For Quick Alerts
ALLOW NOTIFICATIONS  
For Daily Alerts

ಮದುವೆ ಬಳಿಕವೂ ಇಂತಹ ಸಂಗತಿಗಳೆಲ್ಲಾ ಬದಲಾವಣೆ ಆಗುವುದಿಲ್ಲವಂತೆ!!

|

ಮದುವೆ ಅನ್ನುವುದು ಜೀವನದ ಅತೀ ಮಹತ್ವದ ನಿರ್ಧಾರ ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಮದುವೆ ಬಗ್ಗೆ ಹಿರಿಯರು ತುಂಬಾ ಎಚ್ಚರಿಕೆಯ ನಿರ್ಧಾರ ಮಾಡಿಕೊಳ್ಳುತ್ತಿದ್ದರು. ಯಾಕೆಂದರೆ ಒಮ್ಮೆ ಮದುವೆಯಾದರೆ ಜೀವನ ಪರ್ಯಂತ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ. ಆದರೆ ಇಂದಿನ ದಿನಗಳಲ್ಲಿ ಮದುವೆ ಕೂಡ ಒಂದು ಫ್ಯಾಶನ್ ಎನ್ನುವಂತಾಗಿದೆ. ಜೀವನದ ಅತೀ ಮಹತ್ವದ ನಿರ್ಧಾರವನ್ನು ಕೂಡ ಅವಸರದಲ್ಲಿ ತೆಗೆದುಕೊಂಡು ಬಳಿಕ ಪರಿತಪಿಸುವರು.

ಹೀಗಾಗಿ ಮದುವೆ ಬಗ್ಗೆ ಜನರಲ್ಲಿ ಅಸಡ್ಡೆ ಬೆಳೆದಿದೆ ಮತ್ತು ಏನೇ ಆದರೂ ಮುಂದೆ ಏಕಾಂಗಿ ಜೀವಿಸಬಹುದು ಎನ್ನುವಂತಹ ಮನೋಭಾವದಿಂದಾಗಿ ಕೆಲವೊಂದು ಮದುವೆಗಳು ಅರ್ಧಕ್ಕೆ ನಿಂತುಹೋಗುತ್ತವೆ. ಮದುವೆ ಬಳಿಕ ನೀವು ಸಂಗಾತಿ ಜತೆಗೆ ಪ್ರತಿಯೊಂದನ್ನು ಹಂಚಿಕೊಳ್ಳಬೇಕು. ಇದು ನಿಮ್ಮಿಬ್ಬರ ಸ್ವಾತಂತ್ರ್ಯದ ಮೇಲೆ ಕೂಡ ಪರಿಣಾಮ ಬೀರುವುದು. ಮದುವೆಯಾದ ಬಳಿಕ ಕೆಲವೊಂದು ಕಟ್ಟುಪಾಡುಗಳಿಗೆ ಹೊಂದಿಕೊಂಡು ನಡೆಯಬೇಕಾಗುತ್ತದೆ. ಇದರಿಂದ ಕೆಲವು ಜನರು ಮದುವೆ ಬಳಿಕ ತುಂಬಾ ಬದಲಾಗಿ ಹೋಗುತ್ತಾರೆ. ಆದರೆ ಜೀವನದಲ್ಲಿ ನಿಮ್ಮಲ್ಲಿ ಬದಲಾವಣೆ ಮಾಡದೆ ಇರುವಂತಹ ಕೆಲವೊಂದು ಅಂಶಗಳು ಇವೆ. ಅದು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯುತ್ತಾ ಸಾಗಿರಿ...

ಧೋರಣೆ ಮತ್ತು ಲಕ್ಷಣಗಳು

ಧೋರಣೆ ಮತ್ತು ಲಕ್ಷಣಗಳು

ನಿಮ್ಮ ಸಾಮಾನ್ಯ ನಡವಳಿಕೆಯು ಸಂಬಂಧಕ್ಕೆ ಯಾವುದೇ ರೀತಿಯಿಂದಲೂ ಸಂಬಂಧಿಸಿಲ್ಲ. ನೀವು ಅಂತಮುರ್ಖಿ ಅಥವಾ ಬಹಿರ್ಮುಖಿ, ನಿಮ್ಮ ವಿಚಿತ್ರ ಹವ್ಯಾಸಗಳು, ವೈಯಕ್ತಿಕ ಇಷ್ಟಗಳು ಮತ್ತು ತತ್ವ, ಸಿದ್ಧಾಂತಗಳು, ಹೀಗೆ ಇದೆಲ್ಲವೂ ಮದುವೆ ಬಳಿಕ ಬದಲಾವಣೆ ಆಗದೆ ಇರುವಂತಹ ಕೆಲವೊಂದು ಲಕ್ಷಣಗಳು.

ಹಠಾತ್ ಆಗಿ ನಿಮ್ಮ ಜೀವನವು ಸುಂದರವಾಗುವುದಿಲ್ಲ!

ಹಠಾತ್ ಆಗಿ ನಿಮ್ಮ ಜೀವನವು ಸುಂದರವಾಗುವುದಿಲ್ಲ!

ಜನರು ನಿಮ್ಮ ಯಾವ ದೃಷ್ಟಿಯಿಂದ ನೋಡುತ್ತಾರೆ ಎನ್ನುವುದು ವಿವಾಹದ ಬಳಿಕ ಯಾವುದೇ ಬದಲಾವಣೆ ಉಂಟು ಮಾಡುವುದಿಲ್ಲ. ನೀವು ಜೀವನ ಸಾಗಿಸಬೇಕು, ಕನಸುಗಳ ಬೆನ್ನತ್ತಬೇಕು, ಆರ್ಥಿಕವಾಗಿ ಎಲ್ಲವನ್ನು ನೋಡಿಕೊಲ್ಳಬೇಕು ಮತ್ತು ಸಮತೋಲನ ಕಾಪಾಡಬೇಕು. ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲಿ ನೀವು ಹೊಂದಾಣಿಕೆ ಮಾಡಬೇಕು. ಮದುವೆ ಬಳಿಕ ನೀವು ತುಂಬಾ ಸಂತೋಷ ವಾಗಿರುವುದು ಕಡಿಮೆ ಮತ್ತು ಜೀವನವು ಹಲವಾರು ಸವಾಲುಗಳನ್ನು ಎಸೆಯುತ್ತಾ ಹೋಗುತ್ತದೆ. ವೈವಾಹಿಕ ಜೀವನದ ಆರಂಭದ ಕೆಲವು ದಿನಗಳು ಸಂತೋಷವನ್ನು ಉಂಟು ಮಾಡಿದರೂ ಇದರ ಬಳಿಕ ಸಾಮಾನ್ಯ ಜೀವನ ಸಾಗಿಸಬೇಕು.

 ಪ್ರೌಢತೆ ಮಟ್ಟ

ಪ್ರೌಢತೆ ಮಟ್ಟ

ಮದುವೆ ಮರುದಿನವೇ ನೀವು ತುಂಬಾ ಪ್ರೌಢರಾಗಿ ಇರುವುದಿಲ್ಲ. ನೀವು ಹಿಂದಿನ ದೃಷ್ಟಿಕೋನದಿಂದಲೇ ಎಲ್ಲಾ ಪರಿಸ್ಥಿತಿಯನ್ನು ನೋಡುವಿರಿ ಮತ್ತು ಅನುಭವ ಬಂದಂತೆ ನೀವು ಪರಿಸ್ಥಿತಿಯನ್ನು ನೋಡುವಂತಹ ದೃಷ್ಟಿಕೋನ ಕೂಡ ಬದಲಾಗುವುದು. ಕೆಲವೊಂದು ಸಂದರ್ಭದಲ್ಲಿ ನೀವು ತುಂಬಾ ಗೊಂದಲಕ್ಕೀಡಾಗ ಬಹುದು ಮತ್ತು ಯಾವುದೇ ದಾರಿ ಕಾಣದೆ ಇರಬಹುದು. ಇಂತಹ ಪರಿಸ್ಥಿತಿ ನೀವು ಏಕಾಂಗಿಯಾಗಿ ಇದ್ದ ವೇಳೆ ಕೂಡ ಬಂದಿರ ಬಹುದು.

ನೀವು ಹಂಚಿಕೊಂಡಿರುವ ಸಂಬಂಧ

ನೀವು ಹಂಚಿಕೊಂಡಿರುವ ಸಂಬಂಧ

ನೀವು ಈಗಲೂ ನಿಮ್ಮ ಪೋಷಕರಿಗೆ ಮಗಳಾಗಿಯೇ ಇರುವಿರಿ ಮತ್ತು ವಿವಾಹವು ನೀವು ಜೀವನದಲ್ಲಿ ಹಂಚಿಕೊಂಡಿರುವಂತಹ ಸಂಬಂಧವನ್ನು ಬದಲಾಯಿಸು ವುದಿಲ್ಲ. ನೀವು ಅತ್ತೆ-ಮಾವ ಮತ್ತು ಪತಿಯ ಮನೆಯವರೊಂದಿಗೆ ಹೊಸ ಸಂಬಂಧವನ್ನು ಬೆಸೆದುಕೊಳ್ಳಬಹುದು. ಆದರೆ ವಿವಾಹವು ನೀವು ಈಗಾಗಲೇ ಹಂಚಿಕೊಂಡಿರುವಂತಹ ಸಂಬಂಧದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡುವುದಿಲ್ಲ. ನಿಮ್ಮ ಸಂಗಾತಿಯು ಹಠವಾದಿ ಅಥವಾ ಅಚಲ ವ್ಯಕ್ತಿಯಾಗಿದ್ದರೆ ಆತ ಹಾಗೆಯೇ ಇರುವನು ಅಥವಾ ಇರುವಳು. ಮದುವೆಗೆ ಮೊದಲು ನಿಮ್ಮ ಭಾವಿ ಪತ್ನಿಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರೆ ಆಗ ಮದುವೆಯು ಇದನ್ನು ಸರಿಪಡಿಸದು.

ಜೀವನದ ಸಮಸ್ಯೆಗಳು

ಜೀವನದ ಸಮಸ್ಯೆಗಳು

ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮದುವೆ ಎನ್ನುವುದು ಒಂದು ಮಾಂತ್ರಿಕ ದಂಡವಲ್ಲ. ಕೆಲವೊಂದು ಸಲ ನೀವು ಒತ್ತಡಕ್ಕೆ ಒಳಗಾಗಬಹುದು, ಸ್ನೇಹಿತರು ಹಾಗು ಕುಟುಂಬದೊಂದಿಗೆ ಜಗಳವಾಗಬಹುದು, ಕೆಲವೊಂದು ಸಮಸ್ಯೆಗಳು ಬರಬಹುದು, ಬಿಲ್ ಕಟ್ಟಬೇಕು, ಕಚೇರಿಗೆ ಹೋಗಬೇಕು ಮತ್ತು ಮೊದಲು ನಿಮಗೆ ಚಿಂತೆ ಉಂಟು ಮಾಡಿದಂತಹ ವಿಚಾರಗಳೇ ಮತ್ತೆ ಸಮಸ್ಯೆ ಉಂಟು ಮಾಡ ಬಹುದು. ಈಗ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು

ಮನೆಯಲ್ಲಿ ಒಬ್ಬ ವ್ಯಕ್ತಿ ಇದ್ದಾನೆ. ಅದೃಷ್ಟದಿಂದ ಆತನಿಗೆ ಕೇಳುವಂತಹ ಮನಸ್ಸಿರಬೇಕು.

ಸಂಗಾತಿ

ಸಂಗಾತಿ

ಮದುವೆ ಬಳಿಕ ನೀವು ಪ್ರೀತಿಸಿರುವ ಸಂಗಾತಿಯು ಬದಲಾಗಬೇಕು ಎಂದು ನೀವು ಬಯಸಿದ್ದರೆ ಆಗ ಅದು ತಪ್ಪು. ಆಕೆ ಅಥವಾ ಆತ ಸಮಯದೊಂದಿಗೆ ವ್ಯಕ್ತಿಯಾಗಿ ವಿಕಾಸ ಹೊಂದಬಹುದು. ಆದರೆ ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಕಷ್ಟ. ಮದುವೆ ಬಳಿಕ ನಿಮಗೆ ಮನೆಗೆಲಸದಲ್ಲಿ ನೆರವಾಗಬೇಕು ಮತ್ತು ಬದ್ಧತೆ ತೋರಿಸ ಬೇಕು ಎಂದರೆ ಆಗದು. ನಿಮ್ಮಿಬ್ಬರ ಸಂಬಂಧವು ಇನ್ನು ಉತ್ತಮ ವಾಗ ಬೇಕಿದ್ದರೆ ಆಗ ನೀವು ಇನ್ನಷ್ಟು ಜತೆಯಾಗಿ ಇರಬೇಕು. ಇದು ಖಂಡಿತವಾಗಿಯೂ ಅಷ್ಟು ಸುಲಭದ ಕೆಲಸವಲ್ಲ.

English summary

Marriage does not change these things about you

Marriage is said to be one of the life-altering decisions of life. You are no longer all by yourself and every decision you make has an impact on your spouse’s life. You not only share your life and a roof with your partner but every memorable moment about life is achieved together. But there are things that marriage might not ever be able to change about you. Wondering what are they? Read on…
Story first published: Friday, February 22, 2019, 12:35 [IST]
X
Desktop Bottom Promotion