ್ವಶಾಸ್ತ್ರವಾಗಿದ್ದು ಇದು ಮನೆ ಹೇಗೆ ಇಡಬೇಕು, ಮನೆಯಲ್ಲಿ ಏನು ವಸ್ತುಗಳನ್ನು ಇಡಬಾರದು, ಏನು ವಸ್ತುಗಳನ್ನು ಇಟ್ಟರೆ ಒಳ್ಳೆಯದು ಎಂಬುವುದರ ಬಗ್ಗೆ ಹೇಳುತ್ತದೆ.

ನಮ್ಮಲ್ಲಿನ ವಾಸ್ತು ಶಾಸ್ತ್ರದ ರೀತಿಯೇ ಫೆಂಗ್‌ಶುಯಿ ಕೂಡ ಮನೆ ಹಾಗೂ ಆ ಮನೆಯಲ್ಲಿರುವ ಒಳಿತಾಗಿ ಕೆಲವೊಂದು ಅಂಶಗಳನ್ನು ಹೇಳುತ್ತದೆ. ಫೆಂಗ್‌ಶುಯಿ ಋಣಾತ್ಮಕ ಶಕ್ತಿ ಹೊರಹಾಕಿ ಮನೆಗೆ ಧನಾತ್ಮಕ ಶಕ್ತಿ ತುಂಬುವುದು ಹೇಗೆ ಎಂಬುವುದರ ಬಗೆಯೂ ಹೇಳುತ್ತದೆ. ಮನೆಯಲ್ಲಿ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಲು ಏನು ಮಾಡಬೇಕು ಎಂಬುವುದರ ಬಗೆಯೂ ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಗಂಡ-ಹೆಂಡತಿ ಸಂಬಂಧ ಸದಾ ಚೆನ್ನಾಗಿರಬೇಕು, ಇಬ್ಬರಲ್ಲಿ ಒಳ್ಳೆಯ ಹೊಂದಾಣಿಕೆ ಇರಬೇಕು ಎಂದರೆ ಕೆಲವೊಂದು ವಸ್ತುಗಳನ್ನು ಬೆಡ್‌ರೂಂನಲ್ಲಿಟ್ಟರೆ ರೊಮ್ಯಾಂಟಿಕ್‌ ಲೈಫ್‌ ನಿಮ್ಮದಾಗುವುದು ಅಲ್ಲದೆ ಇಬ್ಬರಲ್ಲಿ ಪರಸ್ಪರ ಹೊಂದಾಣಿಕೆಯ ಗುಣವೂ ಬೆಳೆಯುವುದು, ಇದರಿಂದ ದಾಂಪತ್ಯದಲ್ಲಿ ಸಂತೋಷ ಇರುತ್ತದೆ. ಸುಂದರ ದಾಂಪತ್ಯಕ್ಕೆ ಫೆಂಗ್‌ಶುಯಿ ಶಾಸ್ತ್ರ ಏನು ಹೇಳಿದೆ ಎಂದು ನೋಡೋಣ ಬನ್ನಿ:

ಸರಿಯಾದ ಬೆಡ್‌:

ಸರಿಯಾದ ಬೆಡ್‌:

ಮದುವೆಯ ಬಳಿಕ ಬೆಡ್‌ರೂಂ ಎನ್ನುವುದು ಅದು ಮಲಗುವ ಕೋಣೆಯಷ್ಟೇ ಆಗಿರಲ್ಲ, ಅಲ್ಲಿ ನಿಮ್ಮಿಬ್ಬರ ಭಾವನೆಗಳನ್ನು ಹಂಚಿಕೊಳ್ಳುತ್ತೀರಿ. ಇಬ್ಬರು ಮನಸ್ಸು ಬಿಚ್ಚಿ ಮಾತನಾಡುವುದು, ತಮ್ಮ ಅಸಮಧಾನಗಳನ್ನು ಹೊರಹಾಕುವುದು, ಖುಷಿಯಿಂದ ಅಪ್ಪಿ ಮುದ್ದಾಡುವುದು ಎಲ್ಲವೂ ಅದೇ ಕೋಣೆಯಾಗಿರುತ್ತದೆ. ಈ ಬೆಡ್‌ ರೂಂ ಗೋಡೆಯ ಬಣ್ಣ ಆಕರ್ಷಕವಾಗಿರಬೇಕು. ನೀವು ಹಾಗೂ ನಿಮ್ಮ ಸಂಗಾತಿಗೆ ಆರಾಮವಾಗಿ ಮಲಗುವಂತಿರಬೇಕು, ಇಕ್ಕಟ್ಟು-ಇಕ್ಕಟ್ಟಾಗಿ ಇರಬಾರದು.

ಮನೆಯಲ್ಲಿ ಹೂವಿನ ಗಿಡಗಳಿರಲಿ

ಮನೆಯಲ್ಲಿ ಹೂವಿನ ಗಿಡಗಳಿರಲಿ

ಹೂ ಪ್ರೀತಿಯ ಸಂಕೇತ, ಅರಳಿದ ಹೂಗಳನ್ನು ನೋಡಿದಾಗ ಮನಸ್ಸಿಗೆ ಮುದ ಅನಿಸುವುದು, ಇದರಿಂದ ಮನಸ್ಸಿಗೆ ಶಾಂತಿ ಸಿಗುವುದು. ಫೆಂಗ್‌ಶುಯಿ ಪ್ರಕಾರ ಹೂ ಬಿಡುವ ಗಿಡಗಳನ್ನು ನೈರುತ್ಯ ಭಾಗದಲ್ಲಿಡಿ.

 ಲವ್‌ ಬರ್ಡ್, ಬಾತುಕೋಳಿಗಳ ಚಿತ್ರಗಳನ್ನು ಇಡಿ

ಲವ್‌ ಬರ್ಡ್, ಬಾತುಕೋಳಿಗಳ ಚಿತ್ರಗಳನ್ನು ಇಡಿ

ಬೆಡ್‌ರೂಂನಲ್ಲಿ ಮ್ಯಾಂಡರಿನ್ ಬಾತುಕೋಳಿಗಳು, ಲವ್‌ ಬರ್ಡ್ ಇವುಗಳ ಚಿತ್ರವಿದ್ದರೆ ಅವು ಪ್ರೀತಿಯ ಸಂಕೇತವಾಗಿದೆ. ಈ ಚಿತ್ರಗಳು ನಿಮ್ಮಲ್ಲಿ ರೊಮ್ಯಾಂಟಿಕ್ ಭಾವನೆ ಹೆಚ್ಚಿಸುವುದು. ಇವುಗಳನ್ನು ಬೆಡ್‌ರೂಂನಲ್ಲಿಡಿ.

ರೋಸ್ ಸ್ಫಟಿಕ ಶಿಲ್ಪಗಳನ್ನು ಬಳಸಿ

ರೋಸ್ ಸ್ಫಟಿಕ ಶಿಲ್ಪಗಳನ್ನು ಬಳಸಿ

ಇದು ಪಿಂಕ್ ಬಣ್ಣದ ಸ್ಪಟಿಕವಾಗಿದ್ದಯ ಇದು ಪ್ರೀತಿ ಹಾಗೂ ಶಾಂತಿಯ ಸಂಕೇತವಾಗಿದೆ. ಈ ಸ್ಪಟಿಕ ಮನೆಯಲ್ಲಿದ್ದರೆ ಅದೃಷ್ಟ ಉಂಟಾಗುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ. ಇದನ್ನು ಹಾಸಿಗೆ ಅಡಿಯಲ್ಲಿಟ್ಟರೆ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ.

ಜೋಡಿ ಆನೆಗಳ ಶಿಲ್ಪಗಳು

ಜೋಡಿ ಆನೆಗಳ ಶಿಲ್ಪಗಳು

ಆನೆ ಶಕ್ತಿ, ಐಶ್ವರ್ಯದ ಮತ್ತು ಸಂತಾನೋತ್ಪತ್ತಿಯ ಸಂಕೇತ, ಇವುಗಳ ಶಿಲ್ಪಗಳು ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಇರುತ್ತದೆ. ಇದನ್ನು ಮನೆಯಲ್ಲಿಟ್ಟರೆ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

English summary

Feng Shui Elements For A Happy And Blissful Married Life

Feng Shui Elements for a Happy and Blissful Married Life,have a look.
X
Desktop Bottom Promotion