For Quick Alerts
ALLOW NOTIFICATIONS  
For Daily Alerts

  ಭವಿಷ್ಯದ ಅತ್ತೆಯಾಗುವವರೊಂದಿಗೆ ಈ ವಿಷಯಗಳ ಕುರಿತು ಪೂರ್ವ ಸಂಭಾಷಣೆ ನಡೆಸಿ.

  |

  ವಿವಾಹ, ಜೀವನ, ಸಂಬಂಧ ಹಾಗೂ ಪ್ರೀತಿ ಪಾತ್ರರ ನಡುವಿನ ಒಡನಾಟ ಎಲ್ಲವೂ ಕಲ್ಪನೆಯಲ್ಲಿ ಸುಂದರವಾಗಿರುತ್ತವೆ. ಆದರೆ ವಾಸ್ತವಕ್ಕೆ ಬಂದಾಗ ಹಲವಾರು ಭಿನ್ನತೆಗಳು ಮತ್ತು ಭಿನ್ನಾಭಿಪ್ರಾಯಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವವು. ಅಲ್ಲದೆ ಅವು ನಮಗಿದ್ದ ಭರವಸೆ ಹಾಗೂ ನಂಬಿಕೆಗಳನ್ನು ಬದಲಾಯಿಸಬಹುದು. ಹಾಗಾಗಿ ಯಾವುದೇ ವಿಚಾರದಲ್ಲೂ ನಾವು ಸಾಕಷ್ಟು ಚಿಂತನೆ ಹಾಗೂ ಹೊಂದಾಣಿಕೆಯ ಪ್ರವೃತ್ತಿಯನ್ನು ಹೊಂದಿರಬೇಕು.

  ವಿವಾಹ ಎಂದಾಗ ಅಲ್ಲಿ ಬರುವ ಸಂಬಂಧ ಹಾಗೂ ಹೊಂದಾಣಿಕೆಯ ವಿಚಾರಗಳು ಕೇವಲ ವಧು-ವರರಿಗೆ ಸೀಮಿತವಾಗಿರುವುದಿಲ್ಲ. ಹೊಸ ಸಂಬಂಧಗಳ ನಂಟನ್ನು ಬೆಸೆಯುವ ವಧು-ವರರ ತಂದೆ-ತಾಯಿ ಹಾಗೂ ಬಂಧು ಬಂಧವರೊಂದಿಗಿನ ಸಂಬಂಧಗಳು ಗಣನೆಗೆ ಬರುತ್ತವೆ. ಹಾಗಾಗಿ ವಧು ಆದವಳು ವಿವಾಹದ ಬಳಿಕ ಕೇವಲ ವರನೊಂದಿಗಿನ ಹೊಂದಾಣಿಕೆ ಮಾಡಿಕೊಂಡರೆ ಸಾಲದು. ವರನ ಮನೆ, ಮನೆ ಮಂದಿ ಹಾಗೂ ತಾಯಿ ಸ್ಥಾನದಲ್ಲಿ ನಿಲ್ಲುವ ಅತ್ತೆಯೊಂದಿಗೂ ಸಹಕಾರ ಹಾಗೂ ಸ್ನೇಹ ಪೂರಕವಾದ ವರ್ತನೆಯನ್ನು ತೋರಬೇಕಾಗುವುದು.

  discuss this things before marriage

  ಸಂಸಾರದ ಹಿರಿಯ ಮಹಿಳೆ ಹಾಗೂ ಮಖ್ಯಸ್ಥೆಯ ಸ್ಥಾನದಲ್ಲಿರುವ ಅತ್ತೆಯೊಂದಿಗೆ ವಧು ಸಾಕಷ್ಟು ವಿಚಾರಗಳೊಂದಿಗೆ ವಿಮರ್ಶೆ ಮಾಡಬೇಕಾಗುವುದು. ಆ ಸಂಸಾರಕ್ಕೆ ಬೇಕಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಕರಗತಮಾಡಿಕೊಳ್ಳುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಅತ್ತೆ-ಸೊಸೆಯ ನಡುವೆ ಹೊಂದಾಣಿಕೆ ಅತ್ಯಗತ್ಯ. ಇಲ್ಲವಾದರ ನರಕ ಸದೃಶವಾದ ವಾತಾವರಣ ಹಾಗೂ ಜೀವನವೇ ಸಾಕೆನಿಸುವ ಭಾವನೆಯನ್ನು ತಳೆಯಬೇಕಾಗುವುದು.

  ಹಾಗಾದರೆ ನಿಮ್ಮ ಭವಿಷ್ಯದ ಅತ್ತೆಯಾಗುವವರು ನಿಮ್ಮಿಂದ ಏನು ಬಯಸುತ್ತಾರ? ಅವರೊಂದಿಗೆ ಯಾವ ಬಗೆಯ ಹೊಂದಾಣಿಕೆ ಮತ್ತು ಮಾತುಕತೆ ಹೊಂದಿರಬೇಕು? ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯೊಂದಿಗೆ ವಿಚಾರವನ್ನು ತಿಳಿದುಕೊಳ್ಳಿ...

  1. ನಿಮ್ಮ ಜೀವನ ವಿಧಾನ:

  ನಮ್ಮಲ್ಲಿರುವ ವರ್ತನೆ ಹಾಗೂ ಚಿಂತನೆಯ ವಿಧಾನವು ವಿವಾಹವಾದ ಬಳಿಕ ಪ್ರಮುಖ ಬದಲಾವಣೆಯನ್ನು ತರುತ್ತವೆ. ಹಾಗಾಗಿ ನಮ್ಮ ಚಿಂತನೆಗಳು ಹಾಗೂ ವರ್ತನೆಗಳು ಇತರರೊಂದಿಗೆ ಹಿತಕರವಾಗಿ ಹಾಗೂ ಹೊಂದಾಣಿಕೆಯಿಂದ ಕೂಡಿರಬೇಕು. ಪ್ರಜ್ಞಾ ಪೂರಕವಾದ ನಿರ್ಧಾರಗಳು ಬದುಕಿನಲ್ಲಿ ಬದಲಾವಣೆಯನ್ನು ತರುತ್ತವೆ. ಸಾಮಾನ್ಯವಾಗಿ ಪ್ರತಿಯೊಬ್ಬ ಅತ್ತೆಯಂದಿರು ಮನೆಗೆ ಸೊಸೆಯಾಗಿ ಬರುವವಳು ಹೊಂದಾಣಿಕೆ ಹಾಗೂ ವಿಷಯವನ್ನು ಅರ್ಥೈಸಿಕೊಳ್ಳುವ ಗುಣವನ್ನು ಹೊಂದಿರಬೇಕೆಂದು ಬಯಸುತ್ತಾರೆ. ನಮ್ಮ ಮನೆ ಮಂದಿ ಹಾಗೂ ಸಂಬಂಧಿಕರೊಂದಿಗೆ ಸೂಕ್ತ ಹೊಂದಾಣಿಕೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ನೀವು ಕೆಲಸಕ್ಕೆ ಹೋಗುವವರಾಗಿದ್ದರೆ ಕೆಲಸದ ಮುಗಿದ ಮೇಲೆ ಮನೆಗೆ ಬರುವುದು, ಮನೆಯ ಕೆಲಸವನ್ನು ನಿರ್ವಹಿಸುವುದು ಹಾಗೂ ಪ್ರೀತಿಯ ಮಾತುಕತೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ ಎನ್ನುವುದನ್ನು ತಿಳಿದಿರಬೇಕು. ಹಾಗಾಗಿ ಅತ್ತೆಯೊಂದಿಗೆ ಸ್ಪಷ್ಟವಾದ ಹಾಗೂ ಸೂಕ್ತ ರೀತಿಯಲ್ಲಿ ವಿಷಯಗಳನ್ನು ವಿನಿಮಯಮಾಡಿಕೊಳ್ಳುವುದರಿಂದ ಸಮಸ್ಯೆಯನ್ನು ದೂರ ಇಡಬಹುದು.

  2. ನಿಮ್ಮ ಸ್ವಾತಂತ್ರ್ಯ:

  ವಿವಾಹದ ನಂತರ ಅನೇಕ ವಿಚಾರಗಳಲ್ಲಿ ನಮ್ಮ ಸ್ವಾರ್ಥ ಕೆಲಸಗಳಿಗಿಂತ ಹೆಚ್ಚಾಗಿ ನಮ್ಮ ಸಂಸಾರಕ್ಕಾಗಿ, ನಮ್ಮವರಿಗಾಗಿ ಚಿಂತನೆಯನ್ನು ನಡೆಸಬೇಕಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಸ್ವಾತಂತ್ರ್ಯಕ್ಕೆ ಕೊಂಚ ಧಕ್ಕೆ ಉಂಟಾಗಬಹುದು ಅಥವಾ ನಮ್ಮ ಬಗ್ಗೆ ಕೊನೆಯ ಪ್ರಶಸ್ತ್ಯ ನೀಡಬೇಕಾಗಬಹುದು. ಕೆಲವು ಗಂಭೀರ ವಿಚಾರಗಳಿಗೆ ಪರಸ್ಪರ ಮನಸ್ಸಿಗೆ ನೋವುಂಟಾಗಬಹುದು. ಹಾಗಾಗಿ ವಿವಾಹ ಪೂರ್ವದಲ್ಲಿ ವರನೊಂದಿಗೆ ಹೇಗೆ ವಿಷಯಗಳ ಬಗ್ಗೆ ಸಂಭಾಷಣೆ ನಡೆಸುತ್ತೀರೋ, ಹಾಗೆಯೇ ಭವಿಷ್ಯದ ಅತ್ತೆಯೊಂದಿಗೂ ಸೂಕ್ತ ವಿಚಾರಗಳೊಂದಿಗೆ ಆರೋಗ್ಯಕರ ಸಂಭಾಷಣೆ ನಡೆಸಿ.

  discuss this things before marriage

  3. ಕುಟುಂಬ ಯೋಜನೆ:

  ಸಾಮಾನ್ಯವಾಗಿ ವಿವಾಹದ ಬಳಿಕ ಬರುವ ಮಹತ್ತರವಾದ ವಿಚಾರವೆಂದರೆ ಭವಿಷ್ಯದ ಮಗು. ಹಾಗಾಗಿ ಕುಟುಂಬದ ಬಗ್ಗೆ, ಕುಟುಂಬದ ಪರಿಕಲ್ಪನೆಯ ಬಗ್ಗೆ, ಕೆಲಸದ ಪ್ರಾಮುಖ್ಯತೆ, ಮನೆಯ ನಿರ್ವಹಣೆ, ಆರ್ಥಿಕ ಸ್ಥಿತಿ-ಗತಿ ಬಗ್ಗೆ ಸರಿಯಾದ ಮಾತುಕತೆಯನ್ನು ವಿವಾಹ ಪೂರ್ವದಲ್ಲಿಯೇ ನಡೆಸುವುದು ಸೂಕ್ತ. ಇಂತಹ ವಿಚಾರಗಳು ಬಹಳ ವೈಕ್ತಿಕವಾದ್ದರಿಂದ ಮಾತನಾಡುವಾಗ ಸಭ್ಯತೆ ಹಾಗೂ ಸೂಕ್ಷ್ಮತೆಯನ್ನು ಹೊಂದಿರಬೇಕು. ವಿಷಗಯಗಳನ್ನು ಪ್ರಸ್ತಾಪಿಸುವುದು ಹಾಗೂ ಅರ್ಥೈಸುವಂತೆ ಮಾಡುವುದು ಬಹಳ ನಾಜೂಕಿನಿಂದ ಕೂಡಿರಬೇಕು. ಇವುಗಳ ಬಗ್ಗೆ ಸೂಕ್ತ ನಿರ್ಧಾರಗಳು ಅಥವಾ ಸಂಭಾಷಣೆಗಳು ಪೂರ್ವದಲ್ಲೇ ನಡೆದಿದ್ದರೆ ವಿವಾಹದ ನಂತರ ಗೊಂದಲ ಉಂಟಾಗದು.

  4. ಹೊಣೆಗಾರಿಕೆಗಳು:

  ವಿವಾಹ ಎನ್ನುವುದು ಕೇವಲ ಒಂದು ಸಂತೋಷದ ವಿಚಾರ ಅಥವಾ ನಾವು ಬಯಸಿದ್ದನ್ನು ಪಡೆದುಕೊಳ್ಳುವ ವಿಧಾನವೂ ಅಲ್ಲ. ವಿವಾಹ ಎನ್ನುವುದು ಒಂದು ಸುಂದರವಾದ ಬಂಧನ. ಈ ಬಂಧನದ ಬೆಸುಗೆಯ ನಂತರ ನಮ್ಮ ಜೀವನದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ನಮ್ಮ ಸಂತೋಷದ ಜೊತೆಗೆ ಸಂಸಾರದ ಆಗು-ಹೋಗುಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಮನೆಯ ರೀತಿ-ನೀತಿ, ಸಂಪ್ರದಾಯ, ಪ್ರಮುಖ ಚಿಂತನೆ ಹಾಗೂ ಬೇಕು ಬೇಡಗಳ ಬಗ್ಗೆ ಭವಿಷ್ಯದ ಅತ್ತೆಯವರೊಂದಿಗೆ ಸೂಕ್ಷ್ಮ ಹಾಗೂ ಆರೋಗ್ಯಕರ ರೀತಿಯಲ್ಲಿ ವಿಚಾರಗಳನ್ನು ವಿನಿಮಯಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಬಗ್ಗೆ ಹಾಗೂ ಸಂಬಂಧಗಳ ಬಗ್ಗೆ ಆದಷ್ಟು ಮುಕ್ತ ಹಾಗೂ ಸ್ಪಷ್ಟತೆಯನ್ನು ಹೊಂದಿರುವುದು ಪ್ರಮುಖವಾದದ್ದು.

  5. ಧಾರ್ಮಿಕ ನಂಬಿಕೆಗಳು:

  ಒಂದೇ ಸೂರಿನಡಿಗೆ ಬೆಳೆದವರಾದರೂ ವ್ಯಕ್ತಿ ಹಾಗೂ ವ್ಯಕ್ತಿತ್ವದ ನಡುವೆ ವಿಭಿನ್ನತೆ ಇರುತ್ತದೆ. ಇನ್ನು ವಿಭಿನ್ನವಾದ ಧರ್ಮ, ಜಾತಿ, ಊರು, ವಾತಾವರಣಗಳಲ್ಲಿ ಬೆಳೆದವರಲ್ಲಿ ಭಿನ್ನತೆ ಎನ್ನುವುದು ಸಾಮಾನ್ಯವಾಗಿರುತ್ತವೆ. ಅಂತಹ ವಿಭಿನ್ನತೆಯಲ್ಲಿ ಬೆಳೆದುಬಂದವರು ಒಮ್ಮೆಲೇ ಸಾಮ್ಯತೆಯ ವರ್ತನೆಯೊಂದಿಗೆ ಹೊಂದಾಣಿಕೆಯನ್ನು ತೋರಬೇಕು ಎನ್ನುವುದು ಸ್ವಲ್ಪ ಕಷ್ಟದ ವಿಚಾರವೆ. ಹಾಗಾಗಿಯೇ ವಿವಾಹದ ನಂತರ ಅನೇಕರಿಗೆ ಧಾರ್ಮಿಕ ನಂಬಿಕೆ ಹಾಗೂ ರೀತಿ-ನೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ವಿವಾಹ ಪೂರ್ವದಲ್ಲಿಯೇ ಅತ್ತೆಯಾಗುವವರೊಂದಿಗೆ ಧಾರ್ಮಿಕ ನಂಬಿಕೆಗಳು, ಅವರ ಮನೆಯಲ್ಲಿರುವ ಸಂಪ್ರದಾಯ ಹಾಗೂ ರೀತಿ-ನೀತಿಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದಕ್ಕಾಗಿ ನಿಮ್ಮ ಮಾನಸಿಕ ಚಿಂತನೆಗಳನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ.

  English summary

  THINGS YOU NEED TO CLEAR WITH YOUR WOULD _BE MOTHER_IN_LAW

  Worrying about your dreams after marriage? There are certain things you need to do before you marry the guy either you fell in love with or arranged for you. One of the main things to do is having a clear concept of what your mother-in-law wants from you. It is true that marriage is between families and not between the couple itself. Keeping in-laws happy in the relationship is the biggest task for any daughter-in-law
  Story first published: Tuesday, May 8, 2018, 15:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more