For Quick Alerts
ALLOW NOTIFICATIONS  
For Daily Alerts

ಸಂಸಾರದಲ್ಲಿ ದುಃಸ್ವಪ್ನದಂತೆ ಕಾಡುವ ವಿಚ್ಛೇದನ!

By manu
|

ಮದುವೆ ಅನ್ನೋದು ಸ್ವರ್ಗದಲ್ಲಿ ನಿರ್ಧಾರವಾಗಿರುತ್ತದೆ ಎನ್ನುವ ಮಾತಿದೆ. ಅದೇ ವಿಚ್ಛೇದನವೆನ್ನುವುದನ್ನು ಭೂಮಿ ಮೇಲೆಯೇ ನಿರ್ಧರಿತವಾಗುತ್ತದೆ! ಮದುವೆ ಎರಡು ಮನಸ್ಸು ಹಾಗೂ ದೇಹಗಳು ಒಂದಾಗುವ ಸಂಬಂಧ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಈ ಸಂಬಂಧವು ಹೆಚ್ಚಿನ ಕಾಲ ಬಾಳುವುದಿಲ್ಲ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇದೆ.

ಆದರೆ ವೈವಾಹಿಕ ಸಂಬಂಧವು ಕೊನೆಯಾಗುತ್ತಿದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅದೊಂದು ದುಸ್ವಪ್ನವಿದ್ದಂತೆ. ಮದುವೆಗಳು ನಡೆದಂತೆ ಅವುಗಳು ಮುರಿದು ಕೂಡ ಬೀಳುತ್ತದೆ ಎನ್ನುವುದು ನಿಜ. ಮದುವೆಯ ಬಂಧನವು ಕಡಿದು ಬೀಳುತ್ತಿದೆ ಎನ್ನುವ ಸೂಚನೆಯನ್ನು ನಾವು ಮೊದಲೇ ತಿಳಿದುಕೊಂಡರೆ ಆಗ ಇದನ್ನು ನಿಲ್ಲಿಸುವಂತಹ ಪ್ರಯತ್ನ ಮಾಡಬಹುದು. ಸಂಬಂಧವು ಈಗಾಗಲೇ ಹದಗೆಟ್ಟು ಹೋಗಿದ್ದರೆ ಆಗ ಅಂತಹ ಸಂಬಂಧವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

 Signs Your Marriage Is Going To End

ಹೆಚ್ಚಿನ ಸಂದರ್ಭಗಳಲ್ಲಿ ಮದುವೆಯ ಬಂಧನದ ಕೊಂಡಿಯು ಒಂದೊಂದಾಗಿ ಕಳಚಿ ಬೀಳಲು ಆರಂಭಿಸಿದೆ ಎನ್ನುವ ಬಗ್ಗೆ ಹಲವಾರು ಸುಳಿವುಗಳು ಸಿಗಲು ಆರಂಭಿಸುತ್ತದೆ. ಆದರೆ ದಂಪತಿ ಇದನ್ನು ಅರಿತುಕೊಳ್ಳಲು ವಿಫಲರಾಗುತ್ತಾರೆ. ಮದುವೆಯ ಸಂಬಂಧ ಕೊನೆಯಾಗುತ್ತಿದೆ ಎನ್ನುವುದು ಎಚ್ಚರಿಕೆಯ ಕರೆಗಂಟೆ.

ಕೆಲವೊಂದು ಸಂದರ್ಭಗಳಲ್ಲಿ ಇದನ್ನು ಸ್ವೀಕರಿಸಿ ಮುಂದಿನ ಬದುಕನ್ನು ರೂಪಿಸಿಕೊಳ್ಳುವುದು ಅನಿವಾರ್ಯ. ಪ್ರತಿಯೊಂದು ಮದುವೆ ಕೂಡ ಭಿನ್ನವಾಗಿರುವ ಕಾರಣ ಅದರ ಎಚ್ಚರಿಕೆಯ ಸೂಚನೆಗಳು ಕೂಡ ಭಿನ್ನವಾಗಿರುತ್ತದೆ. ಮುರಿದು ಬಿದ್ದಿರುವ ಮದುವೆಯ ಸಂಬಂಧಗಳನ್ನು ತುಂಬಾ ಹತ್ತಿರದಿಂದ ಗಮನಿಸಿದಾಗ ಕೆಲವೊಂದು ಸೂಚನೆಗಳು ಸಮಾನವೆಂದು ಕಂಡುಬಂದಿದೆ. ವಿಚ್ಛೇದನಕ್ಕೆ ಕಾರಣವಾಗುವ ಆರು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ವಿಚ್ಛೇದನವೇನೋ ಆಯಿತು? ಮುಂದಿನ ಜೀವನ ಹೇಗೆ?

ಸಮಾನತೆ ಇಲ್ಲದಿರುವುದು
ಮದುವೆ ಎನ್ನುವುದು ಇಬ್ಬರ ನಡುವಿನ ಸಂಬಂಧ ಮತ್ತು ಅವರಿಬ್ಬರು ಜತೆಯಾಗಿದ್ದುಕೊಂಡು ಕೆಲಸ ಮಾಡಿ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ ಇಬ್ಬರಲ್ಲಿ ಯಾರಾದರೂ ಒಬ್ಬರು ಹೊಂದಾಣಿಕೆ ಮಾಡಿಕೊಳ್ಳದೆ ತಾನು ನಡೆದದ್ದೇ ದಾರಿ ಎಂದರೆ ಆಗ ಸಮಸ್ಯೆಗಳು ಶುರುವಾಗುತ್ತದೆ. ಮದುವೆಯು ವಿಚ್ಛೇದನದಲ್ಲಿ ಕೊನೆಗೊಳ್ಳುವ ಆರು ಸೂಚನೆಗಳಲ್ಲಿ ಇದು ಪ್ರಮುಖವಾಗಿರುವಂತದ್ದಾಗಿದೆ.

ಹಣದ ಮಾತುಕತೆ
ಹಣದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಇದು ನಿಮ್ಮ ಮದುವೆಯ ಜೀವನದಲ್ಲಿ ಬೇಗ ಬಿರುಕನ್ನು ಉಂಟು ಮಾಡಬಹುದು. ನಿಮ್ಮ ಮದುವೆಯ ಸಂಬಂಧದಲ್ಲಿ ಹಣದ ವಿಚಾರವಿದ್ದರೆ ಅಥವಾ ಇದರ ಸೂಚನೆಗಳು ಕಂಡುಬಂದರೆ ಆಗ ನೀವು ಸಮಸ್ಯೆಗೆ ಸಿಲುಕಿದ್ದೀರಿ ಎಂದರ್ಥ. ಇದನ್ನು ಆದಷ್ಟು ಬೇಗನೆ ನಿವಾರಿಸಿದರೆ ಆಗ ಮುಂದೆ ಆಗುವಂತಹ ಅನಾಹುತವನ್ನು ತಪ್ಪಿಸಬಹುದಾಗಿದೆ.

ಅವಸರದ ನಿರ್ಧಾರ
ನಿಮ್ಮ ಮದುವೆಯು ತುಂಬಾ ಆತುರಾತುರವಾಗಿ ಮತ್ತು ಹೆಚ್ಚು ಚಿಂತಿಸದೆ ತೆಗೆದುಕೊಂಡು ನಿರ್ಧಾರವಾಗಿದೆಯಾ? ಹಾಗಿದ್ದರೆ ನೀವು ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿರುವುದು ಅಗತ್ಯ. ಯಾಕೆಂದರೆ ಇಂತಹ ಮದುವೆಗಳು ಹೆಚ್ಚಾಗಿ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಅಮೆರಿಕಾದ ಅಧ್ಯಯನವೊಂದು ಹೇಳಿದೆ. ಮದುವೆ ಎನ್ನುವುದು ಜೀವನದ ಅತೀ ಮುಖ್ಯ ಅಂಗವಾಗಿರುವ ಕಾರಣ ನೀವು ಇದರ ಬಗ್ಗೆ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಆಗ ಮುಂದೆ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ. ವಿಚ್ಛೇದನದಿಂದ ಕಮರದಿರಲಿ ಮಕ್ಕಳ ಬಾಳು

ಗೌಪ್ಯತೆಗಳು
ಕೆಲವು ಗುಟ್ಟಿನ ವಿಚಾರಗಳು ಮದುವೆಗೆ ಒಳ್ಳೆಯದಾದರೂ ಕೆಲವೊಂದು ನಿಮ್ಮ ವಿವಾಹಿತ ಜೀವನವನ್ನೇ ಹಾಳುಗೆಡವಿ ಬಿಡಬಹುದು. ಈ ಗುಟ್ಟುಗಳನ್ನು ತಿಳಿದುಕೊಂಡು ಅದನ್ನು ತಿಳಿಸಿಬಿಡುವುದು ಉತ್ತಮ. ಕೆಲವು ಗುಟ್ಟುಗಳು ನಿಮ್ಮ ವೈವಾಹಿಕ ಜೀವನವನ್ನು ಹಾಳು ಮಾಡುತ್ತದೆ ಎಂದು ನಿಮಗೆ ಅರಿವಾಗುತ್ತಿದ್ದರೆ ಆಗ ಅಂತಹ ಗುಟ್ಟುಗಳನ್ನು ಬಹಿರಂಗಪಡಿಸುವುದು ಉತ್ತಮ. ಕೆಲವು ಗೌಪ್ಯತೆಗಳನ್ನು ಹೊರಗೆಡಹಿದರೆ ಒಳ್ಳೆಯದು.

English summary

Signs Your Marriage Is Going To End

Recognizing the signs your marriage is going to end is like a nightmare, a thought that no one likes to bring to their mind. However, the fact remains that as often as marriages happen, they break as well. It is always healthier to recognize these signs early so that necessary actions could be taken to prevent a lonely road for oneself. Also, it would give time to certain people to save the marriage while it can be.
Story first published: Wednesday, August 12, 2015, 20:09 [IST]
X
Desktop Bottom Promotion