For Quick Alerts
ALLOW NOTIFICATIONS  
For Daily Alerts

ಮಾಜಿ ಪ್ರೇಮಿ ಜತೆ ಮತ್ತೆ ಸಂಬಂಧ ಬೆಸೆಯುವ ಮೊದಲು, ಇಂತಹ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ!

|

ಪ್ರೀತಿಯಲ್ಲಿ ಬಿದ್ದವರು ಅದರಿಂದ ಹೊರಗೆ ಬರಬೇಕಾದರೆ ತುಂಬಾ ಕಷ್ಟಪಡಬೇಕಾಗುತ್ತದೆ ಎನ್ನುವ ಮಾತಿದೆ. ಅದರಲ್ಲೂ ಕೆಲವೊಂದು ಸಲ ತಮ್ಮ ಮಾಜಿ ಪ್ರೇಮಿ ಅಥವಾ ಪ್ರೇಯಸಿಯನ್ನು ಮತ್ತೆ ಪ್ರೀತಿಸಬೇಕು, ಆಕೆಯೊಂದಿಗೆ ಸಂಬಂಧ ಬೆಸೆಯಬೇಕು ಎನ್ನುವ ಆಸೆಯು ಮೂಡುವುದು. ಆದರೆ ಇದು ಸರಿಯೇ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಮೂಡುವುದು. ಏನೋ ಒಂದು ಕಾರಣಕ್ಕಾಗಿ ಪರಸ್ಪರ ದೂರವಾಗಿರಬಹುದು.

ಇದರಲ್ಲಿ ಯಾರ ತಪ್ಪು ಎನ್ನುವುದನ್ನು ಹುಡುಕುವುದು ಸ್ವಲ್ಪ ಕಷ್ಟ. ಯಾಕೆಂದರೆ ಇಬ್ಬರಿಂದಲೂ ಕೆಲವೊಂದು ತಪ್ಪುಗಳು ನಡೆದೇ ಇರುತ್ತದೆ. ಆದರೆ ಸಂಬಂಧವನ್ನು ಕಡಿದುಕೊಳ್ಳುವ ಮೊದಲು ಹಲವಾರು ಬಾರಿ ಅದರ ಬಗ್ಗೆ ಆಲೋಚನೆ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಕಡಿದುಕೊಂಡು ಸಂಬಂಧವನ್ನು ಮತ್ತೆ ಸೇರಿಸುವುದು ಎಂದರೆ ಅದು ಒಡೆದು ಹೋಗಿರುವಂತಹ ಕನ್ನಡಿಯನ್ನು ಒಂದು ಮಾಡಿದಂತೆ! ಹೀಗಾಗಿ ನೀವು ಮಾಜಿ ಪ್ರೇಮಿ ಅಥವಾ ಪ್ರೇಯಸಿಯ ಜತೆಗೆ ಸಂಬಂಧ ಬೆಳೆಸಲು ಬಯಸಿದ್ದರೆ ಆಗ ಖಂಡಿತವಾಗಿಯೂ ಕೆಲವೊಂದು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು.

ಸಂಬಂಧ ಯಾಕೆ ಕೆಲಸ ಮಾಡಲಿಲ್ಲ?

ಸಂಬಂಧ ಯಾಕೆ ಕೆಲಸ ಮಾಡಲಿಲ್ಲ?

ಮತ್ತೆ ಹಿಂದೆ ತಿರುಗಿ ಎಲ್ಲವನ್ನು ನೆನಪು ಮಾಡಿಕೊಂಡು ಕಠಿಣ ಸಮಯವನ್ನು ನೆನಪು ಮಾಡಿಕೊಳ್ಳುವುದು ಕಷ್ಟ. ಆದರೆ ಮಾಜಿ ಜತೆಗೆ ನೀವು ಮತ್ತೆ ಸಂಬಂಧ ಬೆಸೆಯಬೇಕು ಎಂದಿದ್ದರೆ ಆಗ ನೀವು ಇದನ್ನು ಖಂಡಿತವಾಗಿಯೂ ಮಾಡಲೇಬೇಕು. ನೀವು ಸಂಬಂಧದ ಪ್ರತಿಯೊಂದು ಅಂಶವನ್ನು ಮತ್ತೆ ನೆನಪು ಮಾಡಿಕೊಳ್ಳಬೇಕು ಮತ್ತು ಅದು ಯಾಕೆ ಕೆಲಸ ಮಾಡಿಲ್ಲವೆಂದು ನೀವು ತಿಳಿಯಬೇಕು. ಈ ಕಾರಣದಿಂದಾಗಿ ನೀವು ಕೆಲವೊಂದು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮುಂದಿಡಬಹುದು. ಕಳೆದ ಸಲ ನೀವು ಮಾಡಿರುವಂತಹ ತಪ್ಪುಗಳನ್ನು ಅರ್ಥ ಮಾಡಿಕೊಂಡು ಅದನ್ನು ಮನವರಿಕೆ ಮಾಡಿಕೊಳ್ಳಬೇಕು. ಸಂಬಂಧದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆ ಆಗಿದೆಯಾ ಅಥವಾ ಇಲ್ಲವಾ ಎಂದು ತಿಳಿಯಬೇಕು. ಎಲ್ಲವೂ ಯಾಕೆ ಕೊನೆಯಾಯಿತು ಮತ್ತು ನೀವು ಯಾವುದರ ಬಗ್ಗೆ ಕೆಲಸ ಮಾಡಬೇಕು ಎಂದು ತಿಳಿಯಿರಿ.

ಎರಡನೇ ಸಲ ತುಂಬಾ ಭಿನ್ನ ಯಾಕೆ?

ಎರಡನೇ ಸಲ ತುಂಬಾ ಭಿನ್ನ ಯಾಕೆ?

ಸಂಬಂಧದಲ್ಲಿ ಯಾವೆಲ್ಲಾ ಬದಲಾವಣೆಗಳು ಮಾಡಬೇಕು ಎನ್ನುವುದನ್ನು ನೀವಿಬ್ಬರು ಜತೆಯಾಗಿ ಎದುರುಬದುರು ಕುಳಿತುಕೊಂಡು ಚರ್ಚೆ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಸಂಗಾತಿಯು ಬದಲಾಗಿದ್ದಾರೆಯಾ ಅಥವಾ ಸಂಬಂಧದಲ್ಲಿ ಅವರಿಂದ ಯಾವ ನಿರೀಕ್ಷೆ ಮಾಡುತ್ತೀರಿ ಎಂದು ತಿಳಿದುಬರಲಿದೆ. ನೀವು ಯಾವಾಗಲೂ ನಿಮ್ಮದೇ ತಪ್ಪು ಮತ್ತು ನಿಮ್ಮದೇ ಸಂಪೂರ್ಣ ತಪ್ಪು ಎಂದು ಹೇಳುತ್ತಲಿದ್ದರೆ ಆಗ ನೀವು ಮುಂದೆ ಸಾಗಬೇಕು. ಯಾಕೆಂದರೆ ಎರಡನೇ ಸಲ ಯಾವುದೇ ಬದಲಾವಣೆ ಆಗದು.

ಹಳೆಯ ಹವ್ಯಾಸಗಳಿಗೆ ಮೊರೆ ಹೋಗುವುದು ತಪ್ಪಿಸುವುದು ಹೇಗೆ?

ಹಳೆಯ ಹವ್ಯಾಸಗಳಿಗೆ ಮೊರೆ ಹೋಗುವುದು ತಪ್ಪಿಸುವುದು ಹೇಗೆ?

ಮಾಜಿ ಜತೆಗೆ ನೀವು ಮರು ಸಂಬಂಧ ಬೆಳೆಸುವ ಮೊದಲು ನಿಮ್ಮನ್ನು ನೀವು ತಡೆಯಬಹುದು ಮತ್ತು ಹಳೆಯ ಅಭ್ಯಾಸಗಳಿಗೆ ಮೊರೆ ಹೋಗುವುದನ್ನು ತಪ್ಪಿಸಬಹುದು. ನೀವು ಹಳೆ ಪರಿಸ್ಥಿತಿಗೆ ಮತ್ತೆ ಬಿದ್ದರೆ ಆಗ ಮತ್ತೆ ಅದೇ ರಿತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ನೀವು ಮತ್ತೆ ಹಳೆಯ ಅಭ್ಯಾಸಗಳಿಗೆ ಮೊರೆ ಹೋದರೆ ಆಗ ಮತ್ತೆ ದೂರವಾಗುವಂತಹ ಸಂಭವ ಹೆಚ್ಚಾಗಿರುವುದು. ಯಾಕೆಂದರೆ ಕಳೆದ ಸಲ ನೀವು ಈ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವೇ ಆಗಿರಲಿಲ್ಲ. ಸಂಗಾತಿ ಜತೆಗೆ ನೀವು ಎಲ್ಲವನ್ನು ಮಾತನಾಡ ಬೇಕು ಮತ್ತು ಇದನ್ನು ಹೇಳಲು ನಿಮಗೆ ಯಾವುದೇ ಹಿಂಜರಿಕೆ ಇರಬಾರದು. ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಹುಡುಕಲು ಪ್ರಯತ್ನಿಸಿ. ಹಳೆಯ ಅಭ್ಯಾಸಗಳಿಗೆ ಬೀಳದಂತೆ ನೋಡಿಕೊಳ್ಳಿ.

 ನೀವು ಮತ್ತೆ ಜತೆ ಸೇರುವುದು ಯಾಕೆ?

ನೀವು ಮತ್ತೆ ಜತೆ ಸೇರುವುದು ಯಾಕೆ?

ಮಾಜಿ ಜತೆಗೆ ನೀವು ಮತ್ತೆ ಸಂಬಂಧ ಬೆಸೆಯುವುದು ಯಾಕೆ ಎನ್ನುವುದನ್ನು ನೀವು ಕೇಳಿಕೊಳ್ಳಬೇಕಾದ ತುಂಬಾ ಸರಳ ಪ್ರಶ್ನೆಯಾಗಿದೆ. ದೂರವಾದ ಬಳಿಕ ಕೂಡ ನೀವು ಮಾಜಿ ಜತೆಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರೆ ಮತ್ತು ನಿಮಗಿಬ್ಬರಿಗೆ ಸಂಬಂಧದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಇದ್ದರೆ ಆಗ ನೀವು ಮರಳಿ ಸಂಬಂಧ ಬೆಸೆಯಬಹುದು. ಇದರಿಂದ ನಿಮಗೆ ಮತ್ತೆ ಏನು ಬೇಕು ಎಂದು ತಿಳಿಯುವುದು. ನಿಮ್ಮ ಮಾಜಿ ತುಂಬಾ ಪ್ರಾಮಾಣಿಕ, ಬೆಂಬಲ ನೀಡುವ ಮತ್ತು ಬದ್ಧತೆ ಹೊಂದಿದ್ದಾರೆಯಾ ಎಂದು ತಿಳಿಯಿರಿ. ನೀವು ತುಂಬಾ ಕೆಟ್ಟದಾಗಿ ಸಂಬಂಧದಿಂದ ದೂರವಾಗಿದ್ದರೆ ಆಗ ನೀವು ಮರಳಿ ಸಂಬಂಧ ಬೆಸೆಯುವುದು ಬೇಡ. ಯಾಕೆಂದರೆ ಇದು ಮತ್ತೆ ನಡೆಯಬಹುದು. ನೀವು ಮರಳಿ ಮಾಜಿ ಜತೆಗೆ ಸಂಬಂಧ ಬೆಸೆಯಬೇಡಿ ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಹೇಳುತ್ತಾ ಇರಬಹುದು.

ಸಂಗಾತಿಯು ನಿಮ್ಮಲ್ಲಿ ಅತ್ಯುತ್ತಮವಾಗಿರುವುದನ್ನು ಬಯಸುತ್ತಾರೆಯಾ?

ಸಂಗಾತಿಯು ನಿಮ್ಮಲ್ಲಿ ಅತ್ಯುತ್ತಮವಾಗಿರುವುದನ್ನು ಬಯಸುತ್ತಾರೆಯಾ?

ಜೀವನದಲ್ಲಿ ಸರಿಯಾದ ಸಂಗಾತಿಗಳು ಇದ್ದರೆ ಆಗ ನಮ್ಮಲ್ಲಿ ಕೂಡ ಉತ್ತಮವಾದ ಸಾಧನೆಯು ಬರುವುದು. ನೀವು ಕೂಡ ಸಂಗಾತಿಯು ನಿಮ್ಮಲ್ಲಿ ಉತ್ತಮವಾಗಿರುವುದನ್ನು ಅಥವಾ ಕೆಟ್ಟದನ್ನು ತರುತ್ತಾರೆಯಾ ಎಂದು ನೋಡಿಕೊಳ್ಳಿ. ನೀವು ತುಂಬಾ ಬಲಿಷ್ಠ ಹಾಗೂ ಆತ್ಮವಿಶ್ವಾಸದಿಂದ ಇರುವಂತೆ ಭಾವನೆ ಮೂಡಿಸಬೇಕು. ಜಗಳಗಳ ಹೊರತಾಗಿಯೂ ನಿಮ್ಮಲ್ಲಿ ಯಾವಾಗಲೂ ಕೆಟ್ಟದು ಬರುತ್ತಲಿದ್ದರೆ ಮತ್ತು ನೀವು ಏನು ಮತ್ತು ನಿಮ್ಮಿಂದ ಇದು ಸಾಕಾಗಲ್ಲ ಎಂದು ಸಂಗಾತಿಯು ಹೇಳುತ್ತಲಿದ್ದರೆ ಆಗ ಮರಳಿ ಸಂಬಂಧ ಬೆಸೆಯಲು ಹೋಗಬೇಡಿ. ಸಂಗಾತಿಯು ಯಾವಾಗಲೂ ನಿಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುತ್ತಿರಬೇಕು. ಆಗ ಮಾತ್ರ ಮತ್ತೆ ಸಂಬಂಧ ಬೆಸೆಯಬಹುದು.

English summary

Thinking about getting back with your ex? Questions to ask yourself

Every relationship is beautiful on its own. It all starts with gushing, excitement and a feeling beyond words. But sometimes things don’t work out the same way that people want. Some relationships end to never rekindle, but some are meant to be. If you belong to the latter and want to rekindle a romance with your ex, then here are some questions that you need to ask before you go ahead with your plan.
X
Desktop Bottom Promotion