For Quick Alerts
ALLOW NOTIFICATIONS  
For Daily Alerts

ಮದುವೆಯಾಗುವ ವಿಚಾರವಿದ್ದರೆ ಇಂತಹ ಸಲಹೆಗಳಿಂದ ಜಾಗೃತರಾಗಿರಿ!

|

ಮದುವೆಯ ಬಂಧನಕ್ಕೆ ಭಾರತೀಯ ಸಂಪ್ರದಾಯದಲ್ಲಿ ಬಹಳ ಮಹತ್ತರವಾದ ಸ್ಥಾನವಿದೆ. ಪ್ರಬುದ್ಧ ವಯಸ್ಸಿಗೆ ಬಂದ ಓರ್ವ ಗಂಡು ಹಾಗೂ ಓರ್ವ ಹೆಣ್ಣು ಜೀವನಪೂರ್ತಿ ಜೊತೆಯಾಗಿ ಬಾಳುವ ಪ್ರತಿಜ್ಞೆ ಸ್ವೀಕರಿಸುವ ವಿವಾಹ ಬಂಧನ ಅತ್ಯಂತ ಪವಿತ್ರವಾದುದು.

ನೀವೂ ಕೂಡ ಇನ್ನೇನು ವಿವಾಹವಾಗುವ ವಿಚಾರದಲ್ಲಿದ್ದರೆ ಕೆಲವು ಮಹತ್ವದ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ. ಇಂಥ ಸಮಯದಲ್ಲಿ ಏನು ಮಾಡಿದರೆ ಸರಿ ಹಾಗೂ ಏನನ್ನು ಮಾಡಬಾರದು ಎಂಬ ತಿಳುವಳಿಕೆ ಇರಬೇಕಾಗುತ್ತದೆ. ಹೀಗಾಗಿ ಈ ಅಂಕಣದಲ್ಲಿ ಮದುವೆಯಾಗುವವರಿಗಾಗಿ ಕೆಲ ಮಹತ್ವದ ಟಿಪ್ಸ್ ನೀಡಲಾಗಿದ್ದು ಓದಿ ತಿಳಿದುಕೊಳ್ಳಿ.

ವಿವಾಹ ಕುರಿತಾದ ಇಂಥ ಸಲಹೆಗಳಿಗೆ ಕಿವಿಗೊಡಬೇಡಿ

ವಿವಾಹ ಕುರಿತಾದ ಇಂಥ ಸಲಹೆಗಳಿಗೆ ಕಿವಿಗೊಡಬೇಡಿ

ಮದುವೆಯ ಸಿದ್ಧತೆ ಮಾಡಿಕೊಳ್ಳುವುದು ಎಂದರೆ ಹುಡುಗಾಟವಲ್ಲ. ವರ ಹಾಗೂ ವಧುವಿನ ಮನೆಯವರು ತಿಂಗಳುಗಟ್ಟಲೆ ಮೊದಲೇ ಮದುವೆಗಾಗಿ ತಯಾರಿ ಆರಂಭಿಸಬೇಕಾಗುತ್ತದೆ. ಆದರೆ ಇಂಥ ಸಂದರ್ಭದಲ್ಲಿ ವರ ಹಾಗೂ ವಧುವಿನ ಬಂಧು ಮಿತ್ರರು, ನೆರೆಹೊರೆಯವರು ನೀಡುವ ಅನಾವಶ್ಯಕ ಸಲಹೆಗಳಿಂದ ಸುಮ್ಮನೆ ಕಿರಿಕಿರಿ ಅನುಭವಿಸುವಂತಾಗುತ್ತದೆ. ಯಾವ ರೀತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಯಾವುದನ್ನು ನಿರ್ಲಕ್ಷಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಮದುವೆಯ ನಂತರ ಅವಳು ತವರು ಮನೆಗೆ 'ಅತಿಥಿ' ಮಾತ್ರ

ಮದುವೆಯ ನಂತರ ಅವಳು ತವರು ಮನೆಗೆ 'ಅತಿಥಿ' ಮಾತ್ರ

ತಾಳಿ ಕಟ್ಟಿಸಿಕೊಳ್ಳುತ್ತಿರುವಂತೆಯೇ ನೀನು ನಿನ್ನ ತವರು ಮನೆಯ ಅತಿಥಿ ಮಾತ್ರ ಆಗುವೆ ಎಂದು ಮದುವೆ ಹತ್ತಿರವಾಗುತ್ತಿದ್ದಂತೆಯೇ ವಧುವಿಗೆ ಬಂಧು ಮಿತ್ರರು ಹೇಳಲಾರಂಭಿಸುತ್ತಾರೆ. 'ಮಗಳು ಗಂಡನ ಮನೆಯ ಸ್ವತ್ತು'ಎಂಬ ಮಾತಿನಲ್ಲಿ ಈಗಲೂ ಹಲವಾರು ಕುಟುಂಬದ ಜನ ನಂಬಿಕೆ ಇಟ್ಟಿದ್ದು ವಿಷಾದನೀಯ. ಇದು ಅತ್ಯಂತ ಕೆಟ್ಟ ಹಾಗೂ ದಾರಿ ತಪ್ಪಿಸುವ ನಂಬಿಕೆಯಾಗಿದೆ. ಮದುವೆಯಾದ ತಕ್ಷಣ ಮಗಳನ್ನು ಆಕೆಯ ತವರು ಮನೆಯವರು ಪರಕೀಯಳಂತೆ ಕಾಣುವುದು ಸರ್ವಥಾ ನ್ಯಾಯವಲ್ಲ. ಹೆಣ್ಣು ಮಕ್ಕಳ ಮೇಲಿನ ಈ ಅನ್ಯಾಯಕ್ಕೆ ಕೊನೆ ಹಾಡಲೇಬೇಕಿದ್ದು, ಇಂಥದೊಂದು ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿ.

ಬೇಗನೆ ಮಕ್ಕಳು ಮಾಡಿಕೊಳ್ಳಿ

ಬೇಗನೆ ಮಕ್ಕಳು ಮಾಡಿಕೊಳ್ಳಿ

ಮಕ್ಕಳು ಯಾವಾಗ ಬೇಕೆಂಬುದನ್ನು ನಿರ್ಧರಿಸುವ ವಿವೇಚನೆ ದಂಪತಿಗೆ ಬಿಟ್ಟಿದ್ದು. ಪತಿ, ಪತ್ನಿಯ ವಯಸ್ಸು ಹಾಗೂ ಕುಟುಂಬದವರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಸರಿಯಾದರೂ ದಂಪತಿಗಳು ತಮಗೆ ಎಲ್ಲವೂ ಸರಿ ಅನ್ನಿಸಿದಾಗಲೇ ಮಕ್ಕಳನ್ನು ಹೆರಲು ಸಿದ್ಧರಾಗುವುದು ಸೂಕ್ತ. ಈ ವಿಷಯದಲ್ಲಿ ಎಲ್ಲರೂ ಸಲಹೆ ನೀಡುತ್ತಲೇ ಇರುತ್ತಾರಾದರೂ ಜಾಸ್ತಿ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಗಂಡ ಹೆಂಡತಿ ಮಧ್ಯೆ ಯಾವುದೇ ಮುಚ್ಚುಮರೆ ಇರಕೂಡದು

ಗಂಡ ಹೆಂಡತಿ ಮಧ್ಯೆ ಯಾವುದೇ ಮುಚ್ಚುಮರೆ ಇರಕೂಡದು

ವಿವಾಹ ಬಂಧನಕ್ಕೆ ಒಳಗಾದ ಇಬ್ಬರು ಎರಡು ದೇಹ ಹಾಗೂ ಒಂದೇ ಆತ್ಮದಂತೆ ಬದುಕಬೇಕು ಎಂಬುದು ಬಹು ಕಾಲದಿಂದ ಬೆಳೆದು ಬಂದ ನಂಬಿಕೆ. ಒಂದು ಹಂತಕ್ಕೆ ಇದು ನಿಜ ಕೂಡ. ಆದರೆ ಕೆಲವೊಮ್ಮೆ ಇಬ್ಬರಿಗೂ ತಮ್ಮದೇ ಆದ ಪ್ರೈವಸಿ ಎಂಬುದು ಬೇಕಾಗುತ್ತದೆ. ಸ್ಮಾರ್ಟಫೋನ್ ಪಾಸವರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಬಯಸದಿದ್ದಲ್ಲಿ ತಪ್ಪೇನೂ ಇಲ್ಲ. ಆದರೆ ಹೀಗೆ ಮಾಡುವಾಗ ಯಾವುದೇ ರೀತಿಯ ಅಪನಂಬಿಕೆ ಇರದಂತೆ ನಡೆದುಕೊಳ್ಳುವುದು ಮಾತ್ರ ಅಗತ್ಯ.

ಅಡುಗೆ ಮನೆಯ ಕೆಲಸ ಹೆಂಗಸರಿಗೆ ಮಾತ್ರ ಸೀಮಿತ

ಅಡುಗೆ ಮನೆಯ ಕೆಲಸ ಹೆಂಗಸರಿಗೆ ಮಾತ್ರ ಸೀಮಿತ

ವಿವಾಹಕ್ಕೂ ಮುನ್ನ ಅಡುಗೆ ಮಾಡಲು ಕಲಿಯುವಂತೆ ಹೆಣ್ಣು ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತದೆ. ಮದುವೆಯ ನಂತರ ಕುಟುಂಬಕ್ಕೆ ಅಡುಗೆ ಬಡಿಸಿ ಹಾಕುವುದು ಹೆಣ್ಣು ಮಗಳ ಕರ್ತವ್ಯ ಎಂಬ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗಿದೆ. ಆದರೆ ಕಾಲ ಬದಲಾಗಿದ್ದು ಈಗಿನ ಆಧುನಿಕ ಯುಗದಲ್ಲಿ ಪುರುಷ ಸಹ ಅಡುಗೆ ಮನೆಯ ಕೆಲಸ ಮಾಡಲೇಬೇಕು. ಇಂಥ ಹಳೆಯ ಪುರುಷ ಕೇಂದ್ರೀಕೃತ ವಿಚಾರಗಳಿಗೆ ಅಂತ್ಯ ಹಾಡಬೇಕು.

ಹಣಕಾಸು ಜವಾಬ್ದಾರಿ ಗಂಡಸಿಗೆ ಮಾತ್ರ ಸೀಮಿತ

ಹಣಕಾಸು ಜವಾಬ್ದಾರಿ ಗಂಡಸಿಗೆ ಮಾತ್ರ ಸೀಮಿತ

ಅಡುಗೆ ಮನೆ ಕೆಲಸವನ್ನು ಹೆಂಗಸರಿಗೆ ಸೀಮಿತಗೊಳಿಸಿದ ರೀತಿಯಲ್ಲಿಯೇ ಮನೆಯ ಹಣಕಾಸು ಜವಾಬ್ದಾರಿ ಗಂಡಸಿನದು ಮಾತ್ರ ಎಂದು ಬಿಂಬಿಸಲಾಗಿದೆ. ಇಂದು ಹೆಣ್ಣು ಗಂಡಸಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾಳೆ. ಬಹುತೇಕ ಕುಟುಂಬಗಳಲ್ಲಿ ಪತ್ನಿ ಸಹ ಗಂಡನಿಗೆ ಸಮನಾಗಿ ಆದಾಯ ಗಳಿಸುತ್ತಿದ್ದಾಳೆ. ಹೀಗಿರುವಾಗ ಗಂಡ ಹೆಂಡತಿಯರಿಬ್ಬರೂ ಮನೆಯ ಹಣಕಾಸು ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸಬೇಕಾಗುತ್ತದೆ.

ಸಮಸ್ಯೆಗಳು ಬಂದಾಗ ಹಿರಿಯರ ಮಾತು ಕೇಳಿ

ಸಮಸ್ಯೆಗಳು ಬಂದಾಗ ಹಿರಿಯರ ಮಾತು ಕೇಳಿ

ಮದುವೆಯಾದ ನಂತರ ಏನಾದರೂ ಸಮಸ್ಯೆಗಳು ಎದುರಾದರೆ ಮನೆಯ ಹಿರಿಯರನ್ನು ಕೇಳಿ ಎಲ್ಲ ಸರಿಮಾಡಿಕೊಳ್ಳಬೇಕೆಂದು ಮದುವೆಯಾಗಲಿರುವ ವರ ಹಾಗೂ ವಧುವಿಗೆ ಕುಟುಂಬದ ಸದಸ್ಯರು ಸಲಹೆ ನೀಡುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಪತಿ ಪತ್ನಿಯರ ಮಧ್ಯದ ವಿಷಯಗಳನ್ನು ಮೂರನೇ ವ್ಯಕ್ತಿಯ ಎದುರು ಎಂದಿಗೂ ಬಹಿರಂಗಪಡಿಸಕೂಡದು. ಸಾಧ್ಯವಾದಷ್ಟೂ ತಮ್ಮ ಮಧ್ಯದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಲ್ಲಿ ಬೇರೊಬ್ಬರ ನೆರವು ಪಡೆಯುವುದು ಅಷ್ಟು ಸೂಕ್ತವಲ್ಲ.

ತನಗಿಂತ ಮೊದಲು ಬೇರೆಯವರಿಗೆ ಆದ್ಯತೆ ನೀಡಬೇಕು

ತನಗಿಂತ ಮೊದಲು ಬೇರೆಯವರಿಗೆ ಆದ್ಯತೆ ನೀಡಬೇಕು

ಮದುವೆಯ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂಬುದು ನಿಜ. ಮದುವೆಯ ನಂತರ ತನಗಿಂತ ಮೊದಲು ಕುಟುಂಬದ ಸದಸ್ಯರ ಬೇಕು ಬೇಡಗಳ ಹೆಚ್ಚು ಗಮನಹರಿಸಬೇಕು ಎಂದು ಹೆಣ್ಣು ಮಗಳಿಗೆ ತಿಳಿ ಹೇಳಲಾಗುತ್ತದೆ. ಬೇರೆಯವರ ಅವಶ್ಯಕತೆಗಳ ಕಡೆಗೆ ಗಮನ ಹರಿಸುವುದು ಸರಿಯೇ ಆದರೂ ತನ್ನ ಹಿತವನ್ನು ಹೆಣ್ಣುಮಗಳು ಕಡೆಗಣಿಸುವಂತಿಲ್ಲ. ಸಮಯ ಸಂದರ್ಭ ನೋಡಿಕೊಂಡು ಎಲ್ಲರ ಹಿತದ ಬಗ್ಗೆ ಗಮನ ಕೊಡುವುದು ಸರಿಯಾದ ಮಾರ್ಗವಾಗಿದೆ.

English summary

Planning to get married? You should avoid these advices!

The months before a wedding are already very stressful and when the would-be bride and groom are showered with advice, it gets even more confusing. To help couples separate the wheat from the chaff, here are a few common marriage-related advice they can avoid following...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X