Just In
Don't Miss
- News
ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
- Movies
ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ
- Automobiles
ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ
- Finance
ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಾಲ್ಕು ರೀತಿಯ ಆತ್ಮ ಸಂಗಾತಿಗಳನ್ನು ಗುರುತಿಸುವುದು ಹೇಗೆ?
ಪ್ರತಿಯೊಬ್ಬರ ಜೀವನದಲ್ಲಿಯೂ ಸುಮಾರು ನಾಲ್ಕು ಪ್ರಮುಖ ರೀತಿಯ ಆತ್ಮ ಸಂಗಾತಿಗಳು ಇರುತ್ತಾರಂತೆ. ಇವರು ಜೀವನದಲ್ಲಿ ನಾವು ಹುಡುಕಿಕೊಳ್ಳುವ ಪ್ರೀತಿ, ಪ್ರೇಮದ ಸಂಗಾತಿಗಳಂತಲ್ಲ. ಇವರು ಅದನ್ನೆಲ್ಲ ಮೀರಿದ ಸಂಗಾತಿಗಳಾಗಿರುತ್ತಾರೆ. ನಿಮ್ಮ ತಪ್ಪುಗಳನ್ನು ನಿಮಗೆ ಎತ್ತಿ ತೋರಿಸುವ, ತಪ್ಪು ಮಾಡದಂತೆ ಎಚ್ಚರಿಸುವ ಕೆಲಸವನ್ನು ಇವರು ಮಾಡುತ್ತಿರುತ್ತಾರೆ. ಯಶಸ್ಸಿನ ಹಾದಿಯಲ್ಲಿ ಸದಾ ನಿಮ್ಮ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸುವ ಕೆಲಸವನ್ನು ಆತ್ಮ ಸಂಗಾತಿಗಳು ಮಾಡುತ್ತಾರೆ.
ಆತ್ಮ ಸಂಗಾತಿಗಳೊಂದಿಗಿನ ಸಂಬಂಧ ಪ್ರಣಯ ಸಂಬಂಧವನ್ನು ಹೊರತುಪಡಿಸಿ ಇರಬಹುದು. ಜೀವನದಲ್ಲಿ ಎದುರಾಗುವ ನಾಲ್ಕು ರೀತಿಯ ಆತ್ಮ ಸಂಗಾತಿಗಳು ಯಾರು? ಆವರನ್ನು ಗುರುತಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿದ್ದು ನೀವೂ ನಿಮ್ಮ ಜೀವನದಲ್ಲಿನ ಆತ್ಮ ಸಂಗಾತಿಗಳು ಯಾರೆಂದು ಅರಿಯಲು ಪ್ರಯತ್ನಿಸಿ.

ಯಾವಾಗಲೂ ಸಹಾಯ ಮಾಡುವ ಆತ್ಮ ಸಂಗಾತಿ
ಜೀವನದಲ್ಲಿ ಎದುರಾಗುವ ಹಲವಾರು ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ನಮ್ಮ ಮೇಲೆ ಪ್ರಭಾವವನ್ನು ಬೀರಿರುತ್ತಾರೆ. ಗೆಳೆಯರಿಂದ ಹಿಡಿದು ಆಫೀಸಿನ ಸಹೋದ್ಯೋಗಿಯವರೆಗೆ ಅನೇಕರು ನಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಂತಿರುತ್ತಾರೆ. ನಮ್ಮ ಏಳಿಗೆಯೇ ಅವರಿಗೆ ಮುಖ್ಯವಾಗಿರುತ್ತದೆ. ತಪ್ಪು ಮಾಡಿದಾಗ ತಿದ್ದಿ ಮುನ್ನಡೆಸುವ ಗುಣಗಳನ್ನು ಇವರು ಹೊಂದಿರುತ್ತಾರೆ. ಇವರಿಗೆ ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೆರಡೂ ಗೊತ್ತಿರುವುದರಿಂದ ಸರಿಯಾದ ಸಮಯದಲ್ಲಿ ನಮ್ಮನ್ನು ಸರಿದಾರಿಗೆ ತರಲು ಸಹಾಯ ಮಾಡುತ್ತಾರೆ. ಎಲ್ಲಿಯವರೆಗೆ ಜೀವನದಲ್ಲಿ ಅಗತ್ಯ ಪಾಠಗಳನ್ನು ನಾವು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಈ ಸಹಾಯ ಮಾಡುವ ಆತ್ಮ ಸಂಗಾತಿಗಳು ಜೀವನದಲ್ಲಿ ಜೊತೆಯಾಗುತ್ತಲೇ ಇರುತ್ತಾರೆ.
Most Read: ಸೆಕ್ಸ್‌ಗೆ ಮುಂದಾಗುವ ಮುನ್ನ ಇರಲಿ ಜಾಗೃತಿ ; ಮಗಳಿಗೆ ತಾಯಿಯ ಭಾವುಕ ಪತ್ರ

ಕರ್ಮ ಸಂಬಂಧಿತ ಆತ್ಮ ಸಂಗಾತಿ
ಜೀವನದಲ್ಲಿ ಹಲವಾರು ಸಂಬಂಧಗಳು ನಮ್ಮ ಕಲ್ಪನೆ ಹಾಗೂ ತಿಳುವಳಿಕೆಯನ್ನು ಮೀರಿ ಬೆಳೆದಿರುತ್ತವೆ. ಜೀವನದಲ್ಲಿ ಬರುವ ಹಲವಾರು ವ್ಯಕ್ತಿಗಳು ನಮ್ಮ ಹಿಂದಿನ ಕರ್ಮ ಫಲದಿಂದ ಸಿಕ್ಕಿರುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ. ಇವು ಅತಿ ಗಾಢವಾದ ಹಾಗೂ ಕರ್ಮ ಆಧರಿತ ಸಂಬಂಧಗಳಾಗಿರುತ್ತವೆ. ಈ ಕರ್ಮ ಸಂಬಂಧಿತ ಸಂಗಾತಿಗಳಿಂದ ಕೆಲವು ಬಾರಿ ನೋವನ್ನು ಸಹ ಅನುಭವಿಸಬೇಕಾಗಬಹುದು. ಇವರು ನಮ್ಮ ಜೀವನದ ಮೇಲೆ ಎರಡು ರೀತಿಯ ಪ್ರಭಾವವನ್ನು ಬೀರಬಲ್ಲವರಾಗಿರುತ್ತಾರೆ. ಕರ್ಮದಿಂದ ಬಂದ ಆತ್ಮ ಸಂಗಾತಿಗಳು ನಿಮ್ಮ ಭಾವನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬಲ್ಲರು ಹಾಗೂ ಸಮಯ, ಸಂದರ್ಭಗಳಲ್ಲಿ ಜೊತೆಗೆ ನಿಲ್ಲಬಲ್ಲವರಾಗಿರುತ್ತಾರೆ.

ಪೂರ್ವ ಜನ್ಮದ ಆತ್ಮ ಸಂಗಾತಿ
ಹಿಂದಿನ ಜನ್ಮದಲ್ಲಿ ಸಂಗಾತಿಯಾಗಿದ್ದ ವ್ಯಕ್ತಿ ಮತ್ತೆ ಈ ಜೀವನದಲ್ಲಿ ಎದುರಾಗಬಹುದು. ಈ ಹಿಂದೆ ಎಂದೂ ನೋಡಿರದೆ ಇದ್ದರೂ ಅವಳನ್ನು/ ಆತನನ್ನು ನೋಡಿದಾಗ ಎಷ್ಟೋ ಗಾಢವಾದ ಸಂಬಂಧ ನಮ್ಮಿಬ್ಬರ ಮಧ್ಯೆ ಇದೆಯಲ್ಲ ಎಂಬ ಭಾವನೆ ಮೂಡಿದಲ್ಲಿ ಅದು ಖಂಡಿತವಾಗಿಯೂ ಪೂರ್ವ ಜನ್ಮದ ಸಂಬಂಧದ ಫಲವೇ ಆಗಿರುತ್ತದೆ. ಪೂರ್ವ ಜನ್ಮದಲ್ಲಿ ಸಂಗಾತಿಗಳಾಗಿದ್ದವರು ಒಬ್ಬರನ್ನೊಬ್ಬರು ನೋಡಿದ ತಕ್ಷಣವೇ ಪ್ರೀತಿ, ಅನುರಾಗ ಮೊಳಕೆಯೊಡೆದು ಸಂಬಂಧ ಗಟ್ಟಿಯಾಗಲಾರಂಭಿಸುತ್ತದೆ. ಇಂಥ ಪೂರ್ವ ಜನ್ಮದ ಸಂಬಂಧಗಳ ಕಾರಣದಿಂದ ಬೆಸೆದ ಆತ್ಮ ಸಂಗಾತಿಗಳ ಸಂಬಂಧವು ಬಹುತೇಕ ಜೀವನದುದ್ದಕ್ಕೂ ಗಟ್ಟಿಯಾಗಿರುತ್ತದೆ. ಇಬ್ಬರೂ ಒಬ್ಬರಿಂದೊಬ್ಬರು ಏನನ್ನೂ ಮುಚ್ಚಿಡುವುದಿಲ್ಲವಾದ್ದರಿಂದ ಈ ಸಂಬಂಧದ ಆಯಸ್ಸು ಹೆಚ್ಚಾಗಿರುತ್ತದೆ. ಹಿಂದಿನ ಜೀವನದಲ್ಲಿ ಏನಾಗಿದ್ದಿರಿ ಎಂಬುದನ್ನು ಆಧರಿಸಿ ಈ ಜೀವನದಲ್ಲಿಯೂ ಉತ್ತಮ ಮನುಷ್ಯರಾಗಲು ಇಬ್ಬರು ಪೂರ್ವ ಜನ್ಮದ ಸಂಗಾತಿಗಳು ಒಬ್ಬರಿಗೊಬ್ಬರು ನೆರವಾಗುತ್ತಾರೆ.
Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ದ್ವಿಮುಖ ಪ್ರಭಾವದ ಆತ್ಮ ಸಂಗಾತಿ
ದ್ವಿಮುಖ ಪ್ರಭಾವದ ಆತ್ಮ ಸಂಗಾತಿಗಳ ಸಂಬಂಧ ಅತಿ ವಿಶಿಷ್ಟವಾಗಿರುತ್ತದೆ. ಇಂಥ ಸಂಗಾತಿಗಳು ಒಂದಾದಾಗ ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿ ಏಳಿಗೆ ಸಾಧಿಸಲು ಒಬ್ಬರಿಗೊಬ್ಬರು ನೆರವಾಗುತ್ತಾರೆ. ಇವರು ಮಾತನಾಡುತ್ತ ಕುಳಿತರೆ ಗಂಟೆಗಟ್ಟಲೇ ಮಾತಾಡುತ್ತಾರೆ. ಇಂಥ ದ್ವಿಮುಖ ಪ್ರಭಾವದ ಆತ್ಮ ಸಂಗಾತಿಯು ನಿಮಗೆ ಭೇಟಿ ಆದಲ್ಲಿ ಆಗ ನಿಮಗೊಂದು ಸಂಪೂರ್ಣತೆಯ ಭಾವ ಆವರಿಸಿಕೊಳ್ಳುತ್ತದೆ. ಹಿಂದೆ ಇದ್ದ ಯಾವುದೋ ಖಾಲಿತನ ತುಂಬಿದಂತೆ ಹಿತವಾದ ಭಾವನೆ ಮೂಡಿದಲ್ಲಿ ಆ ಸಂಗಾತಿಯು ಖಂಡಿತವಾಗಿಯೂ ದ್ವಿಮುಖ ಪ್ರಭಾವದ ಆತ್ಮ ಸಂಗಾತಿಯೇ ಆಗಿರುತ್ತಾರೆ.