For Quick Alerts
ALLOW NOTIFICATIONS  
For Daily Alerts

ಎಷ್ಟೇ ಕಷ್ಟವಾದರೂ ಸರಿ, ಈ ಏಳು ಕಹಿ ಸತ್ಯಗಳನ್ನೆಂದೂ ನಿಮ್ಮ ಪತಿಗೆ ಹೇಳದಿರಿ !

|

ಚಿಕ್ಕಂದಿನಲ್ಲಿ ಕೇಳಿದ್ದ ಕಥೆಗಳೆಲ್ಲಾ 'ಆ ನಂತರ ಅವರು ಮದುವೆಯಾಗಿ ಸುಖವಾಗಿ ಬಾಳಿದರು'ಎಂಬ ವಾಕ್ಯದೊಂದಿಗೆ ಮುಗಿಯುತ್ತಿತ್ತು. ವಾಸ್ತವದಲ್ಲಿ ಜೀವನ ಮದುವೆಯ ಬಳಿಕವೇ ಪ್ರಾರಂಭವಾಗುತ್ತದೆ ಹಾಗೂ ಇದುವರೆಗಿನ ಜೀವನ ಮಹತ್ತರ ತಿರುವು ಪಡೆಯುತ್ತದೆ. ಈಗ ಒಂದೇ ಸೂರಿನಡಿಯಲ್ಲಿ ನೀವು ನಿಮ್ಮ ಪತಿಯೊಂದಿಗೆ ನಿಮ್ಮ ಜೀವನವನ್ನು ಕಳೆಯಲು ಪ್ರಾರಂಭಿಸಿದ್ದೀರಿ. ಇಂದಿನ ದಿನ ಹೇಗಾಯಿತು ಎನ್ನುವುದರಿಂದ ಹಿಡಿದು ನಿಮಗೆ ಇಷ್ಟವಿರುವ, ಇಷ್ಟವಿಲ್ಲದ ಸಂಗತಿಗಳು, ನಿಮ್ಮ ವಿಚಿತ್ರ ಅಭ್ಯಾಸಗಳು ಮೊದಲಾದವುಗಳನ್ನು ಪತಿಯೊಂದಿಗೆ ಹಂಚಿಕೊಳ್ಳುತ್ತಾ ಚಿಕ್ಕ ಪುಟ್ಟ ತಮಾಷೆ ಹಾಗೂ ಕಿಲಾಡಿತನದಿಂದ ದಿನವನ್ನು ಸೊಗಸಾಗಿಕೊಳುತ್ತಾ ಸಾಗುತ್ತಿದ್ದೀರಿ.

ಆದರೆ ನೀವು ಯಾವುದೇ ಸಂಗತಿಗಳನ್ನು ನಿಮ್ಮ ಪತಿಯೊಂದಿಗೆ ಹಂಚಿಕೊಂಡರೂ ಕೆಲವು ವಿಷಯಗಳ ಬಗ್ಗೆ ಮೌನ ವಹಿಸುವುದೇ ಒಳ್ಳೆಯದು ಹಾಗೂ ಇವನ್ನು ನೀವು ನಿಮ್ಮೊಳಗೇ ಇಟ್ಟುಕೊಂಡು ಪತಿಯಲ್ಲಿ ಎಂದಿಗೂ ಈ ವಿಷಯಗಳ ಬಗ್ಗೆ ಪ್ರಸ್ತಾಪವನ್ನೇ ಎತ್ತಬಾರದು. ಈ ವಿಷಯಗಳನ್ನು ನೀವು ಸಮಾಧಿ ಮಾಡಿಕೊಂಡಷ್ಟೂ ನಿಮ್ಮ ವೈವಾಹಿಕ ಜೀವನ ಸುಂದರ ಹಾಗೂ ಸುಖಮಯ ವಾಗಿರುತ್ತದೆ. ಈ ಗುಟ್ಟುಗಳು ಯಾವುವು ಎದು ನಾವು ಏಳು ವಿವಾಹಿತ ಮಹಿಳೆಯರನ್ನು ವಿಚಾರಿಸಿದಾಗ ಈ ಕೆಳಗಿನ ಏಳು ವಿಷಯಗಳು ಕಂಡುಬಂದಿವೆ:

ನನ್ನ ಹಿಂದಿನ ಸಂಬಂಧಗಳು

ನನ್ನ ಹಿಂದಿನ ಸಂಬಂಧಗಳು

"ನನ್ನ ಪತಿ ನಾವು ಪರಿಚಿತರಾಗುವುದಕ್ಕಿಂತಲೂ ಮುನ್ನ ನನಗಿದ್ದ ಸಂಬಂಧಗಳ ಬಗ್ಗೆ ಕೇಳುತ್ತಲೇ ಇರುತ್ತಾರೆ ಹಾಗೂ ಪ್ರತಿ ಬಾರಿ ನಾನು ವಿಷಯ ಬದಲಾಯಿಸಿ ಈ ವಿಷಯದಿಂದ ಅವರನ್ನು ವಿಮುಖರನ್ನಾಗಿಸುತ್ತೇನೆ. ಪತಿಯೊಂದಿಗೆ ಮೂರು ವರ್ಷ ಕಳೆದ ಬಳಿಕ, ಒಂದು ವೇಳೆ ನಾನೇನಾದರೂ ಹಿಂದಿನ ಸಂಬಂಧಗಳ ಬಗ್ಗೆ ಚಕಾರವೆತ್ತಿದರೆ ಇದು ಪತಿಯಲ್ಲಿ ಕೆಲವಾರು ಚಿಂತನೆಗಳನ್ನು ಹುಟ್ಟುಹಾಕಬಹುದು ಹಾಗೂ ನಮ್ಮ ಸಂಬಂಧದಲ್ಲಿ ಹುಳಿ ಹಿಂಡಬಹುದು. ಈಗಿನ ಸಮಯಕ್ಕೆ ಏನು ಸಲ್ಲುತ್ತದೆ ಎಂದರೆ ಈಗ ನಾವು ಪರಸ್ಪರರಲ್ಲಿ ಎಷ್ಟು ಅನುರಾಗ ಹೊಂದಿದ್ದೇವೆ ಹಾಗೂ ಈ ಕ್ಷಣವನ್ನು ಎಷ್ಟು ಸಂತೋಷವಾಗಿ ಅನುಭವಿಸುತ್ತಿದ್ದೇವೆ ಎಂದಾಗಿದೆಯೇ ಹೊರತು ಹಿಂದಿನ ದಿನಗಳ ಯಾವುದೇ ನೆನಪು ಈ ಸಂತೋಷವನ್ನು ಕಸಿದುಕೊಳ್ಳುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ನಾನೊಬ್ಬ ವಿಧೇಯ ಪತ್ನಿಯಾಗಿ, ಪತಿಯ ಪ್ರೀತಿಗೆ ಪಾತ್ರಳಾಗಿ, ಪರಸ್ಪರ ಅನ್ಯೋನ್ಯತೆಯಿಂದ ಸುಖವಾಗಿ ಬಾಳುವತ್ತ ಚಿಂತಿಸುವುದು ಅಗತ್ಯವೇ ಹೊರತು ನನ್ನ ಹಿಂದಿನ ದಿನಗಳ ಪ್ರಭಾವ ಪ್ರಸ್ತುತ ದಿನವನ್ನು ಪ್ರಭಾವಿತಗೊಳಿಸಲು ನಾನು ಬಿಡಲಾರೆ"

Most Read: ಈ ರಾಶಿಗಳಲ್ಲಿ ಹುಟ್ಟಿದವರು ಕೆಟ್ಟ ಹುಡುಗರನ್ನು ಪ್ರೀತಿಸುತ್ತಾರಂತೆ

ಕೆಲವೊಮ್ಮೆ, ನನ್ನ ಹಿಂದಿನ ಪ್ರಿಯಕರನನ್ನು ನಾನು ತಪ್ಪಿಸಿಕೊಳ್ಳುತ್ತೇನೆ

ಕೆಲವೊಮ್ಮೆ, ನನ್ನ ಹಿಂದಿನ ಪ್ರಿಯಕರನನ್ನು ನಾನು ತಪ್ಪಿಸಿಕೊಳ್ಳುತ್ತೇನೆ

"ನನ್ನ ಪತಿಯನ್ನು ನಾನು ಅಪಾರವಾಗಿ ಪ್ರೀತಿಸುತ್ತೇನೆ ಹಾಗೂ ಮನಸಾರೆ ಗೌರವಿಸುತ್ತೇನೆ. ಆದರೂ, ಮನಸ್ಸಿನಾಳದಲ್ಲೆಲ್ಲೋ ಒಂದು ಕಡೆ, ನನ್ನ ಹಿಂದಿನ ಪ್ರಿಯಕರರನ್ನು ಪತಿಯೊಂದಿಗೆ ಹೋಲಿಸಿಕೊಳ್ಳುತ್ತಿರುತ್ತೇನೆ. ನನಗೆ ಗೊತ್ತು, ಹೀಗೆ ಹಿಂದಿನ ಪ್ರಿಯಕರನನ್ನು ನೆನೆಸಿಕೊಳ್ಳುವುದು ನನ್ನ ವೈವಾಹಿಕ ಜೀವನದ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು, ಈ ಜಗತ್ತಿನಲ್ಲಿ ಕೊರತೆಗಳಿಲ್ಲದ ವ್ಯಕ್ತಿಗಳೇ ಇಲ್ಲ. ಈಗ ನಮ್ಮ ಮದುವೆಯಾಗಿ ಮೂರು ತಿಂಗಳು ಕಳೆದಿವೆ ಹಾಗೂ ಈಗಲೂ ನಾನು ನನ್ನ ಹಿಂದಿನ ದಿನಗಳ ನೆನಪಿನಿಂದ ಹೊರಬಂದು ಶಾಂತಿಯಿಂದಿರಲು ಯತ್ನಿಸುತ್ತಲೇ ಇದ್ದೇನೆ"

ನಾನು ಆತನ ತಂದೆ ತಾಯಿಯರನ್ನು ಪ್ರೀತಿಸುವ ಸೋಗು ಹಾಕುತ್ತೇನೆ

ನಾನು ಆತನ ತಂದೆ ತಾಯಿಯರನ್ನು ಪ್ರೀತಿಸುವ ಸೋಗು ಹಾಕುತ್ತೇನೆ

"ನನ್ನ ಮದುವೆಯ ದಿನದಿಂದಲೂ ನನ್ನ ಅತ್ತೆ ಮಾವನವರೊಂದಿಗೆ ನನಗೇಕೋ ಸರಿಬರಲೇ ಇಲ್ಲ. ನಾವು ಒಂದೇ ಮನೆಯಲ್ಲಿ ವಾಸವಾಗಿದ್ದರೂ ಸರಿ, ನಿಜ ಹೇಳಬೇಕೆಂದರೆ ನನ್ನ ಅತ್ತೆ ಮಾವನವರೊಂದಿಗೆ ವಾಸ ಮಾಡುವುದು ನನಗೆ ಸಂತೋಷದ ವಿಷಯವಲ್ಲ. ಏಕೆಂದರೆ ನನ್ನ ಅತ್ತೆ ಮಾವ ನನ್ನನ್ನು ತಮ್ಮ ಮಗಳಂತೆ ನಡೆಸಿಕೊಳ್ಳುತ್ತಾರೆ ಎಂದು ನಾನೆಂದೂ ಭಾವಿಸಿಲ್ಲ ಹಾಗೂ ನಾನು ನನ್ನ ತಂದೆ ತಾಯಿಯರನ್ನು ಪ್ರೀತಿಸುವಂತೆ ಹಾಗೂ ಕಾಳಜಿ ವಹಿಸುವಂತೆ ಅತ್ತೆ ಮಾವಂದಿರನ್ನು ಪ್ರೀತಿಸಲು ಮತ್ತು ಕಾಳಜಿ ವಹಿಸಲು ಸಾಧ್ಯವಿಲ್ಲ"

ನನ್ನ ಚಾಕರಿಯನ್ನು ಬಿಟ್ಟಿದ್ದಕ್ಕೆ ನಾನಿಂದೂ ವಿಷಾದಿಸುತ್ತೇನೆ

ನನ್ನ ಚಾಕರಿಯನ್ನು ಬಿಟ್ಟಿದ್ದಕ್ಕೆ ನಾನಿಂದೂ ವಿಷಾದಿಸುತ್ತೇನೆ

ಮದುವೆಯ ಬಳಿಕ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಯ ಜವಾಬ್ದಾರಿಯನ್ನು ಹೊರಲು ನನ್ನ ಕೆಲಸಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನನ್ನ ಪತಿ ನಿತ್ಯವೂ ಕಛೇರಿಯಿಂದ ತಡವಾಗಿ ಮನೆಗೆ ಬರುತ್ತಾರೆ ಹಾಗೂ ಮನೆಗೆ ಬಂದ ಬಳಿಕ ಅವರು ಮನೆಯ ಯಾವುದೇ ಕೆಲಸ ಮಾಡುವಂತೆ ನಾನು ನಿರೀಕ್ಷಿಸುವುದಿಲ್ಲವಾದರೂ ನಾನು ಮಾಡಿದ ಕೆಲವು ಕೆಲಸಗಳಿಗಾದರೂ ಮೆಚ್ಚುಗೆಯ ಮಾತುಗಳನ್ನಾಡುವಂತೆ ಬಯಸುತ್ತೇನೆ. ಈಗ ನಮ್ಮ ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿವೆ ಹಾಗೂ ಇದುವರೆಗೆ ನನ್ನ ಪರಿಶ್ರಮದ ಒಂದೇ ಒಂದು ಕೆಲಸಕ್ಕೆ ಇವರಿಂದ ಒಂದೂ ಮೆಚ್ಚುಗೆಯ ಮಾತಿಲ್ಲ. ಒಂದರ್ಥದಲ್ಲಿ ಒಂದು ಧನ್ಯವಾದವನ್ನೂ ಪಡೆಯಲಾಗದ ಕೆಲಸಕ್ಕಾಗಿ ನನ್ನ ಆತ್ಮಗೌರವದ ಕೆಲಸವನ್ನು ಬಿಟ್ಟೆ ಎಂದು ನನಗೆ ಪಶ್ಚಾತ್ತಾಪವಾಗುತ್ತಿದೆ.

ಆತ ಸದಾ ತನ್ನ ತಾಯಿಯ ಪರ ವಹಿಸುತ್ತಾನೆ

ಆತ ಸದಾ ತನ್ನ ತಾಯಿಯ ಪರ ವಹಿಸುತ್ತಾನೆ

" ನನ್ನ ಅತ್ತೆಯೊಂದಿಗೆ ನನ್ನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ನಾವು ಸಾಕಷ್ಟು ಜಗಳವಾಡುತ್ತೇವೆ ಮತ್ತು ಪ್ರತಿ ಜಗಳದಲ್ಲಿಯೂ, ತಾಯಿಯದ್ದೇ ತಪ್ಪು ಇರುವುದು ಸ್ಪಷ್ಟವಾಗಿದ್ದರೂ ಸರಿ, ನನ್ನ ಪತಿ ತನ್ನ ತಾಯಿಯ ಪರ ವಹಿಸುತ್ತಾರೆ. ಎಷ್ಟೋ ಸಲ, ನಾನು ಗುಟ್ಟಾಗಿ ಅತ್ತಿದ್ದಿದೆ ಹಾಗೂ ನನ್ನದೇ ಕುಟುಂಬದಲ್ಲಿ ನಾನು ಅಪರಿಚಿತಳು ಎಂದು ಅನ್ನಿಸುತ್ತಿದೆ"

Most Read: ಡೇಟಿಂಗ್ ಮಾಡುವಾಗ ಗಂಡಸರು ಇಂಥ ಸುಳ್ಳು ಹೇಳುತ್ತಾರಂತೆ!

ನನ್ನ ಕುಟುಂಬ ಮತ್ತು ಸ್ನೇಹಿತರ ವೃಂದದಲ್ಲಿ ಹರಿದಾಡುವ ಗುಸುಗುಸು ಮಾತುಗಳು

ನನ್ನ ಕುಟುಂಬ ಮತ್ತು ಸ್ನೇಹಿತರ ವೃಂದದಲ್ಲಿ ಹರಿದಾಡುವ ಗುಸುಗುಸು ಮಾತುಗಳು

ನನ್ನ ಅತ್ಯುತ್ತಮ ಸ್ನೇಹಿತೆಯ ವೈಯಕ್ತಿಕ ಜೀವನದಲ್ಲಿ ಏನು ಆಗುತ್ತಿದೆ ಎಂಬುದನ್ನಾಗಲೀ, ನನ್ನ ಸಂಬಂಧಿಕರ ಅಥವಾ ಸ್ನೇಹಿತರ ಬಗ್ಗೆ ನನ್ನ ಪತಿಯಲ್ಲಿ ಎಂದೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ನಾವು ಇತ್ತೀಚೆಗೆ ಮದುವೆಯಾದ ದಂಪತಿಗಳಾಗಿದ್ದೇವೆ ಹಾಗೂ ನನ್ನ ಪತಿಗೆ ತಾನು ಕೇಳಿದ ಯಾವುದೇ ಮಾತುಗಳನ್ನು ತನ್ನ ತಾಯಿಯ ಎದುರಿಗೆ ಒದರುವ ಕೆಟ್ಟ ಚಾಳಿಯಿದೆ. ಹಾಗಾಗಿ, ನನ್ನ ನ್ನೇಹಿತರ ಅಥವಾ ಕುಟುಂಬ ಸದಸ್ಯರ ನಡುವಣ ಯಾವುದೇ ಗುಸುಗುಸು ಸುದ್ದಿಗಳನ್ನು ಪತಿಯಲ್ಲಿ ಹಂಚಿಕೊಳ್ಳುವುದಿಲ್ಲ ಹಾಗೂ ಈ ಮಾಹಿತಿಯ ಮೂಲಕ ಅವರು ನನ್ನ ಸ್ನೇಹಿತರನ್ನು ಅಥವಾ ಕುಟುಂಬ ಸದಸ್ಯರ ಬಗ್ಗೆ ಒಂದು ಅಭಿಪ್ರಾಯ ತಳೆಯುವುದೂ ನನಗೆ ಹಿಡಿಸುವುದಿಲ್ಲ"

ನಮ್ಮ ಲೈಂಗಿಕ ಜೀವನ ಅಷ್ಟೊಂದು ರೋಚಕವಾಗಿಲ್ಲ

ನಮ್ಮ ಲೈಂಗಿಕ ಜೀವನ ಅಷ್ಟೊಂದು ರೋಚಕವಾಗಿಲ್ಲ

"ನನ್ನ ಪತಿ ಮುನ್ನಲಿವಿಗೆ ಅತಿ ಕಡಿಮೆ ಸಮಯ ವ್ಯಯಿಸುತ್ತಾರೆ ಹಾಗೂ ನಾವಿಬ್ಬರೂ ಲೈಂಗಿಕವಾಗಿ ಪರಸ್ಪರ ಪೂರಕವಾಗಿ ಜೊತೆಯಾಗಿದ್ದೇವೆ ಎಂದು ನನಗೆ ಅನ್ನಿಸುತ್ತಿಲ್ಲ. ಲೈಂಗಿಕ ಕ್ರಿಯೆ ಅಂದರೆ ಕೇವಲ ನಿನ್ನ ತೃಪ್ತಿ ಮಾತ್ರವೇ ಅಲ್ಲ ಎಂದು ಸ್ಪಷ್ಟವಾಗಿ ಹೇಳಬೇಕೆಂದಿದ್ದೇನೆ"

English summary

7 bitter secrets women would never tell their husbands

Life takes a turn for everyone after tying the knot. You live under the same roof with your husband and share your life with him. Whether it is talking about how your day went, what are your likes and dislikes or your weird habits, you end up sharing about the nitty-gritty of your daily life with your significant other every day. However, there are always some topics you might not be comfortable sharing with your partner and would like to keep these as little secrets with you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X