For Quick Alerts
ALLOW NOTIFICATIONS  
For Daily Alerts

ಕೊನೆಗೂ ತನ್ನ ಹಿಂದಿನ ಸೆಕ್ಸ್ ಲೈಫ್ ಬಗ್ಗೆ ಪತಿಗೆ ತಿಳಿದು ಹೋಯಿತು!

|

ಪ್ರತಿಯೊಬ್ಬರ ಜೀವನದಲ್ಲಿ ಆಯಾ ಕಾಲಘಟ್ಟಗಳಲ್ಲಿ ಎಂತೆಂಥವೋ ಘಟನೆಗಳು ಜರುಗಿರುತ್ತವೆ. ಅದಾವುದೋ ಅನುಭವಗಳು ಆಗಿರುತ್ತವೆ. ಕೆಲವು ನಾವಾಗಿಯೇ ಬಯಸಿ ಕೆಲ ಘಟನೆಗಳಿಗೆ ಕಾರಣವಾಗಿದ್ದರೆ ಇನ್ನು ಕೆಲವು ನಮ್ಮ ಹಿಡಿತ ಮೀರಿ ಸಂಭವಿಸಿರುತ್ತವೆ. ಇಂಥ ಅನುಭವಗಳು ಬಹುತೇಕ ಎಲ್ಲರಿಗೂ ಆಗಿರುತ್ತವೆ. ಈಗ ಹೇಳಹೊರಟಿದ್ದು ಮದುವೆಯಾಗುವ ಮುನ್ನ ಹೆಣ್ಣು ಮಗಳೊಬ್ಬಳು ತನ್ನ ಆಗಿನ ಸಂಗಾತಿಯೊಂದಿಗೆ ಅನುಭವಿಸಿದ ಸೆಕ್ಸ್ ಕ್ಷಣಗಳ ಬಗ್ಗೆ ಆಕೆಯ ಪತಿಗೆ ತಿಳಿದಾಗ ಏನಾಗಬಹುದು? ಆತನ ಪ್ರತಿಕ್ರಿಯೆ ಹೇಗಿರುತ್ತದೆ? ಆಕೆ ಅಥವಾ ಆತ ಅನುಭವಿಸುವ ವೇದನೆಗಳೇನು? ಇದರಿಂದ ವೈವಾಹಿಕ ಜೀವನದಲ್ಲಾಗುವ ಪರಿಣಾಮಗಳೇನು? ಇಂಥದೇ ಒಂದು ಘಟನೆಯ ಬಗ್ಗೆ ಹೆಣ್ಣುಮಗಳೊಬ್ಬಳು ಎಳೆ ಎಳೆಯಾಗಿ ಬಿಡಿಸಿಟ್ಟ ವೃತ್ತಾಂತವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದ್ದು ನೀವೂ ತಿಳಿದುಕೊಳ್ಳಿ.

ನನ್ನ ಹಿಂದಿನ ಸಂಬಂಧಗಳ ಬಗ್ಗೆ ಪತಿಗೆ ಹೇಳಿರಲಿಲ್ಲ

ನನ್ನ ಹಿಂದಿನ ಸಂಬಂಧಗಳ ಬಗ್ಗೆ ಪತಿಗೆ ಹೇಳಿರಲಿಲ್ಲ

ಸಾಮಾನ್ಯ ಭಾರತೀಯ ಸಂಪ್ರದಾಯದಂತೆ ನನ್ನ ಪಾಲಕರು ಹುಡುಗನೊಬ್ಬನನ್ನು ಹುಡುಕಿ ಆತನೊಂದಿಗೆ ನನ್ನ ವಿವಾಹ ಮಾಡಲು ನಿಶ್ಚಯಿಸಿದರು. ಈಗ ಆತ ನನ್ನ ಪತಿ. ಆದರೆ ವಿವಾಹ ನಿಶ್ಚಯವಾದಾಗ ನಾನು ತುಂಬಾ ಗೊಂದಲದ ಮನಸ್ಥಿತಿಯಲ್ಲಿದ್ದೆ. ಈಗಾಗಲೇ ಒಬ್ಬನೊಂದಿಗೆ ನಾನು ಹೊಂದಿರುವ ಸಂಬಂಧದ ಬಗ್ಗೆ ಆತನಿಗೆ ಹೇಳುವುದಾ ಅಥವಾ ಬೇಡವಾ ಎಂಬುದು ನನಗೆ ಆಗ ನಿರ್ಧರಿಸಲಾಗಲೇ ಇಲ್ಲ. ನನ್ನ ಮದುವೆ ನಿಶ್ಚಯವಾದಾಗ ನನಗೆ ಮೂವತ್ತಕ್ಕೂ ಒಂದೆರಡು ವರ್ಷ ಕಡಿಮೆ ಇದ್ದವು. ನಾನಾಗ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದೆ. ಆಗ ಹುಡುಗನೊಬ್ಬನೊಂದಿಗೆ ನನಗೆ ಸಂಬಂಧ ಬೆಳೆದಿತ್ತು. ಅದು ಸೆಕ್ಸ್ ಅನುಭವಿಸುವ ಮಟ್ಟಕ್ಕೂ ಹೋಗಿತ್ತು. ಆದರೆ ಮದುವೆ ನಿಶ್ಚಯವಾದ ನಂತರ ಬೇಗನೆ ಮದುವೆ ಆದ ಕಾರಣದಿಂದ ಪತಿಯಾಗುವ ಹುಡುಗನೊಂದಿಗೆ ಹೆಚ್ಚು ಬೆರೆಯುವ ಅಥವಾ ಮಾತನಾಡುವ ಅವಕಾಶ ಸಿಗಲೇ ಇಲ್ಲ. ನನ್ನ ಕೆಲ ಹಿತೈಷಿಗಳು ಹಾಗೂ ಆಪ್ತ ಮಿತ್ರರ ಸಲಹೆಯಂತೆ ನಾನು ನನ್ನ ಹಿಂದಿನ ಸೆಕ್ಸ್ ಜೀವನದ ಬಗ್ಗೆ ಪತಿಗೆ ಏನೂ ತಿಳಿಸದೆ ಸುಮ್ಮನಿದ್ದು ಬಿಟ್ಟೆ. ನಿಜ ಹೇಳಬೇಕೆಂದರೆ ಪ್ರೌಢವಯಸ್ಸಿನವಳಾಗಿದ್ದ ನಾನು ನನ್ನಿಚ್ಛೆಯಿಂದಲೇ ಎಲ್ಲವನ್ನೂ ಮಾಡಿದ್ದೆ. ಅದು ನನ್ನದೇ ನಿರ್ಧಾರವಾಗಿದ್ದರಿಂದ ಅದರ ಬಗ್ಗೆ ಯಾರಿಗೆ ಯಾಕೆ ಹೇಳಬೇಕು ಎಂಬುದು ನನ್ನ ತಿಳುವಳಿಕೆಯಾಗಿತ್ತು. ಕೊನೆಗೂ ನನ್ನ ವಿವಾಹವಾಗಿ ನನ್ನ ದಾಂಪತ್ಯ ಜೀವನ ಆರಂಭಗೊಂಡಿತು.

ನಾನು ಕನ್ಯತ್ವ ಕಳೆದುಕೊಂಡಿದ್ದೆ ಎಂಬುದು ಪತಿಗೆ ಗೊತ್ತಾಗಿತ್ತು

ನಾನು ಕನ್ಯತ್ವ ಕಳೆದುಕೊಂಡಿದ್ದೆ ಎಂಬುದು ಪತಿಗೆ ಗೊತ್ತಾಗಿತ್ತು

ಮದುವೆಯ ನಂತರ ಮೊದಲ ಬಾರಿ ಮಿಲನವಾದಾಗ ನಾನು ಅನನುಭವಿಕಳಲ್ಲ ಎಂಬುದು ನನ್ನ ಪತಿಗೆ ಗೊತ್ತಾಗಿತ್ತು. ಆದರೆ ನಾನು ಕನ್ಯೆ ಹೌದಾ ಅಥವಾ ಅಲ್ಲವಾ ಎಂಬುದನ್ನು ಆತ ತಲೆಕೆಡಿಸಿಕೊಳ್ಳಲಿಲ್ಲ. ಪ್ರೌಢವಯಸ್ಕರಾದ ನಾವಿಬ್ಬರೂ ನಮ್ಮ ಗತಜೀವನದ ಘಟನೆಗಳು ಜೀವನದಲ್ಲಿ ಸಮಸ್ಯೆಯಾಗದಂತೆ ಬಾಳಲಾರಂಭಿಸಿದೆವು. ಆದರೆ ಈ ನೆಮ್ಮದಿಯ ಜೀವನ ಬಹುಕಾಲ ಉಳಿಯಲಿಲ್ಲ ಎಂಬುದು ಸಹ ಸತ್ಯ.

Most Read: ನಿಮ್ಮನ್ನು ಬಿಟ್ಟು ಹೋದ ಮಾಜಿ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆಯಬಹುದಾ..!?

ಜಗಳವಾದಾಗಲೆಲ್ಲ ನನ್ನ ಗತಜೀವನ ಮುನ್ನೆಲೆಗೆ ಬರುತ್ತಿತ್ತು

ಜಗಳವಾದಾಗಲೆಲ್ಲ ನನ್ನ ಗತಜೀವನ ಮುನ್ನೆಲೆಗೆ ಬರುತ್ತಿತ್ತು

ಅನೇಕ ಬಾರಿ ನಮಗೆ ತಿಳಿಯದೆಯೇ ಅನೇಕ ಕೆಲಸಗಳನ್ನು ನಾವು ಮಾಡಿಬಿಡುತ್ತೇವೆ. ಅದೊಂದು ದಿನ ಒಂದು ವಿಷಯಕ್ಕೆ ನಮ್ಮಿಬ್ಬರ ಮಧ್ಯೆ ಜೋರಾದ ಜಗಳವಾಯಿತು. ಜಗಳದ ಮಧ್ಯೆ ಪತಿ, "ನೀನು ನನ್ನಿಂದ ಅಷ್ಟು ನೊಂದುಕೊಳ್ಳುತ್ತಿರುವೆಯಾದರೆ ನೀನು ನಿನ್ನ ಹಳೆಯ ಬಾಯ್‌ಫ್ರೆಂಡ್ ಅನ್ನೇ ಮದುವೆಯಾಗಬಹುದಿತ್ತಲ್ಲ? ಆಗ ನೀನು ಖುಷಿಯಾಗಿರಬಹುದಾಗಿತ್ತು" ಎಂದು ಬಿಟ್ಟ. ಆತನ ಮಾತಿನಿಂದ ನನಗೆ ಸಿಡಿಲು ಬಡಿದಂತಾಗಿ ಮುಂದೆ ಯಾವೊಂದು ಮಾತೂ ಬಾರದೆ ಸುಮ್ಮನಾಗಿಬಿಟ್ಟೆ. ಆತ ಏನು ಮಾತನಾಡಿದ್ದ ಎಂಬ ಅರಿವು ಆತನಿಗಿರಲಿಲ್ಲ. ಆದರೆ ಆತನಿಂದ ಇಂಥ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕಾಯಿತು.

ನನ್ನ ಸೋಶಿಯಲ್ ಮೀಡಿಯಾ ಮೇಲೆ ಆತ ಒಂದು ಕಣ್ಣಿಟ್ಟ

ನನ್ನ ಸೋಶಿಯಲ್ ಮೀಡಿಯಾ ಮೇಲೆ ಆತ ಒಂದು ಕಣ್ಣಿಟ್ಟ

ಮೊದಮೊದಲಿಗೆ ಮೃದುವಾಗಿಯೇ ಇದ್ದ ಆತನ ನಡವಳಿಕೆ ನಿಧಾನವಾಗಿ ಬದಲಾಗತೊಡಗಿತು. ಇಷ್ಟಾದರೂ ನನ್ನ ಹಿಂದಿನ ಸಂಗಾತಿಯೊಂದಿಗೆ ಈಗಲೂ ನನಗೆ ಸಂಪರ್ಕವಿದೆಯಾ ಎಂಬುದನ್ನು ಮಾತ್ರ ಆತ ಎಂದಿಗೂ ಕೇಳಲಿಲ್ಲ. ಆದರೆ ನನ್ನ ಪುರುಷ ಗೆಳೆಯರು ಅಥವಾ ಇನ್ನಾರಾದರೂ ಪೋಸ್ಟ್‌ಗಳನ್ನು ಲೈಕ್ ಮಾಡಿದಾಗ ಅಥವಾ ಕಮೆಂಟ್ ಮಾಡಿದಾಗ ಆತ ಕಿರಿಕಿರಿಗೊಳಗಾಗುತ್ತಿದ್ದ. ಯಾವುದೇ ಫ್ರೆಂಡ್ ಅನ್ನು ಅನ್ ಫ್ರೆಂಡ್ ಮಾಡು ಎಂದು ಹೇಳದಿದ್ದರೂ ನಾನು ಫೇಸಬುಕ್ ನಲ್ಲಿ ಚಾಟ್ ಮಾಡಿದ್ದನ್ನು ನೋಡಿದಾಗ ವ್ಯಾಕುಲನಾಗುತ್ತಿದ್ದ. ಕೊನೆಗೂ ಒಂದು ದಿನ ನನ್ನ ಹಳೆಯ ಬಾಯ್ ಫ್ರೆಂಡ್‌ನೊಂದಿಗೆ ಈಗಲೂ ಸಂಪರ್ಕದಲ್ಲಿರುವೆಯಾ ಎಂದು ಕೇಳಿದ ಆತ ಉತ್ತರಕ್ಕೂ ಕಾಯದೆ ಮೊದಲು ಆತನನ್ನು ಅನ್ ಫ್ರೆಂಡ್ ಮಾಡು ಎಂದು ಹೇಳಿ ಎದ್ದು ಹೋದ.

ಕೊನೆಗೊಂದು ದಿನ ಧೈರ್ಯದಿಂದ ಎದುರಿಸುವ ದಿನ ಬಂತು

ಕೊನೆಗೊಂದು ದಿನ ಧೈರ್ಯದಿಂದ ಎದುರಿಸುವ ದಿನ ಬಂತು

ನನ್ನ ಗತಜೀವನದ ಘಟನೆಗಳಿಂದ ನನ್ನ ಪತಿಗೆ ಅಸುರಕ್ಷಿತ ಭಾವನೆ ಉಂಟಾಗಿದ್ದು ನನಗೆ ಖಚಿತವಾಗಿತ್ತು. ಹೀಗಾಗಿ ಕೊನೆಗೆ ಈ ಬಗ್ಗೆ ಚರ್ಚಿಸುವುದೇ ಸರಿ ಎಂದು ನಿರ್ಧರಿಸಿದೆ. ಆರಂಭದಲ್ಲಿ ಈ ಬಗ್ಗೆ ಮಾತನಾಡಲು ಆತ ಒಪ್ಪಲೇ ಇಲ್ಲ. ಸಾಕಷ್ಟು ವಾದ ವಿವಾದಗಳ ನಂತರ ಆತ ಹೇಳಿದ, ಈ ಒಂದು ವಿಷಯ ನಮ್ಮ ಜೀವನದಲ್ಲಿ ಸಮಸ್ಯೆ ಉಂಟು ಮಾಡಬಹುದು ಎಂದು ನಾನಂದುಕೊಂಡಿರಲಿಲ್ಲ. ಆದರೆ ಯಾವಾಗ ನೀನು ನಿನ್ನ ಪುರುಷ ಗೆಳೆಯರೊಂದಿಗೆ ಚಾಟ್ ಮಾಡುವುದನ್ನು ಅಥವಾ ಮಾತನಾಡುವುದನ್ನು ನೋಡುತ್ತೀನೋ ಆಗ ನನಗೆ ಸಂಶಯದ ಭಾವನೆ ಕಾಡಲಾರಂಭಿಸುತ್ತದೆ. ಎಂದ. ನಮ್ಮಿಬ್ಬರ ಜೀವನದಲ್ಲಿ ಇದೊಂದು ಸಂಕಷ್ಟದ ಸಮಯವಾಗಿತ್ತು. ಆದರೂ ವಿಷಯಗಳನ್ನು ಸರಿಪಡಿಸಿಕೊಳ್ಳಲು ನಾವಿಬ್ಬರೂ ದೃಢ ನಿರ್ಧಾರ ಮಾಡಿದೆವು.

ಮಾತುಕತೆಯೇ ಪರಿಹಾರ

ಮಾತುಕತೆಯೇ ಪರಿಹಾರ

ಅರ್ಧಸತ್ಯ ಎಂಬುದು ಸುಳ್ಳಿಗಿಂತ ಹೆಚ್ಚು ಅಪಾಯಕಾರಿ. ನಮ್ಮಿಬ್ಬರ ಗತಜೀವನದ ಬಗ್ಗೆ ನಾವು ಅಷ್ಟೊಂದು ತಲೆಕೆಡಿಕೊಂಡಿರಲಿಲ್ಲವಾದರೂ ಅದಾವುದೋ ಕೆಟ್ಟ ಘಳಿಗೆಯಲ್ಲಿ ಅವು ಧುತ್ತೆಂದು ಎದುರಾಗಿ ಕಹಿ ಹಿಂಡುತ್ತಿದ್ದವು. ಹೀಗಾಗಿ ನನ್ನ ಹಳೆಯ ಜೀವನದ ಬಗ್ಗೆ ಎಲ್ಲವನ್ನೂ ಪತಿಗೆ ಹೇಳಿಬಿಡಲು ನಿರ್ಧರಿಸಿದೆ. ನಾವಿಬ್ಬರೂ ನಮ್ಮ ಮಧ್ಯದಲ್ಲಿನ ಸಂಶಯದ ಗೋಡೆಯನ್ನು ನಿವಾರಿಸಿ ವಿಶ್ವಾಸದ ಬಂಧವನ್ನು ಪುನಃ ನಿರ್ಮಿಸಲು ನಿರ್ಧರಿಸಿದೆವು. ನನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಗಳಿಂದ ನಾನು ಬಹುದೂರ ಸಾಗಿ ಬಂದಿರುವುದಾಗಿಯೂ, ಈಗಿನ ಜೀವನದಲ್ಲಿ ಅವಕ್ಕೆ ಯಾವುದೇ ಬೆಲೆ ಇಲ್ಲವೆಂತಲೂ ನಾನು ಹೇಳಿದೆ. ಇಷ್ಟಾದ ಮೇಲೆ ನಮ್ಮಿಬ್ಬರ ಮಧ್ಯೆ ಎಲ್ಲವನ್ನೂ ಸರಿಮಾಡಬೇಕು ಎಂದು ಆತನಿಗೂ ಅನಿಸಿತು.

ಕೌನ್ಸೆಲಿಂಗ್ ಸಹಾಯ ಮಾಡಿತು

ಕೌನ್ಸೆಲಿಂಗ್ ಸಹಾಯ ಮಾಡಿತು

ನಾವಾಗಿಯೇ ಚರ್ಚಿಸಿ ಹಲವಾರು ವಿಷಯಗಳನ್ನು ಬಗೆಹರಿಸಿಕೊಂಡೆವು. ಆದರೂ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕೆಂದು ನಾವಿಬ್ಬರೂ ಆಪ್ತ ಕೌಟುಂಬಿಕ ಸಲಹಾಗಾರರ ಬಳಿ ಹೋದೆವು. ಕೆಲ ಬಾರಿ ಅಲ್ಲಿ ಕೌನ್ಸೆಲಿಂಗ್ ಆದ ನಂತರ ನಮ್ಮಿಬ್ಬರ ಸಂಬಂಧದಲ್ಲಿ ಮತ್ತೆ ಮಾಧುರ್‍ಯ ಮೊಳೆ ಯಲಾರಂಭಿಸಿತು. ಸಂವಹನ ಹಾಗೂ ನಂಬಿಕೆ ಎಂಬ ಎರಡು ವಿಶ್ವಾಸದ ಕಂಬಗಳು ಮತ್ತೆ ಗಟ್ಟಿಯಾಗಿ ನಿಲ್ಲತೊಡಗಿದವು. ಕೆಲ ದಿನಗಳಲ್ಲಿಯೇ ನಾವು ಎಲ್ಲ ಕಹಿಯನ್ನು ಮರೆತು ಆರಂಭದ ದಿನಗಳ ನೆಮ್ಮದಿ ಅನುಭವಿಸುವಂತಾಯಿತು.

Most Read: ಮದುವೆ ಬಳಿಕವೂ ಇಂತಹ ಸಂಗತಿಗಳೆಲ್ಲಾ ಬದಲಾವಣೆ ಆಗುವುದಿಲ್ಲವಂತೆ!!

ಈಗ ನಾವಿಬ್ಬರೂ ಹೀಗಿದ್ದೇವೆ

ಈಗ ನಾವಿಬ್ಬರೂ ಹೀಗಿದ್ದೇವೆ

ಈಗ ನಾವಿಬ್ಬರೂ ಪುಟ್ಟ ಕಂದನೊಬ್ಬನ ಹೆಮ್ಮೆಯ ತಂದೆ ತಾಯಿಗಳಾಗಿದ್ದೇವೆ. ನಮ್ಮ ಜೀವನದಲ್ಲಿ ಎದುರಾದ ಬಿರುಗಾಳಿಯನ್ನು ಎದುರಿಸಿ ಕೊನೆಗೂ ನೆಮ್ಮದಿಯ ಜೀವನ ಪಡೆದ ನಾವಿಬ್ಬರೂ ಅದರ ಬಗ್ಗೆ ಖುಷಿಯಾಗಿದ್ದೇವೆ. ಈಗ ನಮ್ಮಿಬ್ಬರ ಮಧ್ಯದ ವಿಶ್ವಾಸದ ಬಂಧ ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿದೆ. ಒಂಚೂರು ಸಂಶಯದ ಕ್ಷಣಗಳು ಎದುರಾದರೂ ಯಾವುದೇ ಸಂಕೋಚವಿಲ್ಲದೆ ತಕ್ಷಣವೇ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆ.

ಎಲ್ಲರಿಗೂ ಒಂದು ಗತಜೀವನ ಎಂಬುದು ಇದ್ದೇ ಇರುತ್ತದೆ. ಆದರೆ ಆ ಹಿಂದಿನ ಜೀವನದ ಘಟನೆಗಳು ವರ್ತಮಾನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಕೂಡದು. ಎಷ್ಟೋ ವರ್ಷಗಳ ಹಿಂದೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ಅಥವಾ ಕೆಲಸಗಳು ವರ್ತಮಾನದ ಜೀವನದಲ್ಲಿ ಎದುರಾಗದಂತೆ ಸಂಗಾತಿಗಳಿಬ್ಬರೂ ನೋಡಿಕೊಳ್ಳಬೇಕು. ವಿನಾಕಾರಣ ಒಬ್ಬರ ಮೇಲೊಬ್ಬರು ಆಪಾದನೆ ಮಾಡುತ್ತ ಹೋದರೆ ಯಾವುದೂ ಬಗೆಹರಿಯಲಾರದು. ಅಹಂ ಎಂಬುದನ್ನು ಬಿಟ್ಟು ಸಂಗಾತಿಗಳಿಬ್ಬರೂ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಹಂಚಿಕೊಂಡು ನಿಷ್ಠೆಯಿಂದ ಬಾಳಿದರೆ ಜೀವನ ಸುಖಮಯವಾಗುತ್ತದೆ.

English summary

My Husband got it about my past sex life before marriage!

When my marriage was fixed with a man (now my husband) chosen by my parents, the only thought that troubled me was should I tell him about my past relationships? I was in my late twenties and was working in a bank when my marriage was arranged and we hardly got time to know each other well before tying the knot. Following the advice of a few of my friends and a cousin, I refrained from telling him all about my past sex life.
X
Desktop Bottom Promotion