Latest Updates
-
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಸಂಗಾತಿಗಳಿಬ್ಬರು ಮಲಗುವ ಭಂಗಿಗಳು ಸರಿಯಾಗಿದ್ದರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆಯಂತೆ!
ವೈವಾಹಿಕ ಸಂಬಂಧವು ಚೆನ್ನಾಗಿ ಇರಬೇಕಾದರೆ ಆಗ ದಂಪತಿಯು ಅನ್ಯೋನ್ಯವಾಗಿ ಇರುವುದು ಕೂಡ ಅತೀ ಅಗತ್ಯವಾಗಿ ಇರುವುದು. ಇಂತಹ ಸಮಯದಲ್ಲಿ ರಾತ್ರಿ ವೇಳೆ ದಂಪತಿಯು ಯಾವ ಭಂಗಿಯಲ್ಲಿ ಮಲಗುತ್ತಾರೆ ಎನ್ನುವುದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ದಂಪತಿಯು ರಾತ್ರಿ ವೇಳೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಪರಸ್ಪರ ಹಂಚಿಕೊಳ್ಳಬೇಕು. ಕುತ್ತಿಗೆ ಮತ್ತು ತಲೆಯು ಸರಿಯಾದ ಕ್ರಮದಲ್ಲಿ ಇಲ್ಲದೆ ಇದ್ದರೆ ಅದರಿಂದ ನೋವು ಉಂಟಾಗುವುದು ಎಂದು ಹೇಳಲಾಗುತ್ತದೆ. ಹೀಗಾಗಿ ನೀವು ಸಂಗಾತಿ ಜತೆಗೆ ಮಲಗುವ ವೇಳೆ ಒಂದು ಕ್ರಮವನ್ನು ಅಳವಡಿಸಿಕೊಳ್ಳಿ.

ಬದಿ ಬದಿಗೆ ಮಲಗುವುದು
ನೀವಿಬ್ಬರು ಬದಿ ಬದಿಗೆ ಮಲಗಲು ನಿರ್ಧರಿಸಿದ್ದರೆ ಆಗ ನೀವು ಪರಸ್ಪರ ಅಪ್ಪಿಕೊಂಡು ಮಲಗಬಹುದು. ಇದು ಈ ಭಂಗಿಯು ನಿಮ್ಮ ಬೆನ್ನಿನ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ ಮತ್ತು ಇದು ಬೆನ್ನಿಗೆ ನೆರವಾಗುವುದು. ಹೀಗೆ ಮಲಗುತ್ತಿದ್ದರೆ ಆಗ ನೀವು ಕಾಲಿನ ಮಧ್ಯೆ ತಲೆದಿಂಬನ್ನು ಇಟ್ಟುಬಿಡಿ, ಹೀಗೆ ನೀವು ಒಂದು ಬದಿ ಬದಲಾಯಿಸುತ್ತಾ ಇರಿ. ನೀವು ಪರಸ್ಪರ ಮುಖ ನೋಡದರೆ ಹೀಗೆ ಮಲಗಬಹುದು. ಕೆಲವರಿಗೆ ಮುಖ ನೋಡಿಕೊಂಡು ಮಲಗುವುದು ಇಷ್ಟವಾಗದು. ಹೀಗೆ ನೀವು ಸಂಗಾತಿಯ ಬೆನ್ನು ಹಿಡಿದುಕೊಳ್ಳಬಹುದು. ಕಾಲಿನ ಮಧ್ಯೆ ದಿಂಬು ಇಡಲು ಮರೆಯಬೇಡಿ.

ಬದಿ ಹಾಗೂ ಬೆನ್ನಿನ ಮೇಲೆ ಮಲಗುವುದು
ನೀವಿಬ್ಬರು ಭಿನ್ನವಾದ ಭಂಗಿಯಲ್ಲಿ ಮಲಗಲು ಬಯಸುತ್ತಿದ್ದೀರಿ. ಇದೇ ವೇಳೆ ನೀವು ಪರಸ್ಪರ ಮುದ್ದಾಡಿಕೊಂಡು ಬೆನ್ನಿಗೆ ಯಾವುದೇ ತೊಂದರೆ ಮಾಡದಿರಲು ಬಯಸಿದ್ದೀರಿ. ಸಂಗಾತಿಗೆ ಮುಖ ಮಾಡಿಕೊಂಡು ನೀವು ಮಲಗಬಹುದು ಮತ್ತು ಒಬ್ಬರು ಬೆನ್ನಿನ ಮೇಲೆ ಮಲಗಬಹುದು. ನೀವು ಹೀಗೆ ಮಲಗುತ್ತಿದ್ದರೆ ಆಗ ನೀವು ಮೊಣಕೈ ಅಡಿಯಲ್ಲಿ ದಿಂಬು ಇಟ್ಟುಕೊಳ್ಳಿ ಮತ್ತು ಇದರಿಂದ ಕಾಲುಗಳಿಗೆ ಕೂಡ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಸಿಗುವುದು.

ಬೆನ್ನಿನ ಮೇಲೆ ಮಲಗುವುದು
ನಿದ್ರೆ ಮತ್ತು ನಿಮ್ಮ ಬೆನ್ನಿನ ಮೂಳೆಗೆ ಯಾವುದೇ ತೊಂದರೆ ಆಗದಂತೆ ಮಾಡಲು ನೀವು ಹಾಗೂ ಸಂಗಾತಿ ಇಬ್ಬರು ಬೆನ್ನ ಮೇಲೆ ಮಲಗಬೇಕು. ನೀವಿಬ್ಬರು ಬೆನ್ನಿನ ಮೇಲೆ ಮಲಗಿಕೊಂಡು ಸ್ವಲ್ಪ ಸ್ಪರ್ಶ ಮಾಡಬಹುದು. ನೀವು ಒಂದೇ ದಿಂಬನ್ನು ಕಾಲಿನಲ್ಲಿ ಹಂಚಿಕೊಳ್ಳಬಹುದು. ಕಾಲಿನಡಿಯಲ್ಲಿ ದಿಂಬು ಇಟ್ಟುಕೊಂಡರೆ ಬೆನ್ನಿನ ಮೂಳೆಗೆ ನೆರವಾಗುವುದು.

ಹೊಟ್ಟೆಯ ಮೇಲೆ ಮತ್ತು ಬದಿಗೆ ಮಲಗುವುದು
ಸಂಗಾತಿಗಳಿಬ್ಬರು ಹೊಟ್ಟೆಯ ಮೇಲೆ ಮಲಗಿಕೊಂಡು ಹಾಗೆ ಮುದ್ದಾಡಬಹುದಾಗಿದೆ. ಆದರೆ ಇದಕ್ಕೆ ಒಳ್ಳೆಯ ವಿಧಾನವಿದೆ. ಅದೇನೆಂದರೆ ಹೊಟ್ಟೆಯ ಮೇಲೆ ಮಲಗುವಂತಹ ಸಂಗಾತಿಗಳು ಯಾವಾಗಲೂ ಮೆತ್ತಗಿನ ದಿಂಬು ಮತ್ತು ಮೆತ್ತಗಿನ ಹಾಸಿಗೆ ಬಳಸಿಕೊಳ್ಳಬೇಕು. ಯಾಕೆಂದರೆ ಇದರಿಂದ ಯಾವುದೇ ಒತ್ತಡ ಬೀಳದು. ಈ ವೇಳೆ ಕಾಲುಗಳನ್ನು ಸಂಗಾತಿಯ ಮೇಲೆ ಇಡಬಹುದು. ನೀವು ಒಬ್ಬರ ಮಧ್ಯೆ ಸ್ವಲ್ಪ ಅಂತರ ಕೂಡ ಕಾಯ್ದುಕೊಳ್ಳಬಹುದು.

ಸಂಗಾತಿಗಳಿಬ್ಬರು ಹೊಟ್ಟೆಯಲ್ಲಿ ಮಲಗುವುದು
ಇದು ಸ್ವಲ್ಪ ಕಿಷ್ಟವಾಗುವುದು. ಆದರೆ ಇಬ್ಬರು ಹೊಟ್ಟೆಯ ಮೇಲೆ ಮಲಗಬಹುದು. ಈ ವೇಳೆ ನೀವು ಕುತ್ತಿಗೆ ಮತ್ತು ಬೆನ್ನ ಮೂಳೆಗೆ ದಿಂಬಿನಿಂದ ಆಧಾರ ನೀಡಬೇಕು. ನೀವಿಬ್ಬರು ಕಾಲುಗಳನ್ನು ಹಾಗೆ ಪರಸ್ಪರ ಸ್ಪರ್ಶಿಸಿಕೊಂಡು ಮಲಗಬಹುದು. ಇದರಿಂದ ನೀವಿಬ್ಬರು ಒಳ್ಳೆಯ ಆರೋಗ್ಯಕಾರಿ ಸಂಬಂಧ ಬೆಸೆದುಕೊಳ್ಳಬಹುದು.



Click it and Unblock the Notifications