For Quick Alerts
ALLOW NOTIFICATIONS  
For Daily Alerts

ಸಂಬಂಧಗಳ ಬೆಲೆ ತಿಳಿಯುವುದೇ ನೀವು ನಿಜವಾದ ಪ್ರೀತಿಯಲ್ಲಿ ಬಿದ್ದಮೇಲೆ!

|
Episode 1 : ಇದು ದ್ವೇಷ ಮಾಡಿದ ಜೋಡಿ ಪ್ರೀತಿಯಲ್ಲಿ ಬಿದ್ದ ಕಥೆ..? | BoldSky Kannada

ಬಂಧುಗಳು , ನೆಂಟರು ಇಷ್ಟರು ಇವೆಲ್ಲಾ ಮಾನವ ಜೀವನದ ಪ್ರಮುಖ ಮತ್ತು ಬಹು ಮುಖ್ಯ ಕೊಂಡಿಗಳು.ಈ ಸಂಬಂಧಗಳಲ್ಲಿ ಸ್ವಲ್ಪ ಏರುಪೇರಾದರೂ ಎಷ್ಟೇ ಗಟ್ಟಿಯಾಗಿ ಬೆಸೆದುಕೊಂಡಿರುವ ಕೊಂಡಿಗಳಾದರೂ ಕಳಚಿ ದಿಕ್ಕಾಪಾಲಾಗುತ್ತವೆ . ನಾವೂ ನೀವೆಲ್ಲಾ ಜೀವಿಸುತ್ತಿರುವ ಈ ಪ್ರಪಂಚದಲ್ಲಿ ಎಲ್ಲರೂ ಈ ಸುಳಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಿಲುಕಿಕೊಂಡೇ ಇರುತ್ತಾರೆ.ಸಂಬಂಧಗಳನ್ನು ಬಿಡಿಸಿಕೊಳ್ಳುವುದು ಸುಲಭ. ಅದನ್ನು ಬೆಳೆಸಿ , ಬೆಳೆದ ಸಂಬಂಧವನ್ನು ಜೀವನ ಪರ್ಯಂತ ಅದಕ್ಕೆ ಸ್ವಲ್ಪವೂ ಚ್ಯುತಿ ಬರದಂತೆ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವೇ ಸರಿ.ನಿಮ್ಮ ಜೀವನದಲ್ಲಿ ಈ ರೀತಿಯಾಗಿ ಸಮಸ್ಯೆಗಳು ತಲೆದೋರಂತೆ ತಡೆಗಟ್ಟಲು ನಮ್ಮ ಈ ಕೆಲವೊಂದು ಸಲಹೆಗಳು ನಿಮಗೆ ಉಪಯೋಗಬಹುದು.

ಸಂಬಂಧಿಗಳಲ್ಲದ ಸಂಬಂಧ ಬೆಳೆಯಬೇಕಾದರೆ ಮೊದಲು ಒಬ್ಬರನ್ನೊಬ್ಬರು ನೋಡಿ ಮಾತನಾಡಿ ಪರಿಚಯ ಮಾಡಿಕೊಂಡು ನಂತರ ಅದೇ ಪರಿಚಯ ನಂಬಿಕೆಯ ಹೆಮ್ಮರವಾಗಿ ಆ ನಂಬಿಕೆ ಮುಂದೊಂದು ದಿನ ಇಬ್ಬರ ಮಧ್ಯೆ ಗಾಢವಾದ ಪ್ರೀತಿಯಾಗಿ ಬದಲಾಗಿ ಅದರಿಂದ ಸಂಬಂಧ ಎಂಬುದು ಮಾರ್ಪಾಡಾಗುತ್ತದೆ.ದಿನ ಕಳೆದಂತೆ ಇಬ್ಬರ ಸಂಬಂಧದಲ್ಲಿ ಸಲುಗೆ ಜಾಸ್ತಿಯಾಗುತ್ತಾ ಹೋಗುತ್ತದೆ. ಆದರೆ ಈ ರೀತಿಯ ಸಲುಗೆಯೇ ಮುಂದೊಂದು ದಿನ ಅದೇ ಸಂಬಂಧಕ್ಕೆ ಮುಳ್ಳಾಗುತ್ತದೆ.ಏಕೆಂದರೆ ನಮ್ಮಲ್ಲೊಂದು ಭಾವನೆ ಮೂಡಿರುತ್ತದೆ . ನಾನು ನನಗೆ ಸರಿಯಾದ ಜೋಡಿಯನ್ನೇ ಆರಿಸಿದ್ದೇನೆ ಮುಂದೆ ನಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಮೂಡುವುದಿಲ್ಲ ನಾವು ಜೀವನದಲ್ಲಿ ಯಾವಾಗಲೂ ಚೆನ್ನಾಗಿಯೇ ಬದುಕುತ್ತೇವೆ ಎಂದು. ಇದೇ ತಪ್ಪು. ಇಲ್ಲಿ ಯಾರೂ 100 ರಷ್ಟು ಸರಿಯಾಗಿರಲು ಸಾಧ್ಯವಿಲ್ಲ, ನಾವೂ ಕೂಡ....

ಪ್ರೀತಿ ಎನ್ನುವುದು ಒಂದು ಸುಂದರ ಗುಲಾಬಿ ಹೂವಿನಂತೆ

ಪ್ರೀತಿ ಎನ್ನುವುದು ಒಂದು ಸುಂದರ ಗುಲಾಬಿ ಹೂವಿನಂತೆ

ಪ್ರೀತಿ ಎಂದ ಮೇಲೆ ಭಾವನೆಗಳು ಬರುವುದು ಸಹಜ. ಅಂತೆಯೇ ಪ್ರೀತಿ ಹೆಚ್ಚಾದಂತೆ ಭಾವನೆಗಳೆಲ್ಲಾ ಕುರುಡು ಬಯಕೆಗಳಾಗಿ ಮಾರ್ಪಡುತ್ತವೆ. ಇದಕ್ಕೆ ಯಾರೂ ಹೊರತಲ್ಲ. ಕೆಲವೊಮ್ಮೆ ಇದು ವಿಪರೀತವಾದಾಗ ಇಂತಹ ಭಾವನೆಗಳೇ ಇಬ್ಬರ ಮಧ್ಯೆ ಮುಳ್ಳಾಗುತ್ತವೆ ಮತ್ತು ಒಬ್ಬರನ್ನೊಬ್ಬರು ನೋಡದಂತೆ ಎದುರು ಬರದಂತೆ ಮಾಡುತ್ತವೆ. ಆದರೆ ಮನುಷ್ಯ ಈ ಸಮಾಜದಲ್ಲಿ ಸಹಜವಾಗೇ ವಾಸ್ತವದಲ್ಲಿ ಬದುಕಬೇಕಾಗಿರುವುದರಿಂದ ಆರಂಭದ ಕ್ಷಣದಲ್ಲಿ ಪ್ರೀತಿ ಎನ್ನುವುದು ಒಂದು ಸುಂದರ ಗುಲಾಬಿ ಹೂವಿನಂತೆ ಕಂಗೊಳಿಸುತ್ತದೆ .ಇದರಿಂದ ವಾಸ್ತವತೆಯ ಅರಿವೇ ಇಲ್ಲದೆ ಮನುಷ್ಯ ವರ್ತಿಸಬೇಕಾಗುತ್ತದೆ. ಇದೆಲ್ಲ ದಿನ ಕಳೆದಂತೆ ಸಂಬಂಧ ಗಟ್ಟಿಯಾದಂತೆ ಒಬ್ಬರಿಗೊಬ್ಬರು ಸಲುಗೆಯಿಂದ ಇರತೊಡಗಿದಾಗ ಮನುಷ್ಯನಿಗೆ ಎಲ್ಲೋ ಒಂದು ಕಡೆ ನಾನು ಬಾಹ್ಯವಾಗಿ ಕುರುಡಾಗುತ್ತಿದ್ದೇನಾ ಎಂಬ ಭಾವನೆ ಬರಲಾರಂಭಿಸುತ್ತದೆ. ಆದರೆ ನಿಜವಾಗಲೂ ಒಳಗಣ್ಣಿನಿಂದ ನೋಡಿದಾಗ ಇದೆಲ್ಲಾ ನಮಗೆ ಜೀವನ ಕಲಿಸುವ ಒಂದು ಪಾಠವಾಗುತ್ತದೆ ಎಂಬುದನ್ನು ನೆನೆಪಿಟ್ಟುಕೊಳ್ಳಬೇಕು.

ನಾವು ಹೇಳುತ್ತಿರುವುದು ಯಾವುದೋ ಕಾಲ್ಪನಿಕ ಕಥೆಯಲ್ಲ.ಬದಲಿಗೆ ಇದೇ ಜೀವನದ ಸತ್ಯ

ನಾವು ಹೇಳುತ್ತಿರುವುದು ಯಾವುದೋ ಕಾಲ್ಪನಿಕ ಕಥೆಯಲ್ಲ.ಬದಲಿಗೆ ಇದೇ ಜೀವನದ ಸತ್ಯ

ನಿಮ್ಮ ಜೀವನವು ಒಂದು ಸುಂದರವಾದ ಮತ್ತು ಲೈಲಾ ಮಜನೂ ರಂತಹ ದಂತ ಕಥೆಯಾದರೂ ಇದನ್ನು ಕಾಲ್ಪನಿಕ ಕಥೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯ ಲೋಕದಲ್ಲಿ ಹುಟ್ಟಿರುವ ನಾವೆಲ್ಲರೂ ನಮ್ಮ ಜೀವನದ ಬಗ್ಗೆ ನಮ್ಮದೇ ಆದ ಸ್ವಂತ ಭಾವನೆ ಆಸೆ ಕನಸುಗಳನ್ನು ಹೊಂದಿರುವವರು. ಇಲ್ಲಿ ಹಗಲಲ್ಲಿ ಬೇರೆ ರಾತ್ರಿಯಲ್ಲಿ ಬೇರೆ ಎಂಬ ಇತಿಹಾಸವೇ ಇಲ್ಲ . ಮತ್ತು ಸೂರ್ಯ ಮುಳುಗಿದ ಮೇಲೆ ಏನೇನು ಬದಲಾಗುವುದಿಲ್ಲ. ಎಲ್ಲವೂ ಇದ್ದಂತೆಯೇ ಇರುತ್ತದೆ. ನಿಮ್ಮ ಸಂಗಾತಿಯು ನಿಮಗೆ ಒಂದು ಚೆಂಗುಲಾಬಿಯಂತೆ ಗೋಚರಿಸಿದರೂ ಅದ್ಯಾವುದೂ ಶಾಶ್ವತವಲ್ಲ. ಜೀವನವೆಂದ ಮೇಲೆ ಸರಸ ವಿರಸ ಎಲ್ಲವೂ ಸಹಜವೇ ತಾನೇ ? ಹಾಗೆಂದು ಸರಸ ವಿದ್ದಾಗ ನಿಮ್ಮ ಬಾಳ ಸಂಗಾತಿಯು ನಿಮ್ಮನ್ನು ಪ್ರೀತಿಸುತ್ತಾರೆ ಎಂತಲೂ ಅಥವಾ ವಿರಸ ಉಂಟಾದಾಗ ನಿಮ್ಮನ್ನು ಪ್ರೀತಿಸುವುದಿಲ್ಲ ಎಂದು ಏನು ಇಲ್ಲ. ಮನುಷ್ಯ ಜೀವನದಲ್ಲಿ ಎಲ್ಲವೂ ಅಗತ್ಯವೇ. ಪ್ರತಿಯೊಂದರಲ್ಲೂ ಅದರದೇ ಆದ ಸಾಮರಸ್ಯ ವಿರುತ್ತದೆ . ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅಂತಹ ಗುಣವನ್ನು ನೀವೂ ನಾವೂ ಬೆಳೆಸಿಕೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ಸಂಗಾತಿಯೊಡನೆ ಜಗಳದಿಂದಲೋ ಅಥವಾ ಮನಸ್ತಾಪ ದಿಂದಲೋ ಜೀವನವೇ ಬೇಡ ಎಂದೆನಿಸ ಬಹುದು.ಒಂದೇ ಮನೆಯಲ್ಲಿದ್ದರೂ ಒಬ್ಬರಿಗೊಬ್ಬರು ಮಾತನಾಡುವುಲ್ಲ ಒಬ್ಬರ ಮುಖ ಒಬ್ಬರು ನೋಡುವುದಿಲ್ಲ ನಿಮ್ಮ ಸ್ವಂತ ಮನೆಯೇ ನಿಮಗೆ ಯಾವುದೋ ಅಜ್ಞಾತ ಲೋಕ ವೆನಿಸುತ್ತದೆ. ಬರೀ ಗೋಡೆಗಳು ಕಿಟಕಿ ಬಾಗಿಲುಗಳೇ ನಮಗೆ ನೆಂಟರಾಗಿಬಿಡುತ್ತವೆ.ಅಂತಹ ಸಮಯದಲ್ಲಿ ತಾಳ್ಮೆ ಕಳೆದು ಕೊಳ್ಳಬಾರದು. ಅದಕ್ಕೆ ದೊಡ್ಡವರು ಹೇಳಿರುವುದು ಕಷ್ಟ ಬಂದಾಗ ಕುಗ್ಗಬಾರದು ಸುಖ ಬಂದಾಗ ಹಿಗ್ಗಬಾರದು ಎಂದು. ಇದು ನಮ್ಮ ಮಧ್ಯೆ ಇರುವ ಪ್ರೀತಿಗೂ ಸಹ ಅನ್ವಯಿಸುತ್ತದೆ.

Most Read: ಕೊನೆಗೂ ತನ್ನ ಹಿಂದಿನ ಸೆಕ್ಸ್ ಲೈಫ್ ಬಗ್ಗೆ ಪತಿಗೆ ತಿಳಿದು ಹೋಯಿತು!

ಜೀವನ ಎಂದ ಮೇಲೆ ಕಿರಿ-ಕಿರಿ ಇದ್ದೆ ಇರುತ್ತದೆ

ಜೀವನ ಎಂದ ಮೇಲೆ ಕಿರಿ-ಕಿರಿ ಇದ್ದೆ ಇರುತ್ತದೆ

ಇದು ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಜೀವನದ ಕಠೋರ ಸತ್ಯ. ನೀವು ನಿಮ್ಮ ಪ್ರೀತಿಸುವ ಸಂಗಾತಿಯೊಂದಿಗೆ ಮೊದಲು ಡೇಟಿಂಗ್ ಮಾಡಲು ಶುರು ಮಾಡಿದಾಗಿನ ಒಲವು ಪ್ರೀತಿ ದಿನ ಕಳೆದಂತೆ ಮರೆಯಾಗುತ್ತಾ ಹೋಗುತ್ತದೆ. ಏಕೆಂದರೆ ಹೊಸದರಲ್ಲಿ ಎಲ್ಲವೂ ಚಂದವೇ. ಇಬ್ಬರಿಗೂ ಮೆಚ್ಚುಗೆಯಾಗಲೆಂದೇ ಒಬ್ಬೊಬ್ಬರೂ ಕೂಡ ಬಹಳ ಬುದ್ಧಿವಂತಿಕೆಯಿಂದ ಮತ್ತು ತಮ್ಮ ಕೆಟ್ಟ ಸ್ವಭಾವಗಳನ್ನು ಮರೆಮಾಚಿಯೇ ಪ್ರೀತಿಸಲು ಪ್ರಾರಂಭಿಸುತ್ತಾರೆ. ಆದರೆ ಬಾಳಸಂಗಾತಿಯಾದ ಮೇಲೆ ಇಬ್ಬರ ಮಧ್ಯೆ ಪ್ರೀತಿ ಎಂಬುದು ಸಲುಗೆಯಾಗಿ ಬದಲಾದ ಮೇಲಂತೂ ಜೀವನ ಎಂಬ ಪುಸ್ತಕದ ನಿಜವಾದ ಪುಟ ತಾನಾಗಿಯೇ ತೆರೆದುಕೊಳ್ಳುತ್ತದೆ. ಮೊದಲಿದ್ದಷ್ಟು ಗುಣಗಳು ನೋಡ ಬೇಕೆನಿಸಿದರೂ ಕಾಣ ಸಿಗುವುದಿಲ್ಲ. ಸೋಮಾರಿತನ ಹೆಚ್ಚಾಗುತ್ತದೆ. ಹಿಂದೆ ಪಳಪಳನೆ ಹೊಳೆಯುತ್ತಿದ್ದ ನಿಮ್ಮ ಸಂಗಾತಿಗೆ ಏಕೋ ಮಂಕು ಕವಿದಂತೆ ಭಾಸವಾಗುತ್ತದೆ.ಒಮ್ಮೊಮ್ಮೆ ಹೇಳಿದ ಮಾತನ್ನೂ ಕೇಳುವುದಿಲ್ಲ. ತನ್ನ ಪಾಡಿಗೆ ತಾನು ತನ್ನದೇ ಆದ ಲೋಕದಲ್ಲಿ ಇದ್ದುಬಿಡುತ್ತಾರೆ. ಮುಖ ಕಂಡರೆ ಮೂಗು ಮುರಿಯುವುದು,ಎದುರಾಗಿ ಮಾತನಾಡುವುದು, ಹೇಳಿದ್ದಕ್ಕೆ ವಿರುದ್ಧವಾಗಿ ನಡೆಯುವುದು ಇವೆಲ್ಲ ಪ್ರತಿನಿತ್ಯ ಸರ್ವೇ ಸಾಮಾನ್ಯ ವಾಗಿಬಿಡುತ್ತದೆ. ಇಂತಹ ಏರು ಪೇರು ಗಳು ಎಲ್ಲರ ಜೀವನದಲ್ಲೂ ಬಂದೆ ಬರುತ್ತವೆ .ಇಲ್ಲಿ ಇಬ್ಬರಲ್ಲಿ ಒಬ್ಬರು ಸ್ವಲ್ಪ ತಾಳ್ಮೆ ತೆಗೆದುಕೊಂಡು ಮುನ್ನಡೆದರೆ ಮುಂದಿನ ದಿನಗಳಲ್ಲಿ ಬಾಳು ಸ್ವರ್ಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read: ನಿಮ್ಮನ್ನು ಬಿಟ್ಟು ಹೋದ ಮಾಜಿ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆಯಬಹುದಾ..!?

ಪ್ರೀತಿಯ ಅಸ್ತಿತ್ವಕ್ಕೆ ನಂಬಿಕೆ ಮತ್ತು ಶ್ರಮದ ಅಗತ್ಯವಿದೆ

ಪ್ರೀತಿಯ ಅಸ್ತಿತ್ವಕ್ಕೆ ನಂಬಿಕೆ ಮತ್ತು ಶ್ರಮದ ಅಗತ್ಯವಿದೆ

ನಾವು ಬದುಕಲು ಹೇಗೆ ಕಷ್ಟಪಟ್ಟು ಶ್ರಮದಿಂದ ದುಡಿದು ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತೇವೋ, ಹಾಗೆ ಇಬ್ಬರ ಪ್ರೀತಿ ಗಟ್ಟಿಯಾಗಿ ಉಳಿಯಬೇಕೆಂದರೆ ಅದಕ್ಕೂ ಸಹ ಶ್ರಮದ ಅವಶ್ಯಕತೆ ತುಂಬಾ ಇದೆ. ಆದರೆ ಇದು ಇಬ್ಬರ ಪ್ರೀತಿಯನ್ನು ಉಳಿಸಿ ಬೆಳೆಸಬೇಕೆನ್ನುವ ಶ್ರಮವಾಗಿರಬೇಕು. ಇದನ್ನು ನಾವು ಅಥೈಸಿಕೊಂಡು ನಡೆದರೆ ಜೀವನದ ಖುಷಿಯನ್ನು ಪಡೆಯಲು ಸಾಧ್ಯ. ನಿನ್ನೆ ಸರಿಯಿದ್ದ ಸಂಬಂಧ ಇಂದು ಹದಗೆಟ್ಟು ಹೋಗಲು ಕಾರಣವೇನೆಂದು ತಿಳಿಯುತ್ತಾ ಹೋದರೆ ತಪ್ಪು ನಮ್ಮಲ್ಲೇ ಸಿಗುತ್ತದೆ. ಆದ್ದರಿಂದಲೇ ಸಮತೋಲನವಾಗಿ ಶ್ರಮಪಟ್ಟು ನಡೆದುಕೊಂಡರೆ ಜೀವನದ ಸಂತೋಷಕ್ಕೆ ಪಾರವೇ ಇರುವುದಿಲ್ಲ.

English summary

Relationship lessons you will learn only After falling in love

The genuine rush that you feel when you fall in love is simply irresistible. The cravings are overpowering and you turn blind to anything that stands against it. People in love ignore the realities of life and existence because everything around them turns rosy and beautiful. As the relationship grows and you become more comfortable with each other, reality slips in and then appear the things that you could not presume about. For most people, these new realities become a habit they want to stay with and for others, they become a learning lesson to move on in life.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more