For Quick Alerts
ALLOW NOTIFICATIONS  
For Daily Alerts

ಆಧುನಿಕ ಯುಗದ ಅತ್ತೆ-ಸೊಸೆಯ ಸಂಬಂಧ ಅರ್ಥ ಮಾಡಿಕೊಳ್ಳುವುದು ಹೇಗೆ?

|

ಆಧುನಿಕ ಜಗತ್ತಿನಲ್ಲಿ ಅತ್ತೆ ಮತ್ತು ಸೊಸೆ ಸಂಬಂಧ ಹೇಗಿದೆ ಎಂದರೆ ಅದು ಎಣ್ಣೆ ಸೀಗೆಕಾಯಿ ಎಂದೇ ಹೇಳಬಹುದು. ಹೊರಜಗತ್ತಿಗೆ ತಾವಿಬ್ಬರು ಚೆನ್ನಾಗಿಯೇ ಇದ್ದೇವೆ ಎಂದು ತೋರಿಸಿಕೊಡಲು ಇಬ್ಬರು ಪ್ರಯತ್ನಿಸುವರು. ಆದರೆ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮಾತ್ರ ಇದ್ದೇ ಇರುವುದು. ಎಂದಿಗೂ ಸೊಸೆಯನ್ನು ತನ್ನ ಮಗಳ ರೂಪದಲ್ಲಿ ಒಪ್ಪಿಕೊಳ್ಳಲು ಅತ್ತೆ ಸಿದ್ಧರಿವುದಿಲ್ಲ. ಇಷ್ಟು ಮಾತ್ರವಲ್ಲದೆ ಅತ್ತೆ ಮತ್ತು ಸೊಸೆ ನಡುವಿನ ಸಂಬಂಧವು ಉತ್ತಮವಾಗಿದ್ದರೆ ಆಗ ಅದಕ್ಕೆ ಹುಳಿ ಹಿಂಡಿವವರಿಗೆ ಕಡಿಮೆ ಇರಲ್ಲ.

ವೈವಾಹಿಕ ಜೀವನವು ಉತ್ತಮವಾಗಿ ಸಾಗಬೇಕೆಂದರೆ ಆಗ ಪತಿ ಜತೆಗೆ ಅತ್ತೆಯೊಂದಿಗಿನ ಸಂಬಂಧವು ಪ್ರಾಮುಖ್ಯತೆ ಪಡೆಯುವುದು. ಪತಿ ಎಷ್ಟೇ ಒಳ್ಳೆಯವನಾಗಿದ್ದರೂ ಅತ್ತೆ ಜತೆಗಿನ ಸಂಬಂಧವು ಸರಿಯಾಗಿಲ್ಲ ಎಂದಾದರೆ ಆಗ ಮಾನಸಿಕ ಶಾಂತಿ ಕೆಡುವುದು. ಹೀಗಾಗಿ ಅತ್ತೆ ಜತೆಗಿನ ಸಂಬಂಧವು ಸರಿಯಾಗಿದ್ದರೆ ಆಗ ವೈವಾಹಿಕ ಜೀವನವು ಸರಿಯಾಗಿರುವುದು. ಕೆಲವೊಂದು ಅಪರೂಪದಲ್ಲಿ ಅತ್ತೆ ಮತ್ತೆ ಸೊಸೆ ಒಳ್ಳೆಯ ರೀತಿಯಲ್ಲಿ ಅನ್ಯೋನ್ಯವಾಗಿ ಬದುಕುವುದನ್ನು ಕಾಣಬಹುದು. ಈ ಸಂಬಂಧದ ಬಗ್ಗೆ ನೀವು ತಿಳಿಯುತ್ತಾ ಸಾಗಿ.

ಅತ್ತೆ-ಸೊಸೆ ಸಿಂಡ್ರೋಮ್

ಅತ್ತೆ-ಸೊಸೆ ಸಿಂಡ್ರೋಮ್

ಅತ್ತೆ ಮತ್ತು ಸೊಸೆ ಸಿಂಡ್ರೋಮ್ ಅನ್ನುವುದು ಮನೆಯಲ್ಲಿ ಅವರು ಪರಸ್ಪರ ಹೊಂದಾಣಿಕೆಯಿಂದ ಇರಲು ವಿಫಲವಾದ ವೇಳೆ ಆರಂಭವಾಗುವುದು. ಇದರಿಂದಾಗಿ ಮನೆಯಲ್ಲಿ ಒತ್ತಡದ ವಾತಾವರಣ, ಸಂಪೂರ್ಣ ಮನೆಯ ವಾತಾವರಣ ಕೆಡುವುದು. ಈ ಸಮಸ್ಯೆಯು ಹಿಂದಿನಿಂದಲೂ ಇದ್ದದ್ದೇ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇದು ಹೆಚ್ಚು ಮಹತ್ವ ಪಡೆಯುತ್ತಿದೆ. ಆಧುನಿಕ ಮಹಿಳೆಯು ಸ್ವತಂತ್ರಳಾಗಿದ್ದು, ಉದ್ಯೋಗ ಮಾಡಿ ಆರ್ಥಿಕವಾಗಿಯೂ ಬಲಿಷ್ಠಳಾಗಿರುವಳು. ಕೆಲವೊಂದು ಕಡೆಗಳಲ್ಲಿ ಪತಿಗಿಂತ ಪತ್ನಿಯು ಹೆಚ್ಚಿನ ಸಂಪಾದನೆ ಮಾಡುತ್ತಿರುವುದನ್ನು ನಾವು ಕಾಣುತ್ತೇವೆ. ಅತ್ತೆ ಮತ್ತು ಸೊಸೆ ನಡುವಿನ ಜಗಳವು ಕೆಲವೊಂದು ಸಲ ಸಾರ್ವಜನಿಕವಾಗಿ ನಡೆಯುವುದು ಮತ್ತು ಹಲ್ಲೆ ಕೂಡ ನಡೆಯುತ್ತದೆ. ಇದಕ್ಕೆ ಕಾನೂನಿನ ಅಗತ್ಯವಿದೆ ಎಂದು ವರದಿಗಳು ಹೇಳುತ್ತವೆ.

ಸಮಸ್ಯೆ

ಸಮಸ್ಯೆ

ಅತ್ತೆಯ ಜತೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವ ಕೌಶಲ್ಯವನ್ನು ಕಲಿಸಿಕೊಟ್ಟಿಲ್ಲ ಮತ್ತು ಕೆಲವೊಂದು ಸೊಸೆಯರು ತುಂಬಾ ಭಿನ್ನವಾಗಿರುವ ಕಥೆ ಹೇಳುತ್ತಾರೆ. ಅದರಲ್ಲೂ ಇನ್ನು ಕೆಲವು ತುಂಬಾ ವಿಚಿತ್ರವಾದ ಕಥೆ ಹೇಳುವರು. ಅಸಂತೋಷ ಗೊಂಡಿರುವಂತಹ ಸೊಸೆಯು ಯಾವತ್ತಿಗೂ ತನ್ನ ಅತ್ತೆಯ ನಿಯಂತ್ರಣದಲ್ಲಿ ಇರಲು ಬಯಸುವುದಿಲ್ಲ. ಆದರೆ ಕೆಲವೊಂದು ಪ್ರಮುಖ ವಿಚಾರಗಳಲ್ಲಿ ಆಕೆ ತನ್ನ ಪತಿ ಅಥವಾ ಪೋಷಕರಿಂದ ನೆರವು ಹೇಳುವಳು. ಆಕೆಗೆ ಯಾವುದೇ ನೆರವು ಸಿಗದೆ ಇದ್ದರೆ ಆಗ ಅಸಮಾಧಾನವು ಮತ್ತಷ್ಟು ಹೆಚ್ಚಾಗುವುದು ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುವುದು. ವೈವಾಹಿಕ ಜೀವನದಲ್ಲಿ ಕೆಲವೊಂದು ನಿರ್ಧಾರಗಳನ್ನು ಅತ್ತೆಮಾವ ತೆಗೆದುಕೊಳ್ಳುತ್ತಾರೆ ಎಂದು ಕೆಲವು ದಂಪತಿಗಳು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಸೊಸೆಯ ಜೀವನ ಶೈಲಿ, ಆಕೆ ಮಾಡುತ್ತಿರುವ ಆಯ್ಕೆಗಳು ಅಥವಾ ಸಾಮಾನ್ಯವಾಗಿ ಆಕೆ ಏನು ಮಾಡುತ್ತಾಳೆ ಎನ್ನುವುದು. ಈ ಬಗ್ಗೆ ಅತ್ತೆಯಲ್ಲಿ ಕೇಳಿದಾಗ, ಇದನ್ನು ತಾನು ಒಳ್ಳೆಯ ಉದ್ದೇಶದಿಂದ ಮಾಡುತ್ತಿದ್ದೇನೆ. ತಾನು ಮಕ್ಕಳು ತಪ್ಪು ಮಾಡಬಾರದು ಎಂದು ಸಲಹೆ ನೀಡುತ್ತಿದ್ದೇನೆ ಎನ್ನುತ್ತಾರೆ ಮತ್ತು ಅವರ ನಿರ್ಧಾರಗಳನ್ನು ನಿಯಂತ್ರಿಸುವಂತಹ ಯಾವುದೇ ಉದ್ದೇಶ ತನಗಿಲ್ಲ ಎಂದು ಹೇಳುವರು.

Most Read: ಅತ್ತೆಯ ಮನಗೆಲ್ಲಬೇಕೆಂದರೆ, ಸೊಸೆಯ ಗುಣ ಹೀಗಿರಬೇಕು..

ಭಿನ್ನಾಭಿಪ್ರಾಯ ಎಲ್ಲಿ ಮೂಡುವುದು

ಭಿನ್ನಾಭಿಪ್ರಾಯ ಎಲ್ಲಿ ಮೂಡುವುದು

ಹನಿಮೂನ್ ಎನ್ನುವುದು ಮುಕ್ತಾಯವಾಗುತ್ತಿದ್ದಂತೆ ಈ ಭಿನ್ನಾಭಿಪ್ರಾಯವು ಮೂಡುವುದು. ಯಾವಾಗ ಭಿನ್ನಾಭಿಪ್ರಾಯ ಆರಂಭವಾಗುವುದು ಎಂದು ಒಂದು ಸಮಯ ಮಿತಿ ಹೇಳಲು ಸಾಧ್ಯವಾಗದು. ಆದರೆ ಮದುವೆಯ ಆರಂಭಿಕ ಕೆಲವೊಂದು ವರ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡುವುದು. ಹೊಸ ಅನುಭವ, ಹೊಸ ಅಡುಗೆ ಮತ್ತು ದೈನಂದಿನ ದಿನಚರಿಗೆ ಹೊಸದಾಗಿ ಹೊಂದಿಕೊಳ್ಳುವುದರಿಂದ ಭಿನ್ನಾಭಿಪ್ರಾಯವು ಆರಂಭವಾಗುವುದು. ಮನೆಯ ಆರ್ಥಿಕತೆ ಮೇಲೆ ನಿಯಂತ್ರಣ ಮತ್ತು ದೇಣಿಗೆ ನೀಡುವ ಮೇಲೆ ಕೂಡ ಭಿನ್ನಾಭಿಪ್ರಾಯವು ಮೂಡುವುದು. ಅತ್ತೆ ಮತ್ತು ಸೊಸೆ ಇಬ್ಬರು ಉದ್ಯೋಗದಲ್ಲಿದ್ದರೆ ಆಗ ಮನೆಯ ಖರ್ಚುಗಳ ಬಗ್ಗೆ ನಿಯಂತ್ರಣ ಹೇರುವುದು ಹೆಚ್ಚಾಗುವುದು. ಈ ಎಲ್ಲಾ ವಿಚಾರಗಳ ಬಗ್ಗೆ ಹೊಂದಾಣಿಕೆ ಮಾಡುವುದು ಮತ್ತು ಎಲ್ಲವನ್ನು ಸ್ವೀಕರಿಸುವುದು ತುಂಬಾ ಕಠಿಣ ಮತ್ತು ಸವಾಲಿನ ಪ್ರಕ್ರಿಯೆಯಾಗಿದೆ. ತನ್ನ ಅತ್ತೆ ಜತೆಗೆ ವಾಸಿಸದೆ ಇದ್ದರೂ ಮತ್ತು ಕೆಲವೇ ದಿನಗಳ ಕಾಲ ಸೊಸೆ ಮನೆಗೆ ಭೇಟಿ ನೀಡುತ್ತಲಿದ್ದರೂ ಈ ಸಮಸ್ಯೆಗಳು ಬರುವುದು.

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಎಲ್ಲಾ ಮನೆಯಲ್ಲಿ ಎರಡು ವಿಧದ ಕಥೆಗಳು ಇದ್ದೇ ಇರುತ್ತದೆ. ಆದರೆ ಒಂದೇ ಮನೆಯಲ್ಲಿ ವಾಸಿಸುವ ವೇಳೆ ತುಂಬಾ ಪಾರದರ್ಶಕತೆ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಕೆಲವೊಂದು ಸಮಯದಲ್ಲಿ ನಮ್ಮ ಅಹಂನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕು ಮತ್ತು ಮನೆಯಲ್ಲಿ ಹೊಂದಾಣಿಕೆ ಮಾಡಲು ಪ್ರಯತ್ನಿಸಬೇಕು. ದಂಪತಿಯಾಗಿ ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ದಂಪತಿಯು ಕೌನ್ಸಿಲಿಂಗ್ ಮಾಡಿಸಿಕೊಳ್ಳಬೇಕು. ಇಲ್ಲಿ ನಿಮಗೆ ಹೇಗೆ ವರ್ತಿಸಬೇಕು ಮತ್ತು ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂದು ಹೇಳಲಾಗುತ್ತದೆ.

Most Read: ರಿಯಲ್ ಸ್ಟೋರಿ: ಮಾವನ ಹಿಂಸೆಯ ವಿಡಿಯೋ ಮಾಡಿ, ಸರಿಯಾಗಿ ಬುದ್ಧಿ ಕಲಿಸಿದ ಸೊಸೆ!

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಇದು ತುಂಬಾ ಸಣ್ಣ ವಿಚಾರವೆಂದು ಹೆಚ್ಚಿನ ಮಹಿಳೆಯರು ಭಾವಿಸಿರಬಹುದು. ಆದರೆ ಪತಿ ಹಾಗೂ ಪತ್ನಿಯ ನಿರ್ಧಾರ ಮಾಡುವ, ಖಾಸಗಿತನಕ್ಕೆ ಯಾವಾಗಲೂ ಮಹತ್ವ ನೀಡಬೇಕು. ಸವಾಲುಗಳನ್ನು ಹಾಕುತ್ತಲೇ ಇದ್ದರೆ ಆಗ ಯಾರ ಪರವಾಗಿಯೂ ಇದು ಕೆಲಸ ಮಾಡಲ್ಲ. ಕೆಲವೊಂದು ಸಲ ಬೈಗುಳದಲ್ಲಿ ಹಲವಾರು ಸಂಬಂಧಗಳು ಮುರಿದು ಬಿದ್ದಿರುವುದು ಇದೆ. ಅತ್ತೆ ಮತ್ತು ಸೊಸೆ ಒಳ್ಳೆಯ ಸ್ನೇಹಿತರಾಗುವುದು ತುಂಬಾ ಕಡಿಮೆ. ಮದುವೆಯಾಗಿರುವ ಮೊದಲ ಕೆಲವು ತಿಂಗಳಲ್ಲಿ ಪತಿಯು ತನಗೆ ಬೆಂಬಲ ನೀಡುವುದಿಲ್ಲ ಎಂದು ಸೊಸೆಯು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರ ಆತನಿಗೆ ಇಂತಹ ಸಮಸ್ಯೆಯು ಬಂದಿರುವುದು ಇದೇ ಮೊದಲು. ತನ್ನ ತಾಯಿಯ ನಿರ್ಧಾರವು ತಪ್ಪು ಎಂದು ಹೇಳಲು ಆತನಿಗೆ ಸಾಧ್ಯವಾಗದು. ಇದಕ್ಕೆ ಒಳ್ಳೆಯ ಉಪಾಯವೆಂದರೆ ದಂಪತಿಯು ಈ ವಿಚಾರದ ಬಗ್ಗೆ ಮಾತನಾಡಿಕೊಂಡು ಅದನ್ನು ನಿಭಾಯಿಸಬೇಕು. ಚರ್ಚೆಯು ಫಲಪ್ರದವಾಗಿರಬೇಕು ಎಂದು ಎಲ್ಲರು ತಿಳಿದುಕೊಳ್ಳಬೇಕು.

Most Read: ಅತ್ತೆ-ಸೊಸೆ ಜಗಳ ನಿಮ್ಮಿಂದಲೇ ಕೊನೆಯಾಗಲಿ!

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಇದಕ್ಕೆ ಪರಿಹಾರವೇನಾದರೂ ಇದೆಯಾ?

ಅತ್ತೆಯು ಸೊಸೆಯ ಮೇಲೆ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ಆದರೆ ನಿರೀಕ್ಷೆಯು ಕೆಲವೇ ದಿನಗಳಲ್ಲಿ ಈಡೇರಲ್ಲ ಮತ್ತು ಅದಕ್ಕೆ ಒತ್ತಡ ಕೂಡ ಹೇರಬಾರದು. ಹೀಗೆ ಮಾಡಿದರೆ ಆಗ ನಕರಾತ್ಮಕ ಭಾವನೆ ಬೆಳೆಯುವುದು. ನಿಮ್ಮ ನಿರೀಕ್ಷೆಗೆ ಸರಿಯಾದ ಕಾರಣಗಳನ್ನು ನೀಡಿ. ಆಧುನಿಕ ಜಗತ್ತಿನ ಅತ್ತೆಯಂದಿರು ಬೇರೆ ಮಹಿಳೆಯರ ಆಸೆ, ಆಕಾಂಕ್ಷೆಗಳನ್ನು ಗೌರವಿಸಲು ಕಲಿತುಕೊಳ್ಳಬೇಕು. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದನ್ನು ಅತ್ತೆ ಹಾಗೂ ಸೊಸೆ ಇಬ್ಬರು ಕಲಿತು ಕೊಳ್ಳಬೇಕು. ತಾನು ಕೂಡ ಒಂದು ಕಾಲದಲ್ಲಿ ಸೊಸೆ ಆಗಿದ್ದೆ ಎಂದು ಅರಿತುಕೊಳ್ಳಬೇಕು. ತನ್ನ ನೋವನ್ನು ಬಂದ ಸೊಸೆಯ ಮೇಲೆ ಹಾಕಬಾರದು. ಸೊಸೆಯಂದಿರು ಕೂಡ ತಾಳ್ಮೆ ಕಲಿತುಕೊಳ್ಳಬೇಕು. ಸಣ್ಣ ವಿಚಾರಗಳನ್ನು ಅಲ್ಲಿಗೆ ಬಿಟ್ಟು ಬಿಡಬೇಕು ಮತ್ತು ಅದನ್ನು ದೊಡ್ಡದು ಮಾಡಲು ಹೋಗಬಾರದು.

English summary

Understanding the New Age Mother-in-Law and Daughter-in-Law Relationships

The Mother-in-law Daughter-in-law Syndrome occurs when the two ladies of the house do not get along, resulting in tension, affecting the overall atmosphere at home. These issues have always been present, but it has become even more prominent in today's changing times. The phrase‘And they lived happily ever after’ should have come with a clause of ‘the in-laws lived happily ever after’!
Story first published: Saturday, May 11, 2019, 13:33 [IST]
X
Desktop Bottom Promotion