For Quick Alerts
ALLOW NOTIFICATIONS  
For Daily Alerts

ಪತ್ನಿಯರು ಮಾಡುವ ಇಂತಹ ಕೆಲಸ ಅವರ ಮದುವೆ ಮುರಿದು ಬೀಳಲು ಕಾರಣವಾಗುತ್ತದೆ.

|

ನಿಮ್ಮ ಪತಿಯೊಂದಿಗೆ ನೀವು ಸಂತೋಷವಾಗಿಲ್ಲ ಎಂದಾದರೆ, ನಿಮ್ಮ ಮದುವೆಯು ಈಗಾಗಲೇ ಮುರಿದುಹೋಗಿದೆ ಎಂದು ಅರ್ಥ. ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೆ, ನಿಮ್ಮ ಸಂಬಂಧವನ್ನು ಕೊನೆಗೊಳಿಸಲು ತಕ್ಕ ಸಮಯ ಎಂದು ತಿಳಿಸುತ್ತದೆ. ಪ್ರತೀ ಸಣ್ಣ ಪುಟ್ಟ ವಿಷಯಗಳಿಗೆ ನಿಮ್ಮ ಪತಿಯನ್ನು ನೀವು ದೂಷಿಸುತ್ತಿದ್ದರೆ, ಮನೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಅವನ ಆಸಕ್ತಿ ಕಡಿಮೆಯಾಗಬಹುದು ಮತ್ತು ನೀವಿಬ್ಬರೂ ಸೇರಿ ಕಟ್ಟಿದ ಮನೆಯು, ಮುರಿದು ಬೀಳಬಹುದು. ನಿಮ್ಮ ಅತೃಪ್ತಿಯ ಕಾರಣಗಳನ್ನು ನೀವು ಅವನೆಡೆಗೆ ತಳ್ಳಿದರೆ. ಅದು ನಿಮ್ಮ ಮದುವೆಯನ್ನು ಕೊನೆಗಾಣಿಸಬಹುದು.

ಒಂದು ಮಹಿಳೆ, ಮನೆ ನಿರ್ಮಿಸಬಹುದು ಅಥವಾ ಮುರಿಯಬಹುದು. ಮದುವೆಗಳಲ್ಲಿ, ಯಾವುದೇ ಸ್ಥಿರತೆ ಇಲ್ಲದಿದ್ದರೆ ನಮ್ಮ ಬಾಳಿನ ದಾರಿಯಲ್ಲಿ ಬಹಳಷ್ಟು ತೊಂದರೆಗಳು ಕಾಣುತ್ತಿವೆ, ಅಸ್ಥಿರತೆ ಕೆಲವೊಮ್ಮೆ ಪುರುಷರಿಂದ ಮತ್ತು ಕೆಲವೊಮ್ಮೆ ಮಹಿಳೆಯರಿಂದ ಉಂಟಾಗಬಹುದು. ಮಹಿಳೆಯರ ವಿಷಯಕ್ಕೆ ಬಂದಾಗ, ಮದುವೆಯನ್ನು ಕೊನೆಗೊಳಿಸಬಹುದಾದ ಕೆಲವು ಮೂಲಭೂತ ಅಂಶಗಳಿವೆ. ಪತ್ನಿಯು ತನ್ನ ಮದುವೆಯನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಜಾಗರೂಕಳಾಗಿರಬೇಕು.

ಒಬ್ಬ ಪತ್ನಿಯಿಂದ ಪ್ರದರ್ಶಿಸಲ್ಪಡುವ ಕೆಲವು ಸಂಗತಿಗಳು, ಮದುವೆಯನ್ನು ನಾಶಪಡಿಸಬಹುದು. ಅವುಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಪತಿಯಂತೆ, ಮದುವೆಯ ಪತನಕ್ಕೆ ಹೆಂಡತಿಯು ಸಮಾನ ಜವಾಬ್ದಾರಳಾಗಿರುತ್ತಾಳೆ. ಈ ಲೇಖನವು, ಸ್ತ್ರೀಯರಿಂದ ಮಾಡಲ್ಪಡುವ ತಪ್ಪುಗಳಿಂದ ನಾಶವಾಗುವ ಮದುವೆಯ ಮೇಲೆ ಆಧರಿಸಲ್ಪಟ್ಟಿದೆ , ಪತ್ನಿ ಮಾಡುವ ತಪ್ಪುಗಳು ಮತ್ತು ಮದುವೆ ಮುರಿದು ಬೀಳಲು ಕಾರಣವಾಗುವ ವಿಷಯಗಳ ಬಗ್ಗೆ ಆಳವಾಗಿ ನೋಡೋಣ.

1. ಅವಾಸ್ತವಿಕ ನಿರೀಕ್ಷೆ

1. ಅವಾಸ್ತವಿಕ ನಿರೀಕ್ಷೆ

ಪತ್ನಿಯರು ತಮ್ಮ ಮದುವೆಯ ಬಗ್ಗೆ ಎರಡು ರೀತಿಯ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಮೊದಲನೆಯದು ತಾರ್ಕಿಕ ಮತ್ತು ನೈಜವಾದದ್ದು, ಎರಡನೆಯದು ಅಸಂಬದ್ಧ ಮತ್ತು ಅವಾಸ್ತವಿಕವಾದದ್ದು. ಎರಡನೆಯದು ಒಂದೇ ಕ್ಷಣದಲ್ಲಿ ಸಂಬಂಧವನ್ನು ನಾಶಪಡಿಸುತ್ತದೆ. ಒಬ್ಬ ವ್ಯಕ್ತಿಯಿಂದ ಪೂರೈಕೆಯನ್ನು ಹುಡುಕುವುದು, ಮತ್ತು ನಿಮ್ಮ ಅಸಮಾಧಾನವನ್ನು ಅವನ ಮೇಲೆ ಹೇರುವುದು ನಿಮ್ಮ ಮದುವೆಯನ್ನು ಶೀಘ್ರವಾಗಿ ನಾಶಗೊಳಿಸುತ್ತದೆ. ಅವರು ನಿಮ್ಮ ನಿರೀಕ್ಷೆಯನ್ನು ಮುಂದುವರಿಸದಿದ್ದರೆ, ಅದನ್ನು ಚರ್ಚಿಸಿ ಮತ್ತು ವಾಸ್ತವವನ್ನು ಪರೀಕ್ಷಿಸಿ. ನಿಮ್ಮ ನಿರೀಕ್ಷೆಗಳು ನಿಮ್ಮ ಜೇಬುಗಳನ್ನು ತುಂಬುವಷ್ಟೇ ಇರಲಿ. ಆವಾಗ ನೀವು ಸಂತೋಷವಾಗಿರುವಿರಿ. ವಾಸ್ತವವನ್ನು ತೀರ್ಮಾನಿಸಿ ಮತ್ತು ಅದರ ಆಧಾರದ ಮೇಲೆ ನಿರೀಕ್ಷೆಯನ್ನು ಹೊಂದಿರಿ. ನಿಮ್ಮ ಸಂಗಾತಿ ನಿಮ್ಮನ್ನು ಸಂತೋಷವಾಗಿರಿಸಬೇಕು ಎಂದು ನೀವು ಬಯಸಿದರೆ, ನೀವು ನಿಷ್ಕಪಟ ಮತ್ತು ಅವಾಸ್ತವಿಕರಾಗಿದ್ದೀರಿ ಎಂದರ್ಥ. ನಿಮ್ಮನ್ನು, ನೀವು ಮಾತ್ರಾ ಸಂತೋಷಗೊಳಿಸಬಹುದು. ನಿಮ್ಮ ಪತಿ ನಿಮ್ಮನ್ನು ಪೂರ್ಣಗೊಳಿಸಬೇಕು ಮತ್ತು ನಿಮಗೆ ಶಾಶ್ವತವಾದ ಸಂತೋಷವನ್ನು ತಂದುಕೊಡಬೇಕೆಂದು ನೀವು ನಿರೀಕ್ಷಿಸಿದರೆ, ನೀವು ಅವನ ವೈಫಲ್ಯಕ್ಕೆ ಕಾರಣಾವಾಗುತ್ತೀರಿ ಮಾತ್ರವಲ್ಲ ನೀವು ಸ್ವತಃ ನಿರಾಶೆಗೊಳಗಾಗುತ್ತೀರಿ. ಅವಾಸ್ತವಿಕ ನಿರೀಕ್ಷೆಯ ಹಾದಿಯನ್ನು ಅನುಸರಿಸಬೇಡಿ, ಅದರ ಅಂತಿಮ ಫಲಿತಾಂಶ ಯಾವಾಗಲೂ ವಿನಾಶಕಾರಿಯಾಗಿದೆ ಎಂದು ತಿಳಿದಿರಲಿ.

2. ಕಟುವಾಗಿರುವುದು, ನಕಾರಾತ್ಮಕ ಸನ್ನೆಗಳು ಮತ್ತು ಅಭಿವ್ಯಕ್ತಿಗಳನ್ನು ಬಿಂಬಿಸುವುದು.

2. ಕಟುವಾಗಿರುವುದು, ನಕಾರಾತ್ಮಕ ಸನ್ನೆಗಳು ಮತ್ತು ಅಭಿವ್ಯಕ್ತಿಗಳನ್ನು ಬಿಂಬಿಸುವುದು.

ಹಾಸ್ಯ ಮತ್ತು ಚುಚ್ಚುಮಾತುಗಳಿಗೆ ಹಸಿವು ಇರುವುದು ಒಳ್ಳೆಯದು, ಆದರೆ ಯಾವಾಗಲೂ ನಿಮ್ಮ ಸಂಗಾತಿಯನ್ನು ಕೆಳಗಾಣಿಸಲು ಕಟುವಾಗಿರುವುದು, ಮದುವೆಯನ್ನು ನಾಶಮಾಡುವುದು ಎಂಬ ತಿಳುವಳಿಕೆ ನಿಮಗೆ ಇರುವುದು ಒಳ್ಳೆಯದು . ಇದು ನೀವು ಆತನನ್ನು ಅಥವಾ ಅವನ ಅಭಿಪ್ರಯವನ್ನು ಗೌರವಿಸುವುದಿಲ್ಲ ಎಂದು ತೋರಿಸುತ್ತದೆ. ಪುರುಷರು ಅವರೆಡೆಗೆ ಬರುವ ಟೀಕೆಗಳನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗಿ ಅವರು ತಮ್ಮನ್ನು ತಮ್ಮ ಹೆಂಡತಿಯರಿಂದ ದೂರವಿಡುತ್ತಾರೆ. ಈ ನಿರ್ದಿಷ್ಟ ಕಾರಣಕ್ಕಾಗಿ ಅವರು ವಿವಾಹೇತರ ಸಂಬಂಧದಲ್ಲಿ ತೊಡಗುತ್ತಾರೆ. ನೀವು ನಿರ್ಣಾಯಕ ಅಥವಾ ಕಟುವಾಗಿದ್ದಾಗ, ನಿಮ್ಮ ಪತಿಗೆ ಅಪಮೌಲ್ಯ ಮತ್ತು ಅವರ ಗೌರವ ಅಲ್ಲಾಡಿದಂತೆ ಅನಿಸುತ್ತದೆ. ನಿಮ್ಮ ಕಣ್ಣುಗಳ ಮೂಲಕ ಅಥವಾ ಕಟುವಾದ ಮುಖಭಾವವನ್ನು ತೋರಿಸುವುದು ಅಗೌರವವನ್ನು ತೋರಿಸುವ ಮತ್ತೊಂದು ಮಾರ್ಗವಾಗಿದೆ. ಅಸಹ್ಯವನ್ನು ಮುಖದ ಮೂಲಕ ಅಭಿವ್ಯಕ್ತಿಗೊಳಿಸುವುದು ಗಂಡಂದಿರ ಪರವಾಗಿ ಕೆಲಸ ಮಾಡುವುದಿಲ್ಲ. ಏನೋ ತಪ್ಪು ಇದೆ ಎಂದು ಅವರು ಭಾವಿಸುತ್ತಾರೆ, ಕಟುವಾಗಿರುವುದರ ಬದಲಾಗಿ, ವಿಷಯವನ್ನು ನಿಮ್ಮ ಪತಿಯೊಂದಿಗೆ ಚರ್ಚಿಸಿ. ಮದುವೆಯಲ್ಲಿ, ನೀವು ಬಂಧವನ್ನು ಜೋಡಿಸಲು ಯತ್ನಿಸುತ್ತೀರಿ. ಅದನ್ನು ನಾಶಮಾಡಲಲ್ಲ. ಸಮಸ್ಯೆಯನ್ನು ಪರಿಹರಿಸಲು ಸರಳ ಮಾರ್ಗವೆಂದರೆ, ವಿಷಯ ಎಲ್ಲಿಗೆ ಹೋಗುತ್ತಿದೆ ಎಂದು ಚರ್ಚಿಸಿ ಮತ್ತು ಸಂಬಂಧವನ್ನು ಮೊದಲಿನಿಂದ, ಮೊದಲಿನಂತೆ ಶುರುಮಾಡಿ. ಹೆಣ್ಣುಮಕ್ಕಳು ಆಕರ್ಷಣೆಯ ಕೇಂದ್ರವಾಗಿರಲು ಬಯಸುತ್ತಾರೆ, ಇದಕ್ಕಾಗಿ ಅವರು ಸುಲಭವಾಗಿ ಪರಿಹರಿಸಬಹುದಾದ ಪ್ರತಿಯೊಂದು ವಿಷಯವನ್ನೂ ದೊಡ್ಡ ಸಮಸ್ಯೆಯನ್ನಾಗಿ ಮಾಡುತ್ತಾರೆ.

3. ಪತಿಯೊಡನೆ ನಿಕಟ(intimate)ಆಗಿಲ್ಲದಿರುವುದು.

3. ಪತಿಯೊಡನೆ ನಿಕಟ(intimate)ಆಗಿಲ್ಲದಿರುವುದು.

ಕೆಲವೊಮ್ಮೆ, ಪತ್ನಿಯರು ತಮ್ಮ ಗಂಡಂದಿರೊಂದಿಗೆ ಯಾವುದೇ ಅನ್ಯೋನ್ಯತೆಯನ್ನು ಹೊಂದಿರುವುದಿಲ್ಲ ಮತ್ತು ಇದು ಒಂದು ತರಹದ ಅಡಚಣೆ ಉಂಟುಮಾಡುತ್ತದೆ. ಇದರಿಂದಾಗಿ ಗಂಡನಿಗೆ ಅಗತ್ಯವಿರುವ ಲೈಂಗಿಕ ಒತಡ ತಪ್ಪಿಹೋಗುತ್ತದೆ.

ಇದು ಮದುವೆಯಲ್ಲಿ ಬಿಕ್ಕಟ್ಟನ್ನು ಉಂಟುಮಾಡುತ್ತದೆ ಮತ್ತು ಆಗಾಗ್ಗೆ ವಿವಾಹ ಮುರಿದು ಬೀಳಲು ಕಾರಣವಾಗುತ್ತದೆ. ಪುರುಷರಿಗೆ ಲೈಂಗಿಕ ಅನ್ಯೋನ್ಯತೆಯ ಮೂಲಕ ದೈಹಿಕ ಬಿಡುಗಡೆ ಬೇಕು. ಇದು ಅವರ ಅಗತ್ಯ ಮತ್ತು ಅದನ್ನು ನೀವು ಅವರಿಗೆ ಕೊಡದಿದ್ದರೆ ಅದು ಬಿರುಕುಗಳನ್ನು ಉಂಟುಮಾಡುತ್ತದೆ. ನಿಮ್ಮ ಪತಿಗೆ ಏನು ಬೇಕೋ ಅದನ್ನು ಅವರಿಗೆ ನೀಡದಿದ್ದರೆ, ನೀವು ಅವರ ಅಗತ್ಯಗಳಿಗೆ ಗೌರವ ನೀಡುವುದಿಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಇದು ಅವರಿಗೆ ವೈಯಕ್ತಿಕವಾಗಿದೆ. ನಿಮಗೆ ಭಾವನಾತ್ಮಕ ಬಿಡುಗಡೆಯ ಅಗತ್ಯವಿರುವಂತೆ, ಅವರಿಗೆ ದೈಹಿಕ ಬಿಡುಗಡೆಯ ಅಗತ್ಯವಿರುತ್ತದೆ.

4. ನಿಮ್ಮ ಗಂಡನೊಂದಿಗೆ ಸಂತೋಷವಾಗಿಲ್ಲದಿರುವುದು.

4. ನಿಮ್ಮ ಗಂಡನೊಂದಿಗೆ ಸಂತೋಷವಾಗಿಲ್ಲದಿರುವುದು.

ನಿಮ್ಮ ಪತಿಯೊಂದಿಗೆ ನೀವು ಸಂತೋಷವಾಗಿಲ್ಲ ಎಂದಾದರೆ, ನಿಮ್ಮ ಮದುವೆಯು ಈಗಾಗಲೇ ಮುರಿದುಹೋಗಿದೆ ಎಂದು ಅರ್ಥ. ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೆ, ನಿಮ್ಮ ಸಂಬಂಧವನ್ನು ಕೊನೆಗೊಳಿಸಲು ತಕ್ಕ ಸಮಯ ಎಂದು ತಿಳಿಸುತ್ತದೆ. ನೀವು ಪ್ರತೀ ಸಣ್ಣ ಪುಟ್ಟ ವಿಷಯಗಳಿಗೆ ನಿಮ್ಮ ಪತಿಯನ್ನು ದೂಷಿಸುತ್ತಿದ್ದರೆ, ಮನೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಅವನ ಆಸಕ್ತಿ ಕಡಿಮೆಯಾಗಬಹುದು ಮತ್ತು ನೀವಿಬ್ಬರೂ ಸೇರಿ ಕಟ್ಟಿದ ಮನೆಯು, ಮುರಿದು ಬೀಳಬಹುದು. ನಿಮ್ಮ ಅತೃಪ್ತಿಯ ಕಾರಣಗಳನ್ನು ನೀವು ಅವನೆಡೆಗೆ ತಳ್ಳಿದರೆ. ಅದು ನಿಮ್ಮ ಮದುವೆಯನ್ನು ಕೊನೆಗಾಣಿಸಬಹುದು.

ಈ 4 ಕಾರಣಗಳು ಮದುವೆಯ ನಾಶಕ್ಕೆ ಮುಖ್ಯ ಕಾರಣಗಳಾಗಿವೆ.ನೀವು ಇತರ ಯಾವುದೇ ಗುಣಲಕ್ಷಣಗಳನ್ನು ಹೊಂದಿದ್ದರೆ, ತುಂಬಾ ತಡವಾಗುವ ಮೊದಲು ಅದನ್ನು ಬದಲಾಯಿಸಿ.

Read more about: marriage
English summary

Things That Wives Do That Destroys Their Marriage

A woman can make or break a house. In marriages, we see a lot of trouble coming our way if there is no stability. At times, the instability is caused by men and, at times, by women.
Story first published: Saturday, May 12, 2018, 10:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more