For Quick Alerts
ALLOW NOTIFICATIONS  
For Daily Alerts

ಮದುವೆಯಾಗಿ ಗಂಡನ ಮನೆಗೆ ಕಾಲಿಡುವ ಮುನ್ನ....

By Deepu
|

ಮದುವೆ ಏಳೇಳು ಜನ್ಮಗಳ ಅನುಬಂಧ, ವಧು ಮತ್ತು ವರನ ಸಂಬಂಧವನ್ನು ದೇವರೇ ನಿರ್ಧರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ವರ ಮತ್ತು ವಧು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದ ಬಳಿಕ ಮದುವೆ ಕಾರ್ಯಗಳು ನಡೆಯುತ್ತದೆ. ಮದುವೆಯು ಮುಗಿದು ಗ್ರಹಸ್ಥಾಶ್ರಮಕ್ಕೆ ಕಾಲಿಡುವ ವರ ಮತ್ತು ಮಧುವಿಗೆ ಹೊಸ ಜೀವನ ಆರಂಭಿಸುವ ತವಕ. ಅದರಲ್ಲೂ ವಧು ಮಾತ್ರ ಹುಟ್ಟಿನಿಂದ ಬೆಳೆದು ಬಂದ ಮನೆ, ತಂದೆ-ತಾಯಿ, ಸೋದರ-ಸೋದರಿಯನ್ನು ಬಿಟ್ಟು ಬಂದು, ಗಂಡನ ಮನೆಯಲ್ಲಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಹುಡುಗ ನೋಡೋಕೆ ಬಂದಾಗ ತಯಾರಾಗಿರೋದು ಹೇಗೆ?

ಮದುವೆಯೆನ್ನುವುದು ಹುಡುಗಿಗೆ ಹೊಸ ಜೀವನದ ಆರಂಭ. ಹೊಸ ಕುಟುಂಬದೊಂದಿಗೆ ಬೆರೆಯುವಂತಹ ಹುಡುಗಿ ತುಂಬಾ ತಾಳ್ಮೆ ಮತ್ತು ಧೈರ್ಯವನ್ನು ಹೊಂದಿರಬೇಕು. ಆಕೆ ಧನಾತ್ಮಕವಾಗಿದ್ದರೆ ಮಾತ್ರ ಜೀವನ ಒಳ್ಳೆಯ ರೀತಿ ಸಾಗಬಹುದು. ಇಲ್ಲವೆಂದಾದಲ್ಲಿ ಬಿರುಕು ಮೂಡುವುದು ಖಚಿತ. ಹಲವು ಹೊಂದಾಣಿಕೆ, ಬದಲಾವಣೆ ಮತ್ತು ತ್ಯಾಗ ಮಾಡಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಜೀವನ ಸುಖಕರವಾಗಿರುತ್ತದೆ. ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್

ಹೊಸ ಜೀವನವನ್ನು ಆರಂಭಿಸಲು ಹೊರಟಿರುವ ಹುಡುಗಿಯರಿಗೆ ಬೋಲ್ಡ್ ಸ್ಕೈ ಇಲ್ಲಿ ಸಲಹೆಗಳನ್ನು ನೀಡಿದೆ. ಇದನ್ನು ಪಾಲಿಸಿಕೊಂಡು ಹೋದರೆ ಪತಿಯೊಂದಿಗೆ ಜೀವನ ಸಂತೋಷವಾಗಿ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪತಿಯ ಜೀವನ ಮತ್ತು ಆತನ ಕುಟುಂಬದೊಂದಿಗೆ ಹೊಂದಿಕೊಳ್ಳಲು ನೀವು ಪಾಲಿಸಬೇಕಾದ ಸೂತ್ರಗಳು ಇಲ್ಲಿವೆ.....

ಕುಟುಂಬದ ಅಧ್ಯಯನ ಮಾಡಿ

ಕುಟುಂಬದ ಅಧ್ಯಯನ ಮಾಡಿ

ಮದುವೆಗೆ ಮೊದಲು ನೀವು ಹುಡುಗನ ಕುಟುಂಬದ ಬಗ್ಗೆ ಸ್ವಲ್ಪ ಮಟ್ಟಿಗೆ ಅಧ್ಯಯನ ಮಾಡಿಕೊಳ್ಳಿ. ಮಹಿಳೆಯಾಗಿ ನೀವು ಆ ಕುಟುಂಬದ ಸದಸ್ಯರ ಬೇಕುಬೇಡಗಳನ್ನು ಅರಿತುಕೊಂಡರೆ ಮುಂದೆ ಎಲ್ಲವೂ ಸುಗಮವಾಗುವುದು.

ಹೊಸ ಜೀವನವನ್ನು ಅಳವಡಿಸಿಕೊಳ್ಳಿ

ಹೊಸ ಜೀವನವನ್ನು ಅಳವಡಿಸಿಕೊಳ್ಳಿ

ಹೊಂದಾಣಿಕೆ ಮಾಡಿಕೊಳ್ಳುವ ಬದಲು ನೀವು ಪ್ರವೇಶಿಸುವ ಹೊಸ ಮನೆಯಲ್ಲಿನ ಜೀವನವನ್ನು ಅಳವಡಿಸಿಕೊಳ್ಳಿ. ಸಣ್ಣ ಬದಲಾವಣೆ ಮಾಡಿಕೊಂಡರೆ ಜೀವನದಲ್ಲಿ ಸಂತೋಷವನ್ನು ಕಾಣಬಹುದಾಗಿದೆ.

ಸಂಬಂಧ ಬೆಳೆಸಿ

ಸಂಬಂಧ ಬೆಳೆಸಿ

ಅತ್ತೆಯ ಜತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದು ವಧುವಿಗೆ ತುಂಬಾ ಒಳ್ಳೆಯದು. ಅತ್ತೆ ಖುಷಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ.

ಮೌಲ್ಯಗಳಿಗೆ ಬೆಲೆ ಕೊಡಿ

ಮೌಲ್ಯಗಳಿಗೆ ಬೆಲೆ ಕೊಡಿ

ಹುಡುಗನ ಮನೆಗೆ ಮೊದಲ ಸಲ ಹೋದ ಬಳಿಕ ಹಠಾತ್ ಆಗಿ ನೀವು ಬದಲಾವಣೆಗಳನ್ನು ಮಾಡಲು ಹೋಗಬೇಡಿ. ಕುಟುಂಬದ ಹೊಸ ಸದಸ್ಯರಾಗಿರುವ ನೀವು ಅವರ ಮೌಲ್ಯಗಳನ್ನು ಗೌರವಿಸಬೇಕು. ಇದನ್ನು ಸಾಧಿಸಿದರೆ ನೀವು ಎಲ್ಲವನ್ನು ಗೆದ್ದಂತೆ.

ತೀರ್ಪು ನೀಡಲು ಹೋಗಬೇಡಿ

ತೀರ್ಪು ನೀಡಲು ಹೋಗಬೇಡಿ

ನೀವು ತೀರ್ಪು ನೀಡಲು ಹೋದರೆ ಅಲ್ಲಿ ಗೊಂದಲ ಉಂಟಾಗುವುದು. ಪತಿಯ ಮನೆಯಲ್ಲಿ ಹೆಚ್ಚಾಗಿ ತೀರ್ಪು ನೀಡುವಂತಹ ಕೆಲಸಕ್ಕೆ ಹೋಗಬೇಡಿ. ಹುಡುಗಿ ಕೇವಲ ಹುಡುಗನನ್ನು ಮಾತ್ರ ಮದುವೆಯಾಗಿರುವುದಿಲ್ಲ. ಆತನ ಕುಟುಂಬವನ್ನೇ ಮದುವೆಯಾಗಿರುವಂತೆ ಎನ್ನುವುದು ನೆನಪಿರಬೇಕು.

ಸಹನೂಭೂತಿಯಿರಲಿ

ಸಹನೂಭೂತಿಯಿರಲಿ

ಯಾವುದೇ ಸಂದರ್ಭದಲ್ಲಿ ವಧು ಹೊಸ ಕುಟುಂಬದ ಸದಸ್ಯರೊಂದಿಗೆ ಸಹನೂಭೂತಿಯನ್ನು ಹೊಂದಿರಬೇಕು. ಇತರ ಸದಸ್ಯರು ಮಾತಿನ ಚಕಮಕಿಗೆ ಮುಂದಾದರೂ ತಾನು ಮಾತ್ರ ಸಹನೂಭೂತಿಯನ್ನು ತೋರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary

Tips For Indian Brides To Adjust In The New Family

As long as the wedding preparations go on, the bride and the groom will look happy and content. The first year of marriage is exciting, and it is only after this, life begins. It is said that after the marriage, the bride needs to be patient and courageous, so as to adjust to the new family.
Story first published: Thursday, August 4, 2016, 20:20 [IST]
X
Desktop Bottom Promotion