For Quick Alerts
ALLOW NOTIFICATIONS  
For Daily Alerts

ಕೃಷ್ಣ ರಾಧೆಯನ್ನು ಮದುವೆಯಾಗಿಲ್ಲ, ಏಕೆ?

|

ಪವಿತ್ರವಾದ ಪ್ರೇಮವೆಂದಾಗ ಮೊದಲು ನೆನಪಿಗೆ ಬರುವ ಜೋಡಿ ರಾಧೆ-ಕೃಷ್ಣ. ಎಲ್ಲಾ ಲೌಕಿಕ ಸುಖಗಳನ್ನು ಮೀರಿದ ಆಧ್ಯಾತ್ಮಕವಾದ ಪ್ರೇಮ ಅವರದ್ದು. ಪುರಾಣದಲ್ಲಿ ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಇದ್ದರು ಎಂಬ ಕತೆಯಿದೆ. ಆದರೆ ಕೃಷ್ಣನ ಪ್ರೇಯಸಿ ಅಂತ ಬಂದಾಗ ಅಲ್ಲಿ ರಾಧೆಗೆ ಮಾತ್ರ ಅಗ್ರ ಸ್ಥಾನ.

ಕೃಷ್ಣ, ರಾಧೆಯನ್ನು ತುಂಬಾ ಪ್ರೀತಿಸುತ್ತಿದ್ದ ಕೃಷ್ಣನ ಎಷ್ಟೋ ಕಾರ್ಯಗಳಿಗೆ ರಾಧೆ ಸ್ಪೂರ್ತಿಯಾಗಿದ್ದಳು, ಆದರೂ ಏಕೆ ಕೃಷ್ಣ ರಾಧೆಯನ್ನು ಮದುವೆಯಾಗಿಲ್ಲ ಎಂಬ ಪ್ರಶ್ನೆ ರಾಧೆ-ಕೃಷ್ಣ ಜೋಡಿಯನ್ನುಆದರ್ಶವಾಗಿ ನೋಡುವ ಭಕ್ತರಿಗೆ ಕಾಡುವುದುಂಟು.

ರಾಧೆ-ಕೃಷ್ಣರದ್ದು ಅಮರ ಪ್ರೇಮ, ಅವರ ಪ್ರೀತಿ ತಾಳ್ಮೆ, ಭಕ್ತಿಗೆ ಮೀಸಲು. ಪ್ರೀತಿ-ಪ್ರೇಮ, ಪ್ರಣಯ ಜೋಡಿ ಎಂದು ಬಂದಾಗ ರಾಧಾ-ಕೃಷ್ಣರ ಪ್ರೀತಿ ಜಗತ್ತಿಗೆ ಮಾದರಿ.

ಆದರೂ ಈ ಜೋಡಿ ಮದುವೆಯ ಬಂಧಕ್ಕೆ ಏಕೆ ಒಳಪಟ್ಟಿಲ್ಲ ಎಂದು ನೋಡುವುದಾದರೆ ಇದಕ್ಕೆ ವಿವಿಧ ಕಾರಣಗಳನ್ನು ನೀಡುತ್ತಾರೆ. ಅವುಗಳ ಕುರಿತು ಇಲ್ಲಿ ಹೇಳಲಾಗಿದೆ ನೋಡಿ:

ಕೃಷ್ಣ-ರಾಧೆಯ ಪ್ರೀತಿಯಲ್ಲಿ ಪ್ರೇಮಕ್ಕಿಂತ ಭಕ್ತಿ ಮಿಗಿಲಾಗಿತ್ತು

ಕೃಷ್ಣ-ರಾಧೆಯ ಪ್ರೀತಿಯಲ್ಲಿ ಪ್ರೇಮಕ್ಕಿಂತ ಭಕ್ತಿ ಮಿಗಿಲಾಗಿತ್ತು

ಕೆಲವು ಸಿದ್ಧಾಂತದ ಪ್ರಕಾರ ಶ್ರೀಕೃಷ್ಣನು ಪ್ರೀತಿಯ ಮಹತ್ವ ಮತ್ತು ಶಕ್ತಿಯನ್ನು ನಿರೂಪಿಸಲು ರಾಧೆಯೊಂದಿಗೆ ಪವಿತ್ರ ಪ್ರೇಮ ಸಂಬಂಧವನ್ನು ಹೊಂದಿದ್ದಾನೆ. ಪ್ರೀತಿ ಇಲ್ಲದೆ ಜಗತ್ತು ಇಲ್ಲ ಎಂಬುವುದನ್ನು ಕೃಷ್ಣ-ರಾಧೆಯ ಸಂಬಂಧ ಸೂಚಿಸುತ್ತದೆ.

ಕೃಷ್ಣ-ರಾಧೆ ಬೇರೆ-ಬೇರೆಯಲ್ಲ

ಕೃಷ್ಣ-ರಾಧೆ ಬೇರೆ-ಬೇರೆಯಲ್ಲ

ಒಂದು ತತ್ವಶಾಸ್ತ್ರದ ಪ್ರಕಾರ ಕೃಷ್ಣ-ರಾಧೆ ಬೇರೆ-ಬೇರೆಯಲ್ಲ, ಅವರಿಬ್ಬರು ಒಂದೇ ಆತ್ಮ, ಹೀಗಿರಲು ಅಲ್ಲಿ ಮದುವೆಯ ಅಗ್ಯತವಾದರೂ ಏನು? ರಾಧೆಯು ಜೀವಾತ್ಮವನ್ನು ಪ್ರತಿನಿಧಿಸಿದರೆ, ಕೃಷ್ಣನು ಪರಮಾತ್ಮವನ್ನು ಪ್ರತಿನಿಧಿಸುತ್ತಾನೆ. ರಾಧೆಯ ಪ್ರೀತಿಯು ನಿಸ್ವಾರ್ಥ ಪ್ರೇಮ ಭಕ್ತಿಯ ಅತ್ಯುನ್ನತ ರೂಪವಾಗಿದೆ. ಅದನ್ನು ಆಕೆ ಭಗವಾನ್ ಕೃಷ್ಣನಿಗೆ ಸಮರ್ಪಿಸಿದಳು. ಆದ್ದರಿಂದ ಇಲ್ಲಿ ಮದುವೆಯ ಮಾತೇ ಬರಲ್ಲ.

ಪ್ರೇಮವೆಂದರೆ ಅಲ್ಲಿ ಸ್ವೀಕಾರ ಮಾತ್ರವಲ್ಲ, ತ್ಯಾಗವೂ ಇದೆ

ಪ್ರೇಮವೆಂದರೆ ಅಲ್ಲಿ ಸ್ವೀಕಾರ ಮಾತ್ರವಲ್ಲ, ತ್ಯಾಗವೂ ಇದೆ

ಕೃಷ್ಣ-ರಾಧೆಯರ ಪ್ರೀತಿ ಪ್ರೇಮದ ನಿಜವಾದ ಅರ್ಥವನ್ನು ಸೂಚಿಸುತ್ತದೆ. ಪ್ರೇಮದಲ್ಲಿ ಸ್ವೀಕಾರ ಮಾತ್ರವಲ್ಲ, ತ್ಯಾಗಕ್ಕೂ ಅಷ್ಟೇ ಮಹತ್ವವಿದೆ. ಪ್ರೇಮವೆಂಬುವುದು ಒಂದು ಒಪ್ಪಂದದಲ್ಲಿ ಬಂಧಿಯಾಗಲು ಸಾಧ್ಯವಿಲ್ಲ. ಕೃಷ್ಣ-ರಾಧೆಯ ಪ್ರೇಮ ಸಂಬಂಧ ಐಹಿಕ ಸುಖ, ನಿಯಮ, ಕಟ್ಟಳೆಗಳನ್ನು ಮೀರಿದ್ದು ಆಗಿದ್ದು, ಅದು ಆಧ್ಯಾತ್ಮಿಕವಾದ ಪ್ರೇಮವಾಗಿತ್ತು. ಆದ್ದರಿಂದ ಈ ಜೋಡಿ ಮದುವೆಯಾಗಿಲ್ಲ.

ಪವಿತ್ರ ಪ್ರೇಮದ ಸಂಕೇತ ರಾಧೆ

ಪವಿತ್ರ ಪ್ರೇಮದ ಸಂಕೇತ ರಾಧೆ

ಕೃಷ್ಣ ಕಾರ್ಯ ನಿಮಿತ್ತ ರಾಧೆಯನ್ನು ಬಿಟ್ಟು ಹೋದಾಗ ಆಕೆ ಆತನನ್ನು ದೂರಲಿಲ್ಲ, ದೈಹಿಕವಾದ ಪ್ರೀತಿಯನ್ನೂ ಬಯಸಲಿಲ್ಲ, ರಾಧೆಯನ್ನು ಶ್ರೀಕೃಷ್ಣ ಮದುವೆಯಾಗಲಾರ ಎಂದು ರಾಧೆ ಬೇಸರಪಡಲಿಲ್ಲ, ಆಕೆಯದು ನಿಸ್ವಾರ್ಥ ಪ್ರೇಮ. ಆಕೆಯ ಪ್ರೀತಿ ತಾಳ್ಮೆಯ ಸಂಕೇತ ಕೂಡ ಹೌದು.

ರಾಧೆಯ ಹೃದಯದಲ್ಲಿ ಮಾಧವ ಹಚ್ಚಿ ಹೋದ ಪ್ರೇಮದ ದೀಪ ಎಂದೂ ಆರಲಿಲ್ಲ, ಆದ್ದರಿಂದಲೇ ಆಕೆ ಇಂದಿಗೂ ಪವಿತ್ರ ಪ್ರೇಮದ ಸಂಕೇತವಾಗಿಯೇ ಉಳಿದಿದ್ದಾಳೆ.

English summary

Why Krishna didn't marry Radha

Krishan Radhe example for ideal love story, Here is reasons why krishna didn't marry radhe, Read on
X