Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಮನೆಗೆ ಬಂದ ಬಳಿಕ ಆಫೀಸ್ ಕೆಲಸ ಪಕ್ಕಕ್ಕಿಡಿ, ಹೆಂಡತಿ ಜೊತೆ ಸಮಯ ಕಳೆಯಿರಿ!
ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಯಶಸ್ಸು ಹಾಗೂ ಹಣದ ಹಿಂದೆ ಬಿದ್ದಿರುತ್ತದೆ. ಇಂತಹ ಸಮಯದಲ್ಲಿ ಸಂಬಂಧಗಳು ಹಾಗೂ ಅದರ ಮಹತ್ವದ ಬಗ್ಗೆ ಯಾರಿಗೂ ತಿಳಿರುವುದಿಲ್ಲ. ಇದರಿಂದಾಗಿಯೇ ಇಂದಿನ ದಿನಗಳಲ್ಲಿ ವಿಚ್ಛೇದನ ಸಮಸ್ಯೆಗಳು ಹೆಚ್ಚಾಗುತ್ತಾ ಇದೆ. ಇದಕ್ಕೆ ಪ್ರಮುಖವಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದು ಮತ್ತು ಮಾಡುತ್ತಿರುವ ವೃತ್ತಿಯು ವಿಚ್ಛೇದನಕ್ಕೆ ಕಾರಣವಾಗುತ್ತಿದೆಯಾ ಎನ್ನುವ ಪ್ರಶ್ನೆಗೆ ಅಧ್ಯಯನವೊಂದು ಉತ್ತರ ನೀಡಿದೆ.
ಪ್ರಾಮಾಣಿಕ ಹಾಗೂ ಕಠಿಣ ಕೆಲಸ ಮಾಡುವುದು ತಪ್ಪೇ ಎಂದು ಪ್ರಶ್ನೆ ಬರಬಹುದು. ವೃತ್ತಿಯನ್ನು ತುಂಬಾ ಪ್ರೀತಿಸುವವರು ಅದಕ್ಕಾಗಿ ಸಮಯ ಮೀಸಲಿಡುತ್ತಾರೆ ಮತ್ತು ಕೆಲಸ ಮಾಡಲು ತಮ್ಮ ವೈವಾಹಿಕ ಜೀವನವನ್ನೇ ಬಲಿಕೊಡುತ್ತಾರೆ. ಇದರಿಂದ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನಕ್ಕೆ ಕಾರಣವಾಗುತ್ತದೆ. ವೈವಾಹಿಕ ಜೀವನ ಕೊಲ್ಲಲ್ಪಡುತ್ತಿದೆ ಎನ್ನುವುದಕ್ಕೆ ಕೆಲವೊಂದು ಲಕ್ಷಣಗಳನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಅದು ಯಾವುದೆಂದು ತಿಳಿಯಿರಿ....

ಮನೆಯಲ್ಲೂ ಕಚೇರಿ ಕೆಲಸ ಮಾಡುತ್ತೀರಾ?
ಕಚೇರಿಯಲ್ಲೇ ಎಲ್ಲಾ ಕೆಲಸ ಮುಗಿಸಬೇಕೆನ್ನುವ ನಿಯಮ ಪಾಲಿಸಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲವರು ಸ್ವಲ್ಪ ಕೆಲಸವನ್ನು ಮನೆಯಲ್ಲೂ ಮಾಡಲು ಇಷ್ಟಪಡುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದರ ಬಗ್ಗೆ ನಿಮ್ಮ ಸಂಗಾತಿಯು ದೂರುತ್ತಾ ಇದ್ದರೆ ಅದು ಖಂಡಿತವಾಗಿಯೂ ತಪ್ಪು. ಕೆಲಸವು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟು ಮಾಡುವ ಲಕ್ಷಣವಿದು.

ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವೇ?
ನಿಮ್ಮ ಸಂಗಾತಿಯು ತುಂಬಾ ರೋಮ್ಯಾಂಟಿಕ್ ಆಗಿದ್ದಾಗ ನೀವು ಲ್ಯಾಪ್ ಟಾಪ್ ತಂದು ಕೆಲಸ ಮಾಡುತ್ತಾ ಆಕೆಯನ್ನು ಕಾಯಿಸುತ್ತಾ ಇದ್ದರೆ ಅದರಿಂದ ಸಂಬಂಧ ಕೆಡಬಹುದು. ಸಂಗಾತಿಯು ನಿಮ್ಮೊಂದಿಗೆ ಮಾತನಾಡದೆ ಹಾಗೆ ಮಲಗಿ ಬಿಡಬಹುದು. ಇದು ನಿಮ್ಮ ಸಂಬಂಧದಲ್ಲಿ ಬಿರುಕಿನ ಮತ್ತೊಂದು ಲಕ್ಷಣವಾಗಿದೆ.

ಕಚೇರಿಯ ಒತ್ತಡ ಮನೆಗೆ ತರುತ್ತೀರಾ?
ಕಚೇರಿಯಲ್ಲಿ ಏನಾದರೂ ನಡೆದು ಅದರಿಂದ ನಿಮ್ಮ ಮೇಲೆ ಒತ್ತಡ ಬಿದ್ದಿದ್ದರೆ ಅದನ್ನು ಅಲ್ಲಿಯೇ ಬಿಡಬೇಕು. ಮನೆಗೆ ಕೂಡ ಅದೇ ಒತ್ತಡದಲ್ಲಿ ಬಂದು ಸಂಗಾತಿ ಮೇಲೆ ರೇಗುವುದು ಸರಿಯಲ್ಲ. ಸಂಬಂಧಕ್ಕೆ ಕೆಲಸವು ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಇದು ಮತ್ತೊಂದು ಸುಳಿವು.

ಕೆಲಸದ ಒತ್ತಡದಿಂದ ಲೈಂಗಿಕ ಕ್ರಿಯೆಯಿಂದ ದೂರವಿರುತ್ತೀರಾ?
ನಿಮ್ಮ ಸಂಗಾತಿಯು ಲೈಂಗಿಕ ಕ್ರಿಯೆಗಾಗಿ ಹಾತೊರೆಯುತ್ತಿರುವಾಗ ನಿಮ್ಮ ಶಕ್ತಿ ಮಾತ್ರ ಕುಂದಿ ಸಂಗಾತಿಯೊಂದಿಗೆ ಬೆರೆಯಲು ಕಷ್ಟವಾಗುತ್ತಿದೆಯಾ? ಇದು ಕೆಲಸದ ಒತ್ತಡವು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದರ ಲಕ್ಷಣವಾಗಿದೆ.

ಪದೇ ಪದೇ ಕಚೇರಿಯಿಂದ ಪ್ರವಾಸಕ್ಕೆ ಹೋಗುತ್ತಿದ್ದೀರಾ?
ಕಚೇರಿಯಿಂದಾಗಿ ನಿಮಗೆ ಪದೇ ಪದೇ ಪ್ರವಾಸಕ್ಕೆ ಹೋಗಬೇಕಾಗುತ್ತಿದೆಯಾ? ಇದರಿಂದಾಗಿ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಕಷ್ಟವಾಗುತ್ತಿದೆಯಾ? ಇಂತಹ ಸಮಯದಲ್ಲಿ ನೀವು ಸಂಗಾತಿ ಜತೆಗೆ ಅಮೂಲ್ಯವಾದ ಸಮಯ ಕಳೆದು ಸಂಬಂಧ ಉಳಿಸಿಕೊಳ್ಳಬಹುದು.

ಸಂಗಾತಿಯ ಹುಟ್ಟುಹಬ್ಬ ಮರೆತೀರಾ?
ಕೆಲಸದಲ್ಲಿ ಎಷ್ಟು ವ್ಯಸ್ತರಾಗಿದ್ದೀರಿ ಎಂದರೆ ನಿಮ್ಮ ಸಂಗಾತಿಯ ಹುಟ್ಟುಹಬ್ಬವನ್ನೇ ಮರೆತು ಬಿಟ್ಟಿದ್ದೀರಾ? ಎಲ್ಲಾ ದಿನಾಂಕವನ್ನು ಮರೆಯಬಹುದು. ಆದರೆ ಸಂಗಾತಿಯ ಹುಟ್ಟುಹಬ್ಬ ಮರೆತರೆ ಕೆಲಸವು ನಿಮ್ಮ ಮೇಲೆ ಒತ್ತಡ ಬೀರುತ್ತಿದೆ ಎನ್ನಬಹುದು.



Click it and Unblock the Notifications