For Quick Alerts
ALLOW NOTIFICATIONS  
For Daily Alerts

ಮದುವೆಯಾಗುವಾಗ ಈ 5 ಸತ್ಯಗಳನ್ನು ಮುಚ್ಚಿಡಲೇಬಾರದು!

|

ಮದುವೆಯಾಗುತ್ತಿದ್ದೀರಾ?ನಿಮ್ಮ ಬಾಳಿನಲ್ಲಿ ಬರುತ್ತಿರುವ ವ್ಯಕ್ತಿಗೆ ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೀರಾ? ಹೌದು, ನನ್ನ ಬಗ್ಗೆ ಅವರಿಗೆಲ್ಲಾ ಗೊತ್ತಿದೆ, ನಮ್ಮದು ಅರೇಂಜ್ಡ್‌ ಮ್ಯಾರೇಜ್, ಎಲ್ಲಾ ವಿಚಾರಿಸಿ ಎರಡು ಮನೆಯವರು ಒಪ್ಪಿ ಮದುವೆಯಾಗುತ್ತಿದ್ದೇವೆ ಎಂದು ನೀವು ಹೇಳುವುದಾದರೆ ಗುಡ್‌! ಆದರೂ ಅವರಿಂದ ಏನೂ ಮುಚ್ಚಿಡುತ್ತಿಲ್ಲ ತಾನೆ?

ಏಕೆಂದರೆ ಮದುವೆಯಾದ ಮೇಲೆ ಎಲ್ಲಾ ಸರಿಹೋಗುತ್ತದೆ ಎಂದು ನೀವು ಯಾವುದಾದರೂ ವಿಷಯ ಮುಚ್ಚಿಟ್ಟು, ನಂತರ ಅವರಿಗೆ ತಿಳಿದಾಗ ಸಂಸಾರ ಮುರಿಯಲು ಅದುವೇ ಕಾರಣವಾಗಬಾರದು ಎಂಬ ಕಾರಣಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುವವರು ಈ 5 ಸೀಕ್ರೆಟ್‌ ಮುಚ್ಚಿಡಲೇಬಾರದು ನೋಡಿ:

ಹಳೆಯ ಪ್ರೇಮ ಅಥವಾ ಅಫೇರ್ಸ್‌
ಹಿಂದೆ ಒಂದು ಪ್ರೇಮ ಸಂಬಂಧವಿದ್ದು, ಆ ಸಂಬಂಧ ಈಗ ಇರದೇ ಹೋಗಿರಬಹುದು ಆ ವಿಷಯವನ್ನು ಬಚ್ಚಿಡಲು ಪ್ರಯತ್ನಿಸಬೇಡಿ. ಅದು ಅವತ್ತು ಇದ್ದ ಸಂಬಂಧ ಹೀಗ್ಯಾಕೆ ಸುಮ್ಮನೆ ಆ ಬಗ್ಗೆ ಹೇಳ್ಬೇಕು ಎಂದು ಯೋಚಿಸಬೇಡಿ. ಈಗ ನಿಮಗೆ ಆ ವ್ಯಕ್ತಿ ಜೊತೆ ಯಾವುದೇ ಸಂಬಂಧ ಇಲ್ಲದಿದ್ದರೂ ತೊಂದರೆಯಿಲ್ಲ, ಆದರೂ ಅದರ ಬಗ್ಗೆ ಹೇಳ್ಬಿಡಿ. ಈಗ ಆ ವ್ಯಕ್ತಿ ಜೊತೆ ಯಾವುದೇ ಬಗೆಯ ಸಂಬಂಧವಿಲ್ಲ ಎಂಬುವುದನ್ನು ಸ್ಪಷ್ಟವಾಗಿ ಹೇಳ್ಬಿಡಿ.

ಇನ್ನು ನೀವು ಯಾರ ಜೊತೆಗಾದರೂ ಸಂಬಂಧದಲ್ಲಿದ್ದು ಮನೆಯವರ ಒತ್ತಾಯ ಅಥವಾ ಮತ್ಯಾವುದೋ ಕಾರಣಕ್ಕೆ ನೀವು ಮದುವೆಗೆ ಒಕೆ ಅನ್ನಬೇಕಾದ ಪರಿಸ್ಥಿತಿ ಬಂದಿದ್ದರೆ ಅದರ ಬಗ್ಗೆ ನಿಮ್ಮನ್ನು ಮದುವೆಯಾಗುವವರೆಗೆ ಹೇಳಿ,ಅವರಾದರೂ ಮದುವೆ ಕ್ಯಾನ್ಸಲ್‌ ಮಾಡಿ ನಿಮಗೆ ನೆರವಾಗಬಹುದು. ಇಂಥ ವಿಷಯಗಳನ್ನು ಮುಚ್ಚಿಟ್ಟು ಮದುವೆಯಾದರೆ ನೀವು ನಿಮ್ಮ ಬದುಕು, ನಿಮ್ಮನ್ನು ಮದುವೆಯಾಗುವವರ ಬದುಕು ಹಾಗೂ ನಿಮ್ಮ ಜೊತೆ ಸಂಬಂಧದಲ್ಲಿರುವವರ ಬದುಕಿನ ನೆಮ್ಮದಿ ಕಿತ್ತುಕೊಳ್ಳುತ್ತೀರಿ. ಸತ್ಯ ಕಹಿ ಆದರೂ ತೊಂದರೆಯಿಲ್ಲ ಸತ್ಯವನ್ನು ಹೇಳಿ.

ಒಟ್ಟಿನಲ್ಲಿ ಮದುವೆಯಾಗುವ ವ್ಯಕ್ತಿ ಜೊತೆ ನೀವು ತುಂಬಾನೇ ಮುಕ್ತವಾಗಿ ಮಾತನಾಡಬೇಕಾಗಿರುವುದು ನಿಮ್ಮ ಒಳ್ಳೆಯದಕ್ಕೆ ಅವಶ್ಯಕ.

ಚಟ
ನಿಮಗೆ ಏನಾದರೂ ಚಟವಿದ್ದರೆ ಧೂಮಪಾನ, ಮದ್ಯಪಾನ, ಡ್ರಗ್ಸ್ ಹೀಗೆ ಏನೇ ಇದ್ದರೂ ಮುಕ್ತವಾಗಿ ಹೇಳಿಕೊಳ್ಳಿ, ಮುಚ್ಚಿಡುವ ಪ್ರಯತ್ನ ಮಾಡಬೇಡಿ. ಚಟವಿದ್ದರೆ ಅದನ್ನು ತುಂಬಾ ಕಾಲ ಸಂಗಾತಿಯಿಂದ ಮುಚ್ಚಿಡಬಹುದು ಎಂದು ಭಾವಿಸುವುದು ಭ್ರಮೆ. ಮದುವೆಯಾಗಿ ಕೆಲವು ತಿಂಗಳುಗಳು ಅಥವಾ ವರ್ಷಗಳು ಮುಚ್ಚಿಟ್ಟರೆ ಸಾಕು ನಂತರ ಅವರಿಗೆ ಗೊತ್ತಾದರೂ ಏನೂ ಆಗಲ್ಲ ಎಂದು ಊಹಿಸುವುದು ತುಂಬಾನೇ ತಪ್ಪು. ನಿಮ್ಮ ಸಂಗಾತಿಗೆ ಮುಂದೊಂದು ದಿನ ಗೊತ್ತಾದರೆ ಸಂಸಾರದಲ್ಲಿ ವಿರಸ ಉಂಟಾಗುವುದು.

ಕೆಲವರಲ್ಲಿ ಧೂಮಪಾನ, ಮದ್ಯಪಾನ ಈ ಬಗೆಯ ಅಭ್ಯಾಸ ಇರುತ್ತಾರೆ, ಇದನ್ನು ದೊಡ್ಡ ವಿಷಯವೆಂಬಂತೆ ಪರಿಗಣಿಸದವರೂ ಇರ್ತಾರೆ. ಮಿತಿಯಲ್ಲಿದ್ದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳುವವರೂ ಇದ್ದಾರೆ, ಆದರೆ ಇನ್ನೂ ಕೆಲವರು ಅಂಥ ಕೆಟ್ಟ ಚಟಗಳಿಗೆ ಸ್ಟ್ರಿಕ್ಟ್ ಆಗಿ ನೋ ಹೇಳ್ತಾರೆ. ಅದೇ ಮದುವೆಯ ಮೊದಲೇ ಈ ಬಗ್ಗೆ ಚರ್ಚೆ ಮಾಡಿದರೆ ನಿಮ್ಮ ಸಂಗಾತಿಯಾಗುವವರ ಬಗ್ಗೆ ಮತ್ತಷ್ಟು ತಿಳಿಯುತ್ತದೆ.

ಆರೋಗ್ಯ ಸ್ಥಿತಿ
ಇದು ತುಂಬಾನೇ ಮುಖ್ಯ. ಏನಾದರೂ ಆರೋಗ್ಯ ಸಮಸ್ಯೆಯಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ಅದರ ಬಗ್ಗೆ ಹೇಳಿ. ಯಾವ ವಿಷಯ ಮುಚ್ಚಿಡಬಾರದು. ಕೆಲವೊಂದು ಆರೋಗ್ಯ ಸಮಸ್ಯೆ ಮದುವೆಯಾದ ಮೇಲೆ ಗೊತ್ತಾಗುತ್ತದೆ, ಆದರೆ ಇನ್ನು ಕೆಲವರು ಮುಚ್ಚಿಟ್ಟು ಮದುವೆ ಮಾಡಲು ನೋಡುತ್ತಾರೆ, ಹಾಗೆ ಮಾಡಿ ನಂತರ ತಿಳಿದರೆ ಇಬ್ಬರ ಮದುವೆ ನಡೆಯಲಿ ಎಂಬ ಕಾರಣಕ್ಕೆ ಮುಚ್ಚಿಟ್ಟ ವಿಷಯದಿಂದ ವೈವಾಹಿಕ ಜೀವನ ಮುರಿದು ಬೀಳಬಹುದು.
ಆದ್ದರಿಂದ ಏನು ಆಗುತ್ತೆ ಮೊದಲೇ ಆಗಲಿ, ಅವರು ಒಪ್ಪಿ ಮದುವೆಯಾದರೆ ಮತ್ತೇನೂ ಸಮಸ್ಯೆ ಇಲ್ಲ ತಾನೆ? ಮತ್ಯಾಕೆ ಮುಚ್ಚಿಡಬೇಕು ಅಲ್ವಾ?

ಆರ್ಥಿಕ ಸ್ಥಿತಿ
ಇದು ತುಂಬಾನೇ ಮುಖ್ಯ ಕಣ್ರೀ... ಕೆಲವರು ಮೇಲ್ನೋಟಕ್ಕೆ ತುಂಬಾ ಆಡಂಬರ ತೋರಿಸುತ್ತಾರೆ, ಆದರೆ ಅವರ ಆರ್ಥಿಕ ಸ್ಥಿತಿಯೇ ಬೇರೆ ಇರುತ್ತದೆ. ನೀವು ನಿಮ್ಮ ಆರ್ಥಿಕ ಸ್ಥಿತಿ, ನಿಮಗೆ ಬರುತ್ತಿರುವ ಸಂಬಳ, ನಿಮಗಿರುವ ಕಮಿಟ್‌ಮೆಂಟ್‌, ಏನಾದರೂ ಲೋನ್ ಇದ್ದರೆ ಅದು ಎಲ್ಲವನ್ನು ಹೇಳಿದ ಬಳಿಕವಷ್ಟೇ ಮದುವೆಗೆ ಸಿದ್ಧತೆ ಮಾಡಿ.

ಅಷ್ಟು ಮಾತ್ರವಲ್ಲ ನಿಮಗೆ ಯಾವ ಬಗೆಯ ಲೈಫ್‌ಸ್ಟೈಲ್‌ ಇಷ್ಟ ಎಂಬುವುದು ಕೂಡ ಹೇಳಿ. ನೀವು ಅನುಕೂಲಸ್ಥರಾಗಿರುತ್ತೀರಿ ಆದರೆ ನಿಮಗೆ ಲಕ್ಷುರಿ ಲೈಫ್‌ಸ್ಟೈಲ್‌ ಇಷ್ಟಇರಲ್ಲ, ಸಿಂಪಲ್ ಆಗಿ ಇರಲು ಇಷ್ಟಪಡುತ್ತೀರಿ, ಆದರೆ ನಿಮ್ಮ ಸಂಗಾತಿಗೆ ಪಾರ್ಟಿ-ಲಕ್ಷುರಿ ಲೈಫ್‌ಸ್ಟೈಲ್‌ ಇಷ್ಟ ಎಂದಾದರೆ ಅದೇ ಕಾರಣಕ್ಕೆ ನಿಮ್ಮಿಬ್ಬರಲ್ಲಿ ಮನಸ್ತಾಪ ಬರಬಹುದು.

ಒಂದೇ ಮನಸ್ಥಿತಿಯ ಸಂಗಾತಿ ಸಿಗಲ್ಲ, ಆದರೆ ಆದಷ್ಟು ಹೊಂದಾಣಿಕೆಯಾಗುವ ಸಂಬಂಧ ಬೆಸ್ಟ್ ತಾನೇ?

ಏನಾದರೂ ಕ್ರಿಮಿನಲ್ ಹಿಸ್ಟರಿ ಇದ್ದರೆ?
ತಪ್ಪು ಮಾಡದಿದ್ದರೂ ಕೆಲವೊಮ್ಮೆ ಪರಿಸ್ಥಿತಿಯ ಕಾರಣಕ್ಕೆ ಆರೋಪಿ ಸ್ಥಾನದಲ್ಲಿರಬಹುದು. ಕ್ರಿಮಿನಲ್‌ ಹಿಸ್ಟರಿ ಇದ್ದರೆ ಅದರ ಬಗ್ಗೆ ಮರೆಮಾಚಲು ಹೋಗಬೇಡಿ.

ಕೊನೆಯದಾಗಿ: ಒಂದು ಸುಂದರ ಬದುಕಿನ ಕನಸ್ಸು ಕಾಣುತ್ತಾ ಮದುವೆಯಾಗುತ್ತೇವೆ, ಆ ಬದುಕು ನಾವು ಬಯಸಿದಂತೆ ಇರಬೇಕೆಂದರೆ ಈ ಕಹಿಸತ್ಯಗಳನ್ನು ಹೇಳಲೇಬೇಕಾಗಿದೆ, ಈ ಮಾತುಗಳನ್ನು ನೀವು ಒಪ್ಪುತ್ತೀರಾ?

English summary

Are you getting married? Secrets you should never hide in kannada

Are you getting married, then you should not hide these 5 secrets, read on...
X
Desktop Bottom Promotion