For Quick Alerts
ALLOW NOTIFICATIONS  
For Daily Alerts

ಅತ್ತೆಯ ಮನಗೆಲ್ಲಬೇಕೆಂದರೆ, ಸೊಸೆಯ ಗುಣ ಹೀಗಿರಬೇಕು..

By Manu
|

ಭಾರತೀಯ ಸಂಸ್ಕೃತಿಯಲ್ಲಿ ವಿದೇಶೀಯರು ಅತಿ ಹೆಚ್ಚಾಗಿ ಮೆಚ್ಚುವ ವಿಷಯವೆಂದರೆ ಭಾರತೀಯ ಮದುವೆಗಳು. ಏಕೆಂದರೆ ಪಾಶ್ಚಾತ್ಯ ದೇಶಗಳಲ್ಲಿ ವ್ಯಕ್ತಿಗಳು ತಾವೇ ತಮ್ಮ ಜೀವನಸಂಗಾತಿಯನ್ನು ಆರಿಸಿಕೊಂಡರೆ ಭಾರತದಲ್ಲಿ ಹೆಚ್ಚಾಗಿ ಇದು ಪೋಷಕರ ಜವಾಬ್ದಾರಿಯಾಗಿದೆ. ಅಂತೆಯೇ ತಮ್ಮ ಮಗನಿಗೆ ಉತ್ತಮ ವಧುವಾಗಲು ಪ್ರತಿ ಪೋಷಕರು ತಮಗೆ ಸೂಕ್ತವಾಗಬಲ್ಲ ಗುಣಗಳುಳ್ಳ ಹೆಣ್ಣನ್ನೇ ಬಯಸುತ್ತಾರೆ. ಟೀವಿಗಳಲ್ಲಿ ಬರುವ ಧಾರಾವಾಹಿಗಳಲ್ಲಂತೂ ಕೌಟುಂಬಿಕ ಕಥೆಗಳೆ ತುಂಬಿ ತುಳುಕುತ್ತಿದ್ದು ಅದರಲ್ಲಿ ಅತ್ತೆ ಸೊಸೆಯ ಪಾತ್ರಗಳೇ ಅತಿ ಹೆಚ್ಚಾಗಿ ವಿಜೃಂಭಿಸುತ್ತವೆ. ಅತ್ತೆ-ಸೊಸೆ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಸೊಸೆ ಹುಡುಕುವ ಪರಿಯನ್ನಂತೂ ಈ ಧಾರಾವಾಹಿಗಳಲ್ಲಿ ಪ್ರಮುಖ ವಿಷಯವಾಗಿ ಪ್ರಸ್ತಾಪಿಸಿ ಕಥೆಯನ್ನು ಅತಿ ರೋಚಕವಾಗಿಸಿ ತಿಂಗಳುಗಟ್ಟಲೇ ಎಳೆಯುವ ಸಾಮರ್ಥ್ಯ ಈ ಧಾರಾವಾಹಿಗಳ ಕಥೆ ಬರೆಯುವವರಿಗಿದೆ. ಅತ್ತೆಗೆ ಸಮಾಜದಲ್ಲಿ ಮನ್ನಣೆ ಇರುವ ಮನೆತನದಿಂದ ಬಂದ ಸೊಸೆಯೇ ಬೇಕಾಗಿರುತ್ತದೆ. ಸೊಸೆ ತನಗಿಂತಲೂ ಪತಿಯ ಮನೆಯವರ ಬಗ್ಗೆ ಕಾಳಜಿ ವಹಿಸುವಂತಹವಳಾಗಿರಬೇಕು, ಪತಿಯ ಇಚ್ಛೆಯಂತೆ ನಡೆಯುವವಳಾಗಿರಬೇಕು, ಈ ಮನೆಯ ರೀತಿ ನೀತಿಗಳಿಗೆ ಹೊಂದಿಕೊಂಡು ಹೋಗುವವಳಾಗಿರಬೇಕು ಎಂದೆಲ್ಲಾ ಬಯಸುತ್ತಾರೆ.

ಆದರೆ ಆಧುನೀಕರಣದ ಭರದಲ್ಲಿ ಇಂದು ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಬಹುತೇಕ ಯುವಕರು ಮದುವೆಯಾದ ತಕ್ಷಣ ಬೇರೆ ಮನೆ ಮಾಡಿಕೊಂಡು ಸ್ವತಂತ್ರ ಬದುಕು ನಡೆಸಲು ಇಚ್ಛಿಸುತ್ತಾರೆ. ಆದರೂ ಸೊಸೆಯನ್ನು ಆರಿಸುವ ವಿಷಯ ಬಂದಾಗ ಅತ್ತೆಯರೂ ತಮ್ಮ ಆಯ್ಕೆಯ ಕಟ್ಟುಪಾಡುಗಳನ್ನು ಮಾತ್ರ ಕಠಿಣವಾಗಿಯೇ ಇರಿಸುತ್ತಾರೆ. ಅತ್ತೆ-ಸೊಸೆ ಜಗಳ ನಿಮ್ಮಿಂದಲೇ ಕೊನೆಯಾಗಲಿ!

ಒಂದು ವೇಳೆ ನೀವು ನವವಧುವಾಗುವ ಹೊಸ್ತಿಲಲ್ಲಿದ್ದು ನಿಮ್ಮ ಆಯ್ಕೆಯನ್ನು ನಿಮ್ಮ ಅತ್ತೆಯಾಗುವವರು ಮಾಡುವವರಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮ ಪಾಲಿಗೆ ಆಪತ್ಬಾಂಧವನ ರೂಪ ಪಡೆಯಲಿವೆ. ಒಂದು ಆದರ್ಶ ಸೊಸೆ ಎನಿಸಿಕೊಳ್ಳಲು ನಿಮಗೆ ನೆರವಾಗಲಿವೆ. ಏಕೆಂದರೆ ಭಾರತೀಯ ವಿವಾಹವೆಂದರೆ ಒಂದು ಗಂಡು ಹೆಣ್ಣಿನ ಮಿಲನ ಮಾತ್ರವಲ್ಲ, ಎರಡು ಕುಟುಂಬಗಳ ಮಿಲನವಾಗಿದೆ. ಬನ್ನಿ ಈ ಬಗ್ಗೆ ಅಮೂಲ್ಯವಾದ ಐದು ಮಾಹಿತಿಗಳನ್ನು ಈಗ ನೋಡೋಣ...

ಹಿರಿಯರಿಗೆ ಗೌರವ ನೀಡಬೇಕು

ಹಿರಿಯರಿಗೆ ಗೌರವ ನೀಡಬೇಕು

ಅತ್ತೆಯಾಗುವವಳು ತನ್ನ ಸೊಸೆಯಾಗುವವಳು ತನ್ನ ಮನೆಯವರಿಗೆ ಅತಿ ಹೆಚ್ಚಿನ ಗೌರವ ನೀಡಬೇಕೆಂದು ಬಯಸುತ್ತಾಳೆ. ಈ ಹಿರಿಯರು ತನ್ನ ಪತಿಗೆ ಯಾವ ರೀತಿಯಿಂದ ಸಂಬಂಧಿಗಳು ಎಂದು ಅರಿಯದಿದ್ದರೂ ಸರಿ, ಸೊಸೆ ಎಲ್ಲರಿಗೂ ಪೂರ್ಣ ಗೌರವ ನೀಡಬೇಕು, ಅಗತ್ಯವಿದ್ದರೆ ಧರ್ಮ ಸಮ್ಮತ ವಿಧಿಗಳಾದ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ಇತ್ಯಾದಿಗಳನ್ನೂ ನೆರವೇರಿಸಬೇಕು ಎಂದು ಬಯಸುತ್ತಾಳೆ.

ಚೆನ್ನಾಗಿ ಅಡುಗೆ ಮಾಡಬೇಕು

ಚೆನ್ನಾಗಿ ಅಡುಗೆ ಮಾಡಬೇಕು

ಸೊಸೆಯಾಗಿ ಮನೆಗೆ ಬರುವವಳು ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತಿರಬೇಕು ಎಂದು ಅತ್ತೆ ಬಯಸುತ್ತಾಳೆ. ಅಂದರೆ ಅಡುಗೆಯ ಮೂಲಕವೇ ಪತಿಯ ಹೃದಯವನ್ನು ಗೆಲ್ಲಲು ಸಾಧ್ಯ ಎಂದು ಅತ್ತೆಯರು ಅನುಭವದಿಂದ ಅರಿತಿರುತ್ತಾರೆ. ಆದ್ದರಿಂದ ಅಡುಗೆ ಬರದೇ ಇದ್ದರೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ. ಕೆಲವಾದರೂ ಅಡುಗೆ ಮಾಡಲು ಕಲಿತುಕೊಳ್ಳಿ.

ಬೇಗ ಸುಸ್ತಾಗುವಂತಿರಬಾರದು

ಬೇಗ ಸುಸ್ತಾಗುವಂತಿರಬಾರದು

ಅತ್ತೆಯ ಮಟ್ಟಿಗೆ ಸೊಸೆ ಎಂದರೆ ಇಡಿಯ ದಿನ ಮನೆಗೆಲಸವನ್ನು ಮಾಡುವವಳಾಗಿದ್ದು ಮನೆಯ ಎಲ್ಲಾ ಕೆಲಸಗಳನ್ನು ಬಲ್ಲವಳಾಗಿರಬೇಕು. ಇದು ಪಾತ್ರೆ ತೊಳೆಯುವುದರಿಂದ ಹಿಡಿದು ಹೊಲಿಗೆ, ಸ್ವಚ್ಛಗೊಳಿಸುವಿಕೆ, ಬಟ್ಟೆ ಒಗೆಯುವುದು ಮೊದಲಾದವುಗಳನ್ನೆಲ್ಲಾ ಮಾಡಲು ಗೊತ್ತಿರಬೇಕು. ಏಕೆಂದರೆ ಇದುವರೆಗೆ ಅತ್ತೆ ಮಾಡುತ್ತಿದ್ದ ಈ ಕೆಲಸಗಳನ್ನೆಲ್ಲಾ ಮುಂದೆ ಸೊಸೆ ಮುಂದುವರೆಸಿಕೊಂಡು ಹೋಗುವ ಮೂಲಕ ಅತ್ತೆ ವಿಶ್ರಾಂತಿ ಪಡೆಯಬಹುದು ಎಂಬುದೇ ಲೆಕ್ಕಾಚಾರವಾಗಿದೆ.

ಅತ್ತೆಯನ್ನು ಪ್ರಶಂಸಿಸುವಂತಿರಬೇಕು

ಅತ್ತೆಯನ್ನು ಪ್ರಶಂಸಿಸುವಂತಿರಬೇಕು

ಅತ್ತೆ ಸೊಸೆಯರ ಜಗಳವಿಲ್ಲದ ಮನೆಯೇ ಇಲ್ಲ ಎನ್ನುತ್ತಾರೆ. ಏಕೆಂದರೆ ಸಾಮಾನ್ಯವಾಗಿ ಸೊಸೆಯಾಗಿ ಬಂದವಳು ಇಂದಿನ ದಿನಗಳಿಗೆ ಅನುಸಾರವಾಗಿ ಯೋಚಿಸುತ್ತಿದ್ದರೆ ಅತ್ತೆ ಹಿಂದಿನ ಕಾಲದ ಕಟ್ಟುಪಾಡುಗಳ ಬಗ್ಗೆಯೇ ಚಿಂತನೆ ನಡೆಸುತ್ತಿರುತ್ತಾಳೆ. ಈ ಎರಡೂ ಯೋಚನೆಗಳು ಭಿನ್ನ ದಿಕ್ಕಿನಲ್ಲಿದ್ದಷ್ಟೂ ಕಲಹ ಹೆಚ್ಚು. ಆದ್ದರಿಂದ ಇಬ್ಬರಲ್ಲೊಬ್ಬರು ತಮ್ಮ ಯೋಚನೆಗಳನ್ನು ಇನ್ನೊಬ್ಬರಿಗೆ ಅನುಗುಣವಾಗುವಂತೆ ಬದಲಿಸುವುದೇ ಉತ್ತಮ ಮಾರ್ಗ. ಈ ಕಾರ್ಯ ಸೊಸೆಯಿಂದಲೇ ಆಗಲಿ ಎಂದು ಅತ್ತೆ ಬಯಸುತ್ತಾಳೆ.

ಮನೆಯ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸಬೇಕು

ಮನೆಯ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸಬೇಕು

ಸೊಸೆಯಾಗಿ ಮನೆಗೆ ಬರುವವಳಿಂದ ಮನೆಯಲ್ಲಿರುವ ಎಲ್ಲಾ ಮಕ್ಕಳಿಗೂ ಸಮಾನವಾದ ಪ್ರೀತಿ ದೊರಕುವಂತಿರಬೇಕು ಎಂದೇ ಎಲ್ಲಾ ಅತ್ತೆಯರು ಬಯಸುತ್ತಾರೆ. ಅದರಲ್ಲೂ ಕಟ್ಟುಪಾಡುಗಳು ಹೆಚ್ಚಿರುವ ಮನೆಗೆ ಸೊಸೆಯಾಗಿ ಹೋಗುವವಳಿಗೆ ಆ ಮನೆಯ ಮಕ್ಕಳನ್ನು ಆಯಾಳಂತೆ ನೋಡಿಕೊಳ್ಳುವ ಪ್ರಮೇಯವೂ ಬರಬಹುದು. ಏಕೆಂದರೆ ಆ ಮನೆಯ ಅತ್ತೆಯರಿಗೆ ಅವರ ಮೊಮ್ಮಕ್ಕಳು ಸ್ವರ್ಗದ ದಾರಿಯಾಗಿದ್ದು ಸೊಸೆಯಾಗುವವಳಿಂದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ.


English summary

5 Things That Define An Ideal Indian Bahu

An Indian mother wants the best for her son, especially when it comes to selecting a bahu or a daughter-in-law. If you pay a close attention to sitcom serials, you will see a uniformity in the way an Indian mother-in-law behaves. Indian mother-in-laws would want to settle their son with a woman who is respectable in the society, a woman who considers the well-being of others before herself and a woman who will be able to put her life on hold for the sake of the man.
Story first published: Wednesday, March 30, 2016, 13:09 [IST]
X
Desktop Bottom Promotion