For Quick Alerts
ALLOW NOTIFICATIONS  
For Daily Alerts

ಸಂಗಾತಿಯಿಂದ ದೂರವಾಗುವ ಮೊದಲು ಒಮ್ಮೆ ಯೋಚಿಸಿ....

By Manu
|

ಹೋದೆಯಾ ದೂರ ಓ ಜೊತೆಗಾರ.... ಎನ್ನುವ ಹಾಡನ್ನು ನೀವು ಕೇಳಿರಬಹುದು. ಸಿನಿಮಾಗಳಲ್ಲಿ ಪ್ರೀತಿಸುವುದು, ಮದುವೆಯಾಗುವುದು ಮತ್ತು ಡೈವೋರ್ಸ್ ಆಗುವುದು ಮಾಮಾಲಿ. ಆದರೆ ನಿಜ ಜೀವನದಲ್ಲಿ ಹೀಗೆ ಆದರೆ ಅದರಿಂದ ತುಂಬಾ ಪರಿತಪಿಸಬೇಕಾಗುತ್ತದೆ. ಪ್ರೀತಿಸಿ ಅಥವಾ ಮನೆಯವರು ನೋಡಿದ ಸಂಬಂಧವನ್ನು ಒಪ್ಪಿಕೊಂಡು ಮದುವೆಯಾಗಿರುತ್ತಾರೆ.

ಮದುವೆಯಾಗಿ ಕೆಲವು ಸಮಯ ಸಂಸಾರವು ಒಳ್ಳೆಯ ರೀತಿಯಲ್ಲಿ ಸಾಗುತ್ತಾ ಇರುತ್ತದೆ. ಪರಸ್ಪರರಲ್ಲಿ ಹೊಂದಾಣಿಕೆಯು ಇರುತ್ತದೆ. ಎರಡು ವರ್ಷ ಕಳೆಯುತ್ತಿರುವಂತೆ ಯಾವುದೋ ವಿಷಯಕ್ಕೆ ಪರಸ್ಪರರಲ್ಲಿ ಜಗಳವಾಗುತ್ತದೆ. ಯಾವುದೇ ಸಂಸಾರವಾಗಿರಲಿ ಜಗಳಗಳು ಇದ್ದೇ ಇರುತ್ತದೆ. ಆದರೆ ಇದು ದಿನನಿತ್ಯವೂ ಆಗುತ್ತಲಿದ್ದರೆ ಅಲ್ಲಿ ಏನೋ ಸರಿಯಿಲ್ಲವೆನ್ನಬಹುದು. ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?

ಇಂತಹ ಸಮಯದಲ್ಲಿ ಪರಸ್ಪರರು ಬೇರೆ ಆಗುವುದು ಒಳ್ಳೆಯದು ಎನ್ನುವ ಭಾವನೆ ಮೂಡುತ್ತದೆ. ಆದರೆ ಬೇರ್ಪಡುವಾಗ ಭಾವನೆಗಳನ್ನು ದೂರ ಮಾಡುವುದು ತುಂಬಾ ಕಷ್ಟ. ತುಂಬಾ ಸಮಯದಿಂದ ನೀವು ಪ್ರೀತಿಸುವ ವ್ಯಕ್ತಿಯಿಂದ ದೂರವಾಗಬೇಕೆಂದರೆ ಅದು ತುಂಬಾ ಕಠಿಣ ಕೆಲಸ. ಸಂಬಂಧದಿಂದ ದೂರವಾಗುವ ಮೊದಲು ಕೆಲವೊಂದು ಅಂಶಗಳನ್ನು ನೀವು ತಿಳಿದುಕೊಂಡರೆ ಅದರಿಂದ ದೂರವಾಗಬೇಕೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದನ್ನು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

ದೂರವಾಗುವುದು ಸರಿಯಾ?

ದೂರವಾಗುವುದು ಸರಿಯಾ?

ಒಂದು ಕಾಲದಲ್ಲಿ ನೀವು ಅತಿಯಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ದೂರವಾಗುವುದು ಎಂದರೆ ಅದು ತುಂಬಾ ಕಠಿಣ ನಿರ್ಧಾರ. ಸಂಬಂಧದಲ್ಲಿ ಜಗಳವಾಗುವುದು ಸರಿಯಾ? ಅಥವಾ ಸರಿಯಲ್ಲವೇ ಎಂದು ತಿಳಿಯಿರಿ.

ಮೂರನೆಯವರ ಪ್ರವೇಶ ಬೇಡ

ಮೂರನೆಯವರ ಪ್ರವೇಶ ಬೇಡ

ಯಾವುದೇ ನಿರ್ಧಾರ ಸ್ವತಃ ತೆಗೆದುಕೊಳ್ಳಿ. ಬೇರೆಯವರು ನಿಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಮನಸ್ಸಿನಲ್ಲಿ ಏನಿದೆ ಮತ್ತು ನಿಮಗಿಬ್ಬರಿಗೂ ಯಾವುದು ಒಳ್ಳೆಯದು ಎಂದು ಅವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕಾಂಗಿಯಾಗಿರಿ ಮತ್ತು ಮನದ ಮಾತನ್ನು ಕೇಳಿ ನಿರ್ಧಾರ ಮಾಡಿ. ಇತರರು ಏನು ಹೇಳುತ್ತಾರೆ ಎಂದು ಎರಡನೇ ನಿರ್ಧಾರ ಮಾಡಲು ಹೋಗಬೇಡಿ.

ಯಾವುದು ಶಾಶ್ವತವಲ್ಲ

ಯಾವುದು ಶಾಶ್ವತವಲ್ಲ

ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ತಿಳಿದುಕೊಳ್ಳಿ. ಸಂಬಂಧಗಳು ಒಡೆದು ಹೋಗುತ್ತದೆ, ಡೈವೋರ್ಸ್ ಆಗುತ್ತದೆ. ಯಾವುದೂ ಕೊನೆಯ ತನಕ ಉಳಿಯಲ್ಲ. ಸಂಬಂಧ ಒಳ್ಳೆಯದಿದೆಯೆಂದು ನಿಮಗನಿಸುತ್ತಿದ್ದರೆ ಅದು ಹಾಗೆ ಮುಂದುವರಿಯಲು ಬಿಡಿ.

ಸಂತೋಷದ ಬಗ್ಗೆ ಚಿಂತಿಸಿ

ಸಂತೋಷದ ಬಗ್ಗೆ ಚಿಂತಿಸಿ

ನೀವು ಸಂಬಂಧಕ್ಕಿಂತ ಹೊರಗಡೆ ಬೇರೆ ಯಾರನ್ನಾದರೂ ಪ್ರೀತಿಸುತ್ತಾ ಇದ್ದರೆ, ಅದರಿಂದ ನಿಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದಾದರೆ ಆಗ ಮಾತುಕತೆ ನಡೆಸಿ ಸಂಬಂಧವನ್ನು ಕೊನೆಗೊಳಿಸಿ ಮುಂದೆ ಸಾಗಿ.

 ಸಮಾಜ ಬದಲಾಗುತ್ತದೆ ಎಂದುಕೊಳ್ಳಬೇಡಿ

ಸಮಾಜ ಬದಲಾಗುತ್ತದೆ ಎಂದುಕೊಳ್ಳಬೇಡಿ

ಸಮಾಜ ಯಾವತ್ತೂ ನಿಮ್ಮೊಂದಿಗೆ ಇರಲ್ಲ ಮತ್ತು ನಿಮ್ಮ ವಿರುದ್ಧವಾಗಿಯೂ ಇರಲ್ಲ. ಇದರಿಂದ ಕುಸಿದುಹೋಗಬೇಡಿ ಮತ್ತು ಖಿನ್ನತೆಗೆ ಒಳಗಾಗಬೇಡಿ. ಸಂಬಂಧದಿಂದ ಬೇರಾದ ಬಳಿಕ ಇತರ ಕೆಲವು ಕೆಲಸಗಳನ್ನು ನೀವು ಮಾಡಬೇಕಾಗಿದೆ.

ಬೇಗ ನಿರ್ಧಾರ ತೆಗೆದುಕೊಳ್ಳಿ

ಬೇಗ ನಿರ್ಧಾರ ತೆಗೆದುಕೊಳ್ಳಿ

ಸಂಬಂಧ ಮುರಿಯದಂತೆ ಇರಲು ಅಥವಾ ಒಂದು ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿಮ್ಮಲ್ಲಿ ಇರುತ್ತದೆ. ಸಂಬಂಧ ಮುರಿಯುವುದು ತುಂಬಾ ವಿಳಂಬವಾದಾಗ ಅದು ನಿಮಗೆ ಹೆಚ್ಚಿನ ನೋವು ಉಂಟು ಮಾಡುವುದು.

English summary

Things You Need To Know Before Letting Go

In this article, we are here to share details about some of the things that you need to know before you let go of the relationship. Letting go of something very dear is definitively the hardest thing to do. The heart and mind are at a constant war with each other all the time; and sometimes, one just feels like giving it all up. So, find out about the things you need to know before letting go.
X
Desktop Bottom Promotion