ಅತಿಯಾಗಿ ಯೋಚಿಸಬೇಡಿ, ಹಾಗೆ ಮಾಡಿದರೆ ಆರೋಗ್ಯಕ್ಕೇ ತೊಂದರೆ!!

By: Deepu
Subscribe to Boldsky

ಆಲೋಚನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರು ಜೀವನದಲ್ಲಿ ಯೋಚನೆ ಮಾಡುತ್ತಾ ಇರುತ್ತಾರೆ. ನಮಗೆ ಏನಾದರೂ ಕಷ್ಟ ಬಂದಾಗ ಅಥವಾ ಯಾವುದೇ ಕೆಲಸವಾಗಬೇಕಿದ್ದರೆ ನಾವು ಯೋಚನೆ ಮಾಡುತ್ತೇವೆ. ಆದರೆ ಅತಿಯಾಗಿ ಯೋಚನೆ ಮಾಡಿದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಬಂಧವನ್ನು ಕೆಡಿಸಬಹುದು ಎಂದು ತಿಳಿದುಬಂದಿದೆ. ಅತಿಯಾಗಿ ಯೋಚಿಸುವುದು ಸರಿಯಲ್ಲ. ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ಇದಕ್ಕಾಗಿ ದಿನನಿತ್ಯ ಕೂತು ಯೋಚನೆ ಮಾಡಿದರೆ ಅದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ. ಒತ್ತಡದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಯೋಚನೆ ಮಾಡುವರು. ಆದರೆ ಪದೇ ಪದೇ ಇದೇ ಮುಂದುವರಿದರೆ ಅದು ನಿಮ್ಮ ಸಂಗಾತಿ ಮತ್ತು ನಿಮಗೆ ಚಿಂತೆಯ ವಿಷಯವಾಗಬಹುದು. ನಿಮ್ಮ ಸಂಗಾತಿಯ ಬಗ್ಗೆ ಅತಿಯಾಗಿ ಯೋಚಿಸುತ್ತಾ ಇದ್ದೀರಿ ಎನ್ನುವುದರ ಲಕ್ಷಣಗಳು ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ತಿಳಿಸಲಿದೆ....

 ಆಕೆ ಅಥವಾ ಆತನ ಮೆಸೇಜ್ ಅನ್ನು ಅತಿಯಾಗಿ ವಿಶ್ಲೇಷಿಸುವುದು

ಆಕೆ ಅಥವಾ ಆತನ ಮೆಸೇಜ್ ಅನ್ನು ಅತಿಯಾಗಿ ವಿಶ್ಲೇಷಿಸುವುದು

ನಿಮ್ಮ ಸಂಗಾತಿಯು ರಾತ್ರಿ ವೇಳೆ ನಿಮ್ಮ ಮೊಬೈಲ್‌ಗೆ ಒಂದು ಸಂದೇಶ ಕಳುಹಿಸುವಳು ಅಥವಾ ಕಳುಹಿಸುತ್ತಾನೆ. ನನಗೆ ತುಂಬಾ ನಿದ್ರೆ ಬರುತ್ತಾ ಇದೆ. ಶುಭರಾತ್ರಿ ಎಂದಿರುತ್ತದೆ ಆ ಮೆಸೇಜ್‌ನಲ್ಲಿ. ಅದನ್ನು ನೀವು ಪದೇ ಪದೇ ಓದುತ್ತಾ ಇರುತ್ತೀರಿ. ನಿಮ್ಮ ಸಂಗಾತಿಗೆ ಬೋರ್ ಆಗಿದೆಯಾ ಎಂದು ನಿಮಗೆ ಅನಿಸುತ್ತದೆ ಅಥವಾ ಬೇರೆ ಯಾರೊಂದಿಗಾದರೂ ನಿಮ್ಮ ಸಂಗಾತಿಯಿದ್ದಾಳೆಯಾ ಎನ್ನುವ ಕೆಟ್ಟ ಆಲೋಚನೆ ನಿಮ್ಮಲ್ಲಿ ಮೂಡುತ್ತದೆ. ನಿಮ್ಮ ಸಂಗಾತಿಯು ಬೇರೆಯಾಗಲು ಬಯಸುತ್ತಿದ್ದಾಳೆಯಾ ಎನ್ನುವ ಆಲೋಚನೆಯೂ ಕೇವಲ ಒಂದು ಶುಭರಾತ್ರಿ ಮೆಸೇಜ್ ನಿಂದ ನಿಮ್ಮಲ್ಲಿ ಮೂಡುವುದು..

ಎಲ್ಲವೂ ಸರಿಯಾಗಿದೆ ಎಂದರೂ ಭವಿಷ್ಯದ ಬಗ್ಗೆ ಚಿಂತೆ!

ಎಲ್ಲವೂ ಸರಿಯಾಗಿದೆ ಎಂದರೂ ಭವಿಷ್ಯದ ಬಗ್ಗೆ ಚಿಂತೆ!

ಎಲ್ಲವೂ ಸರಿಯಾಗಿ ನಡೆಯುತ್ತಾ ಇದ್ದರೂ ನಿಮ್ಮ ಸಂಗಾತಿಯು ನಿಮಗಿಂತ ಸುಂದರವಾಗಿರುವವರನ್ನು ನೋಡಿ ನಿಮಗೆ ಮೋಸ ಮಾಡಬಹುದಾ ಎನ್ನುವ ಆಲೋಚನೆ ಬರುತ್ತದೆ. ಸುಂದರವಾಗಿರುವ ಯುವಕನಿಂದಾಗಿ ತಮ್ಮನ್ನು ತ್ಯಜಿಸುತ್ತಾಳೆ ಎನ್ನುವ ಭಾವನೆ ಹೆಚ್ಚಿನ ಪುರುಷರಲ್ಲಿ ಮೂಡುತ್ತದೆ.

ಫೇಸ್ ಬುಕ್ ಪೋಸ್ಟ್‌ಗಳನ್ನು ಪರಿಶೀಲಿಸುವುದು

ಫೇಸ್ ಬುಕ್ ಪೋಸ್ಟ್‌ಗಳನ್ನು ಪರಿಶೀಲಿಸುವುದು

ಸಾಮಾಜಿಕ ಜಾಲತಾಣದಲ್ಲಿ ನೀವು ಯಾವುದೇ ಪೋಸ್ಟ್ ಅಥವಾ ಚಿತ್ರ ಹಾಕಿದಾಗ ಅದನ್ನು ನಿಮ್ಮ ಸಂಗಾತಿ ಲೈಕ್ ಮಾಡಬೇಕೆಂದು ಬಯಸುತ್ತೀರಿ. ಆದರೆ ಆಕೆ ಮಾಡುವುದಿಲ್ಲ. ಇದರಿಂದ ನಿಮ್ಮ ನಿದ್ರೆ ಕೆಡುತ್ತದೆ. ಈ ಪೋಸ್ಟ್ ಅನ್ನು ಆಕೆ ಕಡೆಗಣಿಸಲು ಕಾರಣವೇನೆಂದು ನೀವು ಚಿಂತಿಸುತ್ತಾ ಇರುತ್ತೀರಿ.

ಟ್ಯಾಗ್ ಮಾಡದೆ ಇದ್ದರೆ ಆಸಕ್ತಿ ಕಡಿಮೆಯಾಗಿದೆ ಎಂದು ಯೋಚನೆ

ಟ್ಯಾಗ್ ಮಾಡದೆ ಇದ್ದರೆ ಆಸಕ್ತಿ ಕಡಿಮೆಯಾಗಿದೆ ಎಂದು ಯೋಚನೆ

ಸಂಗಾತಿಯ ಪೋಸ್ಟ್‌ಗಳನ್ನು ನೋಡಿದಾಗ ಅದರಲ್ಲಿ ಹೆಚ್ಚಿನವರನ್ನು ಟ್ಯಾಗ್ ಮಾಡಿರುತ್ತಾರೆ. ಆದರೆ ನಿಮ್ಮನ್ನು ಟ್ಯಾಗ್ ಮಾಡಿರಲ್ಲ. ಇದರ ಬಗ್ಗೆ ರಾತ್ರಿಯಿಡಿ ನಿಮಗೆ ಚಿಂತೆಯಾಗುವುದು.

ಯಾವ ಬಟ್ಟೆ ಧರಿಸಬೇಕೆಂಬ ಬಗ್ಗೆ ಚಿಂತೆ

ಯಾವ ಬಟ್ಟೆ ಧರಿಸಬೇಕೆಂಬ ಬಗ್ಗೆ ಚಿಂತೆ

ಪ್ರತಿಯೊಂದು ಡೇಟ್ ನ ಮೊದಲು ಗಂಟೆಗಟ್ಟಲೆ ನೀವು ಧರಿಸುವ ಬಟ್ಟೆಯ ಬಗ್ಗೆ ಯೋಚನೆ ಮಾಡುತ್ತಾ ಇರುವುದು.

ಗೂಢಾರ್ಥ ಹುಡುಕುವುದು!

ಗೂಢಾರ್ಥ ಹುಡುಕುವುದು!

ನಿಮ್ಮ ಸಂಗಾತಿಯು ಹೇಳುವಂತಹ ಪ್ರತಿಯೊಂದು ಪದವು ನಿಮ್ಮಲ್ಲಿ ತಲ್ಲಣ ಉಂಟು ಮಾಡುವುದು ಮತ್ತು ಆಕೆ ಹೀಗೆ ಯಾಕೆ ಹೇಳಿದ ಅಥವಾ ಹೇಳಿದಳು ಎಂದು ಯೋಚನೆ ಮಾಡುವುದು.

ನೃತ್ಯ ತರಗತಿಗಳು

ನೃತ್ಯ ತರಗತಿಗಳು

ನಿಮ್ಮ ಸಂಗಾತಿಯು ನೃತ್ಯ ತರಗತಿಗಳಿಗೆ ಸೇರಿಕೊಂಡಿದ್ದೇನೆ ಎಂದು ಹೇಳಿದಾಗ, ಆಕೆ ನಾಲ್ಕು ಮಂದಿ ಹುಡುಗರ ಜತೆಗೆ ನೃತ್ಯ ತರಗತಿಯಲ್ಲಿ ನೃತ್ಯ ಮಾಡುವ ಬಗ್ಗೆ ನೀವು ಯೋಚಿಸುತ್ತೀರಿ. ಆದರೆ ಆಕೆ ಮಾತ್ರ ಹುಡುಗಿಯರ ನೃತ್ಯ ತರಗತಿಗೆ ಸೇರಿರುವುದು. ಯೋಚನೆ ಮಾಡಬೇಡಿ. ನೀವು ಆರಾಮವಾಗಿರಿ. ಎಲ್ಲವೂ ಸರಿಯಾಗಿದೆ.

English summary

Signs That You Think Too Much!

Over thinking could ruin your life. Over thinking or analysing could cause analysis paralysis. This could ruin your human relationships as people may get fed up of convincing you and assuring you. Even when everything is alright, your worries trouble you if you over think. Of course, you don't need to blame yourself for this quality. Everyone may overt think in certain tense situations in life. But if it happens always, then it is a cause of a concern both for you and your partner. Here are some signs that you think too much!
Subscribe Newsletter