ಹೆಂಡತಿಯ ಮೇಲೆ ರೇಗುವ ಪತಿ! ಹೀಗಾದರೆ ಹೇಗೆ ಹೇಳಿ?

By: Deepu
Subscribe to Boldsky

ಪ್ರೀತಿಸಿ ಮದುವೆಯಾದ ಬಳಿಕ ಏನಾದರೊಂದು ಸಮಸ್ಯೆಗಳು ಬಂದು ಇಬ್ಬರು ದೂರವಾದ ಬಗ್ಗೆ ನಾವು ಎಷ್ಟೋ ಸಲ ಕೇಳಿದ್ದೇವೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಪ್ರೀತಿಸುವಾಗ ಕೆಲವರು ತಮ್ಮ ನೈಜ ಗುಣಗಳನ್ನು ಬಚ್ಚಿಟ್ಟುಕೊಂಡು ಬೇರೆಯೇ ಮುಖವಾಡ ಹಾಕಿಕೊಂಡು ಪ್ರೀತಿಸಿ ಬಳಿಕ ಮದುವೆಯಾಗುತ್ತಾರೆ. 

ಮದುವೆ ಬಳಿಕ ತನ್ನ ಪತ್ನಿಯನ್ನು ಹದ್ದಬಸ್ತಿನಲ್ಲಿಡಬೇಕೆಂದು ಬಯಸುತ್ತಾರೆ. ಕೆಲವರು ಇದರಲ್ಲಿ ಯಶಸ್ವಿಯಾದರೆ ಇನ್ನು ಕೆಲವರ ಜೀವನವೇ ಹೋಳಾಗಿ ಹೋಗುತ್ತದೆ. ಇನ್ನು ಕೆಲವರು ಮದುವೆ ಬಳಿಕ ತಮ್ಮ ಕಚೇರಿಯ ಸಮಸ್ಯೆಗಳ ಒತ್ತಡವನ್ನು ಪತ್ನಿಯ ಮೇಲೆ ರೇಗಾಡುವ ಮೂಲಕ ತೆಗೆಯುತ್ತಾರೆ.

ಇಂತಹ ಪರಿಸ್ಥಿತಿ ಕೆಲವೊಂದು ಮಾನಸಿಕ ಸಮಸ್ಯೆಗೆ ಕೂಡ ಕಾರಣವಾಗಬಹುದು. ನಿಮ್ಮ ಗಂಡ ಒಳ್ಳೆಯವನೇ ಆಥವಾ ಆತನನ್ನು ಸಹಿಸಲು ಅಸಾಧ್ಯವೇ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ, ಮುಂದೆ ಓದಿ....  

ಆಜ್ಞೆ vs ಮನವಿ

ಆಜ್ಞೆ vs ಮನವಿ

ಆತನಿಗೆ ಏನಾದರೂ ಬೇಕಿದ್ದರೆ ಆತ ನಿಮಗೆ ಆಜ್ಞೆ ಮಾಡುತ್ತಿದ್ದರೆ ಇದು ತಪ್ಪು. ಯಾಕೆಂದರೆ ಒಳ್ಳೆಯ ಪತಿ ತನಗೆ ಬೇಕಿರುವುದರ ಬಗ್ಗೆ ಮನವಿ ಮಾಡುತ್ತಾನೆ.

ದೂರುವುದು vs ಅವಲೋಕನ

ದೂರುವುದು vs ಅವಲೋಕನ

ನಿಮ್ಮ ಎಲ್ಲಾ ವೈಫಲ್ಯಗಳನ್ನು ಆತ ದೂರುತ್ತಾ ಇರುತ್ತಾನೆಯಾ? ಒಳ್ಳೆಯ ಪತಿಯು ದೂರುವ ಬದಲು ತಪ್ಪು ಎಲ್ಲಿ ಆಗಿದೆ ಎಂದು ತಿಳಿದುಕೊಳ್ಳಲು ಪರಿಸ್ಥಿತಿಯನ್ನು ಅವಲೋಕಿಸುತ್ತಾನೆ. ಇದರ ಬಗ್ಗೆ ಏನು ಮಾಡಬೇಕೆಂದು ಯೋಚಿಸುತ್ತಾನೆ.

ಅವಾಸ್ತವಿಕ ನಿರೀಕ್ಷೆಗಳು vs ವಾಸ್ತವಿಕ ಸಂಬಂಧದ ಗುರಿ

ಅವಾಸ್ತವಿಕ ನಿರೀಕ್ಷೆಗಳು vs ವಾಸ್ತವಿಕ ಸಂಬಂಧದ ಗುರಿ

ತನ್ನ ಸಂಗಾತಿಯಿಂದ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಂಡು ತಾನು ಏನೂ ಮಾಡದೆ ಇದ್ದರೆ ಆತನನ್ನು ಸಹಿಸಿಕೊಳ್ಳುವುದು ಅಸಾಧ್ಯ. ಒಳ್ಳೆಯ ಪತಿ ವಾಸ್ತವಿಕ ಗುರಿಯನ್ನು ಇಟ್ಟುಕೊಂಡು ತನ್ನ ಸಂಗಾತಿ ಜತೆ ಸೇರಿ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಬೆದರಿಕೆ vs ಪ್ರೇರಣೆ

ಬೆದರಿಕೆ vs ಪ್ರೇರಣೆ

ಆತ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾನೆಯಾ ಆಥವಾ ನೀವು ಗೌರವಿಸಬೇಕೆಂದು ಬಯಸುತ್ತಾನೆಯಾ? ಅಥವಾ ನಿಮ್ಮ ಶಕ್ತಿ ಏನೆಂದು ತಿಳಿಯಲು ಆತ ನಿಮಗೆ ಪ್ರೇರಣೆ ನೀಡುತ್ತಿದ್ದಾನೆಯಾ? ಪತಿಯಾದವ ತನ್ನ ಸಂಗಾತಿಗೆ ಪ್ರೀತಿ ತೋರಿಸಬೇಕು. ಅಧಿಕಾರ ದರ್ಪ ತೋರಿಸುವುದಲ್ಲ.

ಗೊಂದಲಮಯ vs ಸ್ವೇಚ್ಛೆ

ಗೊಂದಲಮಯ vs ಸ್ವೇಚ್ಛೆ

ನಿಮ್ಮ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸುತ್ತಾ ನಿಮ್ಮನ್ನು ಟೀಕಿಸುವ ಅಥವಾ ತಪ್ಪನ್ನು ಹುಡುಕುವ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾನೆಯಾ? ಅಥವಾ ನಿಮ್ಮ ಮೇಲೆ ನಂಬಿಕೆಯನ್ನಿಟ್ಟು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾನೆಯಾ?

ಮಾತನಾಡುವುದು vs ಆಲಿಸುವುದು

ಮಾತನಾಡುವುದು vs ಆಲಿಸುವುದು

ನಿಮ್ಮ ಮೇಲೆ ಅಧಿಕಾರ ಸ್ಥಾಪಿಸಲು ಯಾವಾಗಲೂ ಆತ ಮಾತನಾಡುತ್ತಾ ಇರುತ್ತಾನೆಯಾ? ಒಳ್ಳೆಯ ಪತಿಯು ಕಡಿಮೆ ಮಾತನಾಡಿ ಹೆಚ್ಚು ಆಲಿಸಿ ನಿಮ್ಮ ಅಗತ್ಯತೆಗಳನ್ನು ತಿಳಿದುಕೊಳ್ಳುತ್ತಾನೆ.

 
English summary

Bad Husband Qualities

This way, knowingly or unknowingly many personality disorders develop and surface in human relationships. So, here are some differences to know whether your husband is a good one or an unbearable one.
Story first published: Wednesday, January 25, 2017, 23:33 [IST]
Please Wait while comments are loading...
Subscribe Newsletter