ಸಪ್ತಪದಿ: ಪತಿ-ಪತ್ನಿ ಜೊತೆಯಾಗಿ ಇಡುವ ಈ 7 ಹೆಜ್ಜೆಗಳ ಮಹತ್ವ

Posted By: hemanth
Subscribe to Boldsky

ಸಪ್ತಪದಿ...ಇದು ಸಪ್ತಪದಿ...ಏಳೇನು ಜನ್ಮಗಳ ಅನುಬಂಧ ಎಂದು ಡಾ. ರಾಜ್ ಅವರು ಹಾಡಿರುವುದನ್ನು ಕೇಳಿದ್ದೀರಿ. ಮದುವೆಯಲ್ಲಿ ವಧು ಹಾಗೂ ವರ ಮದುವೆಯ ಸಂದರ್ಭ ಸಪ್ತಪದಿಯನ್ನು ತುಳಿಯುತ್ತಾರೆ. ಹಿಂದೂ ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ. ಹೌದು, ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿ ಕೂಡ ಸಪ್ತಪದಿ ತುಳಿಯಬೇಕು. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿ ತುಳಿಯುತ್ತಾರೆ.

ಆದರೆ ಇದರ ಮಹತ್ವ ಹಾಗೂ ಸರಿಯಾದ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಸುತ್ತಿಗೂ ಮಹತ್ವವಿದೆ. ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಪ್ತಪದಿಯ ಮಹತ್ವ ಅರಿತುಕೊಳ್ಳುವುದು ಅತೀ ಅಗತ್ಯ. ಸಪ್ತಪದಿಯ ಅರ್ಥ ಹಾಗೂ ಮಹತ್ವ ತಿಳಿದುಕೊಂಡು ಉಳಿದವರು ಇದನ್ನು ತಿಳಿಯಲು ಶೇರ್ ಮಾಡಿ...

ಮೊದಲ ಸುತ್ತು

ಮೊದಲ ಸುತ್ತು

ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ ಮಾಡಿಕೊಳ್ಳುತ್ತಾರೆ. ವರನು ವಧುವಿನಿಂದ ಊಟದ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ.

ಎರಡನೇ ಸುತ್ತು

ಎರಡನೇ ಸುತ್ತು

ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ. ಈ ಮಾತನ್ನು ಸಂತೋಷದಿಂದ ಒಪ್ಪಿಕೊಳ್ಳುವ ವಧು, ವರನಿಂದ ಕೇವಲ ಪ್ರೀತಿಯನ್ನು ಬಯಸುತ್ತಾಳೆ.

ಮೂರನೇ ಸುತ್ತು

ಮೂರನೇ ಸುತ್ತು

ಜತೆಯಾಗಿರಲು ಮತ್ತು ಬೆಳೆಯಲು ಒಳ್ಳೆಯ ಸಂಪತ್ತು ಮತ್ತು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಪರಪುರುಷನು ತನ್ನ ಗಂಡನಿಗೆ ದ್ವೀತಿಯನೆಂದು ವಧು ಪ್ರತಿಜ್ಞೆ ಮಾಡುತ್ತಾಳೆ. ಇದು ಕೇವಲ ವಧುವಿಗೆ ಮಾತ್ರ ಯಾಕೆ ಎನ್ನುವುದು ನಮಗೆ ಅಚ್ಚರಿ ಮೂಡಿಸಿದೆ.

ನಾಲ್ಕನೇ ಸುತ್ತು

ನಾಲ್ಕನೇ ಸುತ್ತು

ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ಬೇಡಿಕೊಳ್ಳುವರು. ದಂಪತಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಯೊಬ್ಬರ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ತಿಳಿದುಕೊಳ್ಳುವರು.

ಐದನೇ ಸುತ್ತು

ಐದನೇ ಸುತ್ತು

ಸದ್ಗುಣ ಹಾಗು ವಿಧೇಯಕವಾಗಿರುವ ಮಕ್ಕಳು ತಮಗೆ ಹುಟ್ಟಲಿ ಎಂದು ಐದನೇ ಸುತ್ತಿನಲ್ಲಿ ಬೇಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಜೀವನವು ಯಾವಾಗಲೂ ಸಂತೋಷಮಯವಾಗಿ ಏಕಾಂಗಿ ಎನ್ನುವ ಭಾವನೆ ಮೂಡದಿರಲಿ ಎನ್ನುವುದು ಇದರರ್ಥ.

ಆರನೇ ಸುತ್ತು

ಆರನೇ ಸುತ್ತು

ಈ ಸುತ್ತಿನಲ್ಲಿ ವಧು ಹಾಗೂ ವರ ಆರೋಗ್ಯಕರ ಮತ್ತು ಕಾಯಿಲೆಮುಕ್ತ ಜೀವನ ಸಿಗಲಿ ಎಂದು ಬೇಡುತ್ತಾರೆ. ಜೀವನ ಸುಖಮಯವಾಗಲು ಪರಸ್ಪರರ ನೋವು ಹಾಗೂ ನಲಿವನ್ನು ಹಂಚಿಕೊಳ್ಳುವುದಾಗಿ ಮಾತು ಕೊಡುತ್ತಾರೆ.

ಏಳನೇ ಹಾಗೂ ಅಂತಿಮ ಸುತ್ತು

ಏಳನೇ ಹಾಗೂ ಅಂತಿಮ ಸುತ್ತು

ಏಳನೇ ಸುತ್ತು ಅವರಿಬ್ಬರು ಪವಿತ್ರ ಬಂಧನದಲ್ಲಿರುವುದನ್ನು ತಿಳಿಸುವುದು. ಜೀವನದ ಅಂತ್ಯದ ತನಕ ಅವರಿಬ್ಬರು ಜತೆಯಾಗಿರುವರು ಎಂದು ಈ ಸುತ್ತು ಹೇಳುತ್ತದೆ. ದಂಪತಿ ಪರಸ್ಪರರನ್ನು ಗೌರವಿಸುವರು ಮತ್ತು ಪೋಷಿಸುವರು. ತಮ್ಮ ಪ್ರೀತಿಯು ಸಮಯಕ್ಕೆ ಅನುಗುಣವಾಗಿ ಪ್ರೌಢವಾಗಲಿ ಎಂದು ಬೇಡಿಕೊಳ್ಳುವರು.

ಸಿಕ್ಖರ ನಾಲ್ಕು ಸುತ್ತುಗಳ ಮಹತ್ವ

ಸಿಕ್ಖರ ನಾಲ್ಕು ಸುತ್ತುಗಳ ಮಹತ್ವ

ಮೊದಲ ಸುತ್ತಿನಲ್ಲಿ ಪತಿ ಹಾಗೂ ಪತ್ನಿ ಧರ್ಮದಲ್ಲಿರುವುದಾಗಿ ಹೇಳಿಕೊಳ್ಳುವರು.ಅಹಂ ಹಾಗೂ ಭೌತಿಕ ವಸ್ತುಗಳನ್ನು ದೂರವಿಡುವುದು. ಸತ್ಯದ ಹುಡುಕಾಟ, ಮನಸ್ಸಿನ ಶಾಂತಿ ಹಾಗೂ ಸಮತೋಲನ ಉಳಿಸಿಕೊಳ್ಳುವುದು. ದೇವರ ಭಕ್ತರಾಗಿರುವುದಾಗಿ ಪ್ರತಿಯೊಂದು ಸುತ್ತಿನಲ್ಲೂ ಹೇಳಿಕೊಳ್ಳುವರು.

For Quick Alerts
ALLOW NOTIFICATIONS
For Daily Alerts

    English summary

    Know The Significance And Meaning Of Saptpadi

    Saat phere are the 7 vows that a bride and groom take around agni to bring their marriage ceremony to completion. The phere ceremony is the single most important thing in a Hindu wedding, but very few people know about the vows taken while making these rounds around fire, let alone their significance! With each phera, the couple makes a promise, with agni as their witness
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more